ETV Bharat / bharat

ವೈಜಾಗ್​ ದುರಂತದ ಕಣ್ಣೀರ ಕಥೆ.. ತಂದೆ ಸಾವನ್ನಪ್ಪಿದ್ರೆ, ಮಗ ಕಣ್ಣು ಕಳೆದುಕೊಂಡ!

author img

By

Published : May 9, 2020, 3:55 PM IST

ವೈಜಾಗ್​ ವಿಷಾನಿಲ ಸೋರಿಕೆ ಪ್ರಕರಣದಲ್ಲಿ ಅನೇಕರು ಪ್ರಾಣ ಕಳೆದುಕೊಂಡಿದ್ದು, ನೂರಾರು ಮಂದಿ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ.

VIZAG GAS LEAKAGE TRAGEDY
VIZAG GAS LEAKAGE TRAGEDY

ವಿಶಾಖಪಟ್ಟಣಂ: ಆಂಧ್ರಪ್ರದೇಶದ ವಿಜಯವಾಡದ ವೆಂಕಟಾಪುರಂನಲ್ಲಿರುವ ಎಲ್​ಜಿ ಪಾಲಿಮರ್ಸ್​​ ಕಾರ್ಖಾನೆಯಲ್ಲಿ ಅನಿಲ ಸೋರಿಕೆಯಾಗಿ ಅನೇಕರು ಪ್ರಾಣ ಕಳೆದುಕೊಂಡಿದ್ದು, ನೂರಾರು ಜನರು ಗಾಯಗೊಂಡು ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ. ಇದರ ಮಧ್ಯೆ ಕಣ್ಣೀರಿನ ಕಥೆಯೊಂದು ಹೊರಬಿದ್ದಿದೆ.

ವೈಜಾಗ್​ ದುರಂತದ ಕಣ್ಣೀರಿನ ಕಥೆ

ಎಲ್​ಜಿ ಪಾಲಿಮರ್ಸ್​ ಕಂಪನಿಯಲ್ಲಿ ದಿನಗೂಲಿ ಕೆಲಸಗಾರನಾಗಿ ಸೇವೆ ಸಲ್ಲಿಸುತ್ತಿದ್ದ 40 ವರ್ಷದ ಗೋವಿಂದ್​ ರಾಜು ಘಟನೆಯಲ್ಲಿ ಸಾವನ್ನಪ್ಪಿದರೆ, ಇವರ ಐದು ವರ್ಷದ ಮಗ ಮನದೀಪ್​​ ಕಣ್ಣು ಕಳೆದುಕೊಂಡಿದ್ದಾನೆ. ಗೋವಿಂದ್​ ರಾಜ್​ ಸಾವನ್ನಪ್ಪಿರುವ ವಿಷಯ ಕುಟುಂಬಸ್ಥರಿಗೆ ಗೊತ್ತೇ ಇರಲಿಲ್ಲ. ಮರುದಿನ ಪತ್ರಿಕೆಯಲ್ಲಿ ಪ್ರಕಟಗೊಂಡಾಗ ಮಾಹಿತಿ ಗೊತ್ತಾಗಿದೆ. ಇನ್ನು ಕಣ್ಣು ಕಳೆದುಕೊಂಡ ಮಗ ತಂದೆಯ ಅಂತ್ಯಕ್ರಿಯೆಯಲ್ಲೂ ಆತನ ಮುಖ ನೋಡಲು ಸಾಧ್ಯವಾಗಿಲ್ಲ.

ಮನೆಗೆ ಆಧಾರವಾಗಿದ್ದ ಗಂಡ ಹಾಗೂ ಮಗ ಕಣ್ಣು ಕಳೆದುಕೊಂಡಿರುವುದು ಗೋವಿಂದ್​​ ರಾಜು ಪತ್ನಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿದ್ದು, ಅವರ ಆಕ್ರೋಶ ಮುಗಿಲು ಮುಟ್ಟಿದೆ. ಸದ್ಯ ಮಗುವಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿದಿದೆ.

ಕಳೆದೆರಡು ದಿನಗಳ ಹಿಂದೆ ಬೆಳ್ಳಂಬೆಳಗ್ಗೆ ನಡೆದಿರುವ ವೈಜಾಗ್​ ಅನಿಲ ಸೋರಿಕೆ ಪ್ರಕರಣದಲ್ಲಿ 12 ಜನರು ಸಾವನ್ನಪ್ಪಿದ್ದು, ಅನೇಕರು ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.