ನವದೆಹಲಿ: ಸಾಮಾಜಿಕ ಅಂತರದ ಕಾಲದಲ್ಲಿ ವೀಡಿಯೊ ಮೀಟಿಂಗ್ ಅಪ್ಲಿಕೇಶನ್‌ಗಳ ಅದ್ಭುತ ಬೆಳವಣಿಗೆಯಿಂದ ಸ್ಪೂರ್ತಿಗೊಂಡ ವಾಟ್ಸ್ಆ್ಯಪ್ ಹೊಸ ವೈಶಿಷ್ಟ್ಯವನ್ನು ನಿರ್ಮಿಸುತ್ತಿದ್ದು, ಆಡಿಯೋ ಹಾಗೂ ವಿಡಿಯೋ ಕರೆಗಳಲ್ಲಿ ಹೆಚ್ಚಿನ ಜನರು ಭಾಗವಹಿಸಲು ಇದು ಅವಕಾಶವನ್ನು ನೀಡಲಿದೆ. ಈಗ ಗುಂಪು ಆಡಿಯೊ ಮತ್ತು ವಿಡಿಯೊ ಕರೆಗಳಿಗೆ ಸೇರಲು ಪ್ರಸ್ತುತ 4 ರ ಮಿತಿಯಿದೆ.
ಇತ್ತೀಚಿನ ವಾಟ್ಸ್ಆ್ಯಪ್ ಬೀಟಾ ಅಪ್ಡೇಟ್ ಕಂಪನಿಯು ಧ್ವನಿ ಅಥವಾ ವಿಡಿಯೋ ಗ್ರೂಪ್ ಕರೆಯಲ್ಲಿ ಭಾಗವಹಿಸುವವರ ಮಿತಿಯನ್ನು ವಿಸ್ತರಿಸಲು ಯೋಜಿಸುತ್ತಿದೆ ಎಂದು ವಾಟ್ಸ್ಆ್ಯಪ್ ಅಪ್‌ಡೇಟ್‌ಗಳನ್ನು ಟ್ರ್ಯಾಕ್ ಮಾಡುವ ಅಭಿಮಾನಿಗಳ ವೆಬ್‌ಸೈಟ್ ಡಬ್ಲ್ಯುಎಬೆಟಾ ಇನ್‌ಫೊ ಗುರುವಾರ ಬಹಿರಂಗಪಡಿಸಿದೆ.
-
We've made it easier than ever to start a group call from WhatsApp for groups of 4 or less. From your group chat tap the video or voice call icon to directly start a call with everyone in the chat! 🙌
— WhatsApp Inc. (@WhatsApp) April 7, 2020 " class="align-text-top noRightClick twitterSection" data="
">We've made it easier than ever to start a group call from WhatsApp for groups of 4 or less. From your group chat tap the video or voice call icon to directly start a call with everyone in the chat! 🙌
— WhatsApp Inc. (@WhatsApp) April 7, 2020We've made it easier than ever to start a group call from WhatsApp for groups of 4 or less. From your group chat tap the video or voice call icon to directly start a call with everyone in the chat! 🙌
— WhatsApp Inc. (@WhatsApp) April 7, 2020
ವಾಟ್ಸ್ಆ್ಯಪ್ ಬಹುಶಃ ಕೋವಿಡ್ 19 ಗೆ ಸಂಬಂಧಿಸಿದ ಕಳವಳಗಳು ಮತ್ತು ಈ ಸಂಧರ್ಭದಲ್ಲಿ ಹೆಚ್ಚಿನ ಬಳಕೆದಾರರು ಗುಂಪು ಕರೆಗಳನ್ನು ಬಳಸುತ್ತಿರುವುದರಿಂದ, ಹೆಚ್ಚಿನ ಭಾಗವಹಿಸುವವರೊಂದಿಗೆ ಕರೆಗಳನ್ನು ಅನುಮತಿಸುವ ಉದ್ದೇಶದಿಂದ ಆ ಮಿತಿಯನ್ನು ವಿಸ್ತರಿಸಲು ನಿರ್ಧರಿಸಿದೆ ಎಂದು ವರದಿ ತಿಳಿಸಿದೆ.