ETV Bharat / bharat

ವಿಶೇಷ ಅಂಕಣ... ಪುಲ್ವಾಮ-ಬಾಲಾಕೋಟ್​ ದಾಳಿಯಿಂದ ಕಲಿತ ಪಾಠವೇನು? - ಪುಲ್ವಾಮ ದಾಳಿ ನಂತರ ಮಿಲಿಟರಿ ಪಡೆಯ ಕ್ರಮಗಳು ಹೇಗಿತ್ತು

ಪುಲ್ವಾಮ ದಾಳಿಯಾಗಿ ಒಂದು ವರ್ಷ ಕಳೆದ ನಂತರ ಈಗ ನಮಗೆ ಒಂದು ಸ್ಪಷ್ಟ ವಿವರ ಸಿಕ್ಕಿದೆ. ಬಾಲಕೋಟ್‌ ದಾಳಿಯಲ್ಲಿ ನಾವು ಏನನ್ನು ಸಾಧಿಸಿದ್ದೇವೆ ಎಂಬ ಯಾವುದೇ ತಾರತಮ್ಯ ಇಲ್ಲದ ದೃಷ್ಟಿಕೋನ ಲಭ್ಯವಾಗುತ್ತಿದೆ ಮತ್ತು ಭವಿಷ್ಯದಲ್ಲಿ ಇದು ನಮಗೆ ಯಾವ ಪಾಠವನ್ನು ಕಲಿಸಿಕೊಟ್ಟಿದೆ ಎಂಬುದೂ ಇದರಿಂದ ನಮಗೆ ತಿಳಿದುಬಂದಿದೆ.

Pulwama attack
ಪುಲ್ವಾಮ
author img

By

Published : Mar 4, 2020, 11:56 AM IST

2019 ಫೆಬ್ರವರಿ 14 ರಂದು ಕಾಶ್ಮೀರದ ಪುಲ್ವಾಮಾ ಬಳಿ ಸಿ ಆರ್‌ ಪಿ ಎಫ್‌ ಸಿಬ್ಬಂದಿಯ ಮೇಲೆ ವಾಹನದಲ್ಲಿ ಬಂದ ಒಬ್ಬ ಆತ್ಮಹತ್ಯಾ ದಾಳಿ ಕೋರ ದಾಳಿ ನಡೆಸಿ, 40 ಸಿಬ್ಬಂದಿಯ ಸಾವಿಗೆ ಕಾರಣವಾಗಿದ್ದ. ಇದಕ್ಕೆ ಪ್ರತೀಕಾರವಾಗಿ, ಫೆಬ್ರವರಿ 26 ರಂದು ಭಾರತೀಯ ವಾಯುಪಡೆಯು ಬಾಲಕೋಟ್‌ನಲ್ಲಿರುವ ಜೈಶ್ ಎ ಮೊಹಮದ್ ಉಗ್ರಗಾಮಿಗಳ ನೆಲೆಯನ್ನು ಧ್ವಂಸಗೊಳಿಸಿತು. ಪಾಕಿಸ್ತಾನದ ಖೈಬರ್ ಪಾಖ್ತುಂಖ್ತ್ವಾ ಭಾಗದಲ್ಲಿ ಬಾಲಾಕೋಟ್ ಇದೆ. ಪಾಕಿಸ್ತಾನದ ನೆಲದಲ್ಲಿ 1971ರ ನಂತರ ಇದೇ ಮೊದಲ ಬಾರಿಗೆ ದಾಳಿ ಭಾರತ ದಾಳಿ ನಡೆಸಿತ್ತು.

ಮರುದಿನ ಪಾಕಿಸ್ತಾನದ ವಾಯು ಪಡೆಯು ಪ್ರತಿ ದಾಳಿ ನಡೆಲು ನಿರ್ಧರಿಸಿತಾದರೂ, ಯಾವುದೇ ಹಾನಿ ಮಾಡಲು ಅದರಿಂದ ಸಾಧ್ಯವಾಗಲಿಲ್ಲ. ಆದರೆ, ವಾಯುದಾಳಿಯ ವೇಳೆ ಪಾಕಿಸ್ತಾನದ ಎಫ್‌-16 ಯುದ್ಧ ವಿಮಾನದ ಪೈಲಟ್‌ಗೆ ಭಾರತೀಯ ಪೈಲಟ್‌ಗಳು ಗುಂಡು ಹೊಡೆದಿದ್ದರು. ಇನ್ನೊಂದೆಡೆ ಭಾರತವು ಮಿಗ್‌ 21 ವಿಮಾನವನ್ನು ಕಳೆದುಕೊಂಡಿತು. ಇದರ ಪೈಲಟ್‌ ಪಾಕಿಸ್ತಾನದ ಭೂಭಾಗದಲ್ಲಿ ಇಳಿಯುವ ಅನಿವಾರ್ಯತೆ ಉಂಟಾಯಿತು. ಆ ಕೆಲವು ಗಂಟೆಗಳಲ್ಲಿ ಇಡೀ ಸನ್ನಿವೇಶ ಸಂದಿಗ್ಧ ಸ್ಥಿತಿಗೆ ತೆರಳಿದಂತೆ ಕಂಡುಬಂದಿತ್ತು. ಅದೃಷ್ಟವಶಾತ್‌, ಎರಡೂ ದೇಶಗಳೂ ಮತ್ತಷ್ಟು ಸೇನಾ ದಾಳಿಯನ್ನು ಅಂತಾರಾಷ್ಟ್ರೀಯ ಒತ್ತಡದ ಮೇರೆಗೆ ನಿಲ್ಲಿಸಿದವು ಮತ್ತು ಭಾರತಕ್ಕೆ ಪೈಲಟ್‌ನನ್ನು ಶೀಘ್ರದಲ್ಲೇ ಪಾಕಿಸ್ತಾನವೂ ಬಿಡುಗಡೆ ಮಾಡಿತು.

ಭಾರತದ ರಾಜಕಾರಣದಲ್ಲಿ ಸಾಮಾನ್ಯವಾಗಿ ಕಂಡುಬರುವಂತೆಯೇ ಆಡಳಿತ ಪಕ್ಷ ಮತ್ತು ವಿರೋಧ ಪಕ್ಷಗಳು ಈ ಘಟನೆ ನಡೆಯುತ್ತಿದ್ದಂತೆಯೇ ವಾಗ್ದಾಳಿಯನ್ನೂ ಆರಂಭಿಸಿದ್ದವು. ಬಾಲಕೋಟ್‌ನಲ್ಲಿ ಸತ್ತ ಉಗ್ರರ ಸಂಖ್ಯೆಯ ಬಗ್ಗೆ ವಿಪಕ್ಷಗಳು ಹಾಗೂ ಆಡಳಿತ ಪಕ್ಷಗಳ ಮಧ್ಯೆ ವಾಗ್ಯುದ್ಧ ಶುರುವಾಯಿತು. ವಿದೇಶಿ ಮಾಧ್ಯಮಗಳು ಕೂಡ ಈ ವಿಚಾರದಲ್ಲಿ ಮೂಗು ತೂರಿಸಿದವು. ಬಾಲಕೋಟ್‌ ಬಗ್ಗೆ ಸ್ಯಾಟಲೈಟ್‌ ಇಮೇಜ್‌ಗಳಂತೂ ಇಂಟರ್ನೆಟ್‌ನಲ್ಲಿ ವ್ಯಾಪಕವಾಗಿ ಹರಿದಾಡಿದವು. ಕೆಲವರು ಭಾರತ ಸರ್ಕಾರದ ನಿಲುವಿಗೆ ಸರ್ಮಥನೆ ರೂಪದಲ್ಲಿ ಒಂದಷ್ಟು ಸಾಕ್ಷ್ಯಗಳನ್ನು ಕೊಟ್ಟರೆ, ಇನ್ನೂ ಕೆಲವು ಭಾರತ ಸರ್ಕಾರ ಹೇಳಿದ್ದೆಲ್ಲವೂ ಸುಳ್ಳು ಎಂದು ಪಾಕಿಸ್ತಾನದ ಪರ ವಾದಕ್ಕೆ ನಿಂತವು.

ಒಂದು ವರ್ಷ ಕಳೆದ ನಂತರ ಈಗ ನಮಗೆ ಒಂದು ಸ್ಪಷ್ಟ ವಿವರ ಸಿಕ್ಕಿದೆ. ಬಾಲಕೋಟ್‌ ದಾಳಿಯಲ್ಲಿ ನಾವು ಏನನ್ನು ಸಾಧಿಸಿದ್ದೇವೆ ಎಂಬ ಯಾವುದೇ ತಾರತಮ್ಯ ಇಲ್ಲದ ದೃಷ್ಟಿಕೋನ ಲಭ್ಯವಾಗುತ್ತಿದೆ ಮತ್ತು ಭವಿಷ್ಯದಲ್ಲಿ ಇದು ನಮಗೆ ಯಾವ ಪಾಠವನ್ನು ಕಲಿಸಿಕೊಟ್ಟಿದೆ ಎಂಬುದೂ ಇದರಿಂದ ನಮಗೆ ತಿಳಿದುಬಂದಿದೆ.

ವಿಪತ್ತು ಉಂಟಾದಾಗ ದೇಶದ ವಿಶ್ವಾಸಾರ್ಹತೆಯನ್ನು ನಿರ್ಧರಿಸುವುದು ಕೇವಲ ಸೇನೆಯ ಗಾತ್ರ ಮತ್ತು ಸಾಮರ್ಥ್ಯದಿಂದ ಮಾತ್ರವಲ್ಲ. ಇಂತಹ ಸಂದರ್ಭದಲ್ಲಿ ಸರಿಯಾದ ನಿರ್ಧಾರವನ್ನು ತೆಗೆದುಕೊಳ್ಳುವ ಸಾಮರ್ಥ್ಯವನ್ನು ಆಧರಿಸಿ ದೇಶ ಎಷ್ಟು ವಿಶ್ವಾಸಾರ್ಹ ಎಂದು ಅಳೆಯಲಾಗುತ್ತದೆ. ತುಂಬ ಹಿಂದಿನ ಕಾಲದಿಂದಲೂ ಭಾರತ ಒಂದು ಅತ್ಯಂತ ರಕ್ಷಣಾತ್ಮಕ ದೇಶ ಎಂದು ಭಾವಿಸಲಾಗಿತ್ತು. ಅದರಲ್ಲೂ ಉಗ್ರವಾದವನ್ನು ಭಾರತ ಅತ್ಯಂತ ರಕ್ಷಣಾತ್ಮಕವಾಗಿಯೇ ಎದುರಿಸಿದೆ. ಈ ಹಿಂದೆ ಹಲವು ಬಾರಿ ದಾಳಿ ನಡೆದಾಗಲೂ ಭಾರತ ಅತ್ಯಂತ ಸಂಯಮದ ನೀತಿಯನ್ನು ಅನುಸರಿಸಿತ್ತು. ಪ್ರತಿ ದಾಳಿ ನಡೆಸದೇ, ಈ ವಿಚಾರವನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರಸ್ತಾಪಿಸಿ ಅದನ್ನು ತಡೆಯುವಲ್ಲಿಯೇ ಹೆಚ್ಚಿನ ಶ್ರಮ ವಹಿಸಿತ್ತು. ಆದರೆ, ಈಗಿನ ಸರ್ಕಾರ ಈ ನೀತಿಯಲ್ಲಿ ಮಹತ್ವದ ಬದಲಾವಣೆಯನ್ನು ಮಾಡಿ, ಪಾಕಿಸ್ತಾನಕ್ಕೆ ದಾಳಿಯಿಂದಲೇ ಪ್ರತಿಕ್ರಿಯೆ ನೀಡುವ ನಿರ್ಧಾರ ಮಾಡಿತು.

ಇದರಿಂದಾಗಿ ಕಾಶ್ಮೀರದಲ್ಲಿ ಯುದ್ಧದ ಪರಿಸ್ಥಿತಿಯನ್ನು ಪಾಕಿಸ್ತಾನ ಮುಂದುವರಿಸಿಕೊಂಡು ಬರಲು ಕಾರಣವೂ ಆಯಿತು. ಇದು ಪಾಕಿಸ್ತಾನಕ್ಕೆ ಪ್ರಚೋದಕ ಮನಸ್ಥಿತಿಯನ್ನೂ ನೀಡಿತು. ಆದರೆ ಈಗ ಇದು ಬದಲಾಗಿದೆ. ಭಾರತದ ರಾಜಕೀಯ ನಾಯಕತ್ವವು ಈ ನಿಟ್ಟಿನಲ್ಲಿ ಮಹತ್ವದ ನಿರ್ಧಾರ ತೆಗೆದುಕೊಳ್ಳಲು ಆರಂಭಿಸಿತು. ಸೇನೆಯನ್ನು ಉಗ್ರವಾದ ಹತ್ತಿಕ್ಕಲು ಬಳಸುವುದಕ್ಕಾಗಿ ನಿರ್ಧರಿಸಿತು. ಇದಕ್ಕೆ ಪಾಕಿಸ್ತಾನ ತಕ್ಕ ಬೆಲೆ ತೆರಬೇಕಾಗಿಯೂ ಬಂತು. ಭಾರತದ ಮೇಲೆ ದಾಳಿಗೆ ಉಗ್ರರನ್ನು ಪ್ರಾಯೋಜಿಸುವುದನ್ನು ಮುಂದುವರಿಸಿದರೆ ಅದು ತಾನು ಬೆಲೆ ತೆರಬೇಕಾಗುತ್ತದೆ ಎಂಬುದನ್ನು ಇದು ಪಾಕಿಸ್ತಾನಕ್ಕೆ ತಿಳಿಸಿಕೊಟ್ಟಿತು.

ಪಾಕಿಸ್ತಾನದ ಉಗ್ರರು ದಾಳಿ ನಡೆಸಿದಾಗ ಅದಕ್ಕೆ ಪ್ರತಿಯಾಗಿ ಭಾರತ ದಾಳಿ ನಡೆಸಿದ್ದು ಕೂಡ ಇದೇ ಮೊದಲ ಬಾರಿಕೆ ಆಗಿತ್ತು. ದಿ ಇಂಡಿಯನ್‌ ಎಕ್ಸ್‌ಪ್ರೆಸ್‌ಗೆ ವಾಯುಪಡೆ ಮುಖ್ಯಸ್ಥ ಭದುರಿಯಾ ನೀಡಿದ ಸಂದರ್ಶನದಲ್ಲಿ “ದೇಶದ ಹಿತಾಸಕ್ತಿಯನ್ನು ಪೂರೈಸುವಲ್ಲಿ ವಾಯುಪಡೆ ಬಳಕೆಯ ವಿಧಾನವೇ ಬಾಲಕೋಟ್ ವಾಯುದಾಳಿಯ ವೇಳೆ ಬದಲಾಗಿದೆ. ಈ ಉಪಖಂಡದಲ್ಲಿ ಸಾಂಪ್ರದಾಯಿಕ ಕ್ರಮ ಮತ್ತು ಪ್ರತಿಕ್ರಿಯೆಯ ಶೈಲಿಯನ್ನೇ ಬದಲಿಸಿದೆ” ಎಂದಿದ್ದಾರೆ. ಖಂಡಿತವಾಗಿಯೂ, ಇದು ಒಂದು ಸಂದೇಶವನ್ನು ನೆರೆ ದೇಶಕ್ಕೆ ರವಾನಿಸಿದೆ. ಒಂದು ಬಾರಿ ಉಗ್ರ ದಾಳಿ ನಡೆಸಿದರೆ ಅದಕ್ಕೆ ಪ್ರತಿಯಾಗಿ ವಾಯುದಾಳಿ ನಡೆಸಲಾಗುತ್ತದೆ. ಆದರೆ, ಪಾಕಿಸ್ತಾನವನ್ನು ಸದೆಬಡಿಯುವ ನಿಟ್ಟಿನಲ್ಲಿ ಈ ಪ್ರಯತ್ನವು ಭಾರತದ ವಾಯುಪಡೆ ಶಕ್ತಿಯನ್ನು ಭಾರಿ ಪ್ರಮಾಣದಲ್ಲಿ ಹೆಚ್ಚಳವಾಗುವಂತೆ ಮಾಡಿದೆ. ಇದು ಭಾರತೀಯ ವಾಯುಪಡೆಯ ಶಕ್ತಿ ಪ್ರದರ್ಶನವೂ ಇದೇ ವೇಳೆ ಆಗಿದೆ.

ಹಾಗಾದರೆ ಭಾರತ ಕೈಗೊಂಡ ಈ ವ್ಯಗ್ರ ಮತ್ತು ಮುನ್ನುಗ್ಗುವಿಕೆ ಕ್ರಮವು ಪಾಕಿಸ್ತಾನಕ್ಕೆ ಯಾವುದಾದರೂ ಪಾಠ ಕಲಿಸಲು ಸಾಧ್ಯವಾಯಿತೇ ಅಥವಾ ಪಾಕಿಸ್ತಾನದ ವರ್ತನೆಯಲ್ಲಿ ಈ ಉಗ್ರ ದಾಳಿಯ ನಂತರದ ಘಟನೆಗಳು ಬದಲಾವಣೆಗಳನ್ನು ತಂದಿವೆಯೇ? ಈ ಪ್ರಶ್ನೆಗೆ ಪಾಕಿಸ್ತಾನದಲ್ಲಿ ನಂತರ ನಡೆದ ವಿದ್ಯಾಮಗಳನ್ನು ಗಮನಿಸಬಹುದು. ಪಾಕಿಸ್ತಾನದ ಜನರು ಕಾಶ್ಮೀರದ ವಿಚಾರಕ್ಕೆ ಇಡೀ ದೇಶವನ್ನೇ ಬಲಿಕೊಡುವ ನಿಟ್ಟಿನಲ್ಲಿ ಸರ್ಕಾರ ಚಿಂತನೆ ನಡೆಸಿದ ಬಗ್ಗೆ ಆತಂಕ ವ್ಯಕ್ತಪಡಿಸಿದ್ದಾರೆ. ಇದೇ ರೀತಿಯ ಚರ್ಚೆ ಈ ಹಿಂದೆ ಕಾರ್ಗಿಲ್‌ ಯುದ್ಧದ ಸಮಯದಲ್ಲೂ ನಡೆದಿತ್ತು. ಮಾಜಿ ರಾಯಭಾರಿ ಶಹೀದ್ ಎಂ ಅಮಿನ್‌ ಈ ಬಗ್ಗೆ ದಿ ಡಾನ್‌ನಲ್ಲಿ ಈ ಹಿಂದೆ ಬರೆದಿದ್ದನ್ನು ಇಲ್ಲಿ ಸ್ಮರಿಸಿಕೊಳ್ಳಬಹುದು. “ದೇಶ ತನ್ನ ಮಿತಿ ಮತ್ತು ಆದ್ಯತೆಗಳ ಬಗ್ಗೆ ದೇಶ ವಾಸ್ತವ ನೆಲೆಗಟ್ಟಿನಲ್ಲಿ ಚಿಂತನೆ ನಡೆಸುವ ಅಗತ್ಯ ಈಗ ತುಂಬಾ ಇದೆ. ಮೊದಲ ಮತ್ತು ಆತ್ಯಂತಿಕವಾದ ಅಂಶವೆಂದರೆ, ಪಾಕಿಸ್ತಾನದ ಅಸ್ತಿತ್ವವು ಎಲ್ಲಕ್ಕಿಂತ ಪ್ರಮುಖವಾಗಿರಬೇಕು. ಇದು ಕಾಶ್ಮೀರದ ವಿಚಾರದಲ್ಲಿ ನಮ್ಮ ಬಾಂಧವ್ಯಕ್ಕೂ ಸೂಕ್ತವಾಗಿರಬೇಕು ಎಂದಿದ್ದಾರೆ.

ಪಾಕಿಸ್ತಾನದಲ್ಲಿ ಯಾವುದೇ ಆತ್ಮ ವಿಮರ್ಶೆ ನಡೆಯಲಿ ಅಥವಾ ಭಾರತದ ಮೇಲಿನ ದಾಳಿ ಕುರಿತ ಯಾವುದೇ ಚರ್ಚೆ ನಡೆದರೂ, ಪಾಕಿಸ್ತಾನದ ಸೇನೆಯು ಪಾಠ ಕಲಿತಿರುವಂತೆ ಕಂಡುಬರುವುದಿಲ್ಲ. ಕಾರ್ಯತಂತ್ರ ಅಧ್ಯಯನಕ್ಕಾಗಿ ಅಂತಾರಾಷ್ಟ್ರೀಯ ಸಂಸ್ಥೆಯಲ್ಲಿ ಇತ್ತೀಚೆಗೆ ಮಾತನಾಡಿದ ಲೆಫ್ಟಿನೆಂಟ್ ಜನರಲ್ ಖಲಿ ಕಿದ್ವಾಯಿ ಹೇಳುವಂತೆ “ಭಾರತದ ಜೊತೆಗೆ ಸಾಂಪ್ರದಾಯಿಕ ಮತ್ತು ಅಣು ಸಮತೋಲನದಲ್ಲಿ ಸಾಕಷ್ಟು ಸಮತೋಲನವನ್ನು ನಿರ್ವಹಿಸುವ ಜವಾಬ್ದಾರಿಯನ್ನು ಹೊಂದಿರುವ ಮಹತ್ವದ ಅಗತ್ಯವನ್ನು ಪಾಕಿಸ್ತಾನವೇ ನಿರ್ವಹಿಸಬೇಕು. ಇದು ಸದ್ಯದ ಅಗತ್ಯವೂ ಆಗಿದೆ. ಈ ಪ್ರಕ್ರಿಯೆಯು ಆಗ್ನೇಯ ಏಷ್ಯಾದಲ್ಲಿ ಸಮಗ್ರವಾಗಿ ಸ್ಥಿರತೆಯನ್ನು ಸಾಧಿಸುವುದಕ್ಕೆ ಅಗತ್ಯವಾಗಿದೆ” ಎಂದಿದ್ದಾರೆ.

ಅಣ್ವಸ್ತ್ರದ ವಿಚಾರದಲ್ಲಿ ಮಾತನಾಡಿದ ಕಿದ್ವಾಯಿ ಇನ್ನೂ ಮುಂದುವರಿದು ಅದೇ ಸಂರ್ಭದಲ್ಲಿ ಹೀಗೂ ಹೇಳಿದ್ದಾರೆ. “ವೃತ್ತಿಪರವಲ್ಲದ ರೀತಿಯಲ್ಲಿ ಕೈಗೊಂಡ ಒಂದೇ ಒಂದು ವೈಮಾನಿಕ ದಾಳಿ ಕೂಡ ಪಾಕಿಸ್ತಾನದ ಬಣ್ಣ ಬಯಲು ಮಾಡಿದೆ. ಅಣ್ವಸ್ತ್ರ ಬಳಕೆ ಮಾಡದೇ ಇರುವ ಕುರಿತು ಪಾಕಿಸ್ತಾನ ಹೊಂದಿರುವ ನೀತಿ ನಿಲುವುಗಳೆಲ್ಲವೂ ಈ ಒಂದು ದಾಳಿಯಿಂದಾಗಿ ನಿವಾರಣೆಯಾಗಿಬಿಡಬಹುದಾದ ಸಾಧ್ಯತೆಯಿದೆ.” ಎಂದು ಕಿದ್ವಾಯಿ ಹೇಳಿದ್ದಾರೆ.

ಭಾರತ ಮತ್ತು ಪಾಕಿಸ್ತಾನ ಎರಡೂ ಈ ಸನ್ನಿವೇಶದಲ್ಲಿ ವಿಭಿನ್ನ ಪಾಠಗಳನ್ನು ಕಲಿತಿವೆ. ಅಣ್ವಸ್ತ್ರಕ್ಕಿಂತ ವಿಭಿನ್ನವಾದ ಹಲವು ರೀತಿಯ ಕ್ರಮಗಳನ್ನು ಭಾರತ ತೆಗೆದುಕೊಳ್ಳಬಹುದು ಎಂದು ಭಾರತೀಯ ಸೇನೆ ಅರಿತುಕೊಂಡಿತು. ಅಷ್ಟೇ ಅಲ್ಲ, ಇಂತಹ ದಾಳಿಗಳ ಮೂಲಕ ಪಾಕಿಸ್ತಾನದಿಂದ ನಡೆಯುವ ಉಗ್ರದಾಳಿಯನ್ನು ನಿಯಂತ್ರಿಸಲು ಅಪಾರ ಸಾಮರ್ಥ್ಯವನ್ನು ಹೊಂದಿದೆ ಎಂಬುದನ್ನು ಇದು ತಿಳಿದುಕೊಂಡಿತು. ಇದೇ ವೇಳೆ ಪಾಕಿಸ್ತಾನ ಬೇರೆಯದೇ ಪಾಠವನ್ನು ಕಲಿತಿದೆ. ತಾನು ಅಣ್ವಸ್ತ್ರ ದಾಳಿ ಮಾಡುವ ಬೆದರಿಕೆ ಒಡ್ಡಿದರೆ ಭಾರತ ದೊಡ್ಡ ಮಟ್ಟದ ದಾಳಿ ನಡೆಸುವುದಿಲ್ಲ. ಒಂದು ಹಂತದ ದಾಳಿ ನಡೆಸಿದ ನಂತರ ಹಿಂದೆ ಸರಿಯುತ್ತದೆ ಎಂದು ಪಾಕಿಸ್ತಾನ ಈಗ ಭಾವಿಸಿದೆ. ಹೀಗಾಗಿ ಒಂದು ಸಾಂಪ್ರದಾಯಿಕ ಮಿಶ್ರಣವೇ ಇಲ್ಲಿ ಬದಲಾವಣೆಯಾಗಿ ಹೋಗಿದೆ.

ಈ ವಿಚಿತ್ರ ಮಿಶ್ರಣದಲ್ಲಿ, ಎರಡೂ ದೇಶಗಳು ವಾಸ್ತವ ದೃಷ್ಟಿಕೋನದಿಂದ ತಮ್ಮ ಸಾಮರ್ಥ್ಯ ಮತ್ತು ಆಯ್ಕೆಗಳನ್ನು ವಿಶ್ಲೇಷಿಸಿಕೊಳ್ಳಬೇಕು. ಇದೇ ವೇಳೆ ರಾಜಕೀಯ ಉದ್ದೇಶಗಳು ಯಾವುವು ಎಂಬುದನ್ನೂ ನಾವು ಚರ್ಚೆ ನಡೆಸಿಕೊಳ್ಳಬೇಕಿದೆ. ಸಂಘರ್ಷವನ್ನು ಆರಂಭಿಸಲು ಭಾರತದ ಮೇಲೆ ಉಗ್ರ ದಾಳಿ ನಡೆಸುವುದೇ ಮೊದಲ ಹಂತ ಎಂದು ಪಾಕಿಸ್ತಾನ ಭಾವಿಸಬೇಕು. ಎರಡನೇ ಹಂತವನ್ನು ಪಾಕಿಸ್ತಾನ ತೆಗೆದುಕೊಳ್ಳುವ ಅಗತ್ಯವೇ ಇರುವುದಿಲ್ಲ. ಯಾಕೆಂದರೆ ಇದಕ್ಕೆ ಪ್ರತೀಕಾರವೇ ಈ ಮಟ್ಟದ ತೀವ್ರ ಪ್ರಮಾಣದಲ್ಲಿರುತ್ತದೆ. ಹೀಗಾಗಿ ಪಾಕಿಸ್ತಾನ ತನ್ನ ನಿಲುವಿನಲ್ಲಿ ಮಹತ್ವದ ಬದಲಾವಣೆಯಾಗುವ ಅಗತ್ಯವಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.