ಮುಂಬೈ : ಜೂನ್ 29 ರಿಂದ ಜಾರಿಗೆ ಬರುವಂತೆ ಮುಂಬೈ ಉಪನಗರ ವಿಭಾಗದಲ್ಲಿ ಪ್ರಸ್ತುತ ಇರುವ 162 ರೈಲು ಸೇವೆಗಳಿಗೆ 40 ಹೆಚ್ಚುವರಿ ಟ್ರೈನ್ಗಳನ್ನ ಸೇರಿಸುವುದಾಗಿ ಪಶ್ಚಿಮ ರೈಲ್ವೆ (ಡಬ್ಲ್ಯುಆರ್) ಭಾನುವಾರ ತಿಳಿಸಿದೆ.
ಹೆಚ್ಚುವರಿ ಸೇವೆಗಳನ್ನು ಸೇರಿಸುವ ಮೂಲಕ ಡಬ್ಲ್ಯುಆರ್ ಉಪನಗರ ವಿಭಾಗದಲ್ಲಿ ಒಟ್ಟು 202 ಸೇವೆ ನೀಡಲಿದೆ. ಚರ್ಚ್‌ಗೇಟ್-ಬೊರಿವಾಲಿ ನಡುವೆ ಇಪ್ಪತ್ತು ನಿಧಾನ ಸೇವೆಗಳು (10 ಮೇಲಿನ ದಿಕ್ಕಿನಲ್ಲಿ ಮತ್ತು 10 ಕೆಳ ದಿಕ್ಕಿನಲ್ಲಿ) ಮತ್ತು ಬೊರಿವಾಲಿ - ಬೋಯಿಸರ್ ನಡುವೆ ಎರಡು ರೈಲುಗಳು ಕಾರ್ಯನಿರ್ವಹಿಸಲಿವೆ.
ಬೋಯಿಸರ್-ಚರ್ಚ್‌ಗೇಟ್‌ನಿಂದ ಎರಡು ವೇಗದ ಸೇವೆಗಳು (ಮೇಲಿನ ದಿಕ್ಕಿನಲ್ಲಿ), ವಿರಾರ್-ಬೊರಿವಾಲಿ ನಡುವಿನ ಎರಡು ನಿಧಾನ ಸೇವೆಗಳು (ಮೇಲಿನ ದಿಕ್ಕಿನಲ್ಲಿ) ಮತ್ತು ಚರ್ಚ್‌ಗೇಟ್ - ವಿರಾರ್ ನಡುವೆ ಹದಿನಾಲ್ಕು ವೇಗದ ಸೇವೆಗಳು ಕಾರ್ಯನಿರ್ವಹಿಸಲಿವೆ (ಎಂಟು ಕೆಳ ದಿಕ್ಕಿನಲ್ಲಿ ಮತ್ತು ಆರು ಮೇಲಿನ ದಿಕ್ಕಿನಲ್ಲಿ).
ಈ ಮಧ್ಯೆ ಸೆಂಟ್ರಲ್ ರೈಲ್ವೆಯಲ್ಲಿ ಜೂನ್ 30 ರಿಂದ ಪ್ರಾರಂಭವಾಗುವ ರೈಲ್ವೆ ಸಂಚಾರಕ್ಕೆ ಎಲ್ಲ ಸಿದ್ದತೆಗಳನ್ನು ಮಾಡಿಕೊಳ್ಳಲಾಗಿದೆ. ಸೋಮವಾರದಿಂದ ಬುಕ್ಕಿಂಗ್ ಪ್ರಾರಂಭವಾಗಲಿದೆ ಎಂದು ಸಿಆರ್ ಮುಖ್ಯ ವಕ್ತಾರ ಶಿವಾಜಿ ಸುತಾರ್ ತಿಳಿಸಿದ್ದಾರೆ.
ಜೂನ್ 15 ರಿಂದ ಡಬ್ಲ್ಯುಆರ್ನ ಸ್ಥಳೀಯ ರೈಲುಗಳಲ್ಲಿ 7.21 ಲಕ್ಷ ಪ್ರಯಾಣಿಕರು ಪ್ರಯಾಣಿಸಿದ್ದಾರೆ. ಒಂದು ಲಕ್ಷ ಟಿಕೆಟ್ಗಳು ಬುಕ್ಕಿಂಗ್ ಕೌಂಟರ್‌ಗಳಲ್ಲಿ ಮಾರಾಟ ಮಾಡಲಾಗಿದೆ. ಡಬ್ಲ್ಯುಆರ್ 72 ಲಕ್ಷ ರೂ. ಗಳಿಸಿದೆ ಎಂದು ದಕ್ಷಿಣ ರೈಲ್ವೆ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.