ಗೊಂಡಿಯಾ(ಮಹಾರಾಷ್ಟ್ರ): ದೇಶದ ಹಲವು ಕಡೆಗೆ ಮತದಾನ ನಡೀತಿದೆ. ಮತಜಾಗೃತಿ ಮಧ್ಯೆಯೂ ಎಷ್ಟೋ ಮಂದಿ ತಮ್ಮ ಹಕ್ಕು ಚಲಾಯಿಸೋದಿಲ್ಲ. ಆದರೆ, ಮಹಾರಾಷ್ಟ್ರದಲ್ಲಿ ವಧು-ವರರಿಬ್ಬರೂ ಹಕ್ಕು ಚಲಾಯಿಸಿಯೇ ಹಸೆಮಣೆ ಏರಿದ್ದಾರೆ.
ಮದ್ವೆ ಅಂದ್ರೇ ಸುಮ್ನೇ ಅಲ್ಲ. ಜೀವನದಲ್ಲಿ ಪದೇಪದೆ ಆಗೋಕಾಗುತ್ತಾ.. ತಮ್ಮ ತಮ್ಮ ಸಾಮರ್ಥ್ಯಕ್ಕೆ ಅನುಸಾರ ಧಾಮ್‌ಧೂಮ್ ಅಂತಾ ವಿವಾಹ ಬಂಧನಕ್ಕೊಳಗಾಗುತ್ತಾರೆ. ಮಹಾರಾಷ್ಟ್ರದ ಗೊಂಡಿಯಾದಲ್ಲಿ ಇವತ್ತು ಒಂದು ಜೋಡಿ ಸಪ್ತಪದಿ ತುಳಿದರು. ಆದರೆ, ಅದಕ್ಕೂ ಮೊದಲೇ ಅವರು ತಮ್ಮ ಹಕ್ಕು ಚಲಾಯಿಸೋದನ್ನ ಮರೆಯಲಿಲ್ಲ.
ಮಂಗಳ ವಾದ್ಯಗಳನ್ನ ತಗೊಂಡೇ ಮತದಾನ ಕೇಂದ್ರದತ್ತ ಮೆರವಣಿಿಗೆ ಹೊರಟರು. ವಧು-ವರರು ಕೈಕೈ ಹಿಡ್ಕೊಂಡು ನಡೆದ್ರೇ ಮಂಗಳ ವಾದ್ಯಗಳ ಅಬ್ಬರ ಈ ಜೋಡಿಗೆ ಮೆರಗನ್ನ ತಂದಿತು. ಹೀಗೆ ಮೆರವಣಿಗೆ ಮೂಲಕ ಮತಗಟ್ಟೆಗೆ ತೆರಳಿದ ಈ ಜೋಡಿ, ಅಲ್ಲಿ ತಮ್ಮ ಹಕ್ಕು ಚಲಾಯಿಸಿದರು. ಆ ಬಳಿಕವಷ್ಟೇ ವಾಪಸ್ ತೆರಳಿ ವರ ಮದುಮಗಳಿಗೆ ತಾಳಿ ಕಟ್ಟಿದರು.
ಮೊದಲು ಮತದಾನ ಬಳಿಕವಷ್ಟೇ ಮದುವೆ ಅಂತಾ ನಿರ್ಧರಿಸಿದ್ದ ಜೋಡಿ ತಾವು ಅಂದ್ಕೊಂಡಂತೆಯೇ ತಮ್ಮ ಹಕ್ಕು ಚಲಾಯಿಸಿದ ಮೇಲೆ ಸಪ್ತಪದಿ ತುಳಿದರು.