ETV Bharat / bharat

ಜಪಾನ್​ನ ಖ್ಯಾತ ಸಿನಿಮಾ ನಿರ್ಮಾಣಕಾರ ನೊಬುಹಿಕೊ ಒಬಾಯಶಿ ನಿಧನ

author img

By

Published : Apr 11, 2020, 9:17 PM IST

Updated : Apr 11, 2020, 10:04 PM IST

ಶ್ವಾಸಕೋಶ ಕ್ಯಾನ್ಸರ್​ನಿಂದ ಬಳಲುತ್ತಿದ್ದ ಜಪಾನ್​ನ ಖ್ಯಾತ ಸಿನಿಮಾ ನಿರ್ಮಾಣಕಾರ ನೊಬುಹಿಕೊ ಒಬಾಯಶಿ ಇಂದು ಸಾವನ್ನಪ್ಪಿದ್ದಾರೆ. ತಮ್ಮ ಸಿನಿಮಾ ಜೀವನದಲ್ಲಿ ಸುಮಾರು 3 ಸಾವಿರ ಟಿವಿ ಜಾಹೀರಾತುಗಳನ್ನು ನಿರ್ಮಿಸಿರುವ ಹೆಗ್ಗಳಿಕೆ ಇವರದ್ದಾಗಿದೆ.

Nobuhiko Obayashi
ನೊಬುಹಿಕೊ ಒಬಾಯಶಿ

ವಾಷಿಂಗ್ಟನ್ (ಅಮೆರಿಕ) : ಜಪಾನ್​ನ ಖ್ಯಾತ ಸಿನಿಮಾ ನಿರ್ಮಾಣಕಾರ ನೊಬುಹಿಕೊ ಒಬಾಯಶಿ ತಮ್ಮ 82ನೇ ವಯಸ್ಸಿನಲ್ಲಿ ಶ್ವಾಸಕೋಶದ ಕ್ಯಾನ್ಸರ್​ನಿಂದ ಮೃತಪಟ್ಟಿದ್ದಾರೆ. ತಮ್ಮ ಸಿನಿಮಾ ಜೀವನದಲ್ಲಿ ಸುಮಾರು 3 ಸಾವಿರ ಟಿವಿ ಜಾಹೀರಾತುಗಳನ್ನು ನಿರ್ಮಿಸಿರುವ ಹೆಗ್ಗಳಿಕೆ ಇವರದ್ದಾಗಿದೆ.

1977ರಲ್ಲಿ ಬಂದ ''ಹೌಸ್​'' ಎಂಬ ಹಾರರ್​ ಫ್ಯಾಂಟಸಿ ಚಿತ್ರ ಇವರ ಮೊದಲ ಸಿನಿಮಾ ಆಗಿದ್ದು, ಜಪಾನ್​ನಲ್ಲಿ ಮಾತ್ರವಲ್ಲದೇ ವಿದೇಶಗಳಲ್ಲೂ ಮೆಚ್ಚುಗೆಗೆ ಪಾತ್ರವಾಗಿತ್ತು.

ಒಬಾಯಶಿ ಅವರಿಗೆ ಆಗಸ್ಟ್​ 2016ರಂದು ಶ್ವಾಸಕೋಶ ಕ್ಯಾನ್ಸರ್ ಪತ್ತೆಯಾಗಿತ್ತು. ಕ್ಯಾನ್ಸರ್ ನಾಲ್ಕನೇ ಹಂತದಲ್ಲಿದ್ದ ಕಾರಣ ಕೇವಲ ಮೂರು ತಿಂಗಳು ಬದುಕಬಹುದೆಂದು ಹೇಳಲಾಗಿತ್ತು. ಈ ವೇಳೆಯೂ ಅವರು ಸಿನಿಮಾ ನಿರ್ಮಾಣದಲ್ಲಿ ತೊಡಗಿಸಿಕೊಂಡಿದ್ದರು. 2017ರಲ್ಲಿ ಹನಗಟಮಿ ಹಾಗೂ ಈ ವರ್ಷ ಲಿಬ್ರಿಂತ್​ ಆಫ್​ ಸಿನಿಮಾ ಎಂಬ ಸಿನಿಮಾ ನಿರ್ಮಿಸಿದ್ದರು. ಲಿಬ್ರಿಂತ್​ ಆಫ್​ ಸಿನಿಮಾ ಕೊರೊನಾ ಹಾವಳಿ ಕಾರಣಕ್ಕೆ ಬಿಡುಗಡೆಯಾಗೊದು ಮುಂದೂಡಿಕೆಯಾಗಿದೆ.

Last Updated : Apr 11, 2020, 10:04 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.