ಚಂಡೌಲಿ(ಯುಪಿ): ಉತ್ತರಪ್ರದೇಶದ ಚಂಡೌಲಿಯಲ್ಲಿ ಅನಾರೋಗ್ಯದ ಕಾರಣ ವ್ಯಕ್ತಿಯೊಬ್ಬ ಮೃತಪಟ್ಟಿದ್ದು, ಗ್ರಾಮಸ್ಥರು ಅಂತ್ಯಕ್ರಿಯೆಯಲ್ಲಿ ಭಾಗಿಯಾಗದ ಕಾರಣ ಸ್ವತಃ ಹೆಂಡತಿ ಗಂಡನ ಅಂತಿಮ ವಿಧಿವಿಧಾನ ನಡೆಸಿದ್ದಾರೆ.
ಲಾಕ್ಡೌನ್ ಘೋಷಣೆ ಹೊರಡಿಸಿರುವ ಕಾರಣ ಮನೆಯಿಂದ ಹೊರಬರದಂತಹ ಸ್ಥಿತಿ ನಿರ್ಮಾಣಗೊಂಡಿದೆ. ಹೀಗಾಗಿ ಗಂಡನ ಚಿತೆಗೆ ಹೆಂಡತಿ ಅಗ್ನಿ ಸ್ಪರ್ಶ ಮಾಡಿದ್ದಾರೆ.
ಉತ್ತರಪ್ರದೇಶದ ಚಂಡೌಲಿ ಜಿಲ್ಲೆಯ ದೀನ ದಯಾಳ ನಗರದ ವಾರ್ಡ್ ಸಂಖ್ಯೆ 3ರಲ್ಲಿ ಸಂತೋಷ್ ಜೈಸ್ವಾಲ್ ಕಳೆದ 15 ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದರು. ಜಿಲ್ಲಾಸ್ಪತ್ರೆಯಲ್ಲಿ ಅವರಿಗೆ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ನಿನ್ನೆ ಅವರು ಸಾವನ್ನಪ್ಪಿದ್ದಾರೆ. ಕೊರೊನಾ ಭಯದಿಂಧ ಅಂತ್ಯಕ್ರಿಯೆಯಲ್ಲಿ ಭಾಗಿಯಾಗಲು ಅಲ್ಲಿನ ಜನರು ಹಿಂದೇಟು ಹಾಕಿದ್ದಾರೆ.
ಹೀಗಾಗಿ ಆತನ ಸಹೋದರ ಲಾಲ್ ಜೈಸ್ವಾಲ್ ಮೃತದೇಹವನ್ನ ಆಟೋದಲ್ಲಿ ತೆಗೆದುಕೊಂಡು ಹೋಗಿ ಗಂಗಾ ನದಿ ದಡದಲ್ಲಿನ ಶವಾಗಾರದಲ್ಲಿ ಅಂತ್ಯಕ್ರಿಯೆ ನಡೆಸಿದ್ದಾರೆ. ಈ ವೇಳೆ ಬಿಜೆಪಿ ಮುಖಂಡ ಸೂರ್ಯಮುನಿ ತಿವಾರಿ ಸಹಾಯ ಮಾಡಿದ್ದಾರೆ.