ETV Bharat / bharat

ಕರ್ನಾಟಕ ಗೆಲ್ಲಲು ಕಾಂಗ್ರೆಸ್​ ಮಾಡಿರುವ ಪ್ಲಾನ್​ ಏನು?

ದಾವಣಗೆರೆ ಲೊಕಸಭೆ ಕ್ಷೇತ್ರದಿಂದ ಶಾಮನೂರು ಶಿವಶಂಕರಪ್ಪ ಕಣದಿಂದ ಹಿಂದೆ ಸರಿದು ಪುತ್ರನನ್ನು ಕಣಕ್ಕಿಳಿಸಿದರೆ ಸಮಸ್ಯೆ ಇಲ್ಲ. ಹಾಗಾಗಿ ಶಾಮನೂರು ಹಠಕ್ಕೆ ಬಿದ್ದು ಮಗನನ್ನೇ ಲೋಕಸಭೆಗೆ ಕಣಕ್ಕಿಳಿಸಿದ್ದಾರೆ.

ಕರ್ನಾಟಕ ಗೆಲ್ಲಲು ಕಾಂಗ್ರೆಸ್​ ಮಾಡಿರುವ ಪ್ಲಾನ್​ ಏನು?
author img

By

Published : Mar 31, 2019, 6:19 PM IST

ಕಾಂಗ್ರೆಸ್‍ ಪಕ್ಷ ಈ ಬಾರಿ ಲೋಕಸಭೆ ಚುನಾವಣೆ ಗೆಲ್ಲಲು ಹಲವು ಕಸರತ್ತುಗಳನ್ನ ಮಾಡುತ್ತಿದೆ. ಆ ನಿಟ್ಟಿನಲ್ಲಿ ಈ ಬಾರಿ ಕೆಲವು ಕ್ಷೇತ್ರಗಳಲ್ಲಿ ವಿಧಾನಸಭೆ ಚುನಾವಣೆಯಲ್ಲಿ ಗೆದ್ದ ಅಭ್ಯರ್ಥಿಗಳನ್ನೇ ಕಣಕ್ಕಿಳಿಸಿದೆ. ಒಂದು ವೇಳೆ, ಅವರು ಲೋಕ ಸಮರದಲ್ಲೂ ಜಯ ಸಾಧಿಸಿದರೆ ಕಾಂಗ್ರೆಸ್​ ಮತ್ತೊಮ್ಮೆ ಅವರ ವಿಧಾನಸಭಾ ಕ್ಷೇತ್ರಗಳಿಗೆ ಉಪಚುನಾವಣೆ ಎದುರಿಸುವ ಸಂಕಷ್ಟಕ್ಕೆ ಸಿಲುಕಲಿದೆ. ಹಾಗಾದರೆ ಲೋಕಸಭೆ ಚುನಾವಣೆ ನಂತರ ಕಾಂಗ್ರೆಸ್​ ಯೋಜನೆ ಏನು.. ಆಯಾ ಕ್ಷೇತ್ರದಲ್ಲಿ ಗೆಲ್ಲಲು ಯಾವೆಲ್ಲಾ ತಂತ್ರ ಅನುಸರಿಸಲಿದೆ ಅನ್ನೋದನ್ನ ಇಲ್ಲಿ ನೋಡೋಣ...

ಕರ್ನಾಟಕ ಗೆಲ್ಲಲು ಕಾಂಗ್ರೆಸ್​ ಮಾಡಿರುವ ಪ್ಲಾನ್​ ಏನು?

ಕಾಂಗ್ರೆಸ್‍ ಪಕ್ಷ ಈ ಬಾರಿ ಲೋಕಸಭೆ ಚುನಾವಣೆ ಗೆಲ್ಲಲು ಹಲವು ಕಸರತ್ತುಗಳನ್ನ ಮಾಡುತ್ತಿದೆ. ಆ ನಿಟ್ಟಿನಲ್ಲಿ ಈ ಬಾರಿ ಕೆಲವು ಕ್ಷೇತ್ರಗಳಲ್ಲಿ ವಿಧಾನಸಭೆ ಚುನಾವಣೆಯಲ್ಲಿ ಗೆದ್ದ ಅಭ್ಯರ್ಥಿಗಳನ್ನೇ ಕಣಕ್ಕಿಳಿಸಿದೆ. ಒಂದು ವೇಳೆ, ಅವರು ಲೋಕ ಸಮರದಲ್ಲೂ ಜಯ ಸಾಧಿಸಿದರೆ ಕಾಂಗ್ರೆಸ್​ ಮತ್ತೊಮ್ಮೆ ಅವರ ವಿಧಾನಸಭಾ ಕ್ಷೇತ್ರಗಳಿಗೆ ಉಪಚುನಾವಣೆ ಎದುರಿಸುವ ಸಂಕಷ್ಟಕ್ಕೆ ಸಿಲುಕಲಿದೆ. ಹಾಗಾದರೆ ಲೋಕಸಭೆ ಚುನಾವಣೆ ನಂತರ ಕಾಂಗ್ರೆಸ್​ ಯೋಜನೆ ಏನು.. ಆಯಾ ಕ್ಷೇತ್ರದಲ್ಲಿ ಗೆಲ್ಲಲು ಯಾವೆಲ್ಲಾ ತಂತ್ರ ಅನುಸರಿಸಲಿದೆ ಅನ್ನೋದನ್ನ ಇಲ್ಲಿ ನೋಡೋಣ...

ಕರ್ನಾಟಕ ಗೆಲ್ಲಲು ಕಾಂಗ್ರೆಸ್​ ಮಾಡಿರುವ ಪ್ಲಾನ್​ ಏನು?
Intro:Body:

Few of Congress MLAs contesting in Lok Sabha election

kannada newspaper, etv bharat, ಕರ್ನಾಟಕ, ಗೆಲ್ಲಲು ಕಾಂಗ್ರೆಸ್​ ಪ್ಲಾನ್​, Congress MLA, contesting, Lok Sabha election,

ಕರ್ನಾಟಕ ಗೆಲ್ಲಲು ಕಾಂಗ್ರೆಸ್​ ಪ್ಲಾನ್​ ಏನು?  



ದಾವಣಗೆರೆ ಕ್ಷೇತ್ರದ ಹಣೆಬರಹ ಏನು? 

ಕಾಂಗ್ರೆಸ್‍ ಪಕ್ಷ ಈ ಬಾರಿ ಲೋಕಸಭೆ ಚುನಾವಣೆ ಗೆಲ್ಲಲು ಹಲವು ಕಸರತ್ತುಗಳನ್ನ ಮಾಡುತ್ತಿದೆ. ಆ ನಿಟ್ಟಿನಲ್ಲಿ ಈ ಬಾರಿ ಕೆಲವು ಕ್ಷೇತ್ರಗಳಲ್ಲಿ ವಿಧಾನಸಭೆ ಚುನಾವಣೆಯಲ್ಲಿ ಗೆದ್ದ ಅಭ್ಯರ್ಥಿಗಳನ್ನೇ ಕಣಕ್ಕಿಳಿಸಿದ್ದು, ಒಂದು ವೇಳೆ, ಅವರು ಗೆದ್ದರೆ ಕಾಂಗ್ರೆಸ್​ ಮತ್ತೊಮ್ಮೆ ಉಪಚುನಾವಣೆ ಎದುರಿಸುವ ಸಂಕಷ್ಟಕ್ಕೆ ಸಿಲುಕಲಿದೆ. ಹಾಗಾದರೆ ಲೋಕಸಭೆ ಚುನಾವಣೆ ನಂತರ ಕಾಂಗ್ರೆಸ್​ ಯೋಜನೆ ಏನು.. ಆಯಾ ಕ್ಷೇತ್ರದಲ್ಲಿ ಗೆಲ್ಲಲು ಯಾವೆಲ್ಲಾ ತಂತ್ರ ಅನುಸರಿಸಲಿದೆ ಅನ್ನೋದನ್ನ ಇಲ್ಲಿ ನೋಡೋಣ..



ಈ ಬಾರಿ ಲೋಕಸಭೆ ಚುನಾವಣೆಯನ್ನು ಸಾಕಷ್ಟು ಪ್ರತಿಷ್ಠೆಯಾಗಿ ತೆಗೆದುಕೊಂಡಿರುವ ಕಾಂಗ್ರೆಸ್​ ಗೆಲುವು ಸಾಧಿಸುವುದಕ್ಕಾಗಿ ಕೆಲವೊಂದು ಅಚ್ಚರಿಯ ನಿರ್ಧಾರಗಳನ್ನ ಕೈ ಗೊಂಡಿದೆ. ಕೆಲವು ಕ್ಷೇತ್ರಗಳಲ್ಲೇ ಗೆಲ್ಲಲೇಬೆಕೆಂದು ತೀರ್ಮಾನಿಸಿರುವ ಕಾಂಗ್ರೆಸ್​ ಪಕ್ಷ ಗೆದ್ದು ಸಚಿವರಾಗಿರುವರನ್ನೇ ಪಣಕ್ಕಿಟ್ಟಿದೆ. ಕಾಂಗ್ರೆಸ್​ನಿಂದ ಪ್ರಮುಖವಾಗಿ ಬ್ಯಾಟರಾಯನಪುರ ಶಾಸಕ ಹಾಗೂ ಸಚಿವ ಕೃಷ್ಣ ಬೈರೇಗೌಡ ಬೆಂಗಳೂರು ಉತ್ತರದಿಂದ ಕಣಕ್ಕಿಳಿದಿದ್ದಾರೆ. ಬಾಲ್ಕಿ ಶಾಸಕ ಹಾಗೂ ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್‍ ಖಂಡ್ರೆ ಬೀದರ್‍ ನಿಂದ ಅಭ್ಯರ್ಥಿಯಾಗಿದ್ದಾರೆ. ಅದೇ ರೀತಿ ದಾವಣಗೆರೆ ದಕ್ಷಿಣ ಶಾಸಕ ಶಾಮನೂರು ಶಿವಶಂಕರಪ್ಪರನ್ನು ದಾವಣಗೆರೆಯಿಂದ ಕಣಕ್ಕಿಳಿಸುವ ಯತ್ನ ನಡೆದಿದೆ.



ಒಂದೊಮ್ಮೆ ಈ ಎಲ್ಲಾ ಅಭ್ಯರ್ಥಿಗಳು ಗೆದ್ದು ಕ್ಷೇತ್ರ ತೆರವಾದರೆ ಇಲ್ಲೆಲ್ಲ ಉಪಚುನಾವಣೆ ನಡೆಯಬೇಕಾಗುತ್ತದೆ. ಇನ್ನು ವಿಧಾನ ಪರಿಷತ್‍ ಸದಸ್ಯ ರಿಜ್ವಾನ್‍ ಅರ್ಷದ್ ಕೂಡ ಬೆಂಗಳೂರು ಕೇಂದ್ರ ಲೋಕಸಭೆಯಿಂದ ಕಣಕ್ಕಿಳಿದಿದ್ದು, ಗೆದ್ದರೆ, ಇವರ ಸ್ಥಾನಕ್ಕೆ ಮತ್ತೊಬ್ಬರನ್ನ ಆಯ್ಕೆ ಮಾಡಿಕೊಳ್ಳಬಲ್ಲ, ಸಂಖ್ಯಾ ಬಲ ಕಾಂಗ್ರೆಸ್‍ ಬಳಿ ಇರುವುದರಿಂದ ಸಮಸ್ಯೆ ಇಲ್ಲ. 2016ರ ಜೂನ್‍ನಲ್ಲಿ ವಿಧಾನಸಭೆಯಿಂದ ವಿಧಾನಪರಿಷತ್‍ಗೆ ನಡೆದ ಚುನಾವಣೆಯಲ್ಲಿ ರಿಜ್ವಾನ್‍ ಅರ್ಷದ್‍ ಗೆದ್ದು ವಿಧಾನ ಪರಿಷತ್‍ ಪ್ರವೇಶಿಸಿದ್ದರು. ಈಗಲೂ ರಾಜ್ಯದಲ್ಲಿ ಕಾಂಗ್ರೆಸ್- ಜೆಡಿಎಸ್ ಮೈತ್ರಿ ಸರ್ಕಾರ ಇದ್ದು ಬೇರೆ ಅಭ್ಯರ್ಥಿಯನ್ನು ಗೆಲ್ಲಿಸಿಕೊಳ್ಳಬಲ್ಲ ಸಂಖ್ಯಾಬಲ ಇದೆ.



ಸದ್ಯ ದಾವಣಗೆರೆಯಲ್ಲಿ ಶಾಮನೂರು ಶಿವಶಂಕರಪ್ಪ ಸ್ಪರ್ಧೆಯಿಂದ ಹಿಂದೆ ಸರಿಯುವ ಮಾತಾಡಿದ್ದು, ಇವರ ಬದಲು ಪುತ್ರ ಎಸ್‍.ಎಸ್‍. ಮಲ್ಲಿಕಾರ್ಜುನ ಕಣಕ್ಕಿಳಿಯುವುದು ಬಹುತೇಕ ಖಚಿತವಾಗಿದೆ. ಈ ಹಿನ್ನೆಲೆ  ಕಾಂಗ್ರೆಸ್‍ ಗೆದ್ದರೆ ಸಮಸ್ಯೆಯಾಗದು. ಒಂದೊಮ್ಮೆ ಶಾಮನೂರು ಶಿವಶಂಕರಪ್ಪರೇ ಕಣಕ್ಕಿಳಿದು ಗೆದ್ದು ಬಿಟ್ಟರೆ ದಾವಣಗೆರೆ ದಕ್ಷಿಣ ಕ್ಷೇತ್ರಕ್ಕೆ ಉಪಚುನಾವಣೆ ಮಾಡಬೇಕಾಗುತ್ತದೆ.



ಜಾಧವ್​ ಮಣಿಸಿ ಗೆದ್ದಿದ್ದ ಶಿವಶಂಕರಪ್ಪ

ಹಾಲಿ ಶಾಸಕರಾಗಿರುವ ಶಿವಶಂಕರಪ್ಪ ಇಲ್ಲಿ ಕಳೆದ ಚುನಾವಣೆಯಲ್ಲಿ 15,884 ಮತಗಳ ಅಂತರದಿಂದ ಬಿಜೆಪಿಯ ಯಶವಂತರಾವ್‍ ಜಾದವ್‍ ವಿರುದ್ಧ ಗೆದ್ದಿದ್ದರು. ಶೇ.52.45 ಮತದಾರರ ಒಲವು ಪಡೆದಿದ್ದ ಶಾಮನೂರು ಶಿವಶಂಕರಪ್ಪ 71,369 ಮತ ಗಳಿಸಿದ್ದರು. ಶೇ. 40.78 ಮತದಾರರ ಒಲವು ಗಳಿಸಿದ್ದ ಬಿಜೆಪಿಯ ಯಶವಂತರಾವ್‍ ಜಾದವ್‍ 55485 ಮತ ಗಳಿಸಿದ್ದರು. ಇನ್ನೂ ಪ್ರತ್ಯೇಕವಾಗಿ ಚುನಾವಣೆಗೆ ಇಳಿದಿದ್ದ ಜೆಡಿಎಸ್‍ ಇಲ್ಲಿ ಕೇವಲ 4.42ರಷ್ಟು ಅಂದರೆ 6020 ಮತ ಗಳಿಸಿತ್ತು. 



ಈಗ ಲೋಕಸಭೆಗೆ ಎರಡೂ ಪಕ್ಷ ಒಟ್ಟಾಗಿ ಅಭ್ಯರ್ಥಿ ಕಣಕ್ಕಿಳಿಸಿದ್ದು, ಒಂದೊಮ್ಮೆ ಶಾಮನೂರು ಕಣಕ್ಕಿಳಿದು ಗೆದ್ದರೆ, ಪಕ್ಕದ ದಾವಣಗೆರೆ ಉತ್ತರದಿಂದ ಸ್ಪರ್ಧಿಸಿ ಸೋತಿರುವ ಮಾಜಿ ಸಚಿವ ಎಸ್‍.ಎಸ್‍. ಮಲ್ಲಿಕಾರ್ಜುನ ಶಾಸಕ ಸ್ಥಾನಕ್ಕೆ ಅಭ್ಯರ್ಥಿಯಾಗಬೇಕಾಗುತ್ತದೆ. ಶಾಮನೂರು ಕಣದಿಂದ ಹಿಂದೆ ಸರಿದು ಪುತ್ರನನ್ನು ಕಣಕ್ಕಿಳಿಸಿದರೆ ಸಮಸ್ಯೆ ಇಲ್ಲ. ಹಾಗಾಗಿ ಶಾಮನೂರು ಹಠಕ್ಕೆ ಬಿದ್ದು ಮಗನನ್ನೇ ಲೋಕಸಭೆಗೆ ಕಣಕ್ಕಿಳಿಸುವ ಸಾಧ್ಯತೆ 



ಬೀದರ್ ಕ್ಷೇತ್ರದ ಚಿತ್ರಣ ಹೀಗಿದೆ..



ಇನ್ನೂ ಬೀದರ್​ನಲ್ಲಿ ಬಾಲ್ಕಿ ಶಾಸಕ ಹಾಗೂ ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್‍ ಖಂಡ್ರೆ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿದ್ದಾರೆ. ಬಾಲ್ಕಿ ಕ್ಷೇತ್ರದಿಂದ 2008ರಲ್ಲಿ ಆಯ್ಕೆಯಾಗಿ ರಾಜಕೀಯ ಬದುಕು ಆರಂಭಿಸಿದ ಈಶ್ವರ್‍ ಖಂಡ್ರೆ 2013 ಹಾಗೂ 2018ರಲ್ಲಿ ಕೂಡ ಇದೇ ಕ್ಷೇತ್ರದಿಂದ ಗೆಲುವು ಸಾಧಿಸಿದ್ದಾರೆ. ಸದ್ಯ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಯ ಭಗವಂತ ಖೂಬಾ ವಿರುದ್ಧ ಖಂಡ್ರೆ ಸೆಣೆಸುತ್ತಿದ್ದಾರೆ. ಬೀದರ್‍ ಹಿಂದಿನಿಂದಲೂ ಕಾಂಗ್ರೆಸ್‍ ಭದ್ರಕೋಟೆ. ಕಳೆದ ಚುನಾವಣೆಯಲ್ಲಿ ಮಾಜಿ ಸಿಎಂ ಎನ್‍. ಧರ್ಮ್‍ಸಿಂಗ್‍ ವಿರುದ್ಧ ಗೆದ್ದು ಭಗವಂತ ಖೂಬಾ ಲೋಕಸಭೆ ಪ್ರವೇಶಿಸಿದ್ದರು. 



ಮರಳಿ ವಶಕ್ಕೆ ಕಾದಾಟ, ರಣತಂತ್ರ



ಇದೀಗ ಮತ್ತೆ ಕ್ಷೇತ್ರವನ್ನು ಮರಳಿ ಪಡೆಯುವ ಯತ್ನದಲ್ಲಿ ಕಾಂಗ್ರೆಸ್‍ ಇದೆ. ಇನ್ನೂ ಈಶ್ವರ್​ ಖಂಡ್ರೆ ಕಳೆದ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಯ ಡಿ.ಕೆ. ಸಿದ್ರಾಮ್ ವಿರುದ್ಧ 21,438 ಮತಗಳ ಅಂತರದ ಗೆಲುವು ಸಾಧಿಸಿದ್ದರು. ಶೇ.50.68ರಷ್ಟು ಮತಗಳಿಸಿದ್ದರು. ಹಿಂದಿನ ಚುನಾವಣೆಗಳಲ್ಲಿ ಅಂದರೆ 2013ರಲ್ಲಿ ಶೇ.39.44 ಹಾಗೂ 2008ರಲ್ಲಿ ಶೇ.50.01ರಷ್ಟು ಮತ ಗಳಿಸಿದ್ದರು. ಈ ಸಾರಿ ತಾವು ಗೆದ್ದರೆ ಪತ್ನಿ ಡಾ. ಗೀತಾ ಖಂಡ್ರೆ ಅವರನ್ನು ಕಣಕ್ಕಿಳಿಸಿ ಗೆಲ್ಲಿಸಿಕೊಳ್ಳುವ ಯೋಚನೆ ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ.



ಹೇಗಿದೆ ಬೆಂಗಳೂರು ಉತ್ತರದ ಚಿತ್ರಣ?



ಬೆಂಗಳೂರು ಉತ್ತರ ಲೋಕಸಭೆ ಕ್ಷೇತ್ರದ ಅಭ್ಯರ್ಥಿಯಾಗಿ ಬ್ಯಾಟರಾಯನಪುರ ಶಾಸಕ ಹಾಗೂ ಸಚಿವ ಕೃಷ್ಣ ಬೈರೇಗೌಡ 2008, 2013 ಹಾಗೂ 2018ರಲ್ಲಿ ನಡೆದ ವಿಧಾನಸಭೆ ಚುನಾವಣೆಯಲ್ಲಿ ಬೆಂಗಳೂರಿನ ಬ್ಯಾಟರಾಯನಪುರ ಕ್ಷೇತ್ರದಿಂದ ಗೆಲ್ಲುತ್ತಾ ಬಂದಿದ್ದಾರೆ. ಕಳೆದ ಚುನಾವಣೆಯಲ್ಲಿ ಬಿಜೆಪಿಯ ಎ. ರವಿ ವಿರುದ್ಧ 5671 ಮತಗಳ ಅಂತರದ ಗೆಲುವು ಸಾಧಿಸಿದ್ದಾರೆ. ಶೇ. 45.31ರಷ್ಟು ಮತ ಗಳಿಸಿರುವ ಇವರು 2013ರಲ್ಲಿ ಶೇ.46.14 ಹಾಗೂ 2008ರಲ್ಲಿ ಶೇ.43.01ರಷ್ಟು ಮತಗಳನ್ನು ಪಡೆದಿದ್ದರು. ಮೂರೂ ಸಾರಿ ಬಿಜೆಪಿಯ ಎ. ರವಿ ವಿರುದ್ಧವೇ ಗೆಲ್ಲುತ್ತಾ ಬಂದಿದ್ದಾರೆ.



ಈ ಕ್ಷೇತ್ರದಲ್ಲಿ ಜೆಡಿಎಸ್‍ ಪ್ರಾಬಲ್ಯ ಅಷ್ಟೇನು ಇಲ್ಲ. ಈ ಸಾರಿ ಶೇ.10ರಷ್ಟು ಮತವನ್ನು ಕೂಡ ಪಕ್ಷ ಪಡೆದಿಲ್ಲ. ಇದರಿಂದ ಒಂದೊಮ್ಮೆ ಕೃಷ್ಣಬೈರೇಗೌಡರಿಂದ ಕ್ಷೇತ್ರ ತೆರವಾದರೆ ಅಲ್ಲಿ ಸೂಕ್ತ ಅಭ್ಯರ್ಥಿ ಹುಡುಕಾಟ ಕಾಂಗ್ರೆಸ್‍ಗೆ ಸವಾಲಿನದ್ದಾಗಲಿದೆ. ಇಲ್ಲವಾದರೆ ಸುಲಭವಾಗಿ ಬಿಜೆಪಿ ಇಲ್ಲಿ ಜಯಗಳಿಸಲಿದೆ. ಒಟ್ಟಾರೆ ಲೋಕಸಭೆ ಚುನಾವಣೆಗಾಗಿ ಕಾಂಗ್ರೆಸ್​ ದೊಡ್ಡ ಸಹಾಸಕ್ಕೆ ಕೈ ಹಾಕಿದ್ದು ಇದು ಪ್ರಯೋಜನ ತಂದುಕೊಡಲಿದ್ಯಾ ಅಥವಾ ಕಾಂಗ್ರೆಸ್​ಗೆ ಸಂಕಷ್ಟ ಒಡ್ಡಲಿದ್ಯಾ ಅನ್ನೋದು ಕಾದು ನೋಡಬೇಕಿದೆ.


Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.