ನವದೆಹಲಿ: ಉತ್ತರ ಪ್ರದೇಶದ ಹಥ್ರಾಸ್ನಲ್ಲಿ ನಡೆದಿದೆ ಎನ್ನಲಾದ ಅತ್ಯಾಚಾರ ಪ್ರಕರಣ ಕುರಿತು ದಿನದಿಂದ ದಿನಕ್ಕೆ ಹೆಚ್ಚು ಆಕ್ರೋಶ ವ್ಯಕ್ತವಾಗುತ್ತಿದೆ. ಇದೀಗ ಸಂತ್ರಸ್ತೆ ಕುಟುಂಬವನ್ನು ಭೇಟಿಯಾಗಲು ತೆರಳುತ್ತಿದ್ದ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಹಾಗೂ ಪ್ರಿಯಾಂಕಾ ವಾದ್ರಾ ಅವರನ್ನು ವಶಕ್ಕೆ ಪಡೆಯಲಾಗಿದೆ.
ಸಂತ್ರಸ್ತೆ ಕುಟುಂಬ ಭೇಟಿ ಮಾಡಲು ತೆರಳುತ್ತಿದ್ದ ರಾಹುಲ್ ಗಾಂಧಿ ಹಾಗೂ ಪ್ರಿಯಾಂಕಾ ಗಾಂಧಿಗೆ ಯಮುನಾ ಎಕ್ಸ್ಪ್ರೆಸ್ ಹೈವೇ ಬಳಿ ತಡೆ ಹಿಡಿಯಲಾಯಿತು. ನಂತರ ಅವರನ್ನು ವಶಕ್ಕೆ ಪಡೆಯಲಾಗಿದೆ ಎಂದು ತಿಳಿದುಬಂದಿದೆ.
-
#WATCH Rahul Gandhi, who has been stopped at Yamuna Expressway on his way to Hathras, asks police, "I want to walk to Hathras alone. Please tell me under which section are you arresting me."
— ANI UP (@ANINewsUP) October 1, 2020 " class="align-text-top noRightClick twitterSection" data="
Police says, "We are arresting you under Section 188 IPC for violation of an order. " pic.twitter.com/uJKwPxauv5
">#WATCH Rahul Gandhi, who has been stopped at Yamuna Expressway on his way to Hathras, asks police, "I want to walk to Hathras alone. Please tell me under which section are you arresting me."
— ANI UP (@ANINewsUP) October 1, 2020
Police says, "We are arresting you under Section 188 IPC for violation of an order. " pic.twitter.com/uJKwPxauv5#WATCH Rahul Gandhi, who has been stopped at Yamuna Expressway on his way to Hathras, asks police, "I want to walk to Hathras alone. Please tell me under which section are you arresting me."
— ANI UP (@ANINewsUP) October 1, 2020
Police says, "We are arresting you under Section 188 IPC for violation of an order. " pic.twitter.com/uJKwPxauv5
ಈ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿರುವ ರಾಹುಲ್ ಗಾಂಧಿ, ಪೊಲೀಸರು ನನ್ನನ್ನು ತಳ್ಳಿದರು. ಲಾಠಿ ಚಾರ್ಜ್ ಸಹ ಮಾಡಿದ್ದಾರೆ ಎಂದು ರಾಹುಲ್ ಗಂಭೀರ ಆರೋಪ ಮಾಡಿದ್ದಾರೆ.
-
Earlier pictures of Congress leader #RahulGandhi being roughed up by Uttar Pradesh police at Yamuna Expressway, while he was on his way to #Hathras pic.twitter.com/tsJVuo4V1N
— ANI UP (@ANINewsUP) October 1, 2020 " class="align-text-top noRightClick twitterSection" data="
">Earlier pictures of Congress leader #RahulGandhi being roughed up by Uttar Pradesh police at Yamuna Expressway, while he was on his way to #Hathras pic.twitter.com/tsJVuo4V1N
— ANI UP (@ANINewsUP) October 1, 2020Earlier pictures of Congress leader #RahulGandhi being roughed up by Uttar Pradesh police at Yamuna Expressway, while he was on his way to #Hathras pic.twitter.com/tsJVuo4V1N
— ANI UP (@ANINewsUP) October 1, 2020
ನಾನು ನಡೆದುಕೊಂಡು ಹೋಗಿ ಹಥ್ರಾಸ್ ತಲುಪುತ್ತೇನೆ. ಯಾವ ಸೆಕ್ಷನ್ ಅಡಿ ನನ್ನನ್ನು ಬಂಧನ ಮಾಡುತ್ತೀರಿ ಎಂದು ರಾಹುಲ್ ಪ್ರಶ್ನಿಸಿದ್ದಾರೆ. ಇದಕ್ಕೆ ಪ್ರತಿಕ್ರಿಯೆ ನೀಡಿದ ಪೊಲೀಸ್ ಅಧಿಕಾರಿ ಸೆಕ್ಷನ್ 188 ಐಪಿಸಿ ಅಡಿ ಬಂಧಿಸುತ್ತಿರುವುದಾಗಿ ತಿಳಿಸಿದ್ದಾರೆ.
ಕಳೆದ ಎರಡು ವಾರಗಳ ಹಿಂದೆ ಯುವತಿ ಮೇಲೆ ನಾಲ್ವರು ಕಾಮುಕರು ಅತ್ಯಾಚಾರವೆಸಗಿದ್ದರು ಎಂಬ ಆರೋಪ ಕೇಳಿಬಂದಿತ್ತು. ದೆಹಲಿಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದ ವೇಳೆ ಸಂತ್ರಸ್ತೆ ಮೊನ್ನೆ ಸಾವನ್ನಪ್ಪಿದ್ದಳು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಉತ್ತರಪ್ರದೇಶ ಸೇರಿದಂತೆ ಎಲ್ಲೆಡೆ ಆಕ್ರೋಶ ಭುಗಿಲೆದ್ದಿದೆ. ಹೀಗಾಗಿ ಪ್ರಕರಣವನ್ನ ಎಸ್ಐಟಿಗೆ ವಹಿಸಲಾಗಿದೆ.