ETV Bharat / bharat

ವಿಶೇಷ ಅಂಕಣ: ನಮ್ಮ ಮೂಲಭೂತ ಹಕ್ಕುಗಳನ್ನು ರಕ್ಷಿಸುವವರು ಯಾರು?

ನ್ಯಾಯಾಂಗ ನಿಂದನೆ ಕಾಯ್ದೆಯು ಮೊದಲು ಜಾರಿಯಾಗಿದ್ದು 1926ರ ಇಂಗ್ಲಿಷರ ಅವಧಿಯಲ್ಲಿ. 1949ರಲ್ಲಿ ಭಾರತೀಯ ಸಂವಿಧಾನದಲ್ಲಿ ಇದನ್ನು ಅಳವಡಿಸಿಕೊಳ್ಳಬೇಕಾದ ಸಂದರ್ಭದಲ್ಲಿ, ಅಭಿವ್ಯಕ್ತಿ ಸ್ವಾತಂತ್ರ್ಯ ಕುರಿತು ಸಂವಿಧಾನ ರಚನಾ ಸಭೆಯಲ್ಲಿ ವಿಸ್ತೃತ ಚರ್ಚೆ ನಡೆದಿತ್ತು.

Who protects our fundamental rights
ವಿಶೇಷ ಅಂಕಣ: ನಮ್ಮ ಮೂಲಭೂತ ಹಕ್ಕುಗಳನ್ನು ರಕ್ಷಿಸುವವರು ಯಾರು?
author img

By

Published : Sep 4, 2020, 4:30 PM IST

ನವದೆಹಲಿ: ಅಂದಾಜು 36 ವರ್ಷಗಳ ಹಿಂದೆ ಸುಪ್ರೀಂಕೋರ್ಟ್‌ ಒಂದು ಮಹತ್ವದ ತೀರ್ಪು ನೀಡಿತ್ತು. “ದೇಶದಾದ್ಯಂತ ಇರುವ ಎಲ್ಲಾ ನ್ಯಾಯಾಲಯಗಳು ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ರಕ್ಷಿಸಲೇಬೇಕು ... ಈ ಹಕ್ಕನ್ನು ನಗಣ್ಯವಾಗಿಸಲು ಸರ್ಕಾರಗಳು ಕೈಗೊಳ್ಳುವ ಯಾವುದೇ ಪ್ರಯತ್ನಗಳನ್ನು ಹಾಗೂ ಕ್ರಮಗಳನ್ನು ತೆಗೆದು ಹಾಕುವುದು ಅವುಗಳ ಪ್ರಾಥಮಿಕ ಕರ್ತವ್ಯ” ಎಂದು ಸಂವಿಧಾನದ ಆಶಯವನ್ನು ಎತ್ತಿಹಿಡಿದಿತ್ತು.

ಆದರೆ, ನ್ಯಾಯಾಂಗದ ವಿರುದ್ಧ ಟ್ವೀಟ್‌ಗಳನ್ನು ಮಾಡಿದ್ದ ಸುಪ್ರೀಂಕೋರ್ಟ್‌ನ ಹಿರಿಯ ವಕೀಲ ಪ್ರಶಾಂತ್​ ಭೂಷಣ್‌ ಅವರು ನ್ಯಾಯಾಂಗ ನಿಂದನೆ ಎಸಗಿದ್ದಾರೆ ಎಂದು ಅವರಿಗೆ ಶಿಕ್ಷೆ ವಿಧಿಸುವ ಮೂಲಕ ತಾನೇ ಘೋಷಿಸಿದ್ದ ಸ್ವಯಂ ಆದರ್ಶವನ್ನು ಸುಪ್ರೀಂಕೋರ್ಟ್‌ ಶೂನ್ಯಗೊಳಿಸಿದಂತಾಗಿದೆ!!

“ತಾರ್ಕಿಕ ಟೀಕೆ ಹಾಗೂ ವ್ಯವಸ್ಥೆಯ ಪ್ರತಿಷ್ಠೆಯನ್ನು ಉದ್ದೇಶಪೂರ್ವಕ ಹಾಳು ಮಾಡುವುದರ ನಡುವೆ ವ್ಯತ್ಯಾಸವಿದೆ” ಎಂಬ ಸುಪ್ರೀಂಕೋರ್ಟ್‌ನ ಹೇಳಿಕೆಯಲ್ಲಿ ನೂರಕ್ಕೆ ನೂರರಷ್ಟು ಸತ್ಯವಿದೆ. ಇದನ್ನು ನೋಡಿದಾಗ, “ಕೆಲವು ಟೀಕೆಗಳನ್ನು ಮಾಡಿದ ಕಾರಣಕ್ಕೆ ಹಾಳಾಗುವಷ್ಟು ದುರ್ಬಲವಾಗಿದೆಯೇ ನ್ಯಾಯಾಂಗದ ವರ್ಚಸ್ಸು?” ಎಂಬ ಅಂಶವೂ ಮನಸ್ಸಿನಲ್ಲಿ ಸುಳಿಯದೇ ಇರಲಾರದು.

“ಟೀಕೆಗೆ ಕತ್ತರಿ ಹಾಕುವ ಮೂಲಕ, ನ್ಯಾಯಾಲಯಗಳು ಜನರ ವಿಶ್ವಾಸವನ್ನು ಗೆಲ್ಲಲಾರವು” ಎಂದು ಐವರು ಸದಸ್ಯರ ಸಾಂವಿಧಾನಿಕ ನ್ಯಾಯಮಂಡಳಿಯು 1952ರಲ್ಲಿ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಸ್ಪಷ್ಟಪಡಿಸಿತ್ತು. ನ್ಯಾಯಾಂಗ ಹಾಗೂ ನ್ಯಾಯಾಲಯಗಳ ಘನತೆಯನ್ನು ಎತ್ತಿ ಹಿಡಿಯಬೇಕಾದ ಅವಶ್ಯಕತೆ, ಹಾಗೂ “ಸಂದರ್ಭ ಬಂದರೆ ಕೆಲವು ತಾರ್ಕಿಕ ಮಿತಿಗಳಿಗೆ ಒಳಪಟ್ಟು” ಭಾರತದ ಸಂವಿಧಾನ ನೀಡಿರುವ ವಾಕ್‌ ಸ್ವಾತಂತ್ರ್ಯದ ಮೂಲಭೂತ ಹಕ್ಕಿಗೆ ನೀಡಬೇಕಾದ ಷರತ್ತುರಹಿತ ಮನ್ನಣೆ ಒಂದೆಡೆ ಇದ್ದರೆ, ತಮ್ಮ ಘನತೆ ಹಾಗೂ ಗೌರವವನ್ನು ಖಂಡಿತವಾಗಿ ಹೆಚ್ಚಿಸುವಂತಹ ನ್ಯಾಯಾಲಯಗಳ ಉದಾರ ಹಾಗೂ ಸಮತೋಲಿತ ಪ್ರತಿಕ್ರಿಯೆ ಇನ್ನೊಂದೆಡೆ ಇದೆ.

1978ರ ಪ್ರಕರಣವೊಂದರಲ್ಲಿ, “ನಾಯಿ ಬೊಗಳುತ್ತಿದ್ದರೂ ಆನೆ (ಇಲ್ಲಿ, ನ್ಯಾಯಾಂಗ ವ್ಯವಸ್ಥೆ) ಗಾಂಭಿರ್ಯದಿಂದ ಹೆಜ್ಜೆ ಹಾಕುತ್ತದೆ. ಪದೇ ಪದೇ ಮಾಡುತ್ತಿದ್ದರೂ ಇಂತಹ ಚಿಲ್ಲರೆ ಟೀಕೆಗಳಿಗೆ ನಾವು ಪ್ರತಿಕ್ರಿಯಿಸುವುದಿಲ್ಲ”, ಎಂದು ನ್ಯಾಯಮೂರ್ತಿ ಕೃಷ್ಣ ಅಯ್ಯರ್‌ ಹೇಳಿದ್ದರು. ಮುಳಗಾಂವಕರ್‌ ತತ್ವಗಳು ಎಂದೇ ಹೆಸರಾಗಿದ್ದ ಈ ಉದಾತ್ತ ಆದರ್ಶಗಳು ನಮ್ಮ ನ್ಯಾಯಾಂಗ ವ್ಯವಸ್ಥೆಯನ್ನು ಪ್ರತಿನಿಧಿಸುವ ಸಂಕೇತ ದೀಪಗಳಾಗಬೇಕಿವೆ.

ನ್ಯಾಯಾಂಗ ನಿಂದನೆ ಕಾಯ್ದೆಯು ಮೊದಲು ಜಾರಿಯಾಗಿದ್ದು 1926ರ ಇಂಗ್ಲಿಷರ ಅವಧಿಯಲ್ಲಿ. 1949ರಲ್ಲಿ ಭಾರತೀಯ ಸಂವಿಧಾನದಲ್ಲಿ ಇದನ್ನು ಅಳವಡಿಸಿಕೊಳ್ಳಬೇಕಾದ ಸಂದರ್ಭದಲ್ಲಿ, ಅಭಿವ್ಯಕ್ತಿ ಸ್ವಾತಂತ್ರ್ಯ ಕುರಿತು ಸಂವಿಧಾನ ರಚನಾ ಸಭೆಯಲ್ಲಿ ವಿಸ್ತೃತ ಚರ್ಚೆ ನಡೆದಿತ್ತು.

ನ್ಯಾಯಾಂಗ ನಿಂದನೆ ಕಾನೂನುಗಳು ದುರ್ಬಳಕೆಯಾಗಿವೆ ಹಾಗೂ ನ್ಯಾಯಾಧೀಶರೇ ವಿಚಾರಣಾಕಾರರೂ ಹಾಗೂ ಸಂತ್ರಸ್ತರೂ ಆದಾಗ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಧಕ್ಕೆ ಒದಗುತ್ತದೆ ಎಂಬ ವಾಸ್ತವದ ನಡುವೆಯೂ ನ್ಯಾಯಾಂಗ ವ್ಯವಸ್ಥೆ ಸುಗಮವಾಗಿ ಕಾರ್ಯ ನಿರ್ವಹಿಸಬೇಕು ಎಂಬ ಪರಮೋಚ್ಚ ಆದರ್ಶವನ್ನು ಆಗ ಎತ್ತಿಹಿಡಿಯಲಾಯಿತು.

ಪ್ರತಿವಾದಿಗಳನ್ನು ಹಾಗೂ ನ್ಯಾಯಾಲಯದ ನಿಂದನೆ ಪ್ರಕರಣಗಳಲ್ಲಿ “ಸತ್ಯ”ವನ್ನು ರಕ್ಷಿಸಲು, ಸದರಿ ಕಾನೂನಿಗೆ 1971ರಲ್ಲಿ ತಿದ್ದುಪಡಿ ತಂದು, ಹೊಸ ಕಾನೂನೊಂದು ಜಾರಿಗೊಂಡು, ನ್ಯಾಯಾಂಗ ನಿಂದನೆಯ ಅಧಿಕಾರ ವ್ಯಾಪ್ತಿ ಹಾಗೂ ವಿಧಾನಗಳನ್ನು ನಿರ್ದಿಷ್ಟಪಡಿಸಿದ ನಂತರವೂ, ಅಭಿವ್ಯಕ್ತಿ ಸ್ವಾತಂತ್ರ್ಯವು ನಿರಂತರವಾಗಿ ಶಕ್ತಿಗುಂದುತ್ತಲೇ ಇದೆ.

ಸಾರ್ವಜನಿಕ ಸಂಸ್ಥೆಗಳ (ಸರಕಾರಿ ಕಚೇರಿ) ಹೊಣೆಗಾರಿಕೆಯನ್ನು ಯಾರು ಹೊತ್ತುಕೊಂಡಿರುತ್ತಾರೋ ಅವರು ಸಾರ್ವಜನಿಕರಿಗೆ ಬಾಧ್ಯತೆ ಹೊಂದಿರುತ್ತಾರೆ ಎಂದು ಸುಪ್ರೀಂಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಹುದ್ದೆಯಿಂದಲೇ ಹೇಳಿದ್ದರು ನ್ಯಾಯಮೂರ್ತಿ ಎ.ಎಸ್.‌ ಆನಂದ್‌. ಇಂತಹ ಸಲಹೆಗಳನ್ನು ನಿರ್ಲಕ್ಷ್ಯಿಸುತ್ತಿರುವುದರಿಂದಲೇ, ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಮಿತಿ ಒಡ್ಡುತ್ತಿರುವ ಸಂವಿಧಾನದ ಅನುಚ್ಛೇದ 19(2)ಕ್ಕೆ ತಿದ್ದುಪಡಿ ತರಬೇಕೆಂದು ಸಾಂವಿಧಾನಿಕ ಪರಾಮರ್ಶೆ ಸಮಿತಿ ಶಿಫಾರಸನ್ನೂ ಮಾಡಿತ್ತು.

ಯಾವುದೇ ದುರುದ್ದೇಶವಿಲ್ಲದೇ ಟೀಕಿಸುವ ತನ್ನ ಹಕ್ಕನ್ನು ಪ್ರತಿವಾದಿಯು ಪ್ರಯೋಗಿಸಿದಾಗ, ಆತನ ಮೇಲೆ ನ್ಯಾಯಾಂಗ ನಿಂದನೆಯ ಅಪರಾಧ ಹೊರಿಸಲಾಗದು ಎಂದು ಆಸ್ಟ್ರೇಲಿಯಾದ ನ್ಯಾಯಾಲಯವು 1992ರಲ್ಲಿ ತೀರ್ಪು ನೀಡಿದೆ. ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಅಡ್ಡಿಯಾಗಿದೆ ಎಂಬ ಕಾರಣಕ್ಕೆ ನ್ಯಾಯಾಂಗ ನಿಂದನೆ ಕಾಯಿದೆಯನ್ನು ಬ್ರಿಟನ್‌ನಲ್ಲಿ 2013ರಲ್ಲಿ ತೆಗೆದು ಹಾಕಲಾಗಿದೆ.

ಹೀಗಿದ್ದರೂ, 2016ರಲ್ಲಿ ಬ್ರೆಕ್ಸಿಟ್‌ ಕುರಿತು ತೀರ್ಪು ನೀಡಿದ್ದ ಮೂವರು ನ್ಯಾಯಾಧೀಶರ ಮೇಲೆ ಡೇಲಿ ಮೇಲ್‌ ಪತ್ರಿಕೆಯು ಮಾಡಿದ್ದ “ಜನರ ಶತ್ರುಗಳು” ಎಂಬ ಟೀಕೆಯನ್ನು, ಅಲ್ಲಿಯ ಪ್ರಬುದ್ಧ ನ್ಯಾಯಾಂಗವು ನ್ಯಾಯಾಂಗ ನಿಂದನೆ ಎಂದು ಭಾವಿಸಲಿಲ್ಲ. ನ್ಯಾಯಾಂಗವು ಅಪಾಯಕ್ಕೆ ಒಳಗಾದ ಸಂದರ್ಭದಲ್ಲಿ ಇಂತಹ ಪ್ರಬುದ್ಧತೆಯಷ್ಟೇ ಚಾಟಿ ಝಳಪಿಸಬೇಕು. ಹಾಗಾದಾಗ ಮಾತ್ರ ನ್ಯಾಯಾಲಯಗಳ ವರ್ಚಸ್ಸು ವೃದ್ಧಿಯಾಗಬಲ್ಲುದು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.