ETV Bharat / bharat

ಅಪಘಾತದಿಂದ ಬೀದಿ ನಾಯಿಗಳನ್ನು ರಕ್ಷಿಸಲು ವೆಟರ್ನರಿ ವಿದ್ಯಾರ್ಥಿನಿಯ ಹೊಸ ಐಡಿಯಾ

ಬೀದಿನಾಯಿಗಳ ಅಪಘಾತ ತಪ್ಪಿಸಲು ವಿದ್ಯಾರ್ಥಿನಿವೋರ್ವರು ಶ್ವಾನಗಳ ಕುತ್ತಿಗೆಗೆ ಪ್ರತಿಫಲಿಸುವ ಬೆಲ್ಟ್ ಕಟ್ಟುವ ಕಾರ್ಯ ಮಾಡುತ್ತಿದ್ದಾರೆ. ಈ ಬೆಲ್ಟ್​ ದೂರದಿಂದಲೇ ಪ್ರತಿಫಲಿಸಿ, ವಾಹನ ಚಾಲಕರಿಗೆ ಮುಂದೆ ನಾಯಿ ಇದೆ ಎಂದು ಎಚ್ಚರಿಸುತ್ತದೆ.

New Delhi
ನವದೆಹಲಿ
author img

By

Published : Oct 11, 2020, 10:37 AM IST

ನವದೆಹಲಿ: ರಾಜಧಾನಿಯಲ್ಲಿ ಪಶುವೈದ್ಯಕೀಯ ಶಿಕ್ಷಣ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿನಿ ವಿಭಾ ತೋಮರ್​ ಅವರು ಅಪಘಾತದಲ್ಲಿ ಬೀದಿ ನಾಯಿಗಳ ಸಾವು-ನೋವು ತಡೆಯಲು ರೇಡಿಯಂ ಬೆಲ್ಟ್​​ ಅನ್ನು ಅವುಗಳ ಕುತ್ತಿಗೆಗೆ ಕಟ್ಟುವ ಕೆಲಸ ಮಾಡುತ್ತಿದ್ದಾರೆ.

ನವದೆಹಲಿಯಲ್ಲಿ ಬೀದಿ ನಾಯಿಗಳ ಸಾವು ತಡೆಲು ವಿದ್ಯಾರ್ಥಿನಿಯ ಹೊಸ ಐಡಿಯಾ

ಈ ಬೆಲ್ಟ್​​ ಬೆಳಕು ದೂರದಿಂದಲೇ ಪ್ರತಿಫಲಿಸುವುದರಿಂದ​ ವಾಹನ ಸವಾರರಿಗೆ ಮುಂದೆ ಪ್ರಾಣಿಯಿದೆ ಎಂಬುದು ಅರಿವಿಗೆ ಬರುತ್ತದೆ. ಆಗ ಅವರು ವಾಹನವನ್ನು ನಿಧಾನವಾಗಿ ಚಲಿಸುತ್ತಾರೆ. ಆ ಮೂಲಕ ಬೀದಿನಾಯಿಗಳಿಗೆ ಅಪಘಾತವಾಗದಂತೆ ತಡೆಯಬಹುದಾಗಿದೆ.

ಈ ಕುರಿತು ಪ್ರತಿಕ್ರಿಯಿಸಿರುವ ವಿದ್ಯಾರ್ಥಿನಿ ವಿಭಾ, ಲಾಕ್‌ಡೌನ್ ಸಮಯದಲ್ಲಿ, ನಾನು ದಿನಕ್ಕೆ ಸುಮಾರು 300 ಏರಿಯಾಗಳಿಗೆ ಭೇಟಿ ನೀಡಿದ್ದೆ. ಲಾಕ್​ಡೌನ್​ ಸಮಯದಲ್ಲಿ ವಾಹನಗಳು ಬಹುತೇಕ ರಸ್ತೆಗಳಿಗಿಯದ ಕಾರಣ ನಾಯಿಗಳು ರಸ್ತೆಮಧ್ಯೆಯೇ ರಾಜರೋಷವಾಗಿ ತಿರುಗಾಡುತ್ತಿದ್ದವು. ರಸ್ತೆಯಲ್ಲೇ ಮಲಗಿರುತ್ತಿದ್ದವು. ಆದರೆ ಲಾಕ್​ಡೌನ್​ ತೆರವುಗೊಂಡ ಬಳಿಕವೂ ನಾಯಿಗಳು ಇದೇ ಅಭ್ಯಾಸ ಮುಂದುವರಿಸಿದ್ದರಿಂದ ಅಪಘಾತಕ್ಕೊಳಗಾಗಿ ಸಾವನ್ನಪ್ಪಿದ್ದನ್ನು ನಾನು ಕಣ್ಣಾರೆ ಕಂಡೆ. ಈ ವೇಳೆ ನನಗೆ ಈ ಉಪಾಯ ಹೊಳೆಯಿತು ಎಂದು ತಿಳಿಸಿದ್ದಾರೆ.

ಹೀಗಾಗಿ ಶ್ವಾನಗಳನ್ನು ರಕ್ಷಿಸಲು ನಾನು ಈ ಬೆಲ್ಟ್​​ಗಳನ್ನು ಅವುಗಳ ಕುತ್ತಿಗೆಗೆ ಹಾಕುತ್ತಿದ್ದಾರೆ. ಜೊತೆಗೆ ಬೀದಿನಾಯಿಗಳಿರುವಲ್ಲಿಗೆ ತೆರಳಿ ಊಟವನ್ನು ಕೂಡ ವಿಭಾ ಹಾಕುತ್ತಿದ್ದಾರೆ. ಭವಿಷ್ಯದಲ್ಲಿ ಪ್ರಾಣಿಗಳ ಉಳಿವು ಮತ್ತು ಅಭಿವೃದ್ಧಿಗಾಗಿಯೇ ಬದುಕುವ ಕನಸು ಹಾಗೂ ಯೋಜನೆ ರೂಪಿಸಿರುವುದಾಗಿ ಅವರು ಹೇಳಿದರು. ತನ್ನ ಓದು ಪೂರ್ಣಗೊಳಿಸಿದ ನಂತರ ಪ್ರಾಣಿ ಪ್ರಿಯರ ಜೊತೆಗೂಡಿ ತಮ್ಮದೇ ಆದ ಒಂದು ಪ್ರಾಣಿ ಕಲ್ಯಾಣ ಸಂಘ ಸ್ಥಾಪಿಸಿ ಅವುಗಳ ಜೀವನವನ್ನು ಉತ್ತಮಗೊಳಿಸಲು ಸಹಾಯ ಮಾಡುವ ಬಯಕೆಯನ್ನು ವಿಭಾ ವ್ಯಕ್ತಪಡಿಸಿದ್ರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.