ನವದೆಹಲಿ: ಶತ್ರು ರಾಷ್ಟ್ರ ಪಾಕಿಸ್ತಾನದಲ್ಲಿ ನೆಲದಲ್ಲಿ ಬಿದ್ದು 60 ಗಂಟೆಗಳ ಬಳಿಕ ಸುರಕ್ಷಿತವಾಗಿ ತಾಯ್ನಾಡಿಗೆ ಬಂದ ಭಾರತೀಯ ವಾಯುಪಡೆ ವಿಂಗ್ ಕಮಾಂಡರ್ ಅಭಿನಂದನ್ ವರ್ಧಮಾನ್ ಅವರು ಶೀಘ್ರದಲ್ಲೇ ಮತ್ತೆ ಕರ್ತವ್ಯಕ್ಕೆ ಹಾಜರಾಗಲಿದ್ದಾರೆ ಎಂದು ಹೇಳಲಾಗುತ್ತಿದೆ.
ಪಾಕಿಸ್ತಾನದ ಎಫ್- 16 ಯುದ್ಧ ವಿಮಾನಗಳು ಭಾರತ ಗಡಿ ಪ್ರವೇಶ ಮಾಡಿ ದಾಳಿ ನಡೆಸಲು ಮುಂದಾಗಿತ್ತು. ಈ ವೇಳೆ ಅಭಿನಂದನ್ ವರ್ಧಮಾನ್ ಅವರು ಮಿಗ್-21 ಯುದ್ಧ ವಿಮಾನ ಮೂಲಕ ಅದನ್ನು ಹಿಮ್ಮೆಟ್ಟಿಸಿದ್ದರು. ಘಟನೆಯಲ್ಲಿ ಅಭಿನಂದನ್ ಪಾಕ್ ನೆಲದಲ್ಲಿ ಏರ್ ಬ್ಯಾಗ್ನಿಂದ ಬಿದ್ದು, 60 ಗಂಟೆಗಳ ಕಾಲ ಶತ್ರು ರಾಷ್ಟ್ರದಲ್ಲಿದ್ದು ಸುರಕ್ಷಿತವಾಗಿ ಭಾರತಕ್ಕೆ ಮರಳಿದ್ದರು.
ಪಾಕ್ ವಶದಲ್ಲಿ ಇದ್ದಾಗ ಅಭಿನಂದನ್ ಅವರಿಗೆ ಮಾನಸಿಕ ಮತ್ತು ದೈಹಿಕ ಹಿಂಸೆ ನೀಡಲಾಗಿತ್ತು ಎಂಬ ಆರೋಪ ಕೇಳಿಬಂದಿತ್ತು. ಜೊತೆಗೆ ಏರ್ ಬ್ಯಾಗ್ನಿಂದ ಕೆಳಕ್ಕೆ ಇಳಿಯುವಾಗ ಸಣ್ಣ- ಪುಟ್ಟ ಗಾಯಗಳಾಗಿದ್ದವು. ಹೀಗಾಗಿ, ಅವರನ್ನು ಹಲವು ದಿನಗಳ ಕಾಲ ಚಿಕಿತ್ಸೆಗೆ ಒಳಪಡಿಸಲಾಗಿತ್ತು.
ಮುನ್ನಚ್ಚರಿಕೆಯ ಕ್ರಮವಾಗಿ ವಿಂಗ್ ಕಮಾಂಡರ್ ವರ್ಧಮಾನ್ ಅವರು ಆಂತರಿಕ ಗಾಯಗಳಿಗೆ ಒಳಗಾಗಿದ್ದಾರೆ ಇಲ್ಲವೇ ಮತ್ತು ಪಾಕಿಸ್ತಾನದ ಅಧಿಕಾರಿಗಳು ಎಲೆಕ್ಟ್ರಾನಿಕ್ ಬೇಹುಗಾರಿಕೆ ಸಾಧನಗಳನ್ನು ಅಥವಾ ದೋಷಯುಕ್ತವಾದವುಗಳನ್ನು ಅವರ ದೇಹದಲ್ಲಿ ಇಟ್ಟಿದ್ದಾರೆಯೇ ಎಂದು ಪರಿಶೀಲಿಸಲಾಗಿತ್ತು. ಪರೀಕ್ಷೆಯ ಬಳಿಕ ಅಂತಹ ಯಾವುದೇ ಸಾಧನಗಳು ಕಂಡು ಬರಲಿಲ್ಲ ಎಂಬ ವರದಿಗಳು ಪ್ರಕಟವಾದವು.
ತಮಿಳುನಾಡು ಮೂಲದ ಏವಿಯೇಟರ್ನನ್ನು ವ್ಯಾಪಕವಾದ ಡಿಬ್ರೆಫಿಂಗ್ ಪರೀಕ್ಷೆಗಳಿಗೆ ಒಳಪಡಿಸಲಾಯಿತು. ಕೆಲವು ಗಂಟೆಗಳಲ್ಲಿ ಬಿಡುಗಡೆಯಾದ ಬಳಿಕ, ಐಎಎಫ್ನ ಹಿರಿಯ ಕಮಾಂಡರ್ ಒಬ್ಬರು ಅಭಿನಂದನ್ ಅವರು ಕಾಕ್ಪುಟ್ಗೆ ಮರಳಲು ಸಿದ್ಧವಾಗಿದ್ದಾರೆ ಎಂಬ ಹೇಳಿಕೆ ನೀಡಿದ್ದಾರೆ ಎಂದು ಹೇಳಲಾಗುತ್ತಿದೆ.