ನವದೆಹಲಿ: ಕರ್ತವ್ಯ ನಿರತ ವೈದ್ಯರ ಮೇಲಿನ ದೌರ್ಜನ್ಯ/ ಹಲ್ಲೆ ಅರಿವಿನ ಮತ್ತು ಜಾಮೀನು ರಹಿತ ಅಪರಾಧ ಎಂದು ಪರಿಗಣಿಸಿ ಕೃತ್ಯಗಳಲ್ಲಿ ಭಾಗಿಯಾದವರಿಗೆ 10 ವರ್ಷ ಜೈಲು ಶಿಕ್ಷೆ ವಿಧಿಸುವ ಕಾಯ್ದೆ ಶೀಘ್ರವೇ ಜಾರಿಗೆ ಬರಲಿದೆ ಎಂದು ಹೇಳಲಾಗುತ್ತಿದೆ.
ಕರಡು ಮಸೂದೆಯ ನಿಬಂಧನೆಗಳ ಪ್ರಕಾರ, ಗಾಯವು 'ಸಾಧಾರಣ' ಅಥವಾ 'ಗಂಭೀರ' ಎಂಬುದರ ಮೇಲೆ ಶಿಕ್ಷೆ ನಿರ್ಧಾರವಾಗಲಿದೆ. ಹಲ್ಲೆಯ ವೇಳೆ ಹಾನಿಗೊಳಗಾದ ಆಸ್ಪತ್ರೆಯ ವಸ್ತುಗಳ ಮೌಲ್ಯಕ್ಕಿಂತ ಕನಿಷ್ಠ ಎರಡು ಪಟ್ಟು ಹೆಚ್ಚಿನ ದಂಡವನ್ನು ವಿಧಿಸಬಹುದು ಎಂಬ ಅಂಶಗಳು ಅಂತರ ಸಚಿವಾಲಯದ ಸಮಿತಿ ರೂಪಿಸಿದ ಪ್ರಸ್ತಾವಿತ ಕರಡನ್ನು ಆರೋಗ್ಯ ಸಚಿವಾಲಯದ ಪರಿಶೀಲಿಸುತ್ತಿದೆ ಎಂದು ಮೂಲವೊಂದು ತಿಳಿಸಿದೆ.
ದೇಶಾದ್ಯಂತ ಏಕರೂಪವಾಗಿರುವ ಭಾರತೀಯ ದಂಡ ಸಂಹಿತೆ ಮತ್ತು ಕ್ರಿಮಿನಲ್ ಪ್ರೊಸಿಜರ್ ಸಂಹಿತೆಯೊಂದಿಗೆ ಸಂಪರ್ಕ ಹೊಂದಿದ ಕೇಂದ್ರ ಕಾನೂನನ್ನು ಪ್ರಸ್ತಾಪಿಸಿದ್ದೇವೆ. ಕರಡು ಮಸೂದೆಯು ಯಾವ ರೀತಿಯ ಆಕ್ರಮಣ ಮತ್ತು ಗಾಯಗಳಿಂದಾಗಿ ಶಿಕ್ಷೆಯನ್ನು ನಿರ್ಧರಿಸಲು ಶ್ರೇಣೀಕರಣ ವ್ಯವಸ್ಥೆಯನ್ನೂ ಅದರಲ್ಲಿ ಪ್ರಸ್ತಾಪಿಸಿದ್ದೇವೆ ಎಂಬುದು ತಿಳಿದು ಬಂದಿದೆ.
ಸುಮಾರು 21 ರಾಜ್ಯಗಳಲ್ಲಿ ಇಂತಹ ಕಾನೂನುಗಳು ಜಾರಿಯಲ್ಲಿದ್ದರೂ ದೇಶಾದ್ಯಂತ ಏಕರೂಪ ಮತ್ತು ಪರಿಣಾಮಕಾರಿಯಾಗಿ ಜಾರಿಗೊಂಡಿಲ್ಲ. ವೈದ್ಯರ ವಿರುದ್ಧ ಮತ್ತು ಆಸ್ಪತ್ರೆಗಳಲ್ಲಿ ಹೆಚ್ಚುತ್ತಿರುವ ಹಿಂಸಾಚಾರದ ಘಟನೆಗಳ ಹೊರತಾಗಿಯೂ ಯಾವುದೇ ರಾಜ್ಯಗಳಲ್ಲಿ ಈವರೆಗೆ ಒಂದೇ ಒಂದು ಅಪರಾಧ ಸಾಬೀತಾಗಿಲ್ಲ ಎಂಬ ಅಪವಾದವಿದೆ.