ನವದೆಹಲಿ: ಸೋಷಿಯಲ್ ಮೀಡಿಯಾದ ಅತ್ಯಂತ ಪರಿಣಾಮಕಾರಿ ಸಂವಹನ ಪರಿಕರವಾಗಿರುವ ವಾಟ್ಸ್ಆ್ಯಪ್ ತನ್ನ ಬಳಕೆದಾರರಿಗೆ ಮತ್ತೊಂದು ಹೊಸ ಫೀಚರ್ಸ್ ಬಿಡುಗಡೆ ಮಾಡಿದೆ.
ಯಾವುದೋ ಒಂದು ಮೆಸೇಜ್( ಸಂದೇಶ) ಪದೇ ಪದೆ ಫಾರ್ವರ್ಡ್( ವರ್ಗಾವಣೆ) ಆಗುತ್ತಿದ್ದರೆ, ಅಂತಹ ಮೆಸೇಜ್ ಬಂದ ತಕ್ಷಣ ಫ್ರಿಕ್ವೆಂಟ್ಲಿ ಫಾರ್ವರ್ಡೆಡ್( ಆಗಾಗ್ಗೆ ಹರಿದಾಡುವ ಮೆಸೇಜ್) ಎಂಬ ಸಂದೇಶವನ್ನ ನೀಡುತ್ತದೆ. ಇಂತಹ ಒಂದು ಹೊಸ ಆಪ್ಶನ್ ಅನ್ನು ಭಾರತೀಯ ಬಳಕೆದಾರರಿಗೆ ವಾಟ್ಸ್ಆ್ಯಪ್ ನೀಡಿದೆ.
ಯಾವುದೋ ಒಂದು ಮೆಸೇಜ್ ಐದು ಬಾರಿ ಫಾರ್ವರ್ಡ್ ಆಗಿದ್ದರೆ, ಅಂತಹ ಮೆಸೇಜ್ ನಿಮ್ಮ ನಂಬರ್ಗೆ ಬಂದಾಗ ನೋಟಿಫಿಕೇಷನ್ ಬರುತ್ತೆ. ಅಷ್ಟೇ ಅಲ್ಲ ಈ ಮೆಸೇಜ್ ಬಹಳ ಬಾರಿ ಪುನರಾವರ್ತಿತ ಆಗಿದೆ ಎಂಬ ಸಂದೇಶವನ್ನ ನೀಡುತ್ತದೆ.
ಈ ಮಧ್ಯೆ ವಾಟ್ಸ್ಆ್ಯಪ್ ಪೇಮೆಂಟ್ ಸೇವೆ(ಪಾವತಿ) ಆರಂಭಿಸಲು ಸಜ್ಜಾಗಿದೆ. ಈ ವರ್ಷದ ಅಂತ್ಯದಲ್ಲಿ ವಾಟ್ಸ್ಆ್ಯಪ್ನಿಂದ ಹಣಕಾಸು ವ್ಯವಹಾರ ನಡೆಸಲು ಸನ್ನದ್ಧವಾಗಲಿದೆ ಎಂದು ಕಂಪನಿ ಗ್ಲೋಬಲ್ ಹೆಡ್ ಹೇಳಿದ್ದಾರೆ.
ಭಾರತದಲ್ಲಿ ಸುಮಾರು 40 ಕೋಟಿ ವಾಟ್ಸ್ಆ್ಯಪ್ ಬಳಕೆದಾರರಿದ್ದಾರೆ.