ETV Bharat / bharat

ಜಾತಿ-ಧರ್ಮದ ಭೇದವಿಲ್ಲದೆ ಎಲ್ಲಾ ನಾಗರಿಕರು ಎನ್​ಆರ್​ಸಿ ಪಟ್ಟಿಗೆ: ಅಮಿತ್‌ ಶಾ

ರಾಜ್ಯಸಭೆಯಲ್ಲಿ ಇಂದು ಮಾತನಾಡಿದ ಕೇಂದ್ರ ಗೃಹ ಸಚಿವ ಅಮಿತ್​ ಶಾ, ರಾಷ್ಟ್ರೀಯ ನಾಗರಿಕರ ನೋಂದಣಿಯನ್ನು ದೇಶಾದ್ಯಂತ ವಿಸ್ತರಿಸುವ ವಿಚಾರವನ್ನು ಪ್ರಸ್ತಾಪಿಸಿದರು. ಈ ಹಿಂದೆ ಎನ್‌ಆರ್‌ಸಿ ಸೇರ್ಪಡೆ ಅಸ್ಸಾಂ ರಾಜ್ಯಕ್ಕಷ್ಟೇ ಸೀಮಿತವಾಗಿತ್ತು. ಆದರೆ ಯಾವುದೇ ಜಾತಿ, ಧರ್ಮದ ಅಂತರವಿಲ್ಲದೆ ಎಲ್ಲಾ ನಾಗರಿಕರು ರಾಷ್ಟ್ರೀಯ ನಾಗರಿಕರ ನೋಂದಣಿ (ಎನ್‌ಆರ್‌ಸಿ) ಪಟ್ಟಿಯಲ್ಲಿ ಸ್ಥಾನ ಪಡೆಯುತ್ತಾರೆ ಎಂದು ಶಾ ಹೇಳಿದರು.

ಗೃಹಸಚಿವ ಅಮಿತ್​ ಶಾ
author img

By

Published : Nov 20, 2019, 3:29 PM IST

ನವದೆಹಲಿ: ದೇಶದ ಎಲ್ಲಾ ನಾಗರಿಕರನ್ನು ಎನ್​ಆರ್​ಸಿ(ರಾಷ್ಟ್ರೀಯ ನಾಗರಿಕರ ನೋಂದಣಿ) ಪಟ್ಟಿಗೆ ಸೇರಿಸುವ ವಿಚಾರವನ್ನು ಗೃಹಸಚಿವ ಅಮಿತ್​ ಶಾ ಸಂಸತ್ತಿನ ಮೇಲ್ಮನೆಯಲ್ಲಿ ಪ್ರಸ್ತಾಪಿಸಿದ್ದಾರೆ.

ರಾಜ್ಯಸಭೆಯಲ್ಲಿ ಮಾತನಾಡಿದ ಅಮಿತ್​ ಶಾ, ಈ ಹಿಂದೆ ಎನ್‌ಆರ್‌ಸಿ ಸೇರ್ಪಡೆ ಅಸ್ಸೋಂ ರಾಜ್ಯಕ್ಕಷ್ಟೇ ಸೀಮಿತವಾಗಿತ್ತು. ಅದನ್ನ ದೇಶಾದ್ಯಂತ ವಿಸ್ತರಿಸುವ ವಿಚಾರವನ್ನು ಪ್ರಸ್ತಾಪಿಸಿದರು.

ಇದರ ಪ್ರಕಾರ, ಯಾವುದೇ ಜಾತಿ, ಧರ್ಮದ ಹೊರತಾಗಿ ಭಾರತದ ಎಲ್ಲಾ ನಾಗರಿಕರು ರಾಷ್ಟ್ರೀಯ ನಾಗರಿಕರ ನೋಂದಣಿ (ಎನ್‌ಆರ್‌ಸಿ) ಪಟ್ಟಿಯಲ್ಲಿ ಸ್ಥಾನ ಪಡೆಯುತ್ತಾರೆ. ಈ ಬಗ್ಗೆ ಯಾರೂ ಆತಂಕ ಪಡಬೇಕಾಗಿಲ್ಲ. ಇದು ಕೇವಲ ಒಂದು ಪ್ರಕ್ರಿಯೆ ಅಷ್ಟೇ ಎಂದು ಶಾ ಹೇಳಿದರು. ಅಲ್ಲದೇ ಇದು ಪಾಕಿಸ್ತಾನ, ಬಾಂಗ್ಲಾದೇಶ, ಅಫ್ಘಾನಿಸ್ತಾನ ಸೇರಿದಂತೆ ಕೆಲ ಮುಸ್ಲಿಂ ರಾಷ್ಟ್ರಗಳಿಗೆ ಭಾರತದ ನಾಗರಿಕತ್ವ ನೀಡುವ ಪೌರತ್ವ ತಿದ್ದುಪಡಿ ಮಸೂದೆಗಿಂತ ಭಿನ್ನವಾಗಿದೆ ಎಂದು ಅವರು ತಿಳಿಸಿದರು.

ಜಮ್ಮು-ಕಾಶ್ಮೀರ ಸಂಪೂರ್ಣ ಶಾಂತವಾಗಿದೆ

ಜಮ್ಮು ಕಾಶ್ಮೀರ ಮತ್ತು ಲಡಾಖ್ ಕೇಂದ್ರಾಡಳಿತ ಪ್ರದೇಶದಲ್ಲಿ ಈಗ ಪರಿಸ್ಥಿತಿ ಸಂಪೂರ್ಣ ಶಾಂತವಾಗಿದೆ. ಆಗಸ್ಟ್​ 5ರ ಬಳಿಕ ಇಲ್ಲಿ ಪೊಲೀಸ್​ ಫೈರಿಂಗ್​ನಲ್ಲಿ ಯಾರೊಬ್ಬರೂ ಸಾವನ್ನಪ್ಪಿಲ್ಲ ಎಂದು ಎಂದು ಶಾ ಸ್ಪಷ್ಟಪಡಿಸಿದರು.

ಕಾಂಗ್ರೆಸ್​ ಸಂಸದ ಮಜೀದ್​ ಮೆಮನ್​ಗೆ ಪ್ರತಿಕ್ರಿಯೆ ನೀಡುತ್ತಾ ಮಾತನಾಡಿದ ಅವರು, ಇಲ್ಲಿನ ದೈನಂದಿನ ಚಟುವಟಿಕೆಗಳು ಎಂದಿನಂತೆ ನಡೆಯುತ್ತಿವೆ. ಎಲ್ಲಾ ಸುದ್ದಿ ವಾಹಿನಿಗಳು, ಪತ್ರಿಕೆಗಳು, ಬ್ಯಾಂಕಿಂಗ್​ ಸೇವೆಗಳು ಜನಸಾಮಾನ್ಯರಿಗೆ ಸಿಗುತ್ತಿವೆ. ಎಲ್ಲಾ ಸರ್ಕಾರಿ ಕಚೇರಿಗಳು, ನ್ಯಾಯಾಲಯಗಳು ತೆರೆದಿವೆ. ಶಾಲೆ-ಕಾಲೇಜುಗಳು ಕೂಡಾ ತೆರೆದಿದ್ದು, 10 ಮತ್ತು 12 ನೇ ತರಗತಿ ಪರೀಕ್ಷೆಗಳಿಗೆ ಶೇ. 99.7ರಷ್ಟು ವಿದ್ಯಾರ್ಥಿಗಳು ಹಾಜರಾಗಿದ್ದಾರೆ ಎಂದರು.

Intro:Body:

Parliament

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.