ಪಾಟ್ನಾ (ಬಿಹಾರ) : ಸರ್ಕಾರಿ ನೌಕರರ ನಿವೃತ್ತಿ ವಯಸ್ಸನ್ನು 50 ವರ್ಷಕ್ಕೆ ಇಳಿಸಲು ಮುಖ್ಯಮಂತ್ರಿ ನಿತೀಶ್ ಕುಮಾರ್ ನಿರ್ಧರಿಸಿದ್ದಾರೆ ಎಂದು ಆರೋಪಿಸಿದ ಮಹಾಘಟಬಂಧನ್ ಮುಖ್ಯಮಂತ್ರಿ ಅಭ್ಯರ್ಥಿ ತೇಜಸ್ವಿ ಯಾದವ್, ತಾವು ಅಧಿಕಾರಕ್ಕೆ ಬಂದರೆ ನಿವೃತ್ತಿ ವಯಸ್ಸು ಹೆಚ್ಚಿಸುವ ಭರವಸೆ ನೀಡಿದ್ದಾರೆ.
"ನಿತೀಶ್ ಕುಮಾರ್ ಅವರು 50 ವರ್ಷ ವಯಸ್ಸಿನ ಸರ್ಕಾರಿ ನೌಕರರಿಗೆ ನಿವೃತ್ತಿ ನೀಡುವಂತೆ ಆದೇಶಿಸಿದ್ದಾರೆ. ಅವರೇ 70 ವರ್ಷ ದಾಟಿದ್ದಾರೆ. ಆದರೆ, ಈ ಬಾರಿ ಸಾರ್ವಜನಿಕರು ಅವರನ್ನು ನಿವೃತ್ತಿ ಮಾಡಲಿದ್ದಾರೆ. ನಮ್ಮ ಸರ್ಕಾರ ರಚನೆಯಾದ್ರೆ ನಿವೃತ್ತಿ ವಯಸ್ಸು ಹೆಚ್ಚಿಸುತ್ತೇವೆ" ಎಂದು ತೇಜಸ್ವಿ ಯಾದವ್ ಹೇಳಿದ್ದಾರೆ.
ಉನ್ನತ ಶಿಕ್ಷಣ ವ್ಯವಸ್ಥೆಯ ಕಳಪೆ ಸ್ಥಿತಿಗೆ ಮುಖ್ಯಮಂತ್ರಿಯನ್ನು ದೂಷಿಸಿದ ಅವರು, ಬಿಹಾರದಲ್ಲಿ ಪದವಿಪೂರ್ವ ಶಿಕ್ಷಣ ಪೂರ್ಣಗೊಳಿಸಲು ಮೂರು ವರ್ಷಗಳಿಗಿಂತ ಹೆಚ್ಚು ಸಮಯ ಏಕೆ ಬೇಕು ಎಂದು ಪ್ರಶ್ನಿಸಿದ್ದಾರೆ.
"ಬಿಹಾರದ ಜನರು 3 ವರ್ಷಗಳಲ್ಲಿ ತಮ್ಮ ಪದವಿಯನ್ನು ಪೂರ್ಣಗೊಳಿಸಲು ಏಕೆ ಸಾಧ್ಯವಿಲ್ಲ. ಅವರಿಗೆ 4 ರಿಂದ 5 ವರ್ಷಗಳು ಏಕೆ ಬೇಕು ಎಂದು ನಿತೀಶ್ ಕುಮಾರ್ ಹೇಳಬೇಕು" ಎಂದಿದ್ದಾರೆ.