ನವದೆಹಲಿ: ದಕ್ಷಿಣ ಭಾರತದ ಕೆಲವೆಡೆ ದಾಳಿ ನಡೆಸಲು ಉಗ್ರರು ಸ್ಕೆಚ್ ಹಾಕಿದ್ದಾರೆ. ಈ ಸಂಬಂಧ ಸೇನೆ ಸಂಭಾವ್ಯ ದಾಳಿ ತಡೆಗಟ್ಟಲು ಸರ್ವ ಸನ್ನದ್ಧವಾಗಿದೆ. ಸರ್ ಕ್ರಿಕ್ ಅಂತಾರಾಷ್ಟ್ರೀಯ ಗಡಿಯಲ್ಲಿ ಕೆಲವು ಬೋಟ್ಗಳನ್ನ ವಶಪಡಿಸಿಕೊಳ್ಳಲಾಗಿದೆ ಎಂದು ಲೆಫ್ಟಿನೆಂಟ್ ಜನರಲ್ ಎಸ್ ಕೆ ಸೈನಿ ಹೇಳಿದ್ದಾರೆ.
ಭಯೋತ್ಪಾದಕ ಕೃತ್ಯಗಳಿಗೆ ಯಾವೆಲ್ಲ ಯೋಜನೆಗಳನ್ನ ಉಗ್ರರು ಹಾಕಿಕೊಂಡಿದ್ದಾರೆ ಎನ್ನುವುದನ್ನ ಪತ್ತೆ ಹಚ್ಚಬೇಕಿದ್ದು, ಈ ಸಂಬಂಧ ತೀವ್ರ ಮುನ್ನೆಚ್ಚರಿಕೆ ಕೈಗೊಂಡಿದ್ದೇವೆ ಎಂದು ದಕ್ಷಿಣ ವಿಭಾಗದ ಮುಖ್ಯಸ್ಥರು ಹೇಳಿದ್ದಾರೆ.
ಕಳೆದ ಕೆಲ ದಿನಗಳ ಹಿಂದೆ ಉಗ್ರರು ಸಮುದ್ರದ ಮೂಲಕ ಭಾರತದೊಳಗೆ ನುಗ್ಗಿ, ದಾಳಿ ನಡೆಸುವ ಸಾಧ್ಯತೆ ಹೆಚ್ಚಾಗಿದೆ ಎಂದು ಗುಪ್ತಚರ ಇಲಾಖೆ ಮಾಹಿತಿ ಸಹ ನೀಡಿತ್ತು. ಅದಕ್ಕೆ ಪೂರಕವಾದ ರೀತಿಯಲ್ಲಿ ಇದೀಗ ಲೆಫ್ಟಿನೆಂಟ್ ಜನರಲ್ ಎಸ್ ಕೆ ಸೈನಿ ಮಾಹಿತಿ ನೀಡಿದ್ದಾರೆ.