ETV Bharat / bharat

ದೂರುಗಳ ಇತ್ಯರ್ಥ ಮಾಡದೆ ಕರ್ತವ್ಯ ಲೋಪ: ಪೊಲೀಸ್​ ಸಿಬ್ಬಂದಿ ಅಮಾನತು

author img

By

Published : Feb 14, 2020, 3:05 AM IST

ಪೊಲೀಸ್​ ಠಾಣೆಯಲ್ಲಿನ ದಾಖಲೆಗಳನ್ನು ಪರಿಶೀಲಿಸಿದ ವಿಜ್​ ಅವರು ಸ್ಥಳದಲ್ಲೇ ಇದ್ದ ಎಸ್‌ಎಚ್‌ಒ ನರೇಶ್ ಅವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಇಷ್ಟು ಅರ್ಜಿಗಳು ಇಲ್ಲಿ ಏಕೆ ಇವೆ ಯಾವ ಅರ್ಜಿಯನ್ನು ಇತ್ಯರ್ಥಗೊಳಿಸದೆ ಇಲ್ಲೇ ಏಕೆ ಇಟ್ಟಿದ್ದೀರಿ ಎಂದು ಕೇಳಿದ್ದಾರೆ.

ಗೃಹ ಸಚಿವ ಅನಿಲ್ ವಿಜ್
ಗೃಹ ಸಚಿವ ಅನಿಲ್ ವಿಜ್

ಚಂಡೀಗಢ: ಕರ್ತವ್ಯ ಲೋಪ ಹಿನ್ನೆಲೆ ಹರಿಯಾಣದ ಗೃಹ ಸಚಿವ ಅನಿಲ್ ವಿಜ್ ಅವರು ಎಸ್‌ಎಚ್‌ಒ ಮತ್ತು ಐವರು ಪೊಲೀಸರನ್ನು ಅಮಾನತು ಮಾಡಿದ್ದಾರೆ.

ಸಾರ್ವಜನಿಕ ಕುಂದುಕೊರತೆಗಳನ್ನು ಪರಿಹರಿಸಲು ಅನಿಲ್ ವಿಜ್​ ಅವರು ರೋಹ್ಟಕ್​​ಗೆ ಆಗಮಿಸಿದ್ದರು.ಈ ವೇಳೆ ಹಿರಿಯ ಪೊಲೀಸ್​ ಅಧಿಕಾರಿಗಳ ಜೊತೆ ಸಿವಿಲ್ ಲೈನ್ಸ್ ಪೊಲೀಸ್ ಠಾಣೆಗೆ ದಿಢೀರ್​ ಭೇಟಿ ನೀಡಿದ್ದಾರೆ. ನಂತರ ವಿಜ್​ ಅವರು, ಪೊಲೀಸ್​ ಠಾಣೆಯಲ್ಲಿದ್ದ ವಿವಿಧ ದಾಖಲೆಗಳ ಪರಿಶೀಲನೆ ಮುಂದಾಗಿದ್ದಾರೆ. ಆ ವೇಳೆ ಡ್ರಾಯರ್‌ಗಳಲ್ಲಿಇದ್ದ ಇವಿಧ ದಾಖಲೆಗಳ ಕಡೆ ಕಣ್ಣಾಯಿಸಿದ್ದಾರೆ.

ದಾಖಲೆಗಳನ್ನು ಪರಿಶೀಲಿಸಿದ ವಿಜ್​ ಅವರು ಸ್ಥಳದಲ್ಲೇ ಇದ್ದ ಎಸ್‌ಎಚ್‌ಒ ನರೇಶ್ ಅವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಇಷ್ಟು ಅರ್ಜಿಗಳು ಇಲ್ಲಿ ಏಕೆ ಇವೆ ಯಾವ ಅರ್ಜಿಯನ್ನು ಇತ್ಯರ್ಥಗೊಳಿಸದೆ ಇಲ್ಲೇ ಏಕೆ ಇಟ್ಟಿದ್ದೀರಿ ಎಂದು ಕೇಳಿದ್ದಾರೆ.

ಗೃಹ ಸಚಿವ ಅನಿಲ್ ವಿಜ್
ಗೃಹ ಸಚಿವ ಅನಿಲ್ ವಿಜ್

ಈ ಸಂಬಂಧ ಮಾಧ್ಯಮಗಳ ಜೊತೆ ಮಾತನಾಡಿದ ಸಚಿವರು​, ಅನೇಕ ದಾಖಲೆಗಳನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ.ಸಾರ್ವಜನಿಕರು ಸಲ್ಲಿಸಿರುವ ದೂರುಗಳ ಬಗ್ಗೆ ಯಾವುದೇ ಕ್ರಮಗಳನ್ನು ತೆಗೆದುಕೊಂಡಿಲ್ಲ. ಎಫ್ಐಆರ್​ ಪ್ರತಿಗಳನ್ನು ಸಂಬಂಧಿಸಿದವರಿಗೆ ನೀಡುವುದನ್ನು ಬಿಟ್ಟು ಇಲ್ಲೇ ಇಟ್ಟುಕೊಂಡಿದ್ದಾರೆ ಎಂದು ಮಾಹಿತಿ ನೀಡಿದ ಅವರು, ಕರ್ತವ್ಯ ಲೋಪ ಹಿನ್ನೆಲೆ ಎಸ್‌ಎಚ್‌ಒ, ಹೆಡ್ ಕಾನ್‌ಸ್ಟೆಬಲ್ ಸೇರಿದಂತೆ ಇತರೆ ಸಿಬ್ಬಂದಿಗಳನ್ನು ಅಮಾನತು ಮಾಡಲಾಗಿದೆ ಎಂದು ತಿಳಿಸಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.