ETV Bharat / bharat

ಭಾರತದ ಆರ್ಥಿಕ ಚೇತರಿಕೆಗೆ ದಾರಿ ಯಾವುದು? - ಚೀನಾ ಮತ್ತು ಅಮೆರಿಕದ ನಡುವೆ ಹೆಚ್ಚುತ್ತಿರುವ ತಿಕ್ಕಾಟ

ಭಾರತವು ಮುಂದಿನ 5 ವರ್ಷಗಳಲ್ಲಿ 5 ಟ್ರಿಲಿಯನ್ ಡಾಲರ್ ಆರ್ಥಿಕತೆಯಾಗಿ ಬೆಳೆಯಬೇಕೆಂದರೆ ಅದು ವಾರ್ಷಿಕ 8%ರ ಬೆಳವಣಿಗೆ ದರದಲ್ಲಿ ಪ್ರಗತಿ ಸಾಧಿಸಬೇಕಾಗುತ್ತದೆ ಎಂದು ರಂಗರಾಜನ್ ಅವರಂತಹ ಖ್ಯಾತ ಆರ್ಥಿಕ ತಜ್ಞರು ಭವಿಷ್ಯ ನುಡಿದಿದ್ದಾರೆ. ತಯಾರಿಕಾ ಕ್ಷೇತ್ರವು ಚೇತರಿಸಿಕೊಳ್ಳುತ್ತಿದ್ದಂತೆ ಸರಕುಗಳ ಮೇಲಿನ ಬೇಡಿಕೆ ಕುಸಿದಿದೆ; ಖಾಸಗಿ ಹೂಡಿಕೆಯ ಪ್ರಮಾಣವೂ ತಗ್ಗಿರುವುದರ ಜೊತೆಗೆ ರಫ್ತು ಪ್ರಮಾಣವೂ ಕುಸಿದಿದೆ. ಜಾಗತಿಕ ಹಿಂಜರಿತವೂ ಸೇರಿಕೊಂಡು ಭಾರತದ ಬೆಳವಣಿಗೆ ಕಳೆದ ಆರು ವರ್ಷಗಳಲ್ಲೇ ಅತ್ಯಂತ ಕಡಿಮೆ ಮಟ್ಟಕ್ಕೆ ಇಳಿದಿದೆ.

ಆರ್ಥಿಕ ಚೇತರಿಕೆಗೆ ದಾರಿ
ಆರ್ಥಿಕ ಚೇತರಿಕೆಗೆ ದಾರಿ
author img

By

Published : Dec 4, 2019, 11:38 PM IST

ಈ ಆರ್ಥಿಕ ಹಿಂಜರಿತದ ಬಗ್ಗೆ ಆತಂಕ ಪಡುವ ಅಗತ್ಯವಿಲ್ಲ, ಇದನ್ನು ಪ್ರಗತಿಯ ನಿಧಾನ ಗತಿ ಎಂದು ಪರಿಗಣಿಸಬೇಕು ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಸಮಜಾಯಿಶಿ ನೀಡುತ್ತಿದ್ದಾರೆ. ಕೇಂದ್ರ ಸರ್ಕಾರವು ಕಾರ್ಪೊರೇಟ್ ತೆರಿಗೆ ಮತ್ತು MAT (ಗರಿಷ್ಠ ಪರ್ಯಾಯ ತೆರಿಗೆ) ನಂತಹ ತೆರಿಗೆಗಳನ್ನು ಸುಧಾರಿಸುವ ಮೂಲಕ ಹಲವು ಹೂಡಿಕೆ ನೀತಿಗಳನ್ನು ಜಾರಿಗೊಳಿಸಿ ವಿದೇಶಿ ಹೂಡಿಕೆಯನ್ನು ಆಕರ್ಷಿಸಲು ಪ್ರಯತ್ನ ನಡೆಸಿತು. ಆದರೆ ಅಂತಹ ಎಲ್ಲಾ ಪ್ರಯತ್ನಗಳು ದೇಶದ ಆರ್ಥಿಕ ಸ್ಥಿತಿಯನ್ನು ಸುಧಾರಿಸುವಲ್ಲಿ ಹೆಚ್ಚು ಪ್ರಯೋಜನವಾದಂತೆ ತೋರುತ್ತಿಲ್ಲ.

ಇತ್ತೀಚೆಗೆ ವಿಶ್ವಬ್ಯಾಂಕು ಭಾರತಕ್ಕಿರುವ ಅಗಾಧವಾದ ಆರ್ಥಿಕ ಸಾಮರ್ಥ್ಯದ ಬಗ್ಗೆ ಮೆಚ್ಚುಗೆ ಸೂಚಿಸಿದ್ದೇ ಅಲ್ಲದೆ ದೊಡ್ಡದಾದ ದೇಶವೊಂದು ಸಾಕಷ್ಟು ಅಡೆತಡೆಗಳ ನಡುವೆಯೂ 77ನೇ ಸ್ಥಾನದಿಂದ 63ನೇ ಸ್ಥಾನಕ್ಕೆ 14 ಸ್ಥಾನಗಳಷ್ಟು ಮೇಲಕ್ಕೆ ಬರುವುದು ಎಂದೂ ನಡೆಯದ ಸಂಗತಿಯಲ್ಲ ಎಂದಿದೆ. ಮೋದಿ ಸರ್ಕಾರವು ವ್ಯೂಹತಾಂತ್ರಿಕ ದೃಷ್ಟಿಯಿಂದ ವಿಶೇಷ ಸಮಿತಿಯೊಂದನ್ನು ಸ್ಥಾಪಿಸಿದೆ. ಚೀನಾ ಮತ್ತು ಅಮೆರಿಕದ ನಡುವೆ ಹೆಚ್ಚುತ್ತಿರುವ ತಿಕ್ಕಾಟಗಳ ಕಾರಣದಿಂದ ಬೀಜಿಂಗ್ ನಿಂದ ಹೊರನಡೆಯುತ್ತಿರುವ ಬಹುರಾಷ್ಟ್ರೀಯ ಕಾರ್ಪೊರೇಟ್ ಹೂಡಿಕೆದಾರರನ್ನು ಆಕರ್ಷಿಸಲು ಯತ್ನಿಸುವುದು ಇದರ ಉದ್ದೇಶವಾಗಿದೆ. ಈ ದಿಸೆಯಲ್ಲಿ ವಿಯೆಟ್ನಾಂ ಭಾರತಕ್ಕಿಂತಲೂ ತುಸು ಮುಂದಿರುವುದನ್ನು ಗುರುತಿಸಿಕೊಂಡು, ಮತ್ತು ಅದಕ್ಕಿರುವ ಮಿತಿಗಳನ್ನೂ ಗುರುತಿಸಿಕೊಂಡು ಭಾರತ ಸರ್ಕಾರವು ಅಂತಹ ಕಾರ್ಪೊರೇಟ್ ದೈತ್ಯ ಕಂಪನಿಗಳಿಗೆ ‘ಮೇಕ್ ಇನ್ ಇಂಡಿಯಾ’ ಪರಿಕಲ್ಪನೆಯನ್ನು ಪರಿಚಯಿಸಿ ಅವು ಇಲ್ಲಿ ಹೂಡಿಕೆ ನಡೆಸುವ ನಿಟ್ಟಿನಲ್ಲಿ ಬೆಂಬಲ ಒದಗಿಸುವ ಕೆಲಸವನ್ನು ಮಾಡುತ್ತಿದೆ. ಭಾರತವು ಮತ್ತೆ ಮತ್ತೆ ಸಾಮರ್ಥ್ಯ ಪಡೆದುಕೊಂಡು ತನ್ನ ಛಾತಿಯನ್ನು ಸಾಬೀತುಪಡಿಸುತ್ತಿದ್ದರೂ ಸಹ, ದೇಶದಲ್ಲಿ ಆರ್ಥಿಕ ಸುಧಾರಣೆಗಳನ್ನು ಜಾರಿಗೊಳಿಸಿದ 28ವರ್ಷಗಳ ನಂತರವೂ ಅದು ಸಾಕಷ್ಟು ಹೂಡಿಕೆಗಾಗಿ ಇನ್ನೂ ಕಾಯುವ ಹಂತದಲ್ಲೇ ಇರುವುದು ನಿಚ್ಚಳವಾಗಿದೆ. ಭೂ ದಾಖಲೆಗಳು ಮತ್ತು ಗುತ್ತಿಗೆ ನಿರ್ವಹಣೆಯಂತಹ ಯೋಜನೆಗಳನ್ನು ಜಾರಿಗೊಳಿಸುವಲ್ಲಿ ಇರುವ ಅತ್ಯುನ್ನತ ಮಟ್ಟದ ಸಂಘಟನಾ ತೊಡಕುಗಳ ಕಾರಣದಿಂದ ಹೀಗಾಗಿದೆ. ಇದು ದೇಶದ ಪ್ರಗತಿಯ ಮೇಲೆ ನೇರ ಪರಿಣಾಮ ಬೀರುತ್ತಿದೆ.

ಐದು ವರ್ಷದ ಕೆಳಗೆ ಉದ್ದಿಮೆ ಹೊಂದಾಣಿಕೆ ಸೂಚ್ಯಂಕದಲ್ಲಿ ಭಾರತವು 142ನೇ ಶ್ರೇಣಿ ಪಡೆದುಕೊಂಡ ಕ್ಷಣ ಬಹಳ ಹೆಮ್ಮೆಯ ಕ್ಷಣವಾಗಿತ್ತು. ಈಗ 63ನೇ ಸ್ಥಾನದಲ್ಲಿದೆ ಆದರೆ ಈ ವರ್ಷ ಅಂತರರಾಷ್ಟ್ರೀಯ ಸ್ಪರ್ಧಾತ್ಮಕ ಸೂಚ್ಯಂಕದಲ್ಲಿ ಅದು ಹತ್ತು ಸ್ಥಾನಗಳಷ್ಟು ಕೆಳಕ್ಕೆ ಹೋಗಿದೆ. ಪ್ರಪಂಚದಾದ್ಯಂತ ತೀವ್ರಗೊಂಡಿರುವ ಸ್ಪರ್ಧೆಯ ಹಿನ್ನೆಲೆಯಲ್ಲಿ ದುವ್ವುರಿ ಸುಬ್ಬರಾವ್ ರಂತಹ ಆರ್ಥಿಕ ತಜ್ಞರು ಕಾರ್ಮಿಕ ಸುಧಾರಣೆಗಳ ಅಗತ್ಯವನ್ನು ಒತ್ತಿ ಹೇಳಿದ್ದಾರೆ. ಆಸ್ತಿ ನೋಂದಣಿ, ಸಾಲ ಪಡೆಯುವಿಕೆ, ಅಲ್ಪಸಂಖ್ಯಾತ ಹೂಡಿಕೆದಾರರ ರಕ್ಷಣೆ ಮತ್ತು ತೆರಿಗೆ ಪಾವತಿ ಹಾಗೂ ಗುತ್ತಿಗೆಗಳನ್ನು ಜಾರಿಗೊಳಿಸುವಂತಹ ವಿಷಯಗಳಲ್ಲಿ ಮಹತ್ತರ ಬದಲಾವಣೆಗಳನ್ನು ತರುವಲ್ಲಿ ವಿಶ್ವಬ್ಯಾಂಕ್ ಕೀಲಕ ಪಾತ್ರ ವಹಿಸಿದೆ. ಯಾವುದೇ ಉದ್ಯಮವನ್ನು ಆರಂಭಿಸುವಲ್ಲಿ ಭಾರತದ ದಾಖಲೆ ಏನೆಂಬುದನ್ನು ಪ್ರಸ್ತುತ ಅದು 136ನೇ ಶ್ರೇಣಿಯಲ್ಲಿ ನಿಂತಿರುವುದರ ಮೂಲಕವೇ ಹೇಳಬಹುದಾಗಿದೆ.

ಇತರೆ ದೇಶಗಳಿಗೆ ಹೋಲಿಸಿದಾಗ ಸ್ಟಾಂಪು ತೆರಿಗೆ ಭಾರತದಲ್ಲಿ ಹೆಚ್ಚಿನ ಪ್ರಮಾಣದಲ್ಲಿರುವುದು ಇಲ್ಲಿ ಆಸ್ತಿ ನೋಂದಣಿ ಪ್ರಕ್ರಿಯೆ ಹದಗೆಡುತ್ತಿರುವುದರ ದ್ಯೋತಕವಾಗಿದೆ. ಈ ದುಬಾರಿ ತೆರಿಗೆಯನ್ನು ಕಡಿಮೆ ಮಾಡಿಕೊಳ್ಳಲು ವಹಿವಾಟುಗಳ ನಿಜ ಮೌಲ್ಯವನ್ನು ತಗ್ಗಿಸುವಂತಹ ಅಕ್ರಮ ವಿಧಾನಗಳನ್ನು ಇಲ್ಲಿ ಬಳಸಲಾಗುತ್ತಿದೆ; ವಸತಿ ನಿರ್ಮಾಣ ಮತ್ತು ರಿಯಲ್ ಎಸ್ಟೇಟ್ ಕ್ಷೇತ್ರದಲ್ಲಿ ತಳಮಟ್ಟದ ಸುಧಾರಣೆಗಳ ಕೊರತೆಯಂತಹ ಸಮಸ್ಯೆಗಳನ್ನು ಅಂತರರಾಷ್ಟ್ರೀಯ ಸಮುದಾಯ ಎದುರಿಸುತ್ತಿದೆ. ಈ ಕ್ಷೇತ್ರದಲ್ಲಿ 190 ದೇಶಗಳ ಪೈಕಿ ಭಾರತದ ಸ್ಥಾನ 154ನೆಯದು. ಎರಡು ತಿಂಗಳ ಹಿಂದೆ ವಿಶ್ವಬ್ಯಾಂಕಿನ ಮುಖ್ಯಸ್ಥ ಡೇವಿಡ್ ಮಾಲ್ಪಾಸ್ ಅವರು ಭಾರತದಲ್ಲಿ ಭೂಮಿಯನ್ನು ಡಿಜಿಟಲೀಕರಣ ಮಾಡುವ ಹಾಗೂ ದೇಶಗಳ ಗಡಿಗಳಾಚೆಗೆ ಮಾರಾಟ ಮಾಡುವಾಗ ಅದು ಲಭ್ಯವಾಗುವಂತೆ ನೋಡಿಕೊಳ್ಳುವ ಹಾಗೂ ಈ ಮೂಲಕವೇ ಉದ್ಯಮ ವಹಿವಾಟುಗಳಲ್ಲಿ ಪಾರದರ್ಶಕತೆ ಕಾಪಾಡುವ ಅಗತ್ಯವನ್ನು ಪ್ರಧಾನಿ ಮೋದಿಯವರ ಗಮನಕ್ಕೆ ತಂದರು. ದೇಶವ್ಯಾಪಿಯಾಗಿ ಏಕಪ್ರಕಾರವಾಗಿರುವ ಪ್ರಕ್ರಿಯೆಗಳ ಕಾರಣದಿಂದಾಗಿ ಚೀನಾದಿಂದ ಕಾಲು ಕೀಳುತ್ತಿರುವ ಕಾರ್ಪೊರೇಟ್ ಸಂಸ್ಥೆಗಳನ್ನು ಮನಸೆಳೆಯುವ ರೀತಿಯಲ್ಲಿ ವಿಯೆಟ್ನಾಂ ಮತ್ತು ಫಿಲಿಪ್ಪೀನ್ಸ್‍ಗಳ ಉದ್ಯಮ ಸ್ನೇಹಿ ನೀತಿಗಳಿರುವುದನ್ನು ಕಾಣಬಹುದು. ಒಪ್ಪಂದಗಳನ್ನು ಮುರಿಯುವ ಭಾರತದ ಭ್ರಷ್ಟ ದಾಖಲೆಯ ಕಾರಣದಿಂದ ಹಾಗೂ ವಿವಾದಗಳನ್ನು ತ್ವರಿತ ಗತಿಯಲ್ಲಿ ಬಗೆಹರಿಸಲು ಸಾಧ್ಯವಾಗದಿರುವ ಕಾರಣದಿಂದ ಹೂಡಿಕೆದಾರರಿಗೆ ಭಾರತವು ಒಂದು ದುಸ್ವಪ್ನವಾಗಿ ಗೋಚರಿಸುತ್ತಿದೆ.

ಪಿ.ವಿ. ನರಸಿಂಹರಾವ್ ಅವರ ಆಳ್ವಿಕೆಯ ಕಾಲಾವಧಿಯಲ್ಲಿ ಭಾರತದ ಬಾಗಿಲನ್ನು ಜಾಗತೀಕರಣಕ್ಕೆ ಮುಕ್ತವಾಗಿ ತೆರೆಯುವ ಮೂಲಕ ವಿದೇಶಿ ಹೂಡಿಕೆಗಳನ್ನು ಇಲ್ಲಿ ಆಕರ್ಷಿಸಬಹುದು ಎಂದು ಭಾವಿಸಲಾಗಿತ್ತು. ಇಲ್ಲಿನ ನ್ಯಾಯ ವ್ಯವಸ್ಥೆ ಪ್ರಜಾತಾಂತ್ರಿಕವಾಗಿದ್ದು ಸ್ವತಂತ್ರವಾಗಿರುವುದು ಸಹ ಇದಕ್ಕೆ ಸಹಕಾರಿಯಾಗಿಲಿದೆ ಎಂದೇ ಭಾವಿಸಲಾಗಿತ್ತು. ಆದರೆ ಭಾರತವು ಚೀನಾದ ಆಚೆಗೆ ಈಗಲೂ ಹೂಡಿಕೆಗಾಗಿ ಕಾಯುವ ಸ್ಥಿತಿಯಲ್ಲಿದೆ. ಇದೇ ಹೊತ್ತಿಗೆ ಬೀಜಿಂಗ್ ಅಮೆರಿಕಕ್ಕೆ ಸರಿಸಾಟಿಯಾಗಿ ನಿಂತಿದ್ದು ಸುಮಾರು 12 ಟ್ರಿಲಿಯನ್ ಡಾಲರ್ ಹೂಡಿಕೆಯನ್ನು ಆಕರ್ಷಿಸುತ್ತಿದೆ.

ಗುತ್ತಿಗೆಗಳು ಮತ್ತು ಒಪ್ಪಂದಗಳ ಅನುಷ್ಠಾನದ ವಿಷಯದಲ್ಲಿ ಭಾರತವು 163ನೇ ಸ್ಥಾನದಲ್ಲಿದೆ. ಹಣಕಾಸು ಸಚಿವರ ಸಲಹೆಗಾರರಾದ ಸಂಜೀವ್ ಗೋಯಲ್ ನೀಡಿದ್ದ ಹೇಳಿಕೆಯೊಂದರ ಪ್ರಕಾರ ಇದಕ್ಕೆ ಕಾರಣ ಸರ್ಕಾರದ ಅಷ್ಟೇನೂ ಪರಿಣಾಮಕಾರಿಯಲ್ಲದ ನೀತಿಗಳು. ಮನಮೋಹನ್ ಸಿಂಗ್ ಅವರ ಸರ್ಕಾರದ ಆಳ್ವಿಕೆಯ ಅವಧಿಯಲ್ಲಿ ಮಾರಾಟ ಪ್ರಕ್ರಿಯೆಯೊಂದರಲ್ಲಿ ಭಾರತ ಸರ್ಕಾರಕ್ಕೆ ತೆರಿಗೆ ಕಟ್ಟದಿರುವ ಪ್ರಕರಣದಲ್ಲಿ ಸುಪ್ರೀಂ ಕೋರ್ಟು ವೊಡಾಫೋನ್ ಮೊಬೈಲ್ ಸಂಸ್ಥೆಯ ಪರವಾಗಿ ತೀರ್ಪು ನೀಡಿತ್ತು. ಆದರೂ ಸಹ ದಿವಾಳಿಯಾಗಿದ್ದ ಸರ್ಕಾರ ಎಂದಿನಂತೆ ತನ್ನ ಮಾತಿಗೆ ಬದ್ಧತೆ ತೋರದೇ ಮರುಪಾವತಿ ಮಾಡುವ ಬದಲಿಗೆ ಕಾನೂನಿನ ಕಣ್ಣಿಗೆ ಮಣ್ಣೆರಚಲು ಯತ್ನಿಸಿತ್ತು. ಆದಾಯ ತೆರಿಗೆ ಕಾನೂನಿಗೆ ಸಿಂಧುತ್ವದ ಕಲಮನ್ನು ಸೇರಿಸುವ ಪ್ರಸ್ತಾಪ ಸಲ್ಲಿಸಿ ನ್ಯಾಯಾಂಗದ ತೀರ್ಮಾನಗಳನ್ನೂ ಮೀರಿ ಹೋಗಲು ಹವಣಿಸಿತ್ತು. ಇದು ಅಂತರರಾಷ್ಟ್ರೀಯ ಮಟ್ಟದಲ್ಲಿ ಅಲ್ಲೋಲ ಕಲ್ಲೋಲ ಉಂಟುಮಾಡಿತಲ್ಲದೇ ಹೂಡಿಕೆದಾರರ ಭಾವನೆಗಳಿಗೆ ಘಾಸಿಯನ್ನುಂಟುಮಾಡಿತು.

ಇತ್ತೀಚೆಗೆ ಮಹಾರಾಷ್ಟ್ರದ ಉದ್ಧವ್ ಠಾಕ್ರೆ ಸರ್ಕಾರವು ಬುಲೆಟ್ ರೈಲು ಯೋಜನೆಗೆ ಕೆಂಪು ಬಾವುಟ ತೋರಿಸಿದೆ. ಇದು ಸೌರ ಹಾಗೂ ಪವನ ಶಕ್ತಿ ಒಪ್ಪಂದಗಳನ್ನು ಈಡೇರಿಸಿಕೊಳ್ಳಲು ದೀರ್ಘ ಕಾಲದಿಂದ ಆಂಧ್ರ ಪ್ರದೇಶ ಸರ್ಕಾರವು ನಡೆಸುತ್ತಿದ್ದ ಪ್ರಯತ್ನದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿದೆ. ಇಂತಹ ವಿಷಯಗಳಲ್ಲಿ ನಡೆಯುವ ಕಾನೂನಾತ್ಮಕ ವಿವಾದಗಳ ಫಲಿತಾಂಶ ಏನಾಗುತ್ತದೆ ಎಂಬುದು ತಿಳಿಯುವುದೇ ಇಲ್ಲ.

ಉದ್ಯಮ ಕ್ಷೇತ್ರದಲ್ಲಿನ ಸ್ಪರ್ಧೆಗಳ ಸುನಾಮಿಯ ಹೊರತಾಗಿಯೂ ಚೀನಾ ದೇಶವು ತನ್ನ ನೇರ ಹೂಡಿಕೆಯನ್ನು 3%ರಷ್ಟು ಹೆಚ್ಚಿಸಿಕೊಳ್ಳಲು ಯಶಸ್ವಿಯಾಗಿತ್ತು. ಚೀನಾವು ಬಲಿಷ್ಠವಾದ ವಾಣಿಜ್ಯಾತ್ಮಕ ಮತ್ತು ಆದಾಯದ ತಳಹದಿ ಹೊಂದಿರುವುದೇ ಅದರ ಈ ಬಂಡವಾಳದ ಒಳಹರಿವಿಗೆ ಮುಖ್ಯ ಕಾರಣ ಎಂದು ತೋರುತ್ತದೆ. ಭಾರತವು ಅಂತಹ ಒಂದು ಸ್ವಯಂ ಸಂಪೂರ್ಣವಾದ ಹಾಗೂ ಬಲಿಷ್ಠವಾದ ಆದಾಯದ ಮಾದರಿಯಾಗುವ ನಿಟ್ಟಿನಲ್ಲಿ ತಾನೂ ಸೂಕ್ತ ಕ್ರಮಗಳನ್ನು ಅಳವಡಿಸಿಕೊಳ್ಳುವುದೇ? ಈ ಮೂಲಕ ಅದೂ ಪ್ರಪಂಚ ಮಟ್ಟದಲ್ಲಿ ತನ್ನ ಆರ್ಥಿಕ ಸ್ಥಾನಮಾನವನ್ನು ಹೆಚ್ಚಿಸಿಕೊಳ್ಳುತ್ತದೆ ಎಂದು ಆಶಿಸೋಣವೇ?

Intro:Body:

national

Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.