ಮುಂಬೈ: ದೇಶಾದ್ಯಂತ ಲಾಕ್ಡೌನ್ ಹೇರಿಕೆ ಮಾಡಲಾಗಿದ್ದು, ಎಲ್ಲರೂ ಪಾಲನೆ ಮಾಡುವುದು ಕಡ್ಡಾಯವಾಗಿದೆ. ಇದರ ಮಧ್ಯೆ ಬಾಲಿವುಡ್ ನಟಿ ಪೂನಂ ಪಾಂಡೆ ಅದರ ಉಲ್ಲಂಘನೆ ಮಾಡಿದ್ದರಿಂದ ಅರೆಸ್ಟ್ ಮಾಡಲಾಗಿತ್ತು ಎಂಬ ಸುದ್ದಿ ಹರಡಿತ್ತು. ಅದಕ್ಕೆ ಖುದ್ದಾಗಿ ನಟಿ ಸ್ಪಷ್ಟನೆ ನೀಡಿದ್ದಾರೆ.
ನನ್ನನ್ನು ಮುಂಬೈ ಪೊಲೀಸರು ಅರೆಸ್ಟ್ ಮಾಡಿದ್ದಾರೆ ಎಂಬ ಸುದ್ದಿ ಹರಿದಾಡ್ತಿದ್ದು, ಮೇಲಿಂದ ಮೇಲೆ ಫೋನ್ ಕಾಲ್‌ಗಳು ಬರ್ತಿವೆ. ಆದರೆ, ನಾನು ಮನೆಯಲ್ಲಿದ್ದುಕೊಂಡು ಸರಣಿ ಮೂವಿ ನೋಡ್ತಿದ್ದು, ಈಗಾಗಲೇ ಮೂರು ಸಿನಿಮಾ ನೋಡಿದ್ದೇನೆ. ಮನೆಯಲ್ಲಿ ಸುರಕ್ಷಿತವಾಗಿದ್ದೇನೆ ಎಂದು ಹೇಳಿಕೊಂಡಿದ್ದಾರೆ. ಹೀಗೆ ಹೇಳುವ ಮೂಲಕ ಅವರು ತಾವು ಪೊಲೀಸರಿಂದ ಬಂಧನಕ್ಕೆ ಒಳಗಾಗಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಲಾಕ್ಡೌನ್ ನಿಯಮ ಉಲ್ಲಂಘನೆ: ಬಾಲಿವುಡ್ ನಟಿ ಪೂನಂ ವಿರುದ್ಧ ದಾಖಲಾಯ್ತು ಕೇಸು
ಮುಂಬೈನ ಮರೀನ್ ಡ್ರೈವ್ ಪ್ರದೇಶದಲ್ಲಿ ತನ್ನ ಸ್ನೇಹಿತರೊಂದಿಗೆ ಲಾಕ್ಡೌನ್ ಉಲ್ಲಂಘನೆ ಮಾಡಿ ಸುತ್ತಾಡುತ್ತಿದ್ದ ವೇಳೆ ಮಂಬೈ ಪೊಲೀಸರು ಎಫ್ಐಆರ್ ದಾಖಲು ಮಾಡಿ ವಶಕ್ಕೆ ಪಡೆದುಕೊಂಡಿದ್ದರು ಎನ್ನಲಾಗಿತ್ತು. ಜತೆಗೆ ಇವರ ವಿರುದ್ಧ ಐಪಿಸಿ ಸೆಕ್ಷನ್ 269 ಮತ್ತು 188 ಮತ್ತು ರಾಷ್ಟ್ರೀಯ ವಿಪತ್ತು ಕಾಯ್ದೆಯ ನಿಬಂಧನೆಗಳಡಿ ಪ್ರಕರಣ ದಾಖಲಿಸಲಾಗಿದೆ ಎಂದು ಹಿರಿಯ ಪೊಲೀಸರು ತಿಳಿಸಿದ್ದಾಗಿ ವರದಿ ಪ್ರಕಟಗೊಂಡಿದ್ದವು. ಇದೀಗ ಈ ಸಂಬಂಧ ತಮ್ಮ ಬಂಧನ ಆಗಿಲ್ಲ ಎಂದು ವಿಡಿಯೊ ಮೂಲಕ ಸ್ಪಷ್ಟನೆ ಕೊಟ್ಟಿದ್ದಾರೆ.