ETV Bharat / bharat

ಕೋವಿಡ್ ಲಸಿಕೆ ನಮ್ಮ ದೇಶದಲ್ಲೇ ತಯಾರಾಗುವ ಸಾಧ್ಯತೆಯಿದೆ: ಗೇಟ್ಸ್ ಫೌಂಡೇಶನ್

ಜಾಗತಿಕ ಬಿಕ್ಕಟ್ಟಾಗಿ ಪರಿಣಮಿಸಿರುವ ಕೋವಿಡ್​ಗೆ ದೇಶದಲ್ಲೇ ವ್ಯಾಕ್ಸಿನ್ ತಯಾರಾಗುವ ಸಾಧ್ಯತೆಯಿದೆ ಎಂದು ಗೇಟ್ಸ್ ಫೌಂಡೇಶನ್ ಸಿಇಒ ಮಾರ್ಕ್ ಸುಜ್ಮಾನ್ ಹೇಳಿದ್ದಾರೆ.

vaccines
ಕೋವಿಡ್ ಲಸಿಕೆ
author img

By

Published : Oct 21, 2020, 2:07 PM IST

ದೆಹಲಿ: ಖಾಸಗಿ ವಲಯದವರ ನೆರವಿನಿಂದ ದೇಶದಲ್ಲೇ ಕೋವಿಡ್ ಲಸಿಕೆ ತಯಾರಿಸುವ ಸಾಧ್ಯತೆಯಿದೆ ಎಂದು ಬಿಲ್ ಮತ್ತು ಮೆಲಿಂಡಾ ಗೇಟ್ಸ್ ಫೌಂಡೇಶನ್ ಸಿಇಒ ಮಾರ್ಕ್ ಸುಜ್ಮಾನ್ ಹೇಳಿದ್ದಾರೆ.

ಕೋವಿಡ್ ವಿರುದ್ಧ ಹೋರಾಡಲು ಭಾರತ ಸಾಧ್ಯವಾದಷ್ಟು ಕ್ರಮಗಳನ್ನು ಕೈಗೊಂಡಿದೆ. ಇದೊಂದು ಜಾಗತಿಕ ಬಿಕ್ಕಟ್ಟಾಗಿ ಪರಿಣಮಿಸಿರುವುದರಿಂದ ನಾವೀಗ ಎಲ್ಲ ದೇಶಗಳಿಗೆ ನೆರವಾಗುವ ಲಸಿಕೆ ಕಂಡು ಹಿಡಿಯಬೇಕು. ವೈರಸ್ ನಿಯಂತ್ರಣಕ್ಕೆ ನಮ್ಮ ಪ್ರತಿಷ್ಠಾನವು ಹಲವು ಹಂತಗಳಲ್ಲಿ ಕಾರ್ಯ ನಿರ್ವಹಿಸುತ್ತಿದೆ. ಕೊರೊನಾ ಲಸಿಕೆ ಕಂಡು ಹಿಡಿಯುವ ಸಲುವಾಗಿ ಈಗಾಗಲೇ 125 ದಶಲಕ್ಷ ಡಾಲರ್​ಗಳನ್ನು ಸಂಗ್ರಹಿಸಿದ್ದೇವೆ ಎಂದು ಸುಜ್ಮಾನ್ ತಿಳಿಸಿದರು.

ಕೋವಿಡ್ ವ್ಯಾಕ್ಸಿನ್ ಕಂಡು ಹಿಡಿಯುವುದಕ್ಕಾಗಿ ಕೆಲವು ನಿರ್ದಿಷ್ಟ ಹೂಡಿಕೆಗಳನ್ನು ನೇರವಾಗಿ ಬೆಂಬಲಿಸಿದ್ದೇವೆ. ಭಾರತೀಯ ಪಾಲುದಾರರಾದ ಸೀರಮ್ ಇನ್ಸ್​ಸ್ಟಿಟ್ಯೂಟ್ ಮತ್ತು ಗವಿ ಸಂಸ್ಥೆಯೊಂದಿಗೆ ನಿರಂತರಸಂಪರ್ಕದಲ್ಲಿದ್ದು, ಲಸಿಕೆ ಕಂಡು ಹಿಡಿಯುವುದರ ಬಗ್ಗೆ ಮಾಹಿತಿ ಪಡೆಯುತ್ತಿದ್ದೇವೆ ಎಂದರು.

ಈ ಜಾಗತಿಕ ಬಿಕ್ಕಟ್ಟು ನಮ್ಮೆಲ್ಲರಿಗೂ ಒಂದು ಪಾಠ ಕಲಿಸಿದೆ ಮೂಲಸೌಕರ್ಯಗಳ ಅಗತ್ಯತೆಯನ್ನ ತಿಳಿಸಿದೆ. ಜೊತೆಗೆ ಈಗ ಕಂಡು ಹಿಡಿಯಲಿರುವ ಲಸಿಕೆ ಜಾಗತಿಕ, ಪ್ರಾದೇಶಿಕ ಎಲ್ಲಾ ಹಂತಗಳಲ್ಲಿಯೂ ಮೂಲಸೌಕರ್ಯವಾಗಿ ಪರಿಣಮಿಸಲಿದೆ. ಕೋವಿಡ್ ಬಿಕ್ಕಟ್ಟು ಅಭಿವೃದ್ಧಿ ಶೀಲ ರಾಷ್ಟ್ರಗಳಲ್ಲಿ, ವಿಶೇಷವಾಗಿ ಮಹಿಳೆಯರಲ್ಲಿ ವೈಜ್ಞಾನಿಕ ನಾಯಕತ್ವವನ್ನು ಸಶಕ್ತಗೊಳಿಸುವ ವೇದಿಕೆಯನ್ನ ಒದಗಿಸಿದೆ ಎಂದರು.

ಗ್ರ್ಯಾಂಡ್ ಚಾಲೆಂಜಸ್ ಇಂಡಿಯಾವನ್ನು ಭಾರತ ಸರ್ಕಾರದ ಜೈವಿಕ ತಂತ್ರಜ್ಞಾನ ಇಲಾಖೆ ಮತ್ತು ಬಿಲ್ & ಮೆಲಿಂಡಾ ಗೇಟ್ಸ್ ಫೌಂಡೇಶನ್‌ನ ಸಹಭಾಗಿತ್ವದಲ್ಲಿ 2012 ರಲ್ಲಿ ಸ್ಥಾಪಿಸಲಾಯಿತು.

ಗ್ರ್ಯಾಂಡ್ ಚಾಲೆಂಜಸ್ ಇಂಡಿಯಾ ಕೃಷಿ, ಪೋಷಣೆ, ನೈರ್ಮಲ್ಯ, ತಾಯಿಯ ಮತ್ತು ಮಕ್ಕಳ ಆರೋಗ್ಯದಿಂದ ಹಿಡಿದು ಸಾಂಕ್ರಾಮಿಕ ರೋಗಗಳವರೆಗೆ ಆರೋಗ್ಯ ಮತ್ತು ಅಭಿವೃದ್ಧಿ ಆದ್ಯತೆಗಳ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುತ್ತದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.