ETV Bharat / bharat

ಸೈಬರ್‌ ಕ್ರೈಂ ಸಂಖ್ಯೆ ಹೆಚ್ಚುತ್ತಿರುವುದೇಕೆ... ವಂಚಕರಿಂದ ಪಾರಾಗಲು ಇಲ್ಲಿವೆ ಸುಲಭ ಉಪಾಯಗಳು.. - cyber crime increasing

ಇತ್ತೀಚೆಗೆ ಸೈಬರ್ ಅಪರಾಧ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇವೆ. ವಿಶೇಷ ಅಂದ್ರೆ ವಿದ್ಯಾವಂತ ಮತ್ತು ಸಮಾಜದಲ್ಲಿ ಉನ್ನತ ಸ್ಥಾನದಲ್ಲಿರುವವರೂ ಸಹ ಸೈಬರ್ ವಂಚನೆಯ ಜಾಲಕ್ಕೆ ಸಿಲುಕಿಕೊಳ್ತಿದಾರೆ. ಆದರೆ, ವಂಚಕರಿಂದ ತಪ್ಪಿಸಿಕೊಳ್ಳೋದಕ್ಕೆ ಒಂದಿಷ್ಟು ಸಾಮಾನ್ಯ ಜ್ಞಾನ ಬಳಸಿದ್ರೂ ಸಾಕು.. ಆ ಬಗ್ಗೆ ಬೆಳಕು ಚೆಲ್ಲುತ್ತೆ ಈ ಸ್ಟೋರಿ..

cyber crime news, ಹೆಚ್ಚುತ್ತಿರುವ ಸೈಬರ್‌  ಕ್ರೈಂ
ಸೈಬರ್‌  ಕ್ರೈಂ ಸಂಖ್ಯೆ ಹೆಚ್ಚುತ್ತಿರುವುದೇಕೆ.. ವಂಚಕರಿಂದ ಪಾರಾಗಲು ಇಲ್ಲಿವೆ ಸುಲಭ ಉಪಾಯಗಳು..
author img

By

Published : Dec 11, 2019, 11:03 PM IST

ಸೈಬರ್ ಕ್ರಿಮಿನಲ್: ಹಲೋ ಸರ್, ಎಸ್‌ಬಿಐನಿಂದ ಮಾತನಾಡುತ್ತಿರುವೆ. ಕೆಲ ಪ್ರಮುಖ ಮಾಹಿತಿ ನೀಡುವುದಕ್ಕಾಗಿ ಕರೆ ಮಾಡಿರುವೆ.

ಗ್ರಾಹಕ: ಹೌದಾ, ಹೇಳಿ..

ಸೈಬರ್ ಕ್ರಿಮಿನಲ್: ನಿಮ್ಮ ಡೆಬಿಟ್ ಕಾರ್ಡ್‌ನ ಮುಕ್ತಾಯವಾಗಿರೋದಕ್ಕೆ ಈ ಕಾಲ್ ಮಾಡಿರುವೆ.

ಗ್ರಾಹಕ: ಮುಕ್ತಾಯ ಅವಧಿಯೇ, ಯಾಕೆ?

ಸೈಬರ್ ಕ್ರಿಮಿನಲ್: ಸರ್, ಇನ್ಮುಂದೆ ಹಳೆಯ ಕಾರ್ಡ್‌ಗಳು ಕಾರ್ಯನಿರ್ವಹಿಸುವುದಿಲ್ಲ. ಹೀಗಾಗಿ ಬ್ಯಾಂಕ್ ಗ್ರಾಹಕರಿಗೆ ಹೊಸ ಕಾರ್ಡ್‌ಗಳನ್ನು ನೀಡುತ್ತಿದೆ. ಆದರೆ, ನೀವು ಈವರೆಗೂ ನಿಮ್ಮ ಕಾರ್ಡ್‌ನ ಅಪ್‌ಗ್ರೇಡ್ ಮಾಡಿಲ್ಲ.

ಗ್ರಾಹಕ: ಆದರೆ, ಈ ವಿಷಯದ ಬಗ್ಗೆ ನನಗೆ ಇನ್ನೂ ಯಾವುದೇ ಮಾಹಿತಿ ಇಲ್ಲ.

ಸೈಬರ್ ಕ್ರಿಮಿನಲ್: ನಾನು ನಿಮಗೆ ಇದೇ ಮಾಹಿತಿ ನೀಡುವುದಕ್ಕಾಗಿ ಕರೆ ಮಾಡಿರುವೆ ಸರ್. ನಾನು ನಿಮ್ಮ ಕಾರ್ಡ್‌ನ ಅಪ್‌ಗ್ರೇಡ್ ಮಾಡಬೇಕೇ?

ಗ್ರಾಹಕ: ಹೌದು, ಆದರೆ ಆಮೇಲೆ..

ಸೈಬರ್ ಕ್ರಿಮಿನಲ್: ಸರ್, ಇಂದು ನಿಮ್ಮ ಕಾರ್ಡ್ ಪರಿವರ್ತಿಸಲು ಕೊನೆಯ ದಿನಾಂಕ. ಇದನ್ನು ಇಂದು ಮಾಡದಿದ್ದರೆ, ನಿಮ್ಮ ಕಾರ್ಡ್ ನಿರ್ಬಂಧಿಸಲ್ಪಡುತ್ತದೆ ಮತ್ತು ನಿಮ್ಮ ಖಾತೆ ಸ್ಥಗಿತಗೊಳಿಸಲಾಗುತ್ತದೆ.
ಗ್ರಾಹಕ: ಹಾಗಾದರೆ ನಾನು ಈಗ ಏನು ಮಾಡಬೇಕು?

ಸೈಬರ್ ಕ್ರಿಮಿನಲ್: ಸರ್, ಹಾಗಾದರೆ ನೀವು ಹೊಸ ಕಾರ್ಡ್ ಮಾಡಬೇಕಾಗುತ್ತದೆ.

ಗ್ರಾಹಕ: ಸರಿ, ಹಾಗಾದರೆ ಮಾಡಿ..

ಸೈಬರ್ ಕ್ರಿಮಿನಲ್: ಸರ್ ದಯವಿಟ್ಟು ನಿಮ್ಮ ಹೆಸರು ಮತ್ತು ಹುಟ್ಟಿದ ದಿನಾಂಕ ತಿಳಿಸಿ.

ಗ್ರಾಹಕ: ನನ್ನ ಹೆಸರು ಶುಭಂ ಜೋಶಿ ಮತ್ತು ನನ್ನ ಜನ್ಮ ದಿನಾಂಕ 14/10/1997

ಸೈಬರ್ ಕ್ರಿಮಿನಲ್: ದಯವಿಟ್ಟು ನಿಮ್ಮ 16 ಅಂಕಿಯ ಡೆಬಿಟ್ ಕಾರ್ಡ್ ಸಂಖ್ಯೆ ಮತ್ತು ಅದರ ಮುಕ್ತಾಯ ದಿನಾಂಕ ತಿಳಿಸಿ.

ಗ್ರಾಹಕ: 2586 3692 1458 1253 ಮತ್ತು ಮುಕ್ತಾಯ ದಿನಾಂಕ 12/20

ಸೈಬರ್ ಕ್ರಿಮಿನಲ್: ದಯವಿಟ್ಟು ನಿಮ್ಮ ಕಾರ್ಡ್‌ನ ಹಿಂಭಾಗದಲ್ಲಿರುವ ಸಿವಿವಿ ಸಂಖ್ಯೆ ತಿಳಿಸಿ

ಗ್ರಾಹಕ: 539

ಸೈಬರ್ ಕ್ರಿಮಿನಲ್: ಸರ್, ನಿಮ್ಮ ಹೊಸ ಕಾರ್ಡ್‌ನ ಪ್ರಕ್ರಿಯೆ ಪ್ರಾರಂಭಿಸಲಾಗಿದೆ. ಧೃಢೀಕರಣ ಮಾತ್ರ ಅಗತ್ಯವಿದೆ. ಸದ್ಯ ಇದಕ್ಕಾಗಿ ನಿಮ್ಮ ಫೋನ್‌ಗೆ ಸಂದೇಶವನ್ನ ಕಳುಹಿಸಲಾಗಿದೆ.

ಗ್ರಾಹಕ: ಹೌದು, ನನಗೊಂದು ಸಂದೇಶ ಬಂದಿದೆ.

ಸೈಬರ್ ಕ್ರಿಮಿನಲ್ : ದಯವಿಟ್ಟು ನನಗೆ ಆ ಸಂಖ್ಯೆಯನ್ನು ಹೇಳಿ..

ಗ್ರಾಹಕ: ಇದು ಒಟಿಪಿ..

ಸೈಬರ್ ಕ್ರಿಮಿನಲ್: ಹೌದು ಸರ್, ದಯವಿಟ್ಟು ನನಗೆ ಆ ಸಂಖ್ಯೆಯನ್ನು ಹೇಳಿ

ಗ್ರಾಹಕ: ಸಂಖ್ಯೆ 5

ಸ್ವಲ್ಪ ತಾಳಿ.. ಒಂದು ಕ್ಷಣ ಯೋಚಿಸಿ, ನಿಜವಾಗಿಯೂ ಆತ ಬ್ಯಾಂಕ್ ಉದ್ಯೋಗಿಗೆಯೇ?. ನೀವು ನೀಡ ಹೊರಟಿರುವುದು ಸಾಮಾನ್ಯ ಸಂಖ್ಯೆಯಲ್ಲ. ಅದರ ಮೂಲಕ ನಿಮ್ಮ ಬ್ಯಾಂಕ್ ಖಾತೆಯ ಎಲ್ಲಾ ವಿವರಗಳನ್ನೂ ಸೈಬರ್ ಅಪರಾಧಿ ಸುಲಭವಾಗಿ ಪಡೆಯಬಹುದಾದ ಒಟಿಪಿ. ಈ ರೀತಿಯ ಸೈಬರ್ ಅಪರಾಧಗಳು ತುಂಬಾ ಸಾಮಾನ್ಯ. ಅಪರಾಧಿಗಳು ತಮಗೆ ಬೇಕಾದ ಬಲಿಪಶುಗಳನ್ನು ಹೇಗೆ ಗುರಿಯಾಗಿಸುತ್ತಾರೆ ಅನ್ನೋದಕ್ಕೆ ಇದೊಂದು ಉದಾಹರಣೆ ಅಷ್ಟೇ..

ಸಮಾಜದ ಪ್ರಭಾವಿಗಳನ್ನೇ ಟಾರ್ಗೆಟ್‌ ಮಾಡುವ ವಂಚಕರು: ದೇಶದಲ್ಲಿ ಸೈಬರ್ ಅಪರಾಧ ಪ್ರಕರಣಗಳು ಹೆಚ್ಚುತ್ತಿವೆ. ಆದರೆ, ಇಂದು ನಾವು ಜಾರ್ಖಂಡ್‌ನ ಜಿಲ್ಲೆಯನ್ನು ನಿಮಗೆ ತೋರಿಸುತ್ತೇವೆ. ಅಲ್ಲಿ ಪ್ರತಿ ಇಬ್ಬರಿಗೆ ಒಬ್ಬ ವ್ಯಕ್ತಿಯು ಸೈಬರ್ ಅಪರಾಧವನ್ನು ತಮ್ಮ ವ್ಯವಹಾರವನ್ನಾಗಿ ಮಾಡಿಕೊಂಡಿದ್ದಾನೆ. ಸೈಬರ್ ಅಪರಾಧ ಪ್ರಕರಣಗಳಿಗೆ ಸಂಬಂಧಿಸಿದಂತೆ ಜಾಮ್ತಾಡಾ ಜಿಲ್ಲೆಯ ಕರ್ಮತಂದ್ ಪ್ರದೇಶದ ಬೀದಿಗಳು ದೇಶದಲ್ಲಿ ಕುಖ್ಯಾತಿ ಪಡೆದಿವೆ. ಈ ವಂಚನೆಗಳು ಎಷ್ಟು ಕುತಂತ್ರದಿಂದ ಕೂಡಿರುತ್ತವೆ ಎಂದರೆ ಊಹಿಸಲಸಾದ್ಯ. ಅವರು ರಾಜಕಾರಣಿಗಳು, ಪೊಲೀಸ್ ಅಧಿಕಾರಿಗಳು ಮತ್ತು ಸಿನಿ ತಾರೆಗಳನ್ನೂ ಗುರಿಯಾಗಿಸಿಕೊಂಡಿದ್ದಾರೆ.

ಕಿಂಗ್ ಖಾನ್‌ ಶಾರುಖ್‌ ಖಾತೆಯಿಂದಲೇ ರೂ. 75 ಲಕ್ಷ: ಜಾರ್ಖಂಡ್‌ನ ಜಾಮ್ತಾಡಾ ಜಿಲ್ಲೆಯು ಸೈಬರ್ ಅಪರಾಧಗಳಿಗೆ ಕುಖ್ಯಾತವಾಗಿದೆ. 22 ರಾಜ್ಯಗಳ ಪೊಲೀಸರು ಈ ಪ್ರದೇಶದ ಸೈಬರ್ ಅಪರಾಧದ ಭೀತಿ ಎದುರಿಸುತ್ತಿದ್ದಾರೆ ಅಂದ್ರೆ ಆ ಭೀತಿಯ ತೀವ್ರತೆ ತಿಳಿಯುತ್ತೆ. ಸೈಬರ್ ಅಪರಾಧ ಚಟುವಟಿಕೆಗಳು 2013ರಿಂದ ಪ್ರಾರಂಭವಾದವು ಮತ್ತು ಅಂದಿನಿಂದ ಪೊಲೀಸರು 110 ಸೈಬರ್ ಅಪರಾಧಿಗಳನ್ನು ಇಲ್ಲಿಂದ ಬಂಧಿಸಿದ್ದಾರೆ.

ಗುರುತಿಸಲ್ಪಟ್ಟ ಸುಮಾರು 90 ಸೈಬರ್ ಅಪರಾಧಿಗಳು ತಮ್ಮ ಆದಾಯಕ್ಕೆ ಅನುಗುಣವಾಗಿ ಸಂಪತ್ತನ್ನು ಸಂಗ್ರಹಿಸಿದ್ದಾರೆ. ಈ ಜನರು ಜಾರಿ ನಿರ್ದೇಶನಾಲಯದ ರಾಡಾರ್‌ನಲ್ಲಿದ್ದಾರೆ. ಸಂಸತ್ ಸದಸ್ಯ ಮತ್ತು ಪಂಜಾಬ್ ಸಿಎಂ ಪತ್ನಿ ಎಂ ಎಸ್ ಪ್ರಣೀತ್ ಕೌರ್ ವಿರುದ್ಧದ ವಂಚನೆ ಪ್ರಕರಣ ಬೆಳಕಿಗೆ ಬಂದಾಗ ಜಮ್ತಾಡಾ ಮತ್ತೊಮ್ಮೆ ಪ್ರಾಮುಖ್ಯತೆ ಪಡೆಯಿತು. ಬಾಲಿವುಡ್‌ನ ಕಿಂಗ್‌ ಖಾನ್‌ ಶಾರುಖ್ ಗಿರಿಡಿಹ್ ಜಿಲ್ಲೆಯ ಸೈಬರ್ ಅಪರಾಧಿಗಳಿಗೆ ಬಲಿಯಾಗಿದ್ದಾರೆ. 2013ರಲ್ಲಿ ಜಿಲ್ಲೆಯ ಸೈಬರ್ ಅಪರಾಧಿಗಳು ದೂರವಾಣಿ ಮೂಲಕ ಕಿಂಗ್ ಖಾನ್ ಅವರ ಖಾತೆಯಿಂದ 75 ಲಕ್ಷ ರೂಪಾಯಿಗಳನ್ನು ವಂಚಿಸಿದ್ದಾರೆ.

ವರ್ಷದಿಂದ ವರ್ಷಕ್ಕೆ ಸೈಬರ್ ಅಪರಾಧ ಪ್ರಕರಣ ಹೆಚ್ಚಳ: ಎನ್‌ಸಿಆರ್‌ಬಿ ಪ್ರಕಾರ, ಸೈಬರ್ ಅಪರಾಧ ಪ್ರಮಾಣವು ವರ್ಷಗಳಲ್ಲಿ ತೀವ್ರ ಏರಿಕೆ ಕಂಡಿದೆ. 2016ರಲ್ಲಿ ಸೈಬರ್ 12,137 ಪ್ರಕರಣ ದಾಖಲಾಗಿವೆ. ಆದರೆ, 2017ರಲ್ಲಿ 21,796 ಕೇಸ್‌ ರಿಜಿಸ್ಟರ್ ಆಗಿವೆ. ಒಂದೇ ವರ್ಷದಲ್ಲಿ ಪ್ರಕರಣ ದ್ವಿಗುಣಗೊಂಡಿವೆ. ಸೈಬರ್ ಅಪರಾಧಿಗಳು ಕೇವಲ ಫೋನ್ ಬಳಕೆಯಿಂದ, ನೀವು ಕಷ್ಟಪಟ್ಟು ಸಂಪಾದಿಸಿದ ಹಣದಿಂದ ಮಜಾ ಮಾಡಬಹುದು. ಸೈಬರ್ ಅಪರಾಧಗಳಿಂದ ಉಳಿಯಲು ಕೆಲವು ಸಲಹೆಗಳು ಇಲ್ಲಿವೆ..

ಸೈಬರ್‌ ವಂಚನೆಯಿಂದ ನೀವು ಬಚಾವ್ ಆಗೋದ್ಹೇಗೆ!? :

* ಎಟಿಎಂ ಪಿನ್ ಮತ್ತು ಸಂಖ್ಯೆ ಯಾರೊಂದಿಗೂ ಹಂಚಿಕೊಳ್ಳಬೇಡಿ.

* ನೀವು ಮೊಬೈಲ್ ಮತ್ತು ಇಂಟರ್ನೆಟ್ ಬ್ಯಾಂಕಿಂಗ್‌ನ ಬಳಸುತ್ತಿದ್ದರೆ, ನಿಮ್ಮ ಪಾಸ್‌ವರ್ಡ್‌ಗಳನ್ನು ಮತ್ತು ಒಟಿಪಿಯನ್ನು ಯಾರೊಂದಿಗೂ ಹಂಚಿಕೊಳ್ಳಬೇಡಿ.

* ಸಿಮ್ ವಿನಿಮಯ ತಡೆಯಲು, ಅಪೇಕ್ಷಿಸದ ಸಂಖ್ಯೆಗಳಿಂದ ಕರೆಗಳನ್ನು ತೆಗೆದುಕೊಳ್ಳಬೇಡಿ ಅಥವಾ (ಮಾಲ್‌ವೇರ್) ಅಲ್ಲೇ ಕಾಣಿಸುವ ಲಿಂಕ್‌ಗಳ ಮೇಲೆ ಕ್ಲಿಕ್ ಮಾಡಿ

* ಅವಶ್ಯಕತೆಯಿಲ್ಲದೆ, ನಿಮ್ಮ ಗುರುತಿನ ದಾಖಲೆಗಳನ್ನು ಯಾರೊಂದಿಗೂ ಹಂಚಿಕೊಳ್ಳಬೇಡಿ

* ಬ್ಯಾಂಕ್ ಅಧಿಕೃತ ಸೈಟ್‌ಗಳ ಮೂಲಕ ಮಾತ್ರ ಇಂಟರ್ನೆಟ್ ಬ್ಯಾಂಕಿಂಗ್ ಬಳಸಿ

* ಬ್ಯಾಂಕ್ ವಿವರಗಳನ್ನು ಕ್ಲಿಕ್ ಮಾಡಲು ಮತ್ತು ಹಂಚಿಕೊಳ್ಳಲು ಕೇಳುವ ಯಾವುದೇ ಇಮೇಲ್ ಲಿಂಕ್‌ನ ಡಿಲೀಟ್​ ಮಾಡಿ

* ಗುರುತಿಸದ ಯಾವುದೇ ಟೋಲ್ ಫ್ರೀ ಸಂಖ್ಯೆಯನ್ನು ಡಯಲ್ ಮಾಡಬೇಡಿ

* ಸೈಬರ್ ಕೆಫೆಯಿಂದ ಆನ್‌ಲೈನ್ ಬ್ಯಾಂಕಿಂಗ್ ಚಟುವಟಿಕೆಗಳನ್ನು ಎಂದಿಗೂ ನಡೆಸಬೇಡಿ

* ನಕಲಿ ಕರೆಗಳನ್ನು ನಿಗ್ರಹಿಸಲು ಜಾಗರೂಕರಾಗಿರುವುದು ಮುಖ್ಯ.

* ವಂಚನೆಯ ಸಂದರ್ಭದಲ್ಲಿ, ತಕ್ಷಣ ನಿಮ್ಮ ಬ್ಯಾಂಕ್ ಖಾತೆಗಳನ್ನು ಫ್ರೀಜ್ ಮಾಡಿ

* ಕಳೆದ ಆರು ತಿಂಗಳಿನಿಂದ ಖಾತೆಯ ಮಾಹಿತಿ ಪಡೆದುಕೊಳ್ಳಿ

* ನಕಲಿ ಕರೆಗಳ SMS ವಹಿವಾಟಿನ ಪ್ರತಿಗಳನ್ನು ಮಾಡಿ

* ನಿಮ್ಮ ಬ್ಯಾಂಕ್ ಪಾಸ್‌ಬುಕ್‌ನ ನಕಲನ್ನು ಮಾಡಿ

* ಬ್ಯಾಂಕಿನಲ್ಲಿ ಸಲ್ಲಿಸಿದ ಗುರುತಿನ ದಾಖಲೆಗಳ ಪ್ರತಿಗಳನ್ನು ಇರಿಸಿ

* ವಿಷಯವನ್ನು ಹತ್ತಿರದ ಪೊಲೀಸ್ ಠಾಣೆಗೆ ವರದಿ ಮಾಡಿ

ಸೈಬರ್ ಅಪರಾಧಿಗಳು ತಮ್ಮ ಬಲಿಪಶುಗಳನ್ನು ನಕಲಿ ಕರೆಗಳ ಬಳಕೆಯಿಂದ ಹೇಗೆ ಬಲೆಗೆ ಬೀಳಿಸುತ್ತಾರೆ ಎಂಬುದು ಸ್ಪಷ್ಟವಾಗಿದೆ. ಯಾವುದೇ ಕರೆಗೆ ಉತ್ತರಿಸುವ ಮೊದಲು ಇನ್ನೊಂದು ಬದಿಯ ವ್ಯಕ್ತಿಯು ನಿಮ್ಮ ಹಣಕಾಸಿನ ವಿವರಗಳನ್ನು ಏಕೆ ಕೇಳುತ್ತಿದ್ದಾನೆ? ಎಂಬುದನ್ನು ತಿಳಿದುಕೊಳ್ಳಬೇಕು. ಅಂತಹ ಯಾವುದೇ ಕರೆ ನಕಲಿ ಕರೆಯಾಗಿರಬಹುದು. ಅದನ್ನು ಸರಿಯಾಗಿ ನಿರ್ವಹಿಸದಿದ್ದರೆ ನೀವು ಕಷ್ಟಪಟ್ಟು ಸಂಪಾದಿಸಿದ ಉಳಿತಾಯ ಕ್ರಿಮಿನಲ್​ಗಳ ಪಾಲಾಗಲಿದೆ. ಮುನ್ನೆಚ್ಚರಿಕಾ ಕ್ರಮಗಳಿಂದ ಮಾತ್ರ ಸೈಬರ್ ಅಪರಾಧ ಪ್ರಕರಣಗಳಿಂದ ನಿಮ್ಮನ್ನು ಉಳಿಸಿಕೊಳ್ಳಲು ಸಾಧ್ಯ.

Intro:Body:Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.