ಹೈದರಾಬಾದ್: ಕೋವಿಡ್ 19 ಸಾಂಕ್ರಾಮಿಕ ಸೋಂಕು ಡಿಜಿಟಲ್ ಯುಗದಲ್ಲಿ ಸುಂಟರಗಾಳಿ ಎಬ್ಬಿಸಿದೆ. ಇದು 1.3 ಬಿಲಿಯನ್ ಜನಸಂಖ್ಯೆಯನ್ನು ಹೊಂದಿರುವ ಭಾರತವನ್ನು ಯೋಚಿಸಲಾಗದ ವೇಗದಲ್ಲಿ ಹಠಾತ್ ಡಿಜಿಟಲ್ ಪರಿವರ್ತನೆಗೆ ಒಳಪಡಿಸಿತು. ಇಷ್ಟು ಕಡಿಮೆ ಅವಧಿಯಲ್ಲಿ ಡಿಜಿಟಲ್ ತಂತ್ರಜ್ಞಾನದ ಬಳಕೆಯಲ್ಲಿನ ಈ ತುಡಿತವು ಆನ್‌ಲೈನ್ ಭದ್ರತಾ ಕೊರತೆಗಳನ್ನು ಸಹ ಬಹಿರಂಗಪಡಿಸಿದೆ. ಏಕೆಂದರೆ ಇದು ಬಳಕೆದಾರರ ವೈಯಕ್ತಿಕ ಡೇಟಾ ಗೌಪ್ಯತೆಗೆ ಸರಣಿ ಬೆದರಿಕೆಗಳನ್ನೊಡ್ಡಿದೆ.
ಸೈಬರ್ ಅಪರಾಧಗಳನ್ನು ಹೊರತುಪಡಿಸಿ ದೊಡ್ಡ ದತ್ತಾಂಶ, ದತ್ತಾಂಶ ಗಣಿಗಾರಿಕೆ, ದತ್ತಾಂಶ ಸಂಗ್ರಹ, ದತ್ತಾಂಶ ಗೌಪ್ಯತೆ, ದತ್ತಾಂಶ ಉಲ್ಲಂಘನೆ ಮುಂತಾದ ಪದಗಳು ಭಾರತೀಯ ಡಿಜಿಟಲ್ ಪ್ರಪಂಚದ ಮಾತುಗಳಾಗಿವೆ. ಕಡೆಗಣಿಸಲ್ಪಟ್ಟ ಆನ್‌ಲೈನ್ ಬಳಕೆದಾರರ ಮುಂದೆ ಈಗಾಗಲೇ ಏನಿದೆ ಎಂದು ಅರಿತು ಮತ್ತು ಅವರನ್ನು ಈ ಸಂದರ್ಭದಲ್ಲಿ ಜೊತೆಗೆ ಸೇರಿಸಿಕೊಂಡು ಫೇಸ್ಬುಕ್ ಸಹೋದರಿ ಸಂಸ್ಥೆಯಾಗಿರುವ ವಾಟ್ಸ್ಆ್ಯಪ್ನಲ್ಲಿ ಹೇಗೆ ಡೇಟಾ ಹಂಚಿಕೆ ಮಾಡಬೇಕು ಎನ್ನುವ ಪರಿಕಲ್ಪನೆ ಇದೀಗ ಹೆಚ್ಚು ಪ್ರಸ್ತುತವಾಗಿದೆ. ಡೇಟಾ ವಿಜ್ಞಾನ ಹೋರಾಟಗಾರರು, ನೈತಿಕ ಹ್ಯಾಕರ್‌ಗಳು ಅಥವಾ ಇಂಟರ್ನೆಟ್ ಭದ್ರತಾ ಸಂಶೋಧಕರು ಮತ್ತು ಸರ್ಕಾರದ ಸಾಮೂಹಿಕ ಪ್ರಯತ್ನದ ಫಲವಾಗಿ ವಾಟ್ಸಾಪ್ ತನ್ನ ನಿರ್ಧಾರದಿಂದ ಹಿಂದೆ ಸರಿಯಲು ಕಾರಣವಾಯಿತು. ಅದರ ಹೊಸ ನೀತಿ ನವೀಕರಣವನ್ನು ಫೆಬ್ರವರಿ 8 ರಿಂದ ಮೇ 15 ರವರೆಗೆ ಮುಂದೂಡಲಾಗಿದೆ.
ಡೇಟಾ ಗೌಪ್ಯತೆ ಮತ್ತು ವೈಯಕ್ತಿಕ ಡೇಟಾದ ಉಲ್ಲಂಘನೆ ಹೊಸತೇನಲ್ಲ ಮತ್ತು ಆನ್‌ಲೈನ್ ಸೇವೆಗಳಿಗೆ ಚಂದಾದಾರರಾಗಿರುವ ಯಾರಿಗಾದರೂ ಇದು ಅನುಭವವಾಗಿರಬಹುದು. ಪ್ರಪಂಚದಾದ್ಯಂತದ ಯಾರಾದರೂ ಡೇಟಾ ಸೋರಿಕೆ ಅಥವಾ ದತ್ತಾಂಶ ಉಲ್ಲಂಘನೆಗೆ ಬಲಿಯಾಗಬಹುದು. ಆದರೆ, ವ್ಯತ್ಯಾಸವೇನೆಂದರೆ ಕಾನೂನು ಮತ್ತು ಅಂತಹ ಅಪರಾಧಗಳ ಸುಳಿಗೆ ಸಿಲುಕವ ಬಲಿಪಶುಗಳ ಮೇಲೆ ನಿಂತಿದೆ. ಭಾರತದಲ್ಲಿನ ಸೈಬರ್ ತಜ್ಞರು ಆಗಾಗ್ಗೆ ಬಲವಾದ ನೀತಿಯ ಕೊರತೆ, ಕಾನೂನಿನ ಕೊರತೆ ಮತ್ತು ಎಲ್ಲಕ್ಕಿಂತ ಹೆಚ್ಚಾಗಿ ತಮ್ಮದೇ ಆದ ಡಿಜಿಟಲ್ ಗೌಪ್ಯತೆಯನ್ನು ರಕ್ಷಿಸುವ ಜನರಲ್ಲಿ ಸಾಮಾನ್ಯ ನಿರುತ್ಸಾಹದ ಬಗ್ಗೆ ವಿಷಾದ ವ್ಯಕ್ತಪಡಿಸುತ್ತಾರೆ.
ಸಾಮಾಜಿಕ ಮಾಧ್ಯಮ ನಿರ್ವಹಣಾ ವೇದಿಕೆಯಾದ ಹೂಟ್‌ಸೂಟ್ ಪ್ರಕಾರ, ಜಾಗತಿಕ ಅಂತರ್ಜಾಲ ಬಳಕೆದಾರರು ಈಗಾಗಲೇ ಸುಮಾರು 4.66 ಶತಕೋಟಿ ತಲುಪಿದ್ದಾರೆ. ಇದು ಜಾಗತಿಕ ಜನಸಂಖ್ಯೆಯ ಸರಿ ಸುಮಾರು ಶೇ53 ರಷ್ಟಿದೆ. ಇದು ಪ್ರಪಂಚವು ಹೆಚ್ಚಿನ ದರದಲ್ಲಿ ದತ್ತಾಂಶವನ್ನು ಹೇಗೆ ತಯಾರಿಸುತ್ತಿದೆ ಎಂಬುದರ ಚಿತ್ರಣವನ್ನು ನೀಡುತ್ತದೆ. ಸಂಸ್ಥೆಗಳು ತಮ್ಮ ವಹಿವಾಟು ಹೆಚ್ಚಳಕ್ಕೆ ಬಳಸುವ ದತ್ತಾಂಶದಲ್ಲಿ ರಚನಾತ್ಮಕ ಮತ್ತು ರಚನೆರಹಿತ ದತ್ತಾಂಶಗಳನ್ನು ವಿಶ್ಲೇಷಿಸುವ ನಿರಂತರ ಅವಶ್ಯಕತೆಯಿದೆ. ಡಿಜಿಟಲ್ ಜಾಹೀರಾತುಗಳು, ಇಂಟರ್ನೆಟ್ ಸಂಶೋಧನಾ ಮಾದರಿ, ಗೇಮಿಂಗ್, ಪ್ರಯಾಣ ಪ್ರದೇಶಗಳು, ಆರೋಗ್ಯ ಕ್ಷೇತ್ರ, ಸಂವಹನ, ಚಿಲ್ಲರೆ ವ್ಯಾಪಾರ, ಹಣಕಾಸು ಸೇವೆಗಳು, ಶಿಕ್ಷಣ ಇತ್ಯಾದಿಗಳ ಡೇಟಾವನ್ನು ಇದು ಒಳಗೊಂಡಿದೆ.
ಇವೆಲ್ಲವೂ ವೈಯಕ್ತಿಕ ಡೇಟಾದ ಸುರಕ್ಷತೆಯ ಬಗ್ಗೆ ಗಂಭೀರ ಕಳವಳವನ್ನು ವ್ಯಕ್ತಪಡಿಸುತ್ತವೆ. ಈ 21 ನೇ ಶತಮಾನದಲ್ಲಿ ದತ್ತಾಂಶವನ್ನು ಹೊಸ ತೈಲ ಎಂದು ಕರೆಯಲಾಗುತ್ತದೆ. ಪದಗಳ ಗಣಿಗಾರಿಕೆ, ದತ್ತಾಂಶ ಗೌಪ್ಯತೆ ಮಾತ್ರ ಪ್ರಾಮುಖ್ಯತೆಯನ್ನು ಪಡೆದುಕೊಂಡಿದೆ.
ಡೇಟಾ ಗೌಪ್ಯತೆ ಎಂದರೇನು:
ಹಣಕಾಸಿನ ವಹಿವಾಟುಗಳು, ಶಿಕ್ಷಣ, ಆರೋಗ್ಯ ಕ್ಷೇತ್ರ ಮತ್ತು ಇನ್ನೂ ಅನೇಕ ರೀತಿಯ ಸೇವೆಗಳಿಗೆ ಸಂಬಂಧಿಸಿದ ಆನ್‌ಲೈನ್ ಸೇವೆಗಳನ್ನು ಪಡೆಯಲು ಗ್ರಾಹಕರು ಹೆಸರು, ವಯಸ್ಸು ಮತ್ತು ವಿಳಾಸದಂತಹ ಕೆಲವು ಮೂಲ ಮಾಹಿತಿಗಳನ್ನು ಅನೇಕ ಸಂಕೀರ್ಣವಾದ ವೈಯಕ್ತಿಕ ವಿವರಗಳಿಗೆ ಹಂಚಿಕೊಳ್ಳಬೇಕಾಗುತ್ತದೆ. ಡೇಟಾ ಗೌಪ್ಯತೆ ಯಾವಾಗ, ಹೇಗೆ ಮತ್ತು ಎಷ್ಟರ ಮಟ್ಟಿಗೆ ಬಳಕೆದಾರನು ತನ್ನ ವೈಯಕ್ತಿಕ ಮಾಹಿತಿಯನ್ನು ಇಂಟರ್ನೆಟ್ನಲ್ಲಿ ಇತರರಿಗೆ ಹಂಚಿಕೊಳ್ಳಬಹುದು ಅಥವಾ ಸಂವಹನ ಮಾಡಬಹುದು ಎಂಬುದನ್ನು ನಿರ್ಧರಿಸುತ್ತದೆ.
ಡೇಟಾ ಉಲ್ಲಂಘನೆ ಎಷ್ಟು ಅಪಾಯಕಾರಿ:
ಈ ಡಿಜಿಟಲ್ ಯುಗದಲ್ಲಿ ನಮ್ಮಲ್ಲಿ ಹೆಚ್ಚಿನವರು ಈಗಾಗಲೇ ನಮ್ಮ ವೈಯಕ್ತಿಕ ಡೇಟಾವನ್ನು ನಮ್ಮ ಸೇವಾ ಪೂರೈಕೆದಾರರೊಂದಿಗೆ ಹಂಚಿಕೊಂಡಿರುವುದರಿಂದ ಡೇಟಾ ಗೌಪ್ಯತೆ ಬಹುತೇಕ ತಪ್ಪು ಅರ್ಥವನ್ನು ನೀಡಿದೆ. ಇದರೊಂದಿಗೆ ನಮ್ಮ ಹಂಚಿದ ಡೇಟಾವನ್ನು ಉಲ್ಲಂಘನೆಗೆ ಅರ್ಹ ಎಂದು ಇದರ ಅರ್ಥವಲ್ಲ ಎಂದು ನಾವು ನೆನಪಿನಲ್ಲಿಡಬೇಕು. ಡೇಟಾ ಉಲ್ಲಂಘನೆಯು ಉದ್ದೇಶಪೂರ್ವಕವಾಗಿ ಮತ್ತು ಉದ್ದೇಶಪೂರ್ವಕವಾಗಿರದೆ ಇರುವ ಸಾಧ್ಯತೆ ಇದೆ. ಆದರೆ ಜವಾಬ್ದಾರಿ ಸೇವಾ ಪೂರೈಕೆದಾರರ ಮೇಲೆ ಇರುತ್ತದೆ.
ಉದ್ದೇಶವನ್ನು ಪ್ರಶ್ನಿಸಿದಾಗ:
ನಾವು ಕೆಲವು ವೈಯಕ್ತಿಕ ಮಾಹಿತಿಯನ್ನು ಹಂಚಿಕೊಳ್ಳಬೇಕಾದ ಸಂಗತಿಯ ಹೊರತಾಗಿಯೂ ಅನೇಕ ಅಪ್ಲಿಕೇಷನ್‌ಗಳು ಅತಿರೇಖಕಕ್ಕೆ ಹೋಗುತ್ತವೆ. ಅಗತ್ಯಕ್ಕಿಂತ ಹೆಚ್ಚಿನ ಡೇಟಾವನ್ನು ಅದರ ಬಳಕೆದಾರರಿಂದ ಸಂಗ್ರಹಿಸುತ್ತವೆ ಮತ್ತು ಮೂರನೇ ವ್ಯಕ್ತಿಗೆ ಹಂಚಿಕೊಳ್ಳುತ್ತವೆ / ಮಾರಾಟ ಮಾಡುತ್ತವೆ. ಇಂಟರ್ನೆಟ್ ಭದ್ರತಾ ಸಂಶೋಧಕ ರಾಜಶೇಖರ್ ರಾಜಾರಿಯಾ ಅವರು 2020 ರಲ್ಲಿ ಬೆಳಕಿಗೆ ಬಂದ ಎರಡು ಪ್ರಮುಖ ವೈಯಕ್ತಿಕ ಡೇಟಾ ಸೋರಿಕೆ ನೆನಪಿಸುತ್ತಾರೆ.
ಕಳೆದ ವರ್ಷ ಮೇ ತಿಂಗಳಲ್ಲಿ ಸೈಬರ್ ಭದ್ರತಾ ಸಂಸ್ಥೆ ಸೈಬಲ್ ಹ್ಯಾಕಿಂಗ್ ಫೋರಂಗಳಲ್ಲಿ ಹ್ಯಾಕರ್ 2.3 ಜಿಬಿ (ಜಿಪ್ಡ್) ಫೈಲ್ ಅನ್ನು ಪೋಸ್ಟ್ ಮಾಡಿದ್ದಾರೆ ಎಂದು ಹೇಳಿದ್ದಾರೆ. ಈ ಫೈಲ್‌ನಲ್ಲಿ ಮೂರು ಕೋಟಿ ಭಾರತೀಯ ಉದ್ಯೋಗಾಕಾಂಕ್ಷಿಗಳ ವೈಯಕ್ತಿಕ ವಿವರಗಳಿವೆ. ನವದೆಹಲಿ, ಮುಂಬೈ ಮತ್ತು ಬೆಂಗಳೂರಿನ ಉದ್ಯೋಗಾಕಾಂಕ್ಷಿಗಳ ಇಮೇಲ್, ಸಂಪರ್ಕ ವಿವರಗಳು, ವಿಳಾಸಗಳು, ಅರ್ಹತೆ ಮತ್ತು ಕೆಲಸದ ಅನುಭವದಂತಹ ಸೂಕ್ಷ್ಮ ಮಾಹಿತಿಯುನ್ನು ರಾಜೀ ಮಾಡಿಕೊಳ್ಳಲಾಯಿತು. ಇದು ಸಂಪೂರ್ಣ ಪರಿಮಾಣ ಮತ್ತು ವಿವರವಾದ ಮಾಹಿತಿ ನೀಡಿದ ಒಟ್ಟುಗೂಡಿಸುವ ಸೇವೆಯಿಂದ ಹುಟ್ಟಿಕೊಂಡಿದೆ ಎಂದು ತೋರುತ್ತದೆ ಎಂದು ಸೈಬಲ್ ತನ್ನ ಬ್ಲಾಗ್‌ನಲ್ಲಿ ಉಲ್ಲೇಖಿಸಿದ್ದಾರೆ.
70 ಲಕ್ಷ ಭಾರತೀಯ ಡೆಬಿಟ್ ಮತ್ತು ಕ್ರೆಡಿಟ್ ಕಾರ್ಡ್ದಾರರ ದೂರವಾಣಿ ಸಂಖ್ಯೆಗಳು ಮತ್ತು ಇಮೇಲ್ ವಿಳಾಸಗಳು ಸೇರಿದಂತೆ ವೈಯಕ್ತಿಕ ವಿವರಗಳು ಡಾರ್ಕ್ ವೆಬ್‌ನಲ್ಲಿ ಲಭ್ಯವಿದೆ ಎಂದು ಡಿಸೆಂಬರ್‌ನಲ್ಲಿ ರಾಜಾರಿಯಾ ಎಚ್ಚರಿಸಿದ್ದರು. ಕ್ರೆಡಿಟ್ / ಡೆಬಿಟ್ ಕಾರ್ಡ್‌ಗಳನ್ನು ಮಾರಾಟ ಮಾಡಲು ಬ್ಯಾಂಕ್ಗಳಿಂದ ಒಪ್ಪಂದ ಮಾಡಿಕೊಂಡಿರುವ ಮೂರನೇ ಗುಂಪಿಗೆ ಸೇರಿರುವ ಸೇವಾ ಪೂರೈಕೆದಾರರಿಂದ ಇದು ಸಂಭವಿಸಿರಬಹುದು ಎಂದು ಅವರು ವ್ಯಾಖ್ಯಾನಿಸಿದ್ದಾರೆ. ಮೌಲ್ಯಾಧರಿತ, ಆರ್ಥಿಕ ವಿವರಗಳಾದ ಹೆಸರು, ಇಮೇಲ್‌ಗಳು, ಕ್ರೆಡಿಟ್ ಮತ್ತು ಡೆಬಿಟ್ ಕಾರ್ಡ್, ಪ್ಯಾನ್ ಕಾರ್ಡ್ ವಿವರಗಳು ಸೋರಿಕೆಯಾಗಿವೆ.
ಉದ್ದೇಶಪೂರ್ವಕವಲ್ಲ, ಆದರೆ ಹಾನಿಕಾರಕ:
ಆನ್‌ಲೈನ್ ಸೇವಾ ಪೂರೈಕೆದಾರರು ಅಥವಾ ಅಪ್ಲಿಕೇಶನ್‌ಗಳು ಜಾಗೃತೆ ವಹಿಸಿರುವುದಿಲ್ಲ ಅಥವಾ ಬಳಕೆದಾರರ ಡೇಟಾವನ್ನು ಸುರಕ್ಷಿತವಾಗಿರಿಸಲು ಸಾಕಷ್ಟು ಪರಿಣಾಮಕಾರಿಯಾಗಿ ವಿನ್ಯಾಸಗೊಳಿಸಲಾಗಿಲ್ಲ. ಅದು ರಾಜಿಗೆ ಒಳಗಾಗಿದೆ. ವೈಯಕ್ತಿಕ ಅಪ್ಲಿಕೇಶನ್‌ಗಳನ್ನು ಸುಲಭವಾಗಿ ಪಡೆಯುವ ಮತ್ತು ಸಾರ್ವಜನಿಕ ವೇದಿಕೆಯಲ್ಲಿ ಬಿಡುಗಡೆ ಮಾಡುವ ಹ್ಯಾಕರ್‌ಗಳಿಗೆ ಇಂತಹ ಅಪ್ಲಿಕೇಶನ್‌ಗಳು ಸುಲಭ ತುತ್ತಾಗಿವೆ.
ಇತ್ತೀಚೆಗೆ ಸರಳ ವೆಬ್ ಹುಡುಕಾಟದ ಮೂಲಕ ಗೂಗಲ್‌ನಲ್ಲಿ ಸಾವಿರಕ್ಕೂ ಹೆಚ್ಚು ವಾಟ್ಸಾಪ್ ಗ್ರೂಪ್ ಲಿಂಕ್‌ಗಳು ಪುನರುಜ್ಜೀವನಗೊಂಡಿವೆ ಎಂದು ಸಂಶೋಧನಾ ವರದಿಯೊಂದು ತಿಳಿಸಿದೆ. ಈ ಲಿಂಕ್‌ಗಳ ಸುಲಭವಾಗಿ ಲಭ್ಯವಾಗುವುದರ ಜೊತೆಗೆ ಯಾರು ಬೇಕಾದರೂ ಖಾಸಗಿ ವಾಟ್ಸಾಪ್ ಚಾಟ್‌ಗೆ ಸೇರಬಹುದು. ರಾಜರಿಯಾ ಟ್ವೀಟ್ ಮೂಲಕ ಮಾಹಿತಿಯನ್ನು ಹಂಚಿಕೊಂಡಿದ್ದಾರೆ. ಅವರನ್ನು ಸಂಪರ್ಕಿಸಿದಾಗ ಜನವರಿ 15 ರಂದು ಅವರು ಈ ವಿಚಾರದ ಕುರಿತು ನಾನು ಧ್ವನಿ ಎತ್ತಿದ್ದೇನೆ ಎಂದು ವಿವರಿಸಿದರು. ಮೂರನೇ ಬಾರಿಗೆ ಇಂತಹ ಒಂದು ಘಟನೆ ಸಂಭವಿಸಿದೆ. ಅಲ್ಲಿ ಮೊಬೈಲ್ ಸಂಖ್ಯೆಗಳು ಮತ್ತು ವಾಟ್ಸಾಪ್ ಬಳಕೆದಾರರ ಸಂದೇಶಗಳು ಗೂಗಲ್ ಜತೆಗೆ ತಳಕುಹಾಕಿ ಕೊಂಡಿದೆ. ಈ ಕುರಿತು ಸ್ವಲ್ಪ ಸಮಯದವರೆಗೆ ಮಾಹಿತಿ ಇದ್ದರೂ ವಾಟ್ಸಾಪ್ ಆಗಲಿ ಅಥವಾ ಗೂಗಲ್ ಈ ಸೋರಿಕೆ ಬಗ್ಗೆ ನಿಗಾ ವಹಿಸುತ್ತಿಲ್ಲ ಎಂಬುದು ಬೇಸರದ ಸಂಗತಿ ಎಂದು ರಾಜಾರಿಯಾ ಹೇಳುತ್ತಾರೆ.
ವಿಶ್ವ ಆರ್ಥಿಕ ವೇದಿಕೆ (ಡಬ್ಲ್ಯುಇಎಫ್) ತನ್ನ ಜಾಗತಿಕ ಅಪಾಯಗಳ ವರದಿ -2019 ರಲ್ಲಿ, ಆಧಾರ್‌ನ ಡಿಜಿಟಲೀಕರಣದ ಸಮಯದಲ್ಲಿ ಭಾರತದ ಅತಿದೊಡ್ಡ ದತ್ತಾಂಶ ಉಲ್ಲಂಘನೆ ಘಟಿಸಿದೆ ಎಂದು ಹೇಳಿದೆ.
ಡೇಟಾ ಸಂರಕ್ಷಣಾ ಕಾನೂನುಗಳು:
ಯುನಿಕಾಡ್ (ವಿಶ್ವ ಸಂಸ್ಥೆಯ ವ್ಯಾಪಾರ ಮತ್ತು ಅಭಿವೃದ್ದಿ ಕುರಿತ ಸಮ್ಮೇಳನ ) ಪ್ರಕಾರ, 195 ದೇಶಗಳಲ್ಲಿ ಸುಮಾರು 128 ದೇಶಗಳು ಈಗಾಗಲೇ ಡೇಟಾ ಮತ್ತು ಗೌಪ್ಯತೆಯ ರಕ್ಷಣೆಯನ್ನು ಪಡೆಯಲು ಶಾಸನವನ್ನು ಜಾರಿಗೆ ತಂದಿವೆ.
ಇಲ್ಲಿಯವರೆಗೆ ಜನರಲ್ ಡಾಟಾ ಪ್ರೊಟೆಕ್ಷನ್ ರೆಗ್ಯುಲೇಷನ್ (ಜಿಡಿಪಿಆರ್) ವಿಶ್ವದ ಕಠಿಣ ಗೌಪ್ಯತೆ ಮತ್ತು ಭದ್ರತಾ ಕಾನೂನು ಎಂದು ಪರಿಗಣಿಸಬಹುದು ಎಂದು ಸುಪ್ರೀಂ ಕೋರ್ಟ್ ವಕೀಲ ಮತ್ತು ಸೈಬರ್ ಸಾಥಿ ಸಂಸ್ಥಾಪಕ ಎನ್ ಎಸ್ ನಪ್ಪಿನಾಯ್ ಹೇಳುತ್ತಾರೆ.
ಇದನ್ನು ಯುರೋಪಿಯನ್ ಯೂನಿಯನ್ (ಇಯು) ಕರಡು ರಚಿಸಿ ಅಂಗೀಕರಿಸಿದರೂ, ಅದು ಇಯುನಲ್ಲಿರುವ ಜನರಿಗೆ ಸಂಬಂಧಿಸಿದ ಡೇಟಾವನ್ನು ಗುರಿಯಾಗಿಸಿ ಅಥವಾ ಸಂಗ್ರಹಿಸುವವರೆಗೆ ಅದು ನಾನಾ ಪ್ರದೇಶಗಳಲ್ಲಿರುವ ಸಂಸ್ಥೆಗಳ ಮೇಲೆ ಕಟ್ಟುಪಾಡುಗಳನ್ನು ವಿಧಿಸುತ್ತದೆ. ಈ ನಿಯಂತ್ರಣವನ್ನು ಮೇ. 25, 2018 ರಿಂದ ಜಾರಿಗೆ ತರಲಾಯಿತು. ಜಿಡಿಪಿಆರ್ ತನ್ನ ಗೌಪ್ಯತೆ ಮತ್ತು ಭದ್ರತಾ ಮಾನದಂಡಗಳನ್ನು ಉಲ್ಲಂಘಿಸುವವರ ವಿರುದ್ಧ ಕಠಿಣ ದಂಡವನ್ನು ವಿಧಿಸುತ್ತದೆ. ದಂಡಗಳು ಹತ್ತು ಲಕ್ಷ ಯುರೋಗಳಿಗೆ ತಲುಪುತ್ತವೆ ಎಂದು ಜಿಡಿಪಿಆರ್ ಬ್ಲಾಗ್ ನಲ್ಲಿ ಉಲ್ಲೇಖಿಸಲಾಗಿದೆ.
ಭಾರತದಲ್ಲಿ ಡೇಟಾ ಸಂರಕ್ಷಣಾ ಕಾನೂನು:
ಭಾರತದಲ್ಲಿ ವೈಯಕ್ತಿಕ ಡೇಟಾ ಮತ್ತು ಮೌಖಿಕ, ಲಿಖಿತ ಅಥವಾ ಎಲೆಕ್ಟ್ರಾನಿಕ್ ರೂಪದಲ್ಲಿ ಹಂಚಿಕೊಂಡ ಅಥವಾ ಸ್ವೀಕರಿಸಿದ ಮಾಹಿತಿಯನ್ನು ರಕ್ಷಿಸಲು ಅಂತಹ ಯಾವುದೇ ಸ್ವತಂತ್ರ ಡೇಟಾ ಸಂರಕ್ಷಣಾ ಕಾನೂನು ಇಲ್ಲ. ಚರ್ಚಿತ ವಯಕ್ತಿಕ ದತ್ತಾಂಶ ಸಂರಕ್ಷಣೆ (ಪಿಡಿಪಿ) ಮಸೂದೆ 2019, ಡೇಟಾ ಗೌಪ್ಯತೆ ಮತ್ತು ಸುರಕ್ಷತೆ ಕುರಿತು ನಿರ್ಣಾಯಕವಾದ ಹಾಗು ಕೆಲವು ಗಮನಾರ್ಹ ಕ್ರಮಗಳನ್ನು ಹೊಂದಿದೆ. ಜಂಟಿ ಸಂಸದೀಯ ಸಮಿತಿಯು ಮಸೂದೆಯನ್ನು ಪರಿಶೀಲಿಸಿದ್ದು, ಸಾಕಷ್ಟು ಬದಲಾವಣೆಗಳನ್ನು ಮಾಡಲಾಗಿದೆ. ಇಂದಿನಿಂದ ಪ್ರಾರಂಭವಾಗಲಿರುವ ಸಂಸತ್ತಿನ ಬಜೆಟ್ ಅಧಿವೇಶನದಲ್ಲಿ ಜಂಟಿ ಸದನ ಸಮಿತಿ ನೀಡಿರುವ ಶಿಫಾರಸುಗಳು ಮಂಡನೆ ಆಗುವ ನಿರೀಕ್ಷೆಯಿದೆ.
ಅಸ್ತಿತ್ವದಲ್ಲಿರುವ ಮಾಹಿತಿ ಮತ್ತು ತಂತ್ರಜ್ಞಾನ ಕಾಯ್ದೆ (2000) ಅಡಿಯಲ್ಲಿ ಬಹಳ ಬಲವಾದ ಮತ್ತು ಅಗ್ಗದ ಪರಿಹಾರಗಳಿವೆ. ಆದ್ದರಿಂದ ಎಲ್ಲಾ ಬಳಕೆದಾರರು ಅಂತಹ ದತ್ತಾಂಶ ಉಲ್ಲಂಘನೆಗೆ ಬಲಿಯಾದ ತಕ್ಷಣ ಕಾನೂನಿನ ಸಹಾಯ ಪಡೆಯಬಹುದಾಗಿದೆ. ಮಾಡಲು ಪ್ರಾರಂಭಿಸಬೇಕು ಎಂದು ನಪ್ಪಿನಾಯ್ ಅಭಿಪ್ರಾಯಪಟ್ಟಿದ್ದಾರೆ.
ಕಾನೂನು ಕ್ರಮಗಳನ್ನು ತೆಗೆದುಕೊಳ್ಳಬಹುದು:
ಮಾಹಿತಿ ಮತ್ತು ತಂತ್ರಜ್ಞಾನ ಕಾಯ್ದೆ (2000) ಅಡಿಯಲ್ಲಿ ಭಾರತದಲ್ಲಿ ಸಾಕಷ್ಟು ನಿಬಂಧನೆಗಳಿವೆ. ಇದು ದತ್ತಾಂಶ ಉಲ್ಲಂಘನೆಗೆ ಕಾರಣವಾಗುವ ನಿರ್ಲಕ್ಷ್ಯದಿಂದ ಸಂರಕ್ಷಣೆ ನೀಡುತ್ತದೆ. ಸೆಕ್ಷನ್ 43 ಎ ಅಡಿಯಲ್ಲಿ ಸಿವಿಲ್ ಪರಿಹಾರಕ್ಕಾಗಿ ಅಥವಾ ಸೆಕ್ಷನ್ ಸೆಕ್ಷನ್ 72 ಇ ಅಡಿಯಲ್ಲಿ ಕ್ರಿಮಿನಲ್ ಪ್ರಾಸಿಕ್ಯೂಷನ್ಗೆ ಬಳಕೆದಾರರು ವ್ಯಾಜ್ಯ ದಾಖಲಿಸಬಹುದು. ಈ ಕಾನೂನುಗಳು ಪರಿಹಾರ ಮತ್ತು ಅಪರಾಧಕ್ಕೆ ಶಿಕ್ಷೆಯ ಹಕ್ಕನ್ನು ಖಚಿತಪಡಿಸಿಕೊಳ್ಳಬಹುದು. ಡೇಟಾದ ಕಾನೂನುಬದ್ಧ ಹಕ್ಕು ಪ್ರತಿಪಾದನೆ ಸಂಬಂಧಿಸಿದಂತೆ ಅಂದರೆ ಡೇಟಾ ಕ್ಲಿಯರಿಂಗ್, ಡೇಟಾ ವೈಪಿಂಗ್ ಅಥವಾ ಡೇಟಾ ವಿನಾಶಕ್ಕೆ ಸಂಬಂಧಿಸಿದಂತೆ, ಅಸ್ತಿತ್ವದಲ್ಲಿರುವ ಕಾನೂನಿನಲ್ಲಿ ಅಂತಹ ಯಾವುದೇ ಬಾಧ್ಯತೆಯಿಲ್ಲ. ಆದಾಗ್ಯೂ, ಅವುಗಳನ್ನು ವೈಯಕ್ತಿಕ ಡೇಟಾ ಸಂರಕ್ಷಣಾ ಮಸೂದೆಯಲ್ಲಿ ಪ್ರಸ್ತಾಪಿಸಲಾಗಿದೆ.
ಭಾರತವು ಬಲವಾದ ಬಳಕೆದಾರ-ಆಧಾರಿತ ದತ್ತಾಂಶ ಸಂರಕ್ಷಣಾ ಕಾಯ್ದೆಯನ್ನು ಪಡೆಯದಿದ್ದರೆ, ಆಲೋಚಿಸಬೇಕಾದ ಕೆಲವು ಅಂಶಗಳು:
ಐಪಿ ವಿಳಾಸ, ಸ್ಥಳ, ಹಣಕಾಸಿನ ವಿವರಗಳಂತಹ ವೈಯಕ್ತಿಕ ಮಾಹಿತಿಯನ್ನು ತೀವ್ರ ಎಚ್ಚರಿಕೆಯಿಂದ ಹಂಚಿಕೊಳ್ಳಬೇಕು. ಯಾವುದೇ ಸೇವೆ ಪಡೆಯಬೇಕಾದರೆ ಎಂದಿಗೂ ಅವಸರದಲ್ಲಿ ಸೈನ್ ಅಪ್ ಮಾಡಬೇಡಿ. ಅನೇಕ ಆನ್‌ಲೈನ್ ಸೈಟ್‌ಗಳು ಮತ್ತು ಅಪ್ಲಿಕೇಶನ್‌ಗಳು ನಿಯಮಗಳು ಮತ್ತು ನೀತಿಗಳನ್ನು ಮನಸ್ಸಿಲ್ಲದೆ ಓದುವುದರ ಅನಗತ್ಯ ಲಾಭವನ್ನು ಪಡೆದುಕೊಳ್ಳುತ್ತವೆ.
ಯಾವುದೇ ಅಪ್ಲಿಕೇಶನ್ ಅನ್ನು ಅನುಷ್ಠಾನ ಮಾಡುವಾಗ , ಅಪ್ಲಿಕೇಶನ್‌ಗೆ ನೀಡಲಾದ ಅನುಮತಿಗಳ ಬಗ್ಗೆ ಪ್ರತಿಯೊಬ್ಬರು ಜಾಗರೂಕರಾಗಿರಬೇಕು.
OTP (ಒಂದು-ಬಾರಿ-ಪಾಸ್‌ವರ್ಡ್) ಅನ್ನು ಸ್ವಯಂಚಾಲಿತವಾಗಿ ಓದಲು ನಾವು ಅಪ್ಲಿಕೇಶನ್‌ಗಳಿಗೆ ಅನುಮತಿ ನೀಡುತ್ತೇವೆ ಮತ್ತು ನಂತರ ಅನುಮತಿಯನ್ನು ರದ್ದುಗೊಳಿಸಲು ಮರೆಯುತ್ತೇವೆ. ಈ ಬಗ್ಗೆ ಪ್ರತಿಯೊಬ್ಬರು ಎಚ್ಚರಿಕೆ ವಹಿಸಬೇಕು.
ಒಬ್ಬರು ನಿಯಮಿತವಾಗಿ ಫೋನ್‌ನ ಸೆಟ್ಟಿಂಗ್‌ಗಳನ್ನು ಪರಿಶೀಲಿಸಬೇಕು. ಮತ್ತು ಬಳಕೆ ಮಾಡದ ಹಾಗೂ ಉಪಯೋಗಕ್ಕೆ ಬಾರದ ಅಪ್ಲಿಕೇಶನ್‌ಗಳನ್ನು ತೆಗೆದುಹಾಕಬೇಕು. ಅನುಮತಿ ಸೆಟ್ಟಿಂಗ್‌ಗಳನ್ನು ಸಂಪರ್ಕ ಮತ್ತು ಸಂಗ್ರಹಣೆಗೆ ಮಾತ್ರ ಬದಲಾಯಿಸಬೇಕು. ಕ್ಯಾಮೆರಾ ಮತ್ತು ಮೈಕ್ರೊಫೋನ್ ಅನುಮತಿಯನ್ನು ಹೊಂದಿರುವ ಅಂತಹ ಅಪ್ಲಿಕೇಶನ್‌ಗಳಿಗೆ ಈ ಕ್ರಮ ಬಹಳ ಮುಖ್ಯವಾಗಿದೆ.
ಜನಪ್ರಿಯ ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ಮತ್ತು ಫೇಸ್‌ಬುಕ್, ಟ್ವಿಟರ್, ಇನ್‌ಸ್ಟಾಗ್ರಾಮ್ ಮತ್ತು ವಾಟ್ಸಾಪ್‌ನಂತಹ ಮೆಸೆಂಜರ್ ಅಪ್ಲಿಕೇಶನ್‌ಗಳ ಮೂಲಕ ಹಣಕಾಸಿನ ಲಾಗಿನ್ ವಿವರಗಳು, ಪಾಸ್‌ವರ್ಡ್‌ಗಳು ಮತ್ತು ಸೂಕ್ಷ್ಮ ಮಾಹಿತಿಯನ್ನು ಹಂಚಿಕೊಳ್ಳುವುದನ್ನು ತಡೆಯಬೇಕು.