ನವದೆಹಲಿ: ಭಾರತದ ನಾಲ್ಕನೇ ಅತಿದೊಡ್ಡ ಐಟಿ ಸೇವಾ ಸಂಸ್ಥೆ ವಿಪ್ರೋ, ತನ್ನ ವಹಿವಾಟಿನ ಮೇಲೆ ಅಪಾಯಕಾರಿ ಪರಿಣಾಮ ಬೀರಿದ ಜಾಗತಿಕ ವ್ಯಾಪಾರ ಯುದ್ಧದ ನಿಯಂತ್ರಣಕ್ಕೆ ಸುರಕ್ಷತಾ ಕ್ರಮಗಳನ್ನು ತೆಗೆದುಕೊಳ್ಳಲು ಮುಂದಾಗಿದೆ.
ಜಾಗತಿಕ ಮಟ್ಟದಲ್ಲಿನ ಆರ್ಥಿಕ ಪರಿಸ್ಥಿತಿಗಳಿಂದ ನಮ್ಮ ವ್ಯವಹಾರ ಮತ್ತು ಆರ್ಥಿಕ ಕಾರ್ಯಕ್ಷಮತೆ ಮೇಲೆ ಪರಿಣಾಮ ಬೀರುತ್ತದೆ. ಇದನ್ನು ರಕ್ಷಣಾತ್ಮಕವಾಗಿ ಎದುರಿಸಿ ಮುಂದಕ್ಕೆ ತೆಗೆದುಕೊಂಡು ಹೋಗಲಿದ್ದೇವೆ. ಜಾಗತಿಕ ಟ್ರೇಡ್ ವಾರ್ ಜಾಗತಿಕ ವ್ಯಾಪಾರ ಮತ್ತು ಆರ್ಥಿಕ ಚಟುವಟಿಕೆಯ ಮೇಲೆ ಪ್ರತಿಕೂಲ ಪರಿಣಾಮ ಬೀರಬಹುದು ಎಂದು ವಿಪ್ರೋ ಅಮೆರಿಕ ಮಾರುಕಟ್ಟೆ ನಿಯಂತ್ರಣಕ್ಕೆ ಸಲ್ಲಿಸಿದ ತನ್ನ ವಾರ್ಷಿಕ ವರದಿಯಲ್ಲಿ ಉಲ್ಲೇಖಿಸಿದೆ.
ಪ್ರಸಕ್ತ ವರ್ಷ 2019ರ ಮಾರ್ಚ್ ಅಂತ್ಯಕ್ಕೆ ಕೊನೆಗೊಂಡ ಅವಧಿಯಲ್ಲಿ ಸಂಸ್ಥೆಯು ಒಟ್ಟು ₹ 58,584 ಕೋಟಿ ಲಾಭಾಂಶ ಗಳಿಸಿದೆ. ಇದರಲ್ಲಿ ಶೇ 55ರಷ್ಟು (₹ 32,323 ಕೋಟಿ) ಪಾಲು ಅಮೆರಿಕ ಹಾಗೂ ಶೇ 25ರಷ್ಟು ಯುರೋಪನಿಂದಲೇ ಬಂದಿದೆ ಎಂದು ಕಂಪನಿ ಹೇಳಿಕೊಂಡಿದೆ.
ಅಮೆರಿಕ ಹಾಗೂ ಯುರೋಪ ಆರ್ಥಿಕತೆ ಕರಗಿದರೆ ಅಥವಾ ಅದರ ಕ್ಷೀಣಿಸುವಿಕೆ ಮುಂದವರಿದರೆ ಜಾಗತಿಕ ಆರ್ಥಿಕ ಮಾರುಕಟ್ಟೆಗಳು ಕುಸಿತದ ಸ್ಥಿತಿಗೆ ಬರುತ್ತವೆ. ಐಟಿ ಸೇವೆಗಳಿಗೆ ಕಡಿಮೆ ಬೆಲೆ ನೀಡಿ ಈಗಿನ ಆಕರ್ಷಣೆ ಕಳೆದುಕೊಳಬಹುದು ಅಥವಾ ಕಡಿತಗೊಳಿಸಬಹುದು ಎಂದು ಬೆಂಗಳೂರು ಮೂಲದ ಈ ಕಂಪನಿ ಎಚ್ಚರಿಸಿದೆ.