ನವದೆಹಲಿ: ಹೌರಾ ಎಕ್ಸ್‌ಪ್ರೆಸ್ ರೈಲಿನಲ್ಲಿ ಪ್ರಯಾಣಿಸುತ್ತಿದ್ದ ಗರ್ಭಿಣಿ ಮಹಿಳೆಯೊಬ್ಬರಿಗೆ ತಮ್ಮ ಜೀವನದಲ್ಲಿ ಮರೆಯದಂತಹ ಘಟನೆಯೊಂದು ಅನಿರೀಕ್ಷತವಾಗಿ ನಡೆದಿದೆ.
ರೈಲು ಚಲಿಸುತ್ತಿರುವಾಗಲೇ ಮಹಿಳೆಗೆ ಹೆರಿಗೆ ನೋವು ಶುರುವಾಗಿದೆ. ಅದೃಷ್ಟವೆಂಬಂತೆ ಅದೇ ರೈಲಿನಲ್ಲಿದ್ದ ಭಾರತೀಯ ಸೇನೆಯ ವೈದ್ಯರೂ ಕೂಡ ಪ್ರಯಾಣಿಸುತ್ತಿದ್ದು, ವಿಷಯ ತಿಳಿದು ಸಕಾಲದಲ್ಲಿ ತಮ್ಮ ವೃತ್ತಿ ಪ್ರಜ್ಞೆ ಮೆರೆದಿದ್ದಾರೆ.
ಸೈನ್ಯದ 172 ಮಿಲಿಟರಿ ಆಸ್ಪತ್ರೆಯ ಕ್ಯಾಪ್ಟನ್ ಲಲಿತಾ ಮತ್ತು ಕ್ಯಾಪ್ಟನ್ ಅಮಂದೀಪ್ ಅವರು ಮಹಿಳೆಗೆ ಯಶಸ್ವಿಯಾಗಿ ಹೆರಿಗೆ ನೆರವೇರಿಸಿ ತಾಯಿ ಮತ್ತು ಮಗುವಿಗೆ ಮರುಜೀವ ನೀಡಿದ್ದಾರೆ ಎಂದು ಭಾರತೀಯ ಸೇನೆಯ ಸಾರ್ವಜನಿಕ ಮಾಹಿತಿಯ ಹೆಚ್ಚುವರಿ ನಿರ್ದೇಶನಾಲಯ ಜನರಲ್ ಟ್ವಿಟ್ಟರ್ನಲ್ಲಿ ಬರೆದುಕೊಂಡಿದೆ.
ರೈಲಿನಲ್ಲಿರುವ ಮಗುವಿನ ಫೋಟೋವನ್ನು ಭಾರತೀಯ ಸೇನೆಯು ಟ್ವಿಟರ್‌ನಲ್ಲಿ ಹಂಚಿಕೊಂಡಿದೆ. ತಾಯಿ ಮತ್ತು ಮಗುವಿಗೂ ಶುಭ ಕೋರಿದೆ.