ETV Bharat / bharat

ಭಾರತದಲ್ಲಿ ಗಂಟೆಗೆ 4 ಅತ್ಯಾಚಾರ: ಸ್ತ್ರೀಯರಿಗೆ ರಕ್ಷಣೆ ಸಿಗೋದು ಯಾವಾಗ?

author img

By

Published : Oct 1, 2020, 10:09 PM IST

ಎಲ್ಲಿ ಮಹಿಳೆಯನ್ನು ಪೂಜಿಸುತ್ತಾರೋ ಅಲ್ಲಿ ದೇವತೆಗಳು ನೆಲೆಸುತ್ತಾರೆ ಎಂಬ ನಂಬಿಕೆ ಇರುವ ದೇಶ ಭಾರತ. ಆದರೆ, ವಾಸ್ತವದಲ್ಲಿ ಭಾರತದ ಮಹಿಳೆಯರು ಅತ್ಯಂತ ಅಪಾಯಕಾರಿ ಸ್ಥಿತಿಯಲ್ಲಿದ್ದಾರೆ. ಅದಕ್ಕೆ ಕಾರಣ ಇತ್ತೀಚೆಗೆ ಮಹಿಳೆಯರ ಮೇಲೆ ನಡೆಯುತ್ತಿರುವ ಭೀಕರ ಅತ್ಯಾಚಾರಗಳು ಮತ್ತು ಮಹಿಳೆಯರ ಮೇಲಿನ ದೌರ್ಜನ್ಯಗಳು..

Violence against rising women in India
ಭಾರತದಲ್ಲಿ ಗಂಟೆಗೆ 4 ಅತ್ಯಚಾರ...ಸ್ತ್ರೀಯರಿಗೆ ರಕ್ಷಣೆ ಸಿಗೋದು ಯಾವಾಗ

ವಿಶ್ವದಲ್ಲಿ ವೇಗವಾಗಿ ಬೆಳೆಯುತ್ತಿರುವ ಆರ್ಥಿಕತೆ ಹೊಂದಿರುವ ಹಾಗೂ ಬಾಹ್ಯಾಕಾಶ ವಿಜ್ಞಾನದಲ್ಲಿ ಮುಂಚೂಣಿಯಲ್ಲಿರುವ ಭಾರತ. ಮಹಿಳಾ ಸುರಕ್ಷತೆ ವಿಷಯದಲ್ಲಿ ಮಾತ್ರ ಇಡೀ ವಿಶ್ವದ ಮುಂದೆ ತಲೆ ತಗ್ಗಿಸುವಂತಾಗಿದೆ. ಇಡೀ ದೇಶವನ್ನೇ ತಲ್ಲಣಗೊಳಿಸಿರುವ ಉತ್ತರಪ್ರದೇಶದ ಹಥ್ರಾಸ್​ನಲ್ಲಿ ನಡೆದಿರುವ ಗ್ಯಾಂಗ್​ರೇಪ್​ ಪ್ರಕರಣ ಎಲ್ಲರನ್ನೂ ತಗೆ ತಗ್ಗಿಸುವಂತೆ ಮಾಡಿದೆ. ಮಗಳ ದಿನಾಚರಣೆ ನಡೆದ ಎರಡು ದಿನಗಳ ನಂತರದಲ್ಲಿ ಭಾರತದಲ್ಲಿ ಹೆಣ್ಣುಮಗಳೊಬ್ಬಳ ಕ್ರೂರ ಹತ್ಯೆಯಾಗಿದೆ.

ಹಥ್ರಾಸ್ ಗ್ರಾಮದ 19 ವರ್ಷದ ಯುವತಿಯ ಮೇಲೆ ನಾಲ್ವರು ಮೇಲ್ಜಾತಿಯ ಯುವಕರು ಅತ್ಯಾಚಾರ ಮಾಡಿದ್ದಲ್ಲದೇ, ಆಕೆಯ ನಾಲಿಗೆಯನ್ನು ಕತ್ತರಿಸಿದ್ದರು. ನಂತರ ಅಸ್ತವ್ಯಸ್ತಗೊಂಡ ಯುವತಿಯನ್ನು ದೆಹಲಿಯ ಸಫ್ದರ್ಜಂಗ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಿಸದೇ ಯುವತಿ ಕೊನೆಯುಸಿರೆಳೆದಿದ್ದಾಳೆ. ಯುಪಿಯಲ್ಲಿ ಕಳೆದ ಎರಡು ತಿಂಗಳಲ್ಲಿ ಅತ್ಯಾಚಾರ ಮತ್ತು ಕ್ರೂರವಾಗಿ ಹತ್ಯೆಗೈದ ಐದನೇ ಯುವತಿಯಾಗಿದ್ದು, ಮೂರನೇ ದಲಿತ ಯುವತಿಯಾಗಿದ್ದಾಳೆ.

ನ್ಯಾಷನಲ್ ಕ್ರೈಮ್ ರೆಕಾರ್ಡ್ಸ್ ಬ್ಯೂರೋ (ಎನ್‌ಸಿಆರ್‌ಬಿ) ಬಿಡುಗಡೆ ಮಾಡಿದ ಇತ್ತೀಚಿನ ಮಾಹಿತಿಯ ಪ್ರಕಾರ, 2019ರಲ್ಲಿ ಭಾರತದಲ್ಲಿ ನಿತ್ಯ 95 ಅತ್ಯಾಚಾರ ಪ್ರಕರಣಗಳು ದಾಖಲಾಗಿವೆ. ವರ್ಷದಲ್ಲಿ ಒಟ್ಟು 32,033 ಅತ್ಯಾಚಾರ ಪ್ರಕರಣಗಳು ವರದಿಯಾಗಿವೆ.

  • 2018-19ರಿಂದ ಮಹಿಳೆಯರ ಮೇಲಿನ ಶೋಷಣೆಗಳು 7.3% ಹೆಚ್ಚಳ.
  • ಮಹಿಳೆಯರ ಮೇಲೆ ಅತಿ ಹೆಚ್ಚು ದೌರ್ಜನ್ಯ ಪ್ರಮಾಣವನ್ನು ಹೊಂದಿರುವ ಅಸ್ಸೋಂ ರಾಜ್ಯದಲ್ಲಿ ಪ್ರತಿ ಲಕ್ಷ ಜನಸಂಖ್ಯೆಗೆ 117.8ರಷ್ಟು ಪ್ರಕರಣಗಳು ದಾಖಲಾಗುತ್ತಿವೆ.
  • ಮಹಿಳೆಯರ ಮೇಲೆ ಅತಿಹೆಚ್ಚು ದೌರ್ಜನ್ಯ ಹೊಂದಿರುವ ಉತ್ತರಪ್ರದೇಶದಲ್ಲಿ ಈವರೆಗೂ 59,853 ಶೋಷಣೆಗಳು ನಡೆದಿವೆ.
  • ರಾಜಸ್ಥಾನದಲ್ಲಿ ಅತಿ ಹೆಚ್ಚು ಅಂದರೆ ಈವರೆಗೆ 5,997 ಅತ್ಯಾಚಾರ ಪ್ರಕರಣಗಳು ದಾಖಲಾಗಿವೆ.

ದಲಿತ ಮಹಿಳೆಯರ ಮೇಲಿನ ದೌರ್ಜನ್ಯ: ಭಾರತದಲ್ಲಿ ನಿತ್ಯ 10 ದಲಿತ ಮಹಿಳೆಯರು ಅತ್ಯಾಚಾರಕ್ಕೊಳಗಾಗುತ್ತಾರೆ (2019ರಲ್ಲಿ ಸುಮಾರು 3,500 ದಲಿತ ಮಹಿಳೆಯರು ಅತ್ಯಾಚಾರಕ್ಕೊಳಗಾಗಿದ್ದಾರೆ). ಇದರಲ್ಲಿ ಮೂರನೇ ಒಂದು ಭಾಗ ಪ್ರಕರಣಗಳು ರಾಜಸ್ಥಾನ ಮತ್ತು ಉತ್ತರಪ್ರದೇಶದಿಂದ ವರದಿಯಾಗಿವೆ. ರಾಜಸ್ಥಾನದಲ್ಲಿ ಅತಿ ಹೆಚ್ಚು ಅಂದರೆ 554 ಮಹಿಳೆಯರ ಮೇಲೆ ಅತ್ಯಾಚಾರಗಳು ನಡೆದಿವೆ. ಉತ್ತರಪ್ರದೇಶದಲ್ಲಿ 537 ಮತ್ತು ಮಧ್ಯಪ್ರದೇಶದಲ್ಲಿ 510 ಪ್ರಕರಣಗಳು ದಾಖಲಾಗಿವೆ. ಕೇರಳದಲ್ಲಿ ಅತಿಹೆಚ್ಚು ಅಂದರೆ 4.6ರಷ್ಟು ದಲಿತ ಮಹಿಳೆಯರ ಮೇಲೆ ಅತ್ಯಾಚಾರ ನಡೆಯುತ್ತಿದೆ. ಯುಪಿಯಲ್ಲಿ 4.5 ಮತ್ತು ರಾಜಸ್ಥಾನ 4.5 ರಷ್ಟು ದಲಿತ ಮಹಿಳೆಯರ ಮೇಲೆ ಅತ್ಯಾಚಾರಗಳು ನಡೆಯುತ್ತಿವೆ.

ಭಾರತದಲ್ಲಿ ಅತ್ಯಾಚಾರದ ಪಿಡುಗು: ಕಳೆದ 10 ವರ್ಷಗಳಲ್ಲಿ ಮಹಿಳೆಯರ ಮೇಲಿನ ಅತ್ಯಾಚಾರ ಪ್ರಮಾಣವು ಶೇ. 44ರಷ್ಟು ಹೆಚ್ಚಾಗಿದೆ ಎಂದು ಎನ್‌ಸಿಆರ್‌ಬಿ ಅಂಕಿ - ಅಂಶಗಳು ತಿಳಿಸುತ್ತವೆ. ಎನ್‌ಸಿಆರ್‌ಬಿ ಅಂಕಿ - ಅಂಶಗಳ ಪ್ರಕಾರ, 2010-2019ರ ಅವಧಿಯಲ್ಲಿ ಭಾರತದಾದ್ಯಂತ ಒಟ್ಟು 3,13,289 ಅತ್ಯಾಚಾರ ಪ್ರಕರಣಗಳು ವರದಿಯಾಗಿವೆ.

ಮಹಿಳೆಯರ ಮೇಲಿನ ಲೈಂಗಿಕ ಅಪರಾಧಗಳು ಹೆಚ್ಚಾಗುತ್ತಿರುವಾಗಲೇ 2012ರಲ್ಲಿ ದೆಹಲಿಯ ನಿರ್ಭಯಾ ಎಂಬ ಯುವತಿ ಮೇಲೆ ನಡೆದ ಅತ್ಯಾಚಾರ ಇಡೀ ದೇಶವನ್ನೇ ಬೆಚ್ಚಿ ಬೀಳಿಸುವಂತೆ ಮಾಡಿತ್ತು. ಈ ಪ್ರಕರಣ ಕ್ರಿಮಿನಲ್ ಕಾನೂನಿನ ತಿದ್ದುಪಡಿ ಮಾಡಲು ಮತ್ತು ಅತ್ಯಾಚಾರ, ಲೈಂಗಿಕ ದೌರ್ಜನ್ಯ ಪ್ರಕರಣಗಳ ಆರೋಪಿಗಳನ್ನು ಕಠಿಣ ಶಿಕ್ಷೆಗೆ ಒಳಪಡಿಸಲು ಪ್ರೇರೇಪಿಸಿತು.

ನಿರ್ಭಯಾ ನಂತರ ಹೆಚ್ಚಿದ ಕರಾಳತೆ: ನಿರ್ಭಯಾ ಸಾಮೂಹಿಕ ಅತ್ಯಾಚಾರ ಪ್ರಕರಣದ ನಂತರದ ಏಳು ವರ್ಷಗಳಲ್ಲಿ (2013-2019) ಸುಮಾರು 2.42 ಲಕ್ಷ ಅತ್ಯಾಚಾರ ಪ್ರಕರಣಗಳು ದಾಖಲಾಗಿವೆ. ಒಂದು ದಿನಕ್ಕೆ 95 ಅತ್ಯಾಚಾರಗಳು ನಡೆದಿದರೆ, ಪ್ರತಿ ಗಂಟೆಗೆ 4 ಮಹಿಳೆಯರು ಅತ್ಯಾಚಾರಕ್ಕೊಳಗಾಗುತ್ತಿದ್ದಾರೆ.

ಪತಿ ಅಥವಾ ಸಂಬಂಧಿಕರ ಕ್ರೌರ್ಯದಿಂದ ಶೇ. 30.9ರಷ್ಟು ಮಹಿಳೆಯರ ಮೇಲೆ ದೌರ್ಜನ್ಯ ನಡೆದರೆ, ಆಕೆಯ ನಮ್ರತೆಯನ್ನು ಆಕ್ರೋಶಗೊಳಿಸುವ ಉದ್ದೇಶದಿಂದ ಶೇಕಡಾ 21.8ರಷ್ಟು ಹಲ್ಲೆಗಳಾಗಿವೆ. ಶೇ. 17.9 ಮಹಿಳೆಯರನ್ನು ಅಪಹರಿಸಲಾಗಿದ್ದು, ಶೇ 7.9ರಷ್ಟು ಮಹಿಳೆಯರ ಮೇಲೆ ಅತ್ಯಚಾರ ನಡೆದಿದೆ. 2018ಕ್ಕೆ ಹೋಲಿಸಿದರೆ 2019ರಲ್ಲಿ ಪ್ರತಿ ಲಕ್ಷ ಮಹಿಳೆಯರಲ್ಲಿ 62.4ರಷ್ಟು ಮಹಿಳೆಯರು ದೌರ್ಜನ್ಯಕ್ಕೆ ಒಳಗಾಗಿದ್ದಾರೆ ಎಂದು ಎನ್‌ಸಿಆರ್‌ಬಿ ವರದಿಯಲ್ಲಿ ತಿಳಿದು ಬಂದಿದೆ.

ಅಪ್ರಾಪ್ತೆಯರ ಮೇಲಿನ ದೌರ್ಜನ್ಯಗಳು: ಪೋಕ್ಸೊ ಕಾಯ್ದೆಯಡಿ ಯಪಿಯಲ್ಲಿ 7,444, ಮಹಾರಾಷ್ಟ್ರ 6,402, ಮಧ್ಯಪ್ರದೇಶದಲ್ಲಿ 6,053 ಪ್ರಕರಣಗಳು ದಾಖಲಾಗಿವೆ. ಎನ್‌ಸಿಆರ್‌ಬಿ ದತ್ತಾಂಶವು ಅಪ್ರಾಪ್ತೆಯರ ಮೇಲಿನ ಅಪರಾಧಗಳ ಪ್ರಕರಣಗಳಲ್ಲಿ ಗಮನಾರ್ಹ ಏರಿಕೆ ತೋರಿಸಿದೆ. ಅಪ್ರಾಪ್ತೆಯರ ಮೇಲಿನ ದೌಜರ್ನ್ಯವು 2018ಕ್ಕೆ ಹೋಲಿಸಿದರೆ 2019ರಲ್ಲಿ 4.5% ಹೆಚ್ಚಾಗಿದೆ. 2019ರಲ್ಲಿ ಮಕ್ಕಳ ವಿರುದ್ಧ ಒಟ್ಟು 1.48 ಲಕ್ಷ ಅಪರಾಧ ಪ್ರಕರಣಗಳು ದಾಖಲಾಗಿವೆ.

ವರದಕ್ಷಿಣೆ ಕಿರುಕುಳ ಪ್ರಕರಣಗಳು: ಯುಪಿಯಲ್ಲಿ ಅತಿ ಹೆಚ್ಚು ವರದಕ್ಷಿಣೆ ಪ್ರಕರಣಗಳು (2,410) ದಾಖಲಾಗಿದ್ದು, ನಂತರದ ಸ್ಥಾನದಲ್ಲಿ ಬಿಹಾರ (1,120) ರಾಜ್ಯವಿದೆ.

ಆ್ಯಸಿಡ್ ದಾಳಿ: ವರದಿಯ ಪ್ರಕಾರ 2019ರಲ್ಲಿ 150 ಆ್ಯಸಿಡ್ ದಾಳಿಗಳು ವರದಿಯಾಗಿವೆ. ಅದರಲ್ಲಿ 42 ಯುಪಿಯಲ್ಲಿ ಮತ್ತು 36 ಪಶ್ಚಿಮ ಬಂಗಾಳದಲ್ಲಿ ನಡೆದಿವೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.