ETV Bharat / bharat

ಹೆಚ್ಚು ಅರಣ್ಯ ಪ್ರದೇಶ ಇರುವ ಸ್ಥಳಗಳಲ್ಲಿ ಕೋವಿಡ್​ ಪ್ರಭಾವ ಕಡಿಮೆ: ಅಧ್ಯಯನ

author img

By

Published : May 14, 2020, 8:55 AM IST

ಉಜ್ಜಯಿನಿ, ಇಂದೋರ್, ಖಾರ್ಗೋನ್, ಭೋಪಾಲ್ ಮತ್ತು ಮೊರೆನಾ ಜಿಲ್ಲೆಗಳಲ್ಲಿ ಪ್ರತಿ ಸಾವಿರ ಜನರಿಗೆ ಅರಣ್ಯ ಪ್ರದೇಶದ ಲಭ್ಯತೆ 100 ಹೆಕ್ಟೇರ್‌ಗಿಂತ ಕಡಿಮೆಯಿದೆ. ಹೀಗಾಗಿ ಆ ಪ್ರದೇಶಗಳು ಹೆಚ್ಚಿನ ಪ್ರಮಾಣದಲ್ಲಿ ಸೋಂಕು ಹರಡುವಿಕೆಯೊಂದಿಗೆ ಕೆಂಪು ವಲಯದಲ್ಲಿದೆ.

less Covid effect in High Forest area
ಅರಣ್ಯ ಪ್ರದೇಶದ ಹೆಚ್ಚಿರುವ ಕಡೆ ಕೋವಿಡ್​ ಪರಿಣಾಮ ಕಮ್ಮಿ

ಭೋಪಾಲ್: ಹೆಚ್ಚಿನ ಅರಣ್ಯ ಪ್ರದೇಶ ಹೊಂದಿರುವ ಜಿಲ್ಲೆಗಳಲ್ಲಿ ಕೊರೊನಾ ಸೋಂಕು ಕಡಿಮೆ ಪ್ರಮಾಣದಲ್ಲಿ ಪರಿಣಾಮ ಬೀರಿದೆ ಎಂದು ಮಧ್ಯಪ್ರದೇಶದ ಅರಣ್ಯ ಇಲಾಖೆ ನಡೆಸಿದ ಅಧ್ಯಯನವೊಂದು ತಿಳಿಸಿದೆ.

ಪ್ರತಿ ಜಿಲ್ಲೆಯ ಅರಣ್ಯ ವ್ಯಾಪ್ತಿಯ ಶೇಕಡಾವಾರು, ಪ್ರತಿ ಸಾವಿರ ಜನರಿಗೆ ಅದರ ಲಭ್ಯತೆ ಮತ್ತು ಜಿಲ್ಲೆಯ ಕೆಂಪು, ಕಿತ್ತಳೆ ಮತ್ತು ಹಸಿರು ವಲಯಗಳಲ್ಲಿ ಸೋಂಕು ಹರಡುವಿಕೆಯ ತೀವ್ರತೆಯನ್ನು ಗಮನದಲ್ಲಿಟ್ಟುಕೊಂಡು ಈ ಅಧ್ಯಯನ ನಡೆಸಲಾಗಿದೆ. ಇದರ ಪ್ರಕಾರ ರಾಜ್ಯದ 52 ಜಿಲ್ಲೆಗಳ ಪೈಕಿ 42 ಜಿಲ್ಲೆಗಳಲ್ಲಿ ಕೋವಿಡ್​ ಪಸರಿಸಿದೆ, ಆದರೂ, ಹೆಚ್ಚಿನ ಅರಣ್ಯ ಪ್ರದೇಶ ಹೊಂದಿರುವ ಜಿಲ್ಲೆಗಳ ಜನರು ಹೆಚ್ಚಿನ ರೋಗ ನಿರೋಧಕ ಶಕ್ತಿಯನ್ನು ಹೊಂದಿದ್ದಾರೆ.

ಉಜ್ಜಯಿನಿ, ಇಂದೋರ್, ಖಾರ್ಗೋನ್, ಭೋಪಾಲ್ ಮತ್ತು ಮೊರೆನಾ ಜಿಲ್ಲೆಗಳಲ್ಲಿ ಪ್ರತಿ ಸಾವಿರ ಜನರಿಗೆ ಅರಣ್ಯ ಪ್ರದೇಶದ ಲಭ್ಯತೆ 100 ಹೆಕ್ಟೇರ್‌ಗಿಂತ ಕಡಿಮೆಯಿದೆ. ಹೀಗಾಗಿ ಆ ಪ್ರದೇಶಗಳು ಹೆಚ್ಚಿನ ಪ್ರಮಾಣದಲ್ಲಿ ಸೋಂಕು ಹರಡುವಿಕೆಯೊಂದಿಗೆ ಕೆಂಪು ವಲಯದಲ್ಲಿದೆ. ಮತ್ತೊಂದೆಡೆ, ಮಧ್ಯಪ್ರದೇಶ ಮತ್ತು ಮಹಾರಾಷ್ಟ್ರದ ಕೆಂಪು ವಲಯ ಜಿಲ್ಲೆಗಳ ಗಡಿಯಲ್ಲಿರುವ ಬೆತುಲ್ ಮತ್ತು ಚಿಂದ್ವಾರ ಜಿಲ್ಲೆಗಳು ಕಿತ್ತಳೆ ವಲಯದಲ್ಲಿವೆ. ಬಾಲಘಾಟ್, ಶಹಾದೋಲ್, ಪನ್ನಾ, ಅನುಪ್ಪೂರ್ ಮತ್ತು ಉಮರಿಯಾದಂತಹ ಜಿಲ್ಲೆಗಳಿಗೆ ಹೆಚ್ಚಿನ ಸಂಖ್ಯೆಯ ವಲಸೆ ಕಾರ್ಮಿಕರು ಮರಳಿದ್ದಾರೆ. ಆದರೂ, ಈ ಜಿಲ್ಲೆಗಳು ಹಸಿರು ವಲಯದಲ್ಲಿವೆ. ಹೆಚ್ಚಿನ ಪ್ರಮಾಣದಲ್ಲಿ ಅರಣ್ಯ ಪ್ರದೇಶ ಹೊಂದಿರುವುದೇ ಇದಕ್ಕೆ ಕಾರಣ ಎಂದು ಅಧ್ಯಯನ ಹೇಳಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.