ತೆಲಂಗಾಣ : ವಿಆರ್ ಎಲ್ ಕಂಪನಿಯ ಹೆಸರನ್ನು ದುರ್ಬಳಕೆ ಮಾಡಿದ ಪ್ರಕರಣಕ್ಕೆ ಸಂಬಂಧಪಟ್ಟಂತೆ 6 ಜನರನ್ನು ಸೈಬರಾಬಾದ್ ಕಮಿಷನರೇಟ್ ಪೊಲೀಸರು ಬಂಧಿಸಿದ್ದಾರೆ.
ಬಂಧಿತರು ವಿಆರ್ಎಲ್ ಲಾಜಿಸ್ಟಿಕ್ ಲಿಮಿಟೆಡ್ ಕಂಪನಿಯ ಹೆಸರು ಹಾಗೂ ಟ್ರೇಡ್ ಮಾರ್ಕ್ನ್ನು ಕಾನೂನು ಬಾಹಿರವಾಗಿ ಬಳಸಿ ಜನರಿಗೆ ವಂಚಿಸುತ್ತಿದ್ದರು ಎನ್ನಲಾಗಿದೆ.
ವಿಆರ್ಎಲ್ ಕಂಪನಿಯ ಟ್ರೇಡ್ ಮಾರ್ಕಿನಲ್ಲಿ ಕೊಂಚ ಬದಲಾವಣೆ ಮಾಡಿ ವಂಚಿಸುತ್ತಿದ್ದರಿಂದ ಹಲವಾರು ಜನರು ಇವರ ವಂಚನೆಯ ಬಲೆಗೆ ಬಿದ್ದಿದ್ದರು. ಇದರಿಂದಾಗಿ ಕಂಪನಿಗೆ ದೊಡ್ಡಮಟ್ಟದ ಆರ್ಥಿಕ ನಷ್ಟ ಉಂಟಾಗಿತ್ತು. ಈ ಬಗ್ಗೆ ವಿ.ಆರ್.ಎಲ್ ಲಾಜಿಸ್ಟಿಕ್ಸ್ ಲಿಮಿಟೆಡ್ ಉಪಾಧ್ಯಕ್ಷ ಧ್ರುವರಾಜ್ ಜಾಗೀರ್ದಾರ್ ತೆಲಂಗಾಣದ ರ್ಪೆಟ್ಬಶಿರಬಾದ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಪ್ರಕರಣದ ಬೆನ್ನತ್ತಿದ ಪೋಲಿಸರು 6 ಜನ ವಂಚಕರನ್ನು ಹೆಡೆಮುರಿ ಕಟ್ಟುವಲ್ಲಿ ಯಶಸ್ವಿಯಾಗಿದ್ದಾರೆ.
ಬಂಧಿತರನ್ನು ಸಂದೀಪ್ ಕುಮಾರ್, ಮುಕೇಶ್, ಅನಿಲ್ ಕುಮಾರ್, ರಾಕೇಶ್ , ಮುಕೇಶ್ ಕುಮಾರ್, ರಾಧೇಶಂ ಎಂದು ಗುರುತಿಸಲಾಗಿದ್ದು, ಇವರ ಮೇಲೆ ಐಪಿಸಿ ಸೆಕ್ಷನ್ 420(ವಂಚನೆ), ಟ್ರೇಡ್ ಮಾರ್ಕ್ ಆ್ಯಕ್ಟ್ 104 ಮತ್ತು ಕಾಪಿ ರೈಟ್ ಆ್ಯಕ್ಟ್ 63ರ ಅನ್ವಯ ಪ್ರಕರಣವನ್ನು ದಾಖಲಿಸಲಾಗಿದೆ.
ಈ ಬಗ್ಗೆ ಮಾಹಿತಿ ನೀಡಿದ ಸೈಬರಾಬಾದ್ ಕಮಿಷನರೇಟ್ ಎಸಿಪಿ, ಸಾರ್ವಜನಿಕರು ಇಂತಹ ವಂಚಕರ ಬಗ್ಗೆ ಜಾಗೃತರಾಗಿ ಇರುವಂತೆ ಸೂಚಿಸಿದ್ದಾರೆ.