ETV Bharat / bharat

ನನ್ನನ್ನೂ ಪತ್ನಿ ಜೊತೆ ಇರಿಸಿ: ಕ್ವಾರಂಟೈನ್​ ಕೇಂದ್ರದಲ್ಲಿ ಪತಿ ಉಪವಾಸ ಸತ್ಯಾಗ್ರಹ!

author img

By

Published : May 23, 2020, 3:59 PM IST

Updated : May 23, 2020, 6:09 PM IST

ಪತ್ನಿಯೊಂದಿಗೆ ನನ್ನನ್ನೂ ಕ್ವಾರಂಟೈನ್​ ಮಾಡಿ ಎಂದು ವ್ಯಕ್ತಿಯೋರ್ವ ಕ್ವಾರಂಟೈನ್ ಕೇಂದ್ರದಲ್ಲಿ ಉಪವಾಸ ಸತ್ಯಾಗ್ರಹ ನಡೆಸುತ್ತಿರುವ ಘಟನೆ ಪಶ್ಚಿಮ ಬಂಗಾಳದಲ್ಲಿ ನಡೆದಿದೆ.

quarantined man on hunger strike
ಕ್ವಾರಂಟೈನ್ ಕೆಂದ್ರದಲ್ಲಿ ಪತಿ ಉಪವಾಸ ಸತ್ಯಗ್ರಹ

ಕೂಚ್ ಬೆಹರ್(ಪಶ್ಚಿಮ ಬಂಗಾಳ): ಪಶ್ಚಿಮ ಬಂಗಾಳದ ಕೂಚ್ ಬೆಹಾರ್ ಜಿಲ್ಲೆಯ ಕ್ವಾರಂಟೈನ್ ಕೇಂದ್ರದಲ್ಲಿ ವ್ಯಕ್ತಿಯೊಬ್ಬ ತನ್ನನ್ನೂ ತನ್ನ ಪತ್ನಿ ಜೊತೆಯಲ್ಲೇ ಇರಿಸಿ ಎಂದು ಕಳೆದೊಂದು ದಿನದಿಂದ ಉಪವಾಸ ಸತ್ಯಾಗ್ರಹ ಕೈಗೊಂಡಿದ್ದಾನೆ.

ಪತಿ ಮತ್ತು ಪತ್ನಿ ಮೇ 19ರಂದು ತ್ರಿಪುರಾದಿಂದ ಹಿಂದಿರುಗಿದ್ದರು. ಕೊರೊನಾ ಸೋಂಕು ಹರಡುವಿಕೆ ತಡೆಯುವ ಸಲುವಾಗಿ ದಂಪತಿಯನ್ನು ಕ್ವಾರಂಟೈನ್ ಮಾಡಲು ತೀರ್ಮಾನಿಸಲಾಯಿತು. ಇಬ್ಬರೂ ಕೂಡ ಕ್ವಾರಂಟೈನ್​ ಆಗಲು ಒಪ್ಪಿಕೊಂಡಿದ್ದಾರೆ. ಆದರೆ ಆ ವ್ಯಕ್ತಿ ತನ್ನ ಹೆಂಡತಿಯಿಂದ ಪ್ರತ್ಯೇಕವಾಗಿ ಇರುವುದಕ್ಕೆ ವಿರೋಧಿಸಿದ್ದಾನೆ.

ಪತ್ನಿ ವಾಸವಾಗಿರುವ ಕ್ವಾರಂಟೈನ್ ಕೇಂದ್ರದ ಸೌಲಭ್ಯ ಮತ್ತು ಸುರಕ್ಷತೆಯ ಬಗ್ಗೆ ಅನುಮಾನ ವ್ಯಕ್ತಪಡಿಸಿದ ಆತ, ತನ್ನನ್ನೂ ಆಕೆಯೊಂದಿಗೆ ಇರಿಸಿ ಎಂದು ಬೇಡಿಕೆ ಇಟ್ಟು, ಉಪವಾಸ ಸತ್ಯಾಗ್ರಹ ಕೈಗೊಂಡಿದ್ದಾನೆ. ನಾನು ನನ್ನ ಹೆಂಡತಿಯೊಂದಿಗೆ ಇರಲು ಬಯಸುತ್ತೇನೆ. ಏಕೆಂದರೆ ಅವಳು ಉಳಿದುಕೊಂಡಿರುವ ಕ್ವಾರಂಟೈನ್ ಕೇಂದ್ರ ಸುರಕ್ಷಿತವಾಗಿಲ್ಲ ಎಂದು ಆತ ಹೇಳಿದ್ದಾನೆ. ಪತಿಯ ಬೇಡಿಕೆಗೆ ಸಂಬಂಧಿಸಿದಂತೆ ಅಧಿಕಾರಿಗಳು ಯಾವುದೇ ಕ್ರಮ ಕೈಗೊಂಡಿಲ್ಲ ಎನ್ನಲಾಗ್ತಿದೆ.

Last Updated : May 23, 2020, 6:09 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.