ETV Bharat / bharat

ಹುಲಿ ಸಂರಕ್ಷಣೆ ಕುರಿತು ಜಾಗೃತಿ: ಬೈಕ್​ನಲ್ಲೇ  4 ಸಾವಿರ ಕಿ.ಮೀ. ಪ್ರಯಾಣಿಸಿದ ಜೋಡಿ - tiger protection

ಹುಲಿ ಸಂರಕ್ಷಣೆ ಹಾಗೂ ವನ್ಯಜೀವಿ ರಕ್ಷಣೆ ಕುರಿತು ಜಾಗೃತಿ ಮೂಡಿಸುವ ಸಲುವಾಗಿ ಪಶ್ಚಿಮ ಬಂಗಾಳದ ರತೀಂದ್ರದಾಸ್​ ಮತ್ತು ಗೀತಾಂಜಲಿ ಎಂಬ ದಂಪತಿ ಕೋಲ್ಕತ್ತಾದಿಂದ ಬೈಕ್​ನಲ್ಲೇ ಹೊರಟು ಇದೀಗ ಮಹಾರಾಷ್ಟ್ರ ತಲುಪಿದ್ದಾರೆ. ಸುಮಾರು 4,000 ಕಿ.ಮೀ. ದೂರ ಪ್ರಯಾಣ ಪೂರೈಸಿದ್ದಾರೆ.

WB couple on a 40k-km motorcycle tour for tiger protection reaches Maha, ಹುಲಿ ಸಂರಕ್ಷಣೆ ಜಾಗೃತಿ ; ಬೈಕ್​ನಲ್ಲೇ  4 ಸಾವಿರ ಕಿ.ಮೀ ಸಂಚಾರ ಪೂರೈಸಿದೆ ಈ ಜೋಡಿ
author img

By

Published : Jul 28, 2019, 9:51 PM IST

ನಾಗ್ಪುರ: ಹುಲಿ ಸಂರಕ್ಷಣೆ ಹಾಗೂ ವನ್ಯಜೀವಿ ರಕ್ಷಣೆ ಕುರಿತು ಜಾಗೃತಿ ಮೂಡಿಸುವ ಸಲುವಾಗಿ ಕೋಲ್ಕತ್ತಾದಿಂದ ಹೊರಟ ಪಶ್ಚಿಮ ಬಂಗಾಳದ ಜೋಡಿಯೊಂದು ಇದೀಗ ಮಹಾರಾಷ್ಟ್ರ ತಲುಪಿದ್ದು, 4,000 ಕಿ.ಮೀ. ದೂರ ಪ್ರಯಾಣ ಪೂರೈಸಿದ್ದಾರೆ.

ರತೀಂದ್ರದಾಸ್​ ಮತ್ತು ಗೀತಾಂಜಲಿ ಎಂಬ ದಂಪತಿ ಈ ಬಗ್ಗೆ ಮಾತನಾಡಿ, ಫೆಬ್ರವರಿ 15ಕ್ಕೆ ಈ ಸಂಚಾರ ಆರಂಭವಾಗಿದ್ದು, ಉತ್ತಮವಾಗಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ. ಆದರೆ, ಮಧ್ಯಪ್ರದೇಶದಲ್ಲಿನ ಹೊಶಂಗಾಬಾದ್​ನ ಸತ್ಪುರ ಹುಲಿಗಳಿರುವ ಪ್ರದೆಶಕ್ಕೆ ತೆರಳುವಾಗ ದಣಿದು ಒಂದು ಮರದಡಿ ಕುಳಿತೆವು. ಶಾಲಾ ವಿದ್ಯಾರ್ಥಿಯೋರ್ವ ಹಳ್ಳಿಗರ ಬಳಿ ನಮ್ಮ ಬಗ್ಗೆ ತಿಳಿಸಿದ್ದು, ಅವರು ನಮ್ಮನ್ನು ಮಕ್ಕಳ ಕಳ್ಳರೆಂದು ತಪ್ಪಾಗಿ ಗ್ರಹಿಸಿ ಬೆದರಿಕೆ ಹಾಕಿದರು. ಆದರೆ ಆ ಸನ್ನಿವೇಶವನ್ನು ನಿಭಾಯಿಸಿ ನಮ್ಮ ಬಗ್ಗೆ ಹೇಳಿಕೊಂಡು ಹೊರಗೆ ಬಂದೆವು ಎಂದರು.

ಹುಲಿ ಸಂರಕ್ಷಣೆ ಮತ್ತು ವನ್ಯಜೀವಿ ರಕ್ಷಣೆ ಬಗ್ಗೆ ಜಾಗೃತಿ ಮೂಡಿಸುವುದು ಈ ಸಂಚಾರದ ಉದ್ದೇಶವಾಗಿದೆ. ನಾವು ದೇಶದಾದ್ಯಂತ ಅರಣ್ಯ ಮೀಸಲು ಪ್ರದೇಶಗಳಿಗೆ ಪ್ರವಾಸ ಮಾಡುತ್ತಿದ್ದೇವೆ. ಅರಣ್ಯವಾಸಿಗಳು ಸೇರಿದಂತೆ ಅರಣ್ಯ ರಕ್ಷಕರೊಂದಿಗೆ ಮಾತನಾಡಿದ್ದೇವೆ. ಮಹಾರಾಷ್ಟ್ರದ ನಂತರ ನಾವು ಗೋವಾಕ್ಕೆ ಮತ್ತು ನಂತರ ದಕ್ಷಿಣ ರಾಜ್ಯಗಳಿಗೆ ಮುಂದುವರೆಯಲು ಯೋಜನೆ ಹಾಕಿಕೊಂಡಿದ್ದೇವೆಂದು ಸುದ್ದಿ ಸಂಸ್ಥೆಯೊಂದಕ್ಕೆ ತಿಳಿಸಿದ್ಧಾರೆ. ನಮ್ಮ ಈ ಪ್ರಯತ್ನಕ್ಕೆ ಫೇಸ್‌ಬುಕ್ ಸ್ನೇಹಿತರು 80 ಪ್ರತಿಶತದಷ್ಟು ಹಣಕಾಸು ಒದಗಿಸುತ್ತಿದ್ದಾರೆ. ಜೊತೆಗೆ ಸಾರ್ವಜನಿಕರು ಬೆಂಬಲಿಸುತ್ತಿದ್ದಾರೆ ಎಂದು ಹೇಳಿದರು.

Intro:Body:

Pavitra

Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.