ಭಾರತವು ಬಹು-ಸಾಂಸ್ಕೃತಿಕ ದೇಶವಾಗಿದೆ. ಜೀವನಶೈಲಿಯಿಂದ ಆಹಾರದವರೆಗೆ ರಾಷ್ಟ್ರದಾದ್ಯಂತ ಭಿನ್ನತೆ ಇದೆ. ಇನ್ನೂ ಹಾಲುಣಿಸುವ ತಾಯಿ ಯಾವ ಆಹಾರವನ್ನು ಸೇವಿಸಬೇಕು ಎಂಬ ಪ್ರಶ್ನೆ ಬಂದಾಗ ನಮ್ಮ ಅಜ್ಜಿಯಂದಿರು ಮತ್ತು ತಾಯಂದಿರು ಹಲವು ಸಲಹೆ ನೀಡುತ್ತಾರೆ. ಹಾಗಾದ್ರೆ ಹಾಲುಣಿಸುವ ತಾಯಂದಿರು ಸೇವಿಸಬೇಕಾದ ಆಹಾರ ಪದ್ಧತಿಯ ಬಗ್ಗೆ ನಮ್ಮ ಪೌಷ್ಟಿಕಾಂಶ ತಜ್ಞೆ ದಿವ್ಯಾ ಗುಪ್ತಾ ಏನು ಹೇಳುತ್ತಾರೆ ನೋಡೊಣ.
ಡಬ್ಲ್ಯೂಹೆಚ್ಒ ಸಂಸ್ಥೆಯು ಮಗು ಜನಿಸಿದ ಮೊದಲ ಆರು ತಿಂಗಳವರೆಗೆ ವಿಶೇಷ ಸ್ತನ್ಯಪಾನವನ್ನು ಶಿಫಾರಸು ಮಾಡುತ್ತದೆ. ಮುಂದಿನ 2 ವರ್ಷದವರೆಗೆ ಅಥವಾ ಅದರ ನಂತರ ಸ್ತನ್ಯಪಾನದೊಂದಿಗೆ ಸೂಕ್ತವಾದ ಪೂರಕ ಆಹಾರ ನೀಡಬಹುದು ಎಂದು ಹೇಳಿದೆ.
ಸ್ತನ್ಯಪಾನದಿಂದಾಗುವ ಲಾಭಗಳು:
ಸ್ತನ್ಯಪಾನವು ಮಗುವಿನ ಬೆಳವಣಿಗೆ ಮತ್ತು ಅಭಿವೃದ್ಧಿಯನ್ನು ಉತ್ತೇಜಿಸುತ್ತದೆ.
ಇದು ಶಿಶುಗಳಿಗಳಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿಸಿ ಸೋಂಕು ಮತ್ತು ರೋಗಗಳ ವಿರುದ್ಧ ಹೋರಾಡಲು ಸಹಾಯ ಮಾಡುತ್ತದೆ.
ಪ್ರೋಟೀನ್, ಲ್ಯಾಕ್ಟೋಸ್ ಮತ್ತು ಕೊಬ್ಬಿನಾಂಶದ ಪರಿಪೂರ್ಣ ಸಂಯೋಜನೆಯಿರುವ ಹಾಲಿನಿಂದ ಶಿಶುವಿನ ದೇಹ ಸುಲಭವಾಗಿ ವೃದ್ಧಿಯಾಗುತ್ತದೆ.
ಎದೆ ಹಾಲು ಸುಲಭವಾಗಿ ಜೀರ್ಣವಾಗುವುದರಿಂದ ಎದೆ ಹಾಲು ಕುಡಿದ ಮಕ್ಕಳು ವಿರಳವಾಗಿ ಮಲಬದ್ಧರಾಗುತ್ತಾರೆ.
ಸ್ತನ್ಯಪಾನ ಮಾಡುವ ಶಿಶುಗಳ ಎಸ್ಐಡಿಎಸ್ (ಶಿಶುವಿನ ಸಾವಿನ ಸಂಖ್ಯೆ) ಕಡಿಮೆ ಸಾಮಾನ್ಯವಾಗಿದೆ.
ಎದೆ ಹಾಲು ವಿವಿಧ ಹಂತಗಳಲ್ಲಿ ಶಿಶುವಿನ ಬೆಳವಣಿಗೆಗೆ ಬೇಕಾದ ಪ್ರೋಟೀನ್, ಕೊಬ್ಬಿನಾಂಶ, ಜೀವಸತ್ವಗಳು, ಖನಿಜಗಳು, ಕಿಣ್ವಗಳು ಮತ್ತು ಸಕ್ಕರೆಗಳ ನಿಖರವಾದ ಸಂಯೋಜನೆಯನ್ನು ಹೊಂದಿದೆ.
ಸ್ತನ್ಯಪಾನವು ಉತ್ತಮ ದವಡೆ ಮತ್ತು ಹಲ್ಲಿನ ಬೆಳವಣಿಗೆಯನ್ನು ಉತ್ತೇಜಿಸುತ್ತದೆ, ತಾಯಿ-ಮಗುವಿನ ಸಂಪರ್ಕವನ್ನು ಉತ್ತೇಜಿಸುತ್ತದೆ.
ಸ್ತನ್ಯಪಾನ ಮಾಡಿಸುವುದರಿಂದ ಗರ್ಭಧಾರಣೆಯ ನಂತರ ಗರ್ಭಾಶಯವು ತನ್ನ ಸಾಮಾನ್ಯ ಗಾತ್ರವನ್ನು ಮರಳಿ ಪಡೆಯಲು ಸಹಾಯ ಮಾಡುತ್ತದೆ.
ಸ್ತನ್ಯಪಾನ ಮಾಡಿಸುವುದರಿಂದ ತಾಯಂದಿರಲ್ಲಿ ಸ್ತನ ಕ್ಯಾನ್ಸರ್, ಅಂಡಾಶಯದ ಕ್ಯಾನ್ಸರ್, ಟೈಪ್ 2 ಡಯಾಬಿಟಿಸ್ ಮತ್ತು ಹೃದ್ರೋಗದ ಪ್ರಮಾಣ ಕಡಿಮೆಯಾಗುತ್ತದೆ.
ಪೌಷ್ಟಿಕಾಂಶದ ಅವಶ್ಯಕತೆಗಳು:
ಹಾಲುಣಿಸುವ ತಾಯಿಯ ಆಹಾರ ಮತ್ತು ಗರ್ಭಾವಸ್ಥೆಯಲ್ಲಿ ಅವಳು ತೆಗೆದುಕೊಂಡ ಪೌಷ್ಟಿಕಾಂಶದ ಸ್ಥಿತಿಯು ಎದೆ ಹಾಲಿನ ಗುಣಮಟ್ಟ ಮತ್ತು ಪ್ರಮಾಣದ ಮೇಲೆ ಸ್ವಲ್ಪ ಮಟ್ಟಿಗೆ ಪರಿಣಾಮ ಬೀರುತ್ತದೆ.
ಹಾಲುಣಿಸುವ ಸಮಯದಲ್ಲಿ ಶಿಫಾರಸು ಮಾಡಲಾದ ಆಹಾರ ಭತ್ಯೆ ದಿನಕ್ಕೆ 500-600 ಕೆ.ಸಿ.ಎಲ್ ಹೆಚ್ಚಾಗುತ್ತದೆ. ಆದಾಗ್ಯೂ, ಬೊಜ್ಜು ಅಥವಾ ಕಡಿಮೆ ತೂಕದ ಮಹಿಳೆಯರಿಗೆ ಈ ಅಂಶವು ಬದಲಾಗಬಹುದು.
ಹಾಲುಣಿಸುವ ಮೊದಲ ಆರು ತಿಂಗಳಲ್ಲಿ ಪ್ರೋಟೀನ್ ಅಂಶ ಅಗತ್ಯವಾಗಿರುತ್ತದೆ. ಪ್ರೋಟೀನ್ ಭರಿತ ಆಹಾರಗಳಲ್ಲಿ ಧಾನ್ಯಗಳು, ಸಿರಿಧಾನ್ಯಗಳು, ಬೇಳೆಕಾಳುಗಳು, ತಾಜಾ ಹಣ್ಣುಗಳು, ತರಕಾರಿಗಳು, ಮೊಟ್ಟೆ, ಸೋಯಾ ಉತ್ಪನ್ನಗಳು, ಕೋಳಿ ಮಾಂಸ ಮತ್ತು ಡೈರಿ ಉತ್ಪನ್ನಗಳು ಸೇರಿವೆ.
ಪೌಷ್ಟಿಕಾಂಶದ ಮೌಲ್ಯ ಕಡಿಮೆ ಇರುವುದರಿಂದ ಸಕ್ಕರೆ ಮತ್ತು ಕೊಬ್ಬಿನಂಶವುಳ್ಳ ಚಿಪ್ಸ್, ಕೇಕ್, ತಂಪು ಪಾನೀಯಗಳಂತಹ ಆಹಾರವನ್ನು ಮಿತಿಗೊಳಿಸಿ. ಬದಲಿಗೆ ಎಳನೀರು, ಹಣ್ಣು ಅಥವಾ ತರಕಾರಿ ರಸ, ಮಜ್ಜಿಗೆ, ಲಸ್ಸಿ ಇತ್ಯಾದಿಗಳನ್ನು ಸೇವಿಸಿ.
ಹಾಲು ಉತ್ಪಾದನೆಯ ಪ್ರಮಾಣವು ದ್ರವ ಸೇವನೆಯ ಪ್ರಮಾಣವನ್ನು ಅವಲಂಬಿಸಿರುವುದರಿಂದ ಸ್ತನ್ಯಪಾನ ಮಾಡುವ ತಾಯಂದಿರಿಗೆ ದಿನಕ್ಕೆ 10-15 ಗ್ಲಾಸ್ ದ್ರವ ಪದಾರ್ಥಗಳನ್ನು ಸೇವಿಸಲು ಪ್ರೋತ್ಸಾಹಿಸಬೇಕು.
ಮಗುವಿನ ಮೇಲೆ ಪರಿಣಾಮ ಬೀರುವ ಕಾರಣ ಮದ್ಯ ಮತ್ತು ಧೂಮಪಾನವನ್ನು ಮಾಡಬಾರದು.
ಡಯೆಟಿಂಗ್ ನಿಂದ ಹಾಲಿನ ಗುಣಮಟ್ಟ ಮತ್ತು ಪ್ರಮಾಣ ಕಡಿಮೆಯಾಗುವುದರಿಂದ ಆಹಾರ ಸೇವನೆಯಲ್ಲಿ ರಾಜಿಯಾಗದೆ. ವಾಕಿಂಗ್‌ನಂತಹ ಲಘು ವ್ಯಾಯಾಮಗಳನ್ನು ನೀವು ಸೇರಿಸಿಕೊಳ್ಳಬಹುದು.
ಕಬ್ಬಿಣ ಮತ್ತು ಕ್ಯಾಲ್ಸಿಯಂ ಸಮೃದ್ಧವಾಗಿರುವ ಮಸೂರ, ಸಿರಿಧಾನ್ಯಗಳು, ಹಸಿರು ಸೊಪ್ಪು ತರಕಾರಿಗಳು, ಒಣದ್ರಾಕ್ಷಿ ಇತ್ಯಾದಿಗಳನ್ನು, ವಿಟಮಿನ್ ಸಿ ಅಧಿಕವಾಗಿರುವ ಆಹಾರಗಳನ್ನು ಸೇವಿಸಿ.
ಕ್ಯಾಲ್ಸಿಯಂನ ಉತ್ತಮ ಮೂಲಗಳು ಡೈರಿ ಉತ್ಪನ್ನಗಳು ಮತ್ತು ಕಡು ಹಸಿರು ತರಕಾರಿಗಳಾಗಿದ್ದು, ಅವನ್ನು ಹೆಚ್ಚು ಸೇವಿಸಿ.
ಸಸ್ಯಾಹಾರಿ ತಾಯಂದಿರಿಗೆ ಸಾಕಷ್ಟು ವಿಟಮಿನ್ ಡಿ ಸಸಿಗದಿದ್ದರೆ ವಿಟಮಿನ್ ಬಿ12 ಪೂರಕವಾಗಿದ್ದು, ಅದನ್ನು ಸೇವಿಸಿ. ಹಸುವಿನ ಹಾಲು ಮತ್ತು ಕೆಲವು ಸಿರಿಧಾನ್ಯಗಳು, ಬಲವರ್ಧಿತ ಆಹಾರಗಳಿಂದ ನಿಮಗೆ ವಿಟಮಿನ್ ಡಿ ಪೂರಕ ಲಭಿಸುತ್ತದೆ.
ಹಾಲಿನ ಉತ್ಪಾದನೆಯನ್ನು ಉತ್ತೇಜಿಸಲು ಬಳಸುವ ಆಹಾರ, ಗಿಡಮೂಲಿಕೆಗಳೇ ಗ್ಯಾಲಕ್ಟಾಗಾಗ್‌ಗಳು. ಕೆಲವು ಗ್ಯಾಲಕ್ಟಾಗಾಗ್‌ಗಳು ಇಂತಿವೆ:
ಬಾರ್ಲಿ
ಸೋಂಪು
ಮೆಂತ್ಯ
ಬಾದಾಮಿ
ಹಾಲು ಮತ್ತು ಹಾಲಿನ ಉತ್ಪನ್ನಗಳು
ಜೀರಿಗೆ
ಓಟ್ಸ್
ಆಳ್ವಿ ಬೀಜಗಳು