ಪಶ್ಚಿಮ ಬಂಗಾಳ: ಸ್ವಾತಂತ್ರ್ಯ ಸೇನಾನಿ ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ಸಾವಿನ ಸುತ್ತ ಹರಡಿರುವ ನಿಗೂಢ ಸಂಗತಿಗಳು ಇದೀಗ ಮತ್ತೆ ಮುನ್ನೆಲೆಗೆ ಬಂದು ನಿಲ್ಲುತ್ತಿವೆ.
ದೇಶಾದ್ಯಂತ ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ 123ನೇ ಜನ್ಮದಿನ ಆಚರಿಸಲಾಗುತ್ತಿದ್ದು, ಈ ಬಗ್ಗೆ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ಪ್ರಧಾನಿ ನರೇಂದ್ರ ಮೋದಿಗೆ ಪತ್ರವೊಂದನ್ನು ಬರೆದಿದ್ದಾರೆ.
-
West Bengal Chief Minister Mamata Banerjee writes to PM Narendra Modi to declare 23rd January, the birth anniversary of Netaji Subhas Chandra Bose, as a national holiday and "take decisive steps to find out what happened to Netaji and place the matter in public domain." pic.twitter.com/tao0iIK23a
— ANI (@ANI) November 18, 2020 " class="align-text-top noRightClick twitterSection" data="
">West Bengal Chief Minister Mamata Banerjee writes to PM Narendra Modi to declare 23rd January, the birth anniversary of Netaji Subhas Chandra Bose, as a national holiday and "take decisive steps to find out what happened to Netaji and place the matter in public domain." pic.twitter.com/tao0iIK23a
— ANI (@ANI) November 18, 2020West Bengal Chief Minister Mamata Banerjee writes to PM Narendra Modi to declare 23rd January, the birth anniversary of Netaji Subhas Chandra Bose, as a national holiday and "take decisive steps to find out what happened to Netaji and place the matter in public domain." pic.twitter.com/tao0iIK23a
— ANI (@ANI) November 18, 2020
ನೇತಾಜಿ ಅವರ ಸಾವಿನ ಬಗ್ಗೆ ಇದ್ದ ಹಲವು ಅನುಮಾನಗಳಿಗೆ ತೆರೆ ಎಳೆಯುವಂತೆ ತಾವು ಬರೆದ ಪತ್ರದಲ್ಲಿ ಉಲ್ಲೇಖಿಸಿರುವ ಬ್ಯಾನರ್ಜಿ, ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ಜನ್ಮದಿನಾಚರಣೆಯನ್ನು ಜನವರಿ 23 ರಂದು ರಾಷ್ಟ್ರೀಯ ರಜಾ ದಿನವೆಂದು ಘೋಷಿಸುವಂತೆ ಮನವಿ ಸಹ ಮಾಡಿದ್ದಾರೆ.
ನೇತಾಜಿ ಅವರ ನಿಗೂಢ ಸಾವು ಇಂದಿಗೂ ಸ್ಪಷ್ಟವಾಗಿ ಗೊತ್ತಾಗಿಲ್ಲ. ಈ ವಿಚಾರದಲ್ಲಿ ತಾರ್ಕಿಕ ಅಂತ್ಯ ನೀಡುವಂತೆ ಮನವಿ ಮಾಡಿಕೊಂಡಿರುವ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ನೇತಾಜಿಗೆ ಏನಾಯಿತು ಎಂಬುದನ್ನು ಕಂಡುಹಿಡಿಯಲು ಮತ್ತು ಈ ವಿಷಯವನ್ನು ಸಾರ್ವಜನಿಕ ವಲಯದಲ್ಲಿ ಇರಿಸಲು ನಿರ್ಣಾಯಕ ಕ್ರಮಗಳನ್ನು ತೆಗೆದುಕೊಳ್ಳಿ ಎಂದು ಪ್ರಧಾನಿ ನರೇಂದ್ರ ಮೋದಿಗೆ ಪತ್ರ ಬರೆದಿದ್ದಾರೆ.