ತಮಿಳುನಾಡು/ಅಂಬಾಲಂ: ತೆರೆದ ಬಾವಿಗೆ ಕಸ ವಿಲೇವಾರಿ ವಾಹನ ಬಿದ್ದು ಬಾಲಕನೋರ್ವ ಮೃತಪಟ್ಟಿರುವ ಘಟನೆ ತಮಿಳುನಾಡಿನ ಕಲ್ಲಕುರಿಚಿ ಬಳಿಯ ಅಂಬಾಲಂ ಗ್ರಾಮದಲ್ಲಿ ನಡೆದಿದೆ.
ಗ್ರಾಮ ಪಂಚಾಯತ್ ಕಸ ವಿಲೇವಾರಿ ವಾಹನದ ಚಾಲಕಿಯಾಗಿ ಕಾರ್ಯನಿರ್ವಹಿಸುತ್ತಿದ್ದ ಶಾರದಾ ಎಂಬುವರು ಕಸವನ್ನು ವಿಲೇವಾರಿ ಮಾಡಿ ತನ್ನ 8 ವರ್ಷದ ಮಗನನ್ನು ವಾಹನದಲ್ಲಿ ಕೂರಿಸಿಕೊಂಡು ಹಿಂದಿರುಗುವ ವೇಳೆ ನಿಯಂತ್ರಣ ತಪ್ಪಿ ವಾಹನ ಬಾವಿಗೆ ಉರುಳಿದೆ. ಸತತ 5 ಗಂಟೆಗಳ ಕಾರ್ಯಾಚರಣೆ ಬಳಿಕ ಶಾರದಾ ಅವರನ್ನು ರಕ್ಷಣೆ ಮಾಡಲಾಗಿದೆ. ಆದರೆ ಅವರ ಮಗ ಮೃತಪಟ್ಟಿದ್ದಾನೆ.