ETV Bharat / bharat

ಪೊಲೀಸ್​ ಜೀಪ್​-ಟ್ರಕ್​ ನಡುವೆ ಅಪಘಾತ: ಕಮಾಂಡಿಂಗ್​​ ಆಫೀಸರ್​​ ಸೇರಿ ಮೂವರ ಸಾವು - ಕಮಾಂಡಿಂಗ್​​ ಆಫೀಸರ್​​

ಕೋಲ್ಕತ್ತಾಗೆ ವಾಪಸ್​ ಆಗುತ್ತಿದ್ದ ವೇಳೆ ಪೊಲೀಸ್​ ಜೀಪ್​ ಟ್ರಕ್​ಗೆ ಡಿಕ್ಕಿ ಹೊಡೆದಿರುವ ಪರಿಣಾಮ ಮೂವರು ಸಾವನ್ನಪ್ಪಿರುವ ಘಟನೆ ನಡೆದಿದೆ.

Accident
Accident
author img

By

Published : Sep 11, 2020, 4:04 PM IST

ಕೋಲ್ಕತ್ತಾ: ಪೊಲೀಸ್​ ಜೀಪ್​-ಟ್ರಕ್​ ನಡುವೆ ನಡೆದ ಭೀಕರ ರಸ್ತೆ ಅಪಘಾತದಲ್ಲಿ ಓರ್ವ ಹಿರಿಯ ಪೊಲೀಸ್​ ಅಧಿಕಾರಿ ಸೇರಿ ಮೂವರು ದುರ್ಮರಣಕ್ಕೀಡಾಗಿರುವ ಘಟನೆ ಪಶ್ಚಿಮ ಬಂಗಾಳದಲ್ಲಿ ನಡೆದಿದೆ.

ಪಶ್ಚಿಮ ಬಂಗಾಳದ ಹೊಗ್ಲಿಯಲ್ಲಿ ಈ ಘಟನೆ ನಡೆದಿದ್ದು, ರಾಜ್ಯ ಸಶಸ್ತ್ರ ಪೊಲೀಸ್​​ 12ನೇ ಬೆಟಾಲಿಯನ್​​​ನ ಕಮಾಂಡಿಂಗ್​​ ಆಫೀಸರ್​​ ಚಟರ್ಜಿ, ಅಂಗರಕ್ಷಕ ಹಾಗೂ ಜೀಪ್​ ಡ್ರೈವರ್​ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

ಇಂದು ಬೆಳಗ್ಗೆ ದಾದಪುರದಿಂದ ಕೋಲ್ಕತ್ತಾಗೆ ವಾಪಸ್ ಬರುತ್ತಿದ್ದ ವೇಳೆ ಟ್ರಕ್​ಗೆ ಜೀಪ್​ ಡಿಕ್ಕಿ ಹೊಡೆದಿದೆ. ತಕ್ಷಣವೇ ಮೂವರನ್ನ ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು, ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾರೆ. ಅಪಘಾತಕ್ಕೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.