ಪಾಟ್ನಾ: ಯಾರಾದರೂ ಸಹೋದರ, ಸಹೋದರಿಗೆ ಮುತ್ತು ಕೊಟ್ಟರೆ ಅದು ಸೆಕ್ಸ್ ಮಾಡಿದಂತೆಯೇ? ತಾಯಿ ಮಗನಿಗೆ, ಮಗ ತಾಯಿಗೆ ಮುತ್ತು ನೀಡಿದರೆ ಅದನ್ನು ಸೆಕ್ಸ್ ಎನ್ನಲಾಗುತ್ತದೆಯೇ? ಎಂದು ಹೇಳುವ ಮೂಲಕ ಬಿಹಾರದ ಮಾಜಿ ಮುಖ್ಯಮಂತ್ರಿ ಜೀತನ್ ರಾಮ್ ಮಾಂಝಿ ಹೊಸ ವಿವಾದ ಹುಟ್ಟುಹಾಕಿದ್ದಾರೆ.
ಲೋಕಸಭೆಯಲ್ಲಿ ತ್ರಿವಳಿ ತಲಾಖ್ ಮಸೂದೆ ಕುರಿತ ಚರ್ಚೆ ವೇಳೆ ಸಮಾಜವಾದಿ ಪಕ್ಷದ ಸಂಸದ ಆಜಂ ಖಾನ್, ಸಂಸದೆ ರಮಾದೇವಿ ಬಗ್ಗೆ ಕೀಳುಮಟ್ಟದ ಮಾತುಗಳನ್ನಾಡಿದ್ದರು. ಈ ಬಗ್ಗೆ ಪ್ರತಿಕ್ರಿಯಿಸಿರುವ ಜೀತನ್ ರಾಮ್ ಮಾಂಝಿ, ಆಜಂ ಖಾನ್ ಕ್ಷಮೆ ಕೇಳಬೇಕು, ಆದರೆ ರಾಜೀನಾಮೆ ನೀಡುವ ಅಗತ್ಯವಿಲ್ಲ ಎಂದು ಸಮರ್ಥಿಸಿಕೊಂಡಿದ್ದಾರೆ.
ಆಜಂ ಖಾನ್ ವಿರುದ್ಧ ಎಲ್ಲೆಡೆಯಿಂದ ತೀವ್ರ ಟೀಕೆ ವ್ಯಕ್ತವಾಗಿತ್ತು. ಆಜಂ ಖಾನ್ ಅವರು ಪ್ರಜಾಪ್ರಭುತ್ವದ ನಿಯಮ ಮೀರಿದ್ದಾರೆ. ಅವರ ಮಾತುಗಳು ಮಾನಸಿಕ ವಿಕೃತಿಯನ್ನು ತೋರಿಸುತ್ತವೆ ಎಂದು ಬಿಜೆಪಿಯ ಸುಷ್ಮಾ ಸ್ವರಾಜ್ ಕಿಡಿಕಾರಿದ್ದರು.
ಈ ಹೇಳಿಕೆ ಬೆನ್ನಲ್ಲೇ ಆಜಂ ಖಾನ್ ಕ್ಷಮೆ ಯಾಚಿಸಿದ್ದರು. ಬಹಳ ವರ್ಷಗಳಿಂದ ರಾಜಕೀಯದಲ್ಲಿರುವ ನಾನು ಕೆಟ್ಟದಾಗಿ ಮಾತನಾಡಲು ಸಾಧ್ಯವಿಲ್ಲ. ಏನಾದರೂ ಕೆಟ್ಟ ಶಬ್ದಗಳನ್ನು ಬಳಸಿದ್ದರೆ, ಈ ಕೂಡಲೇ ಸಂಸತ್ಗೆ ರಾಜೀನಾಮೆ ನೀಡಲು ಸಿದ್ಧ ಎಂದು ಹೇಳಿದ್ದರು.