ETV Bharat / bharat

ರಾಜ್ಯಸಭೆ ಸಭಾಪತಿ ನೇತೃತ್ವದಲ್ಲಿ ಸಂಸದೀಯ ವ್ಯವಹಾರಗಳ ಪರಿಶೀಲನಾ ಸಭೆ - Prahlad Joshi

ರಾಜ್ಯಸಭೆ ಸಭಾಪತಿ ಎಂ.ವೆಂಕಯ್ಯ ನಾಯ್ಡು ಇಂದು ಸಂಸದೀಯ ವ್ಯವಹಾರಗಳ ಪರಿಶೀಲನಾ ಸಭೆ ನಡೆಸಿದ್ದಾರೆ. ಸಂಸತ್‌ನಲ್ಲಿ ಖಾಲಿ ಉಳಿದಿರುವ ಸ್ಥಾನಗಳ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆದಿದ್ದಾರೆ. ಮಾತ್ರವಲ್ಲದೇ ಲಾಕ್‌ಡೌನ್‌ 4.0 ಮುಗಿದ ಬಳಿಕ ಇತ್ತೀಚೆಗೆ ಅವಿರೋಧವಾಗಿ ಆಯ್ಕೆಯಾಗಿರುವ ಸದಸ್ಯರ ಪ್ರಮಾಣ ವಚನ ಸ್ವೀಕಾರ ಕಾರ್ಯಕ್ರಮವನ್ನು ಆಯೋಜಿಸುವಂತೆಯೂ ಸೂಚಿಸಿದ್ದಾರೆ.

venkaiah-naidu-reviews-preparedness-for-holding-regular-parl-panel-meetings
ರಾಜ್ಯಸಭೆ ಸಭಾಪತಿಯಿಂದ ಸಂಸದೀಯ ವ್ಯವಹಾರಗಳ ಪರಿಶೀಲನಾ ಸಭೆ
author img

By

Published : May 25, 2020, 4:31 PM IST

ನವದೆಹಲಿ: ದೇಶದಲ್ಲಿ ವಿಮಾನ ಮತ್ತು ರೈಲು ಸೇವೆ ಆರಂಭವಾದ ಬೆನ್ನಲ್ಲೇ ರಾಜ್ಯಸಭೆ ಸಭಾಪತಿ ಎಂ.ವೆಂಕಯ್ಯ ನಾಯ್ಡು ಇಂದು ಸಂಸದೀಯ ವ್ಯವಹಾರಗಳ ಪರಿಶೀಲನಾ ಸಭೆ ನಡೆಸಿದ್ದಾರೆ. ಸಂಸತ್‌ನಲ್ಲಿ ಖಾಲಿ ಉಳಿದಿರುವ ಸ್ಥಾನಗಳ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆದಿದ್ದಾರೆ.

ಲೋಕಸಭಾ ಸ್ಪೀಕರ್‌ ಓಂ ಬಿರ್ಲಾ, ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್‌ ಜೋಶಿ, ಉಭಯ ಸದನಗಳ ಮುಖ್ಯ ಕಾರ್ಯದರ್ಶಿಗಳು ಹಾಗೂ ಇತರ ಹಿರಿಯ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದ್ದರು.

ಕೋವಿಡ್‌-19 ಮಹಾಮಾರಿ ಹಿನ್ನೆಲೆಯಲ್ಲಿ ಪಾಲಿಸಬೇಕಾದ ನಿಯಮಗಳ ಬಗ್ಗೆ ಇದೇ ವೇಳೆ ಚರ್ಚೆ ನಡೆಸಿದ್ದಾರೆ.

ಒಂದು ಗಂಟೆ ನಡೆದ ಸುದೀರ್ಘ ಮಾತುಕತೆಯಲ್ಲಿ 24 ಇಲಾಖೆಗಳಿಗೆ ಸಂಬಂಧಿಸಿದ ಸ್ಟ್ಯಾಂಡಿಂಗ್‌ ಕಮಿಟಿಗಳ ದೈನಂದಿನ ಸಭೆ ನಡೆಸಲು ಸಂಸತ್‌ನಲ್ಲಿ 9 ಕೊಠಡಿಗಳು ಮತ್ತು ಉಭಯ ಸದನಗಳ ಸಮಿತಿಗಳ ಸಭೆ ನಡೆಸಲು 6 ಕೊಠಡಿಗಳನ್ನು ಗುರುತಿಸಿದ್ದಾರೆ.

ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಸಲುವಾಗಿ ಹೆಚ್ಚುವರಿಯಾಗಿ ಕುರ್ಚಿ, ಮೈಕ್ರೋ ಫೋನ್ ಅಳವಡಿಸುವಂತೆ ಸಭಾಪತಿ ಎಂ.ವೆಂಕಯ್ಯನಾಯ್ಡು ಮತ್ತು ಲೋಕಸಭಾ ಸ್ಪೀಕರ್‌ ಬಿರ್ಲಾ ಅವರು ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಇಲಾಖೆಗಳಿಗೆ ಸಂಬಂಧಿಸಿದ ಸ್ಟ್ಯಾಂಡಿಂಗ್‌ ಕಮಿಟಿ 31 ಸದಸ್ಯರನ್ನು ಹೊಂದಿದೆ. ಇದರಲ್ಲಿ ರಾಜ್ಯಸಭೆಯಿಂದ 10 ಹಾಗೂ ಲೋಕಸಭೆಯಿಂದ 21 ಸದಸ್ಯರು ಇದ್ದಾರೆ.

ಮೇ 31ರಂದು 4ನೇ ಹಂತದ ಲಾಕ್‌ಡೌನ್‌ ಮುಗಿದ ಬಳಿಕ ಹೊಸದಾಗಿ ಆಯ್ಕೆಯಾಗಿರುವ 37 ಸದಸ್ಯರ ಪ್ರಮಾಣವಚನ ಕಾರ್ಯಕ್ರಮವನ್ನು ಏರ್ಪಡಿಸುವಂತೆಯೂ ರಾಜ್ಯಸಭೆ ಸಭಾಧ್ಯಕ್ಷರು ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಈ ಸದಸ್ಯರು ಅವಿರೋಧವಾಗಿ ಆಯ್ಕೆಯಾಗಿದ್ದರು. ಇದೇ ವಿಚಾರ ಸಂಬಂಧ ರಾಜ್ಯಸಭೆಯ ವಿಪಕ್ಷ ನಾಯಕ ಗುಲಾಂ ನಬಿ ಅಜಾದ್‌ ಅವರೊಂದಿಗೆ ಮಾತುಕತೆ ನಡೆಸಿದ್ದಾರೆ.

ಖಾಲಿ ಉಳಿದಿರುವ 18 ಸ್ಥಾನಗಳನ್ನು ತುಂಬುವ ಬಗ್ಗೆ ಮುಖ್ಯ ಚುನಾವಣಾ ಆಯುಕ್ತರೊಂದಿಗೂ ಮಾತುಕತೆ ನಡೆಸಿದ್ದಾರೆ. ಚುನಾವಣಾ ಆಯೋಗವೂ ಇದರ ಪರಿಶೀಲನ ನಡೆಸುತ್ತಿದೆ ಎಂದು ಹೇಳಿದ್ದಾರೆ. ಒಟ್ಟು 18 ಸ್ಥಾನಗಳ ಪೈಕಿ ಆಂಧ್ರ, ಗುಜರಾತ್‌ನ ತಲಾ 4 ಸ್ಥಾನಗಳು, ಮಧ್ಯಪ್ರದೇಶ, ರಾಜಸ್ಥಾನ ತಲಾ 3 ಸ್ಥಾನಗಳು, ಜಾರ್ಖಂಡ್‌ 2 ಹಾಗೂ ಮೇಘಾಲಯ, ಮಣಿಪುರದಲ್ಲಿ ತಲಾ 1 ಸ್ಥಾನಗಳು ಖಾಲಿಯಾಗಿವೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.