ETV Bharat / bharat

ಕಾಶ್ಮೀರದಲ್ಲಿ ‘ಕಾಂಗ್ರಿ’ಕಾಲ.. ನೋಡು ಈ ಅಂದವ..

ಕಾಂಗ್ರಿ ಚಳಿಗಾಲದಲ್ಲಿ ಕಾಶ್ಮೀರಿಗಳಿಗೆ ಮೊಬೈಲ್ ಹೀಟರ್​​​ನಂತೆ ಕಾರ್ಯನಿರ್ವಹಿಸುತ್ತದೆ. ಚಳಿಗಾಲದಲ್ಲಿ ವಿದ್ಯುತ್ ಕಡಿತವಾದಾಗ ಶಾಖೋತ್ಪಾದಕಗಳು ಮತ್ತು ಇತರ ಉಪಕರಣಗಳು ನಿಷ್ಪ್ರಯೋಜಕವಾಗುತ್ತವೆ. ಈ ವೇಳೆ ಕುಟುಂಬ ಸದಸ್ಯರನ್ನು ಬೆಚ್ಚಗಿಡಲು ಕಾಂಗ್ರಿ ಮನೆಯ ಪ್ರಮುಖ ಭಾಗವಾಗುತ್ತದೆ..

Warmth of Kangri
ಕಾಶ್ಮೀರದಲ್ಲಿ ‘ಕಾಂಗ್ರಿ’ ಕಾಲ
author img

By

Published : Feb 9, 2021, 9:05 AM IST

ಕಾಂಗ್ರಿ (ಕಾಶ್ನೀರ) : ಕಠಿಣ ಚಳಿಗಾಲದಲ್ಲಿ ಕಾಶ್ಮೀರದ ಜನ ಶೂನ್ಯ ತಾಪಮಾನದಲ್ಲಿ ಹವಾಮಾನದ ವ್ಯತ್ಯಯ ಎದುರಿಸುತ್ತಾರೆ. ಈ ವರ್ಷ, ಕಾಶ್ಮೀರದ ಕೆಲವು ಸ್ಥಳಗಳಲ್ಲಿ ತಾಪಮಾನವು ಮೈನಸ್ 15 ಡಿಗ್ರಿಸೆಲ್ಸಿಯಸ್​ಗೆ ಇಳಿದಿತ್ತು. ಇದು ಕಾಂಗ್ರಿ ಮೇಲಿನ ಪ್ರೀತಿ ಹೆಚ್ಚಿಸಿದೆ. ಕಾಶ್ಮೀರಿಗಳು ಕಠಿಣ ಚಳಿಗಾಲದಲ್ಲಿ ತಮ್ಮನ್ನು ಬೆಚ್ಚಗಾಗಲು ಬಳಸುವ ಸಾಂಪ್ರದಾಯಿಕ ಬೆಂಕಿ-ಮಡಿಕೆಯೇ ಕಾಂಗ್ರಿ.

ಮಣ್ಣಿನ ಮಡಕೆಗಳ ಸುತ್ತ ಸೆಣಬಿನ ನೂಲು ನೇಯ್ದು ಕುಶಲಕರ್ಮಿಗಳು ಮಡಕೆ ತಯಾರಿಸುತ್ತಾರೆ. ಇದನ್ನೇ ಕಾಂಗ್ರಿ ಎಂದು ಕರೆಯಲಾಗುತ್ತದೆ. ಕಾಂಗ್ರಿ ಒಂದು ಪೋರ್ಟಬಲ್ ಬೆಂಕಿ-ಮಡಕೆಯಾಗಿದ್ದು, ಕಾಶ್ಮೀರಿಗಳು ಚಳಿಗಾಲದಲ್ಲಿ ಶಾಖ ಪಡೆಯಲು ಬಳಸುತ್ತಾರೆ. ಕಾಂಗ್ರಿಯಲ್ಲಿ 250 ಗ್ರಾಂ ಇದ್ದಿಲು ಹಾಕಿ ಬೆಂಕಿ ಹೊತ್ತಿಸಿದ್ರೆ ಸಾಕು, ಗಂಟೆಗಳವರೆಗೆ ಇದು ಶಾಖ ನೀಡಿ, ಬೆಚ್ಚಗಿರುತ್ತದೆ.

ಕಾಶ್ಮೀರದಲ್ಲಿ ‘ಕಾಂಗ್ರಿ’ ಕಾಲ

ಕಾಂಗ್ರಿ ಕಾಶ್ಮೀರಿ ಸಂಸ್ಕೃತಿಯ ಒಂದು ಭಾಗವಾಗಿದೆ. ಕಣಿವೆಯಲ್ಲಿನ ಚಳಿಗಾಲದಲ್ಲಿ ಶಾಖ ಪಡೆಯಲು ಇದು ಸಹಾಯಕವಾಗಿದೆ. ಕಾಂಗ್ರಿ ತಯಾರಕರು ಮಾರುಕಟ್ಟೆಯಲ್ಲಿ ಮಾರಾಟ ಮಾಡಲು ವಿವಿಧ ಬಣ್ಣಗಳು ಮತ್ತು ವಿನ್ಯಾಸಗಳೊಂದಿಗೆ ವಿಭಿನ್ನ ಬೆಂಕಿ-ಮಡಕೆಗಳನ್ನು ವಿನ್ಯಾಸಗೊಳಿಸುತ್ತಾರೆ. ಈ ವ್ಯವಹಾರವು ಕಾಂಗ್ರಿ ಮಾರಾಟಗಾರರು ಮತ್ತು ತಯಾರಕರಿಗೆ ಮಾತ್ರವಲ್ಲದೇ ಮಡಕೆಯನ್ನು ಬೆಂಕಿಗೆ ಸಿದ್ಧಪಡಿಸುವ ಕುಂಬಾರರಿಗೂ ಪ್ರಯೋಜನವನ್ನು ನೀಡುತ್ತದೆ. ಈ ಮೂಲಕ ಅವರು ತಮ್ಮ ಜೀವನೋಪಾಯವನ್ನು ಸಹ ಗಳಿಸುತ್ತಾರೆ.

ಸರಳವಾದ ಕಾಂಗ್ರಿ ನಿಮಗೆ 200 ರಿಂದ 900 ರೂ.ವರೆಗೆ ವೆಚ್ಚವಾಗಬಹುದು. ಅದು ಅದರ ತಯಾರಿಕೆ ಮತ್ತು ವಿನ್ಯಾಸವನ್ನು ಅವಲಂಬಿಸಿರುತ್ತದೆ. ಕಾಂಗ್ರಿಯು ಚಮಚದಂತಹ ಲಗತ್ತನ್ನು 'ತಲಾನ್' ಎಂದು ಹೊಂದಿದ್ದು, ಅದನ್ನು ಸ್ಟ್ರಿಂಗ್‌ನೊಂದಿಗೆ ಕಟ್ಟಲಾಗುತ್ತದೆ ಮತ್ತು ಅದನ್ನು ಬೆಂಕಿಯ ಪಾತ್ರೆಯಲ್ಲಿರುವ ಎಂಬರ್‌ಗಳನ್ನು ನಿರ್ವಹಿಸಲು ಬಳಸಲಾಗುತ್ತದೆ.

ಕಾಂಗ್ರಿ ಚಳಿಗಾಲದಲ್ಲಿ ಕಾಶ್ಮೀರಿಗಳಿಗೆ ಮೊಬೈಲ್ ಹೀಟರ್​​​ನಂತೆ ಕಾರ್ಯನಿರ್ವಹಿಸುತ್ತದೆ. ಚಳಿಗಾಲದಲ್ಲಿ ವಿದ್ಯುತ್ ಕಡಿತವಾದಾಗ ಶಾಖೋತ್ಪಾದಕಗಳು ಮತ್ತು ಇತರ ಉಪಕರಣಗಳು ನಿಷ್ಪ್ರಯೋಜಕವಾಗುತ್ತವೆ. ಈ ವೇಳೆ ಕುಟುಂಬ ಸದಸ್ಯರನ್ನು ಬೆಚ್ಚಗಿಡಲು ಕಾಂಗ್ರಿ ಮನೆಯ ಪ್ರಮುಖ ಭಾಗವಾಗುತ್ತದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.