ETV Bharat / bharat

ಪ್ಲಾಸ್ಟಿಕ್​ ಬಳಕೆ ಬೇಡ: ಎಲೆಗಳಿಂದ ಪ್ಲೇಟ್​ ತಯಾರಿಸಿ ಜನಮನ ಗೆದ್ದ ಮಹಿಳಾ ಸ್ವಸಹಾಯ ಗುಂಪು - ಗಮನ ಸೆಳೆದ ಸ್ವಸಹಾಯ ಗುಂಪು

ದೇಶಾದ್ಯಂತ ಸಿಂಗಲ್​​​ ಯೂಸ್​ ಪ್ಲಾಸ್ಟಿಕ್​ ನಿಷೇಧಿಸಲಾಗುತ್ತಿದೆ. ಒಡಿಶಾದ ಮಹಿಳಾ ಸ್ವಸಹಾಯ ಗುಂಪೊಂದು ಎಲೆಗಳಿಂದ ಪ್ಲೇಟ್​ ತಯಾರಿಸಿ ಪರಿಸರ ಸಂರಕ್ಷಣೆಯ ಸೇವೆ ಮಾಡುತ್ತಿದೆ.

Plastic ban a boon to rural women
ಸಿಂಗಲ್​​ ಯೂಸ್​ ಪ್ಲಾಸ್ಟಿಕ್​ಗೆ ವಿದಾಯ
author img

By

Published : Dec 11, 2019, 4:01 PM IST

Updated : Dec 11, 2019, 4:20 PM IST

ಸಂಬಲ್​​​ಪುರ್​(ಒಡಿಶಾ)​: ಅಕ್ಟೋಬರ್‌ 2ರಿಂದ ದೇಶಾದ್ಯಂತ ಏಕ ಬಳಕೆ (ಸಿಂಗಲ್‌ ಯೂಸ್​)​​ ಪ್ಲಾಸ್ಟಿಕ್​​ ಬಳಕೆ ರದ್ದಾಗಿರುವ ಹಿನ್ನೆಲೆಯಲ್ಲಿ ದೇಶಾದ್ಯಂತ ಜಾಗೃತಿ ಕಾರ್ಯಕ್ರಮಗಳು, ಅಭಿಯಾನಗಳು ನಡೆಯುತ್ತಿವೆ. ಒಡಿಶಾದ ಸಂಬಲ್‌ಪುರ್​​ದಲ್ಲಿ ಮಹಿಳಾ ಸ್ವಸಹಾಯ ಗುಂಪು ಪ್ಲಾಸ್ಟಿಕ್​ ವಸ್ತು ಬಳಸಿ ತಯಾರು ಮಾಡುತ್ತಿದ್ದ ಪ್ಲೇಟ್​​ಗಳನ್ನು ಇದೀಗ ಎಲೆಗಳ ಮೂಲಕ ತಯಾರಿಸುತ್ತಿದೆ. ಇಕೋ ಫ್ರೆಂಡ್ಲಿ ಉತ್ಪನ್ನ ತಯಾರಿಸುತ್ತಾ ಪರಿಸರ ಸಂರಕ್ಷಣೆ ಕೈಂಕರ್ಯ ಮಾಡಿ ಜನಮನ ಸೆಳೆಯುತ್ತಿದೆ.

ಸಿಂಗಲ್​​ ಯೂಸ್​ ಪ್ಲಾಸ್ಟಿಕ್​ಗೆ ವಿದಾಯ

ಸಂಬಲ್‌ಪುರದ ಸ್ವಸಹಾಯ ಮಹಿಳಾ ಗುಂಪು ಜಿಲ್ಲಾಡಳಿತದ ಸಹಾಯದಿಂದ ರೆಂಗಲಿ ಅರಣ್ಯ ಪ್ರದೇಶದ ವ್ಯಾಪ್ತಿಯಲ್ಲಿ ಸಾಲ್​ ಎಲೆಗಳಿಂದ ಪ್ಲೇಟ್​ ತಯಾರಿಸುತ್ತಿದ್ದು, ಅವುಗಳನ್ನು ಸಾರ್ವಜನಿಕರ ಬಳಕೆಗೆ ನೀಡುತ್ತಿದೆ. ಪ್ಲಾಸ್ಟಿಕ್​ ಬಳಕೆ ವಿರುದ್ಧ ಜಾಗೃತಿ ಮೂಡಿಸಲು ಮಹಿಳಾ ಸಂಘಟನೆ ತನ್ನದೇ ಆದ ಕೊಡುಗೆ ನೀಡುತ್ತಿದೆ.

ಬಿಸಿಲಿನಲ್ಲಿ ಹಸಿರೆಲೆ ಒಣಗಿಸಿ, ಹೊಲಿಗೆ ಯಂತ್ರಗಳಿಂದ ಅವುಗಳನ್ನು ಬಟ್ಟಲುಗಳ ರೀತಿಯಲ್ಲಿ ಹೆಣೆಯಲಾಗುತ್ತದೆ. ಈ ರೀತಿ ಪ್ರತಿದಿನ ಮಹಿಳೆಯರು 100 ಪ್ಲೇಟ್​​ ತಯಾರಿಸುತ್ತಿದ್ದು, ಯಂತ್ರಗಳ ಸಹಾಯದಿಂದ ಹೆಚ್ಚು ಬಟ್ಟಲು ತಯಾರು ಮಾಡುತ್ತಿದ್ದಾರೆ. ಹೀಗೆ ತಯಾರಾಗುತ್ತಿರುವ ಪ್ರತಿ ಪ್ಲೇಟ್‌ಗೆ ರೂ 3.50 ನಿಗದಿಪಡಿಸಿ ಮಾರಾಟ ಮಾಡುತ್ತಿದ್ದಾರೆ. ಪ್ಲಾಸ್ಟಿಕ್‌ಮುಕ್ತ ಪರಿಸರದ ಅಭಿಯಾನಕ್ಕಾಗಿ ಈ ಮಹಿಳಾ ಸ್ವಸಹಾಯ ಗುಂಪು ಮಹತ್ವದ ಕೊಡುಗೆ ನೀಡಿ ಮಾದರಿಯಾಗಿದೆ.

Intro:Body:

SUBSTITUTE OF PLASTIC PLATE VISUALS

Conclusion:
Last Updated : Dec 11, 2019, 4:20 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.