ಅರೈಯಾ (ಉತ್ತರ ಪ್ರದೇಶ): ವಿಕಾಸ್ ದುಬೆ ಪ್ರಕರಣದಲ್ಲಿ ಇತ್ತೀಚೆಗಿನ ಬೆಳವಣಿಗೆಯೊಂದರಲ್ಲಿ, ವಾಂಟೆಡ್ ಕ್ರಿಮಿನಲ್‌ನ ಆಪ್ತ ಸಹವರ್ತಿ ಎಂದು ನಂಬಲಾದ ಅಮಿತ್ ದುಬೆ ಎಂಬ ವ್ಯಕ್ತಿಯನ್ನು ಉತ್ತರಪ್ರದೇಶದ ಮಥುರಾದಲ್ಲಿ ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಕಾನ್ಪುರ್ ಎನ್‌ಕೌಂಟರ್‌ನ ತನಿಖೆಯ ವೇಳೆ, ಜುಲೈ 5ರಂದು ಪೊಲೀಸರು ಲೈಸನ್ಸ್ ಇಲ್ಲದ ನಾಲ್ಕು ಚಕ್ರ ವಾಹನವನ್ನು ಪತ್ತೆ ಮಾಡಿದ್ದರು. ಈ ವಾಹನವು ಅಮಿತ್ ದುಬೆಗೆ ಸೇರಿದ್ದಿರಬಹುದು ಎಂದು ಊಹಿಸಲಾಗಿತ್ತು.
ಮಥುರಾದ ರಸ್ತೆಯಲ್ಲಿ ಅಮಿತ್ ದುಬೆನನ್ನು ಕೈ, ಕಣ್ಣು ಕಟ್ಟಿ ಅಪರಿಚಿತರು ದಾರಿ ಮೇಲೆ ಎಸೆದು ಹೋದ ಖಚಿತ ಮಾಹಿತಿ ಪಡೆದ ಪೊಲೀಸರು ಆತನನ್ನು ವಶಕ್ಕೆ ತೆಗೆದುಕೊಂಡರು. ಅಮಿತ್‌ನನ್ನು ಬಂಧಿಸಲು ಅರೈಯಾ ಪೊಲೀಸರ ತಂಡ ಮಥುರಾಕ್ಕೆ ತೆರಳುತ್ತಿದೆ.
ದಾರಿಹೋಕರ ಪ್ರಕಾರ, ಕೆಲವು ಅಪರಿಚಿತ ವ್ಯಕ್ತಿಗಳು ಅಮಿತ್ ದುಬೆನನ್ನು ಥಳಿಸಿ, ವಾಹನದಿಂದ ರಸ್ತೆಗೆ ಎಸೆದರು ಎಂದು ಹೇಳಿದ್ದಾರೆ.