ETV Bharat / bharat

ಮನೆಯ ಮೇಲ್ಚಾವಣಿ ಕುಸಿದು ಮಹಿಳೆ ಸಾವು: ಮಗು, ಅತ್ತಿಗೆಗೆ ಗಾಯ - Ghaziabad in Uttar Pradesh

ಮನೆಯ ಮೇಲ್ಛಾವಣಿ ಕುಸಿದು 26 ವರ್ಷದ ವಿವಾಹಿತ ಮಹಿಳೆ ಸಾವನ್ನಪ್ಪಿದ್ದು, ಇಬ್ಬರು ಗಾಯಗೊಂಡಿರುವ ಘಟನೆ ಗಾಜಿಯಾಬಾದ್ ನ ಲೋನಿಯ ಮುಸ್ತಾಬಾದ್ ಕಾಲೋನಿಯಲ್ಲಿ ಬುಧವಾರ ಮಧ್ಯಾಹ್ನ ನಡೆದಿದೆ.

Woman dies in building collapse in UP's Ghaziabad, 2 family members injured
ಮನೆಯ ಮೇಲ್ಚಾವಣಿ ಬಿದ್ದು ಮಹಿಳೆ ಸಾವು, ಇನ್ನಿಬ್ಬರಿಗೆ ಗಾಯ
author img

By

Published : May 7, 2020, 11:48 AM IST

ಗಾಜಿಯಾಬಾದ್(ಉತ್ತರ ಪ್ರದೇಶ): ಇಲ್ಲಿನ ಲೋನಿಯ ಮುಸ್ತಾಬಾದ್ ಕಾಲೋನಿಯಲ್ಲಿ ಬುಧವಾರ ಮಧ್ಯಾಹ್ನ ಮನೆಯ ಮೇಲ್ಛಾವಣಿ ಕುಸಿದು 26 ವರ್ಷದ ವಿವಾಹಿತ ಮಹಿಳೆ ಸಾವನ್ನಪ್ಪಿದ್ದಾರೆ. ಘಟನೆಯಲ್ಲಿ ಆಕೆಯ ಅತ್ತಿಗೆ ಮತ್ತು ಮಗು ಕೂಡ ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಸಿಲಿಂಡರ್ ಸ್ಫೋಟದಿಂದಾಗಿ ಈ ಘಟನೆ ಸಂಭವಿಸಿದೆ ಎಂದು ಪೊಲೀಸರು ಶಂಕಿಸಿದ್ದಾರೆ. ಸದ್ಯ ಸಂತ್ರಸ್ತರಾದ ಅಂಜುಮ್(26), ಅಫ್ರೀನ್ ಮತ್ತು ಆಕೆಯ 18 ತಿಂಗಳ ಮಗು ಓವೇಶ್ ಅವರನ್ನು ನೆರೆಹೊರೆಯವರು ಅವಶೇಷಗಳಿಂದ ಹೊರತೆಗೆದು ಹತ್ತಿರದ ಆಸ್ಪತ್ರೆಗೆ ಸಾಗಿಸಿದ್ದಾರೆ. ಆನಂತರ ಘಟನೆಯಲ್ಲಿ 26 ವರ್ಷದ ಅಂಜುಮ್ ಸಾವನ್ನಪ್ಪಿದ್ದು, ಅಫ್ರೀನ್ ಮತ್ತು ಆಕೆಯ ಮಗ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಪೊಲೀಸ್ ಅಧೀಕ್ಷಕರಾದ ನೀರಜ್ ಕುಮಾರ್ ಜಾದೌನ್ ಮಾಹಿತಿ ನೀಡಿದ್ದಾರೆ.

ಮೀರತ್ ನಿವಾಸಿಯಾದ ಮೃತ ಅಂಜುಮ್ ಅವರ ಸಹೋದರ ಅನಸ್ ಲೋನಿ ಪೊಲೀಸ್ ಠಾಣೆಯಲ್ಲಿ ಹಾಜರಾಗಿ ಹೇಳಿಕೆ ನೀಡಿದ್ದಾರೆ. ಘಟನಾ ಸ್ಥಳದಲ್ಲಿ ಯಾವುದೇ ಸಿಲಿಂಡರ್ ಸ್ಕ್ರ್ಯಾಪ್ ಕಂಡುಬಂದಿಲ್ಲವಾದ್ದರಿಂದ ಅಲ್ಲಿ ಯಾವುದೇ ಸ್ಫೋಟ ಸಂಭವಿಸಿದ ಬಗ್ಗೆ ಪುರಾವೆಗಳಿಲ್ಲ. ನನ್ನ ಸಹೋದರಿಯ ಪತಿ ಇರ್ಫಾನ್ ತನ್ನ ಆಕೆಯ ಮಧ್ಯೆ ಆಗಾಗ ಜಗಳಗಳಾಗುತ್ತಿದ್ದವು. ಅವನೇ ಆಕೆಯನ್ನು ಹಿಂಸಿಸುತ್ತಿದ್ದ ಎಂದು ಆರೋಪಿಸಿದ್ದಾನೆ.

ಸದ್ಯ ಮೃತ ಅಂಜುಮ್​ ಸಹೋದರನ ಹೇಳಿಕೆಯನ್ನೂ ಪರಿಗಣಿಸಿರುವ ಪೊಲೀಸರು ಪ್ರಕರಣವನ್ನು ಸೂಕ್ಷ್ಮವಾಗಿ ಪರಿಗಣಿಸಿ ತನಿಖೆ ಮಾಡುವುದಾಗಿ ತಿಳಿಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.