ಅಮೃತಸರ್(ಪಂಜಾಬ್): ಕೇಂದ್ರ ಸರ್ಕಾರ ಜಾರಿಗೊಳಿಸಲು ನಿರ್ಧರಿಸಿರುವ ಮೂರು ಕೃಷಿ ಮಸೂದೆಗಳಿಗೆ ಎಲ್ಲೆಡೆ ವ್ಯಾಪಕ ವಿರೋಧ ವ್ಯಕ್ತವಾಗುತ್ತಿದ್ದು, ಇದೀಗ ಪಂಜಾಬ್ ಮುಖ್ಯಮಂತ್ರಿ ಕ್ಯಾಪ್ಟನ್ ಅಮರೀಂದರ್ ಸಿಂಗ್ ಸುಪ್ರೀಂಕೋರ್ಟ್ ಮೆಟ್ಟಿಲೇರಲು ನಿರ್ಧರಿಸಿದ್ದಾರೆ.
ಕೃಷಿ ರಾಜ್ಯದ ರೈತರಿಗೆ ಸಂಬಂಧಪಟ್ಟ ವಿಷಯವಾಗಿದೆ. ಆದರೆ, ಕೃಷಿ ಮಸೂದೆಗಳಿಗೆ ನಮ್ಮ ಅನುಮತಿ ಇಲ್ಲದೇ ಪಾಸ್ ಮಾಡಲಾಗಿದ್ದು, ಇದೊಂದು ಅಸಂವಿದಾನಾತ್ಮಕವಾಗಿದೆ. ರೈತರ ವಿರೋಧಿಯಾಗಿರುವ ಈ ಮಸೂದೆಯನ್ನ ನಾವು ಸುಪ್ರೀಂಕೋರ್ಟ್ನಲ್ಲಿ ಪ್ರಶ್ನಿಸುತ್ತೇವೆ ಎಂದಿದ್ದಾರೆ.
-
We will be going to the Supreme Court. Agriculture is a state subject but farm bills have been passed without asking us. It is totally unconstitutional: Punjab Chief Minister Captain Amarinder Singh pic.twitter.com/6L4qLW86sS
— ANI (@ANI) September 28, 2020 " class="align-text-top noRightClick twitterSection" data="
">We will be going to the Supreme Court. Agriculture is a state subject but farm bills have been passed without asking us. It is totally unconstitutional: Punjab Chief Minister Captain Amarinder Singh pic.twitter.com/6L4qLW86sS
— ANI (@ANI) September 28, 2020We will be going to the Supreme Court. Agriculture is a state subject but farm bills have been passed without asking us. It is totally unconstitutional: Punjab Chief Minister Captain Amarinder Singh pic.twitter.com/6L4qLW86sS
— ANI (@ANI) September 28, 2020
ಕೃಷಿ ಮಸೂದೆ ಜಾರಿಗೊಳಿಸಲು ಕೇಂದ್ರ ಸರ್ಕಾರ ಲೋಕಸಭೆಯಲ್ಲಿ ಮಂಡನೆ ಮಾಡಿದಾಗಿನಿಂದಲೂ ಇದಕ್ಕೆ ಪಂಜಾಬ್, ಹರಿಯಾಣದಲ್ಲಿ ವ್ಯಾಪಕ ಪ್ರತಿಭಟನೆ ವ್ಯಕ್ತವಾಗುತ್ತಿದ್ದು, ಸದ್ಯ ಕರ್ನಾಟಕದಲ್ಲೂ ಇದರ ಬಿಸಿ ಜೋರಾಗಿದೆ. ಈ ಮಸೂದೆಗೆ ತೀವ್ರ ಆಕ್ರೋಶ ವ್ಯಕ್ತಪಿಡಿಸಿ ಎನ್ಡಿಎ ಮೈತ್ರಿ ಪಕ್ಷ ಶಿರೋಮಣಿ ಅಕಾಲಿದಳದ ಸಚಿವೆ ಹರ್ಸಿಮ್ರತ್ ಕೌರ್ ಕೇಂದ್ರ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.