ಹೈದರಾಬಾದ್: ವಿಂಡೀಸ್ ವಿರುದ್ಧ ನಡೆದ ಮೊದಲ ಟಿ-20 ಪಂದ್ಯದಲ್ಲಿ ಟೀಂ ಇಂಡಿಯಾ ಕ್ಯಾಪ್ಟನ್, ರನ್ ಮಷಿನ್ ವಿರಾಟ್ ಕೊಹ್ಲಿ ರನ್ ಮಳೆ ಹರಿಸಿದ್ದು, ಅವರ ಬ್ಯಾಟಿಂಗ್ ಅಬ್ಬರಕ್ಕೆ ಎಲ್ಲರೂ ಫಿದಾ ಆಗಿದ್ದಾರೆ.
ಆರು ಸಿಕ್ಸರ್,ಆರು ಬೌಂಡರಿ ಸೇರಿದಂತೆ ಬರೋಬ್ಬರಿ 94 ರನ್ಗಳಿಸಿದ್ದ ಕೊಹ್ಲಿಗೆ ನಿನ್ನೆ ವೆಸ್ಟ್ ಇಂಡೀಸ್ ಕ್ರಿಕೆಟ್ ದಂತಕತೆ ಸರ್ ವಿವಿಯನ್ ರಿಚರ್ಡ್ಸನ್ ಟ್ವೀಟ್ ಮೂಲಕ ಕೊಂಡಾಡಿದ್ದರು.
-
Thanks big BOSS. Coming from you means a lot 🙏🏼
— Virat Kohli (@imVkohli) December 7, 2019 " class="align-text-top noRightClick twitterSection" data="
">Thanks big BOSS. Coming from you means a lot 🙏🏼
— Virat Kohli (@imVkohli) December 7, 2019Thanks big BOSS. Coming from you means a lot 🙏🏼
— Virat Kohli (@imVkohli) December 7, 2019
ವೆಸ್ಟ್ ಇಂಡೀಸ್ನ ಕ್ರಿಕೆಟ್ ದೈತ್ಯ ಸರ್ ವಿವಿಯನ್ ಅದ್ಭುತ, ಕೇವಲ ಅದ್ಭುತ ಎಂದು ಟ್ವೀಟ್ ಮಾಡಿ, ರನ್ ಮಷಿನ್ ಬ್ಯಾಟಿಂಗ್ ಹಾಡಿ ಹೊಗಳಿದ್ದರು. ಇದೀಗ ಇದಕ್ಕೆ ರಿಟ್ವೀಟ್ ಮಾಡಿರುವ ಕೊಹ್ಲಿ ಥ್ಯಾಂಕ್ಸ್ ಬಿಗ್ ಬಾಸ್, ನಿಮ್ಮ ಬಾಯಿಂದ ಈ ರೀತಿಯ ಮಾತು ಬಂದಿರುವುದು ನಿಜಕ್ಕೂ ಹೆಮ್ಮೆ ಎಂದು ಬರೆದುಕೊಂಡಿದ್ದಾರೆ.
ಇನ್ನು ವಿರಾಟ್ ಕೊಹ್ಲಿ ಬ್ಯಾಟಿಂಗ್ ಅಬ್ಬರಕ್ಕೆ ಸ್ಪಿನ್ನರ್ ಹರ್ಭಜನ್ ಸಿಂಗ್, ಸ್ಪಿನ್ನರ್ ಕುಲ್ದೀಪ್ ಯಾದವ್,ಮಾಜಿ ಕ್ರಿಕೆಟರ್ ವೀರೇಂದ್ರ ಸೆಹ್ವಾಗ್, ವಿವಿಎಸ್ ಲಕ್ಷ್ಮಣ್ ಮೆಚ್ಚುಗೆ ವ್ಯಕ್ತಪಡಿಸಿ ಟ್ವೀಟ್ ಮಾಡಿದ್ದರು.
ಮೂರು ಟಿ-20 ಪಂದ್ಯಗಳ ಕ್ರಿಕೆಟ್ ಸರಣಿಯಲ್ಲಿ ಈಗಾಗಲೇ ಟೀ ಇಂಡಿಯಾ ಮೊದಲ ಪಂದ್ಯದಲ್ಲಿ ಗೆಲುವು ದಾಖಲು ಮಾಡಿದ್ದು, ಮುಂದಿನ ಪಂದ್ಯ ತಿರುವನಂತಪುರಂ ಮೈದಾನದಲ್ಲಿ ನಡೆಯಲಿದೆ.