ರಾಜ್ಪಿಪ್ಲಾ/ಗುಜರಾತ್: ಕೊರೊನಾ ವೈರಸ್ ವಿರುದ್ಧ ಹೋರಾಡಲು ಸರ್ಕಾರದ ವೆಚ್ಚಗಳು ಮತ್ತು ವೈದ್ಯಕೀಯ ಮೂಲ ಸೌಕರ್ಯಗಳನ್ನು ಪೂರೈಸಲು ನರ್ಮದಾ ಜಿಲ್ಲೆಯ ಕೆವಾಡಿಯಾದಲ್ಲಿರುವ ಪ್ರತಿಮೆ ಮಾರಾಟ ಮಾಡಲು ವ್ಯಕ್ತಿಯೊಬ್ಬ ಆನ್‌ಲೈನ್ ಜಾಹೀರಾತು ಹಾಕಿದ್ದಾನೆ. ಪರಿಣಾಮ ಪೊಲೀಸರು ಆತನ ವಿರುದ್ಧ ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.
182 ಮೀಟರ್ ಎತ್ತರದ ಬೃಹತ್ ಸರ್ದಾರ್ ಪಟೇಲ್ ಸ್ಮಾರಕವು ವಿಶ್ವದ ಅತಿ ಎತ್ತರದ ರಚನೆಯಾಗಿದೆ. ಇದನ್ನು 2018 ರಲ್ಲಿ ಪ್ರಧಾನಿ ನರೇಂದ್ರ ಮೋದಿ ಉದ್ಘಾಟಿಸಿದ್ದರು. ಅಂದಿನಿಂದ ಲಕ್ಷಾಂತರ ಜನರನ್ನು ಈ ಪ್ರತಿಮೆ ಆಕರ್ಷಿಸುತ್ತಿದೆ.
ಕೊರೊನಾ ವೈರಸ್ ತಡೆಗಟ್ಟಲು ಆಸ್ಪತ್ರೆಗಳು ಮತ್ತು ಆರೋಗ್ಯ ಸಾಧನಗಳನ್ನು ಖರೀದಿಸಲು ಹಣದ ಅಗತ್ಯತೆ ಇದೆ. ಇದನ್ನು ಪೂರೈಸಲು ಪ್ರತಿಮೆಯನ್ನು 30,000 ಕೋಟಿ ರೂ.ಗೆ ಮಾರಾಟ ಮಾಡಬೇಕಾಗಿದೆ ಎಂದು ಆ ವ್ಯಕ್ತಿ ಜಾಹೀರಾತು ಪ್ರಕಟಿಸಿದ್ದ.