ETV Bharat / bharat

ಭಯೋತ್ಪಾದಕರ ಗುಂಡಿನ ದಾಳಿ: ಉತ್ತರ ಪ್ರದೇಶ ಮೂಲದ ಯೋಧ ಹುತಾತ್ಮ

ಭಯೋತ್ಪಾದಕರ ಗುಂಡಿನ ದಾಳಿಯಲ್ಲಿ ಹುತಾತ್ಮರಾಗಿರುವ ದೀಪ್ ಚಂದ್ ವರ್ಮಾ ಉತ್ತರ ಪ್ರದೇಶದ ಸಿಕಾರ್ ಜಿಲ್ಲೆಯವರು. ಮಾರ್ಚ್ 4, 2003ರಂದು ಸಿಆರ್‌ಪಿಎಫ್​ಗೆ ನೇಮಕಗೊಂಡಿದ್ದರು. ಅವರು ಪತ್ನಿ ಮತ್ತು ಮೂವರು ಮಕ್ಕಳನ್ನು ಅಗಲಿದ್ದಾರೆ.

deep chand varma
deep chand varma
author img

By

Published : Jul 2, 2020, 11:45 AM IST

ಸಿಕಾರ್ (ಉತ್ತರ ಪ್ರದೇಶ): ಜಮ್ಮು ಮತ್ತು ಕಾಶ್ಮೀರದ ಸೊಪೋರ್‌ನಲ್ಲಿ ನಿನ್ನೆ ಕೇಂದ್ರ ಮೀಸಲು ಪೊಲೀಸ್ ಪಡೆಯ (ಸಿಆರ್‌ಪಿಎಫ್) ಮೇಲೆ ಭಯೋತ್ಪಾದಕರು ಗುಂಡು ಹಾರಿಸಿದ್ದರು. ಈ ಘಟನೆಯಲ್ಲಿ ಹುತಾತ್ಮರಾದ ಯೋಧ ದೀಪ್ ಚಂದ್ ವರ್ಮಾ ಉತ್ತರ ಪ್ರದೇಶದ ಸಿಕಾರ್ ಜಿಲ್ಲೆಯವರು.

39 ವರ್ಷದ ದೀಪ್ ಚಂದ್ ವರ್ಮಾ ಮಾರ್ಚ್ 4, 2003ರಂದು ಸಿಆರ್‌ಪಿಎಫ್​ಗೆ ನೇಮಕಗೊಂಡಿದ್ದರು. ಕಳೆದ ಒಂದು ವರ್ಷದ ಹಿಂದೆ ಜಮ್ಮು ಮತ್ತು ಕಾಶ್ಮೀರದಲ್ಲಿ ಹೆಡ್-ಕಾನ್ಸ್​​ಟೇಬಲ್ ಆಗಿ ನೇಮಕಗೊಂಡಿದ್ದರು. 2004ರಲ್ಲಿ ವಿವಾಹವಾಗಿದ್ದ ಅವರು ಪತ್ನಿ ಮತ್ತು ಮೂವರು ಮಕ್ಕಳನ್ನು ಅಗಲಿದ್ದಾರೆ.

ಸಿಆರ್‌ಪಿಎಫ್ ಮೂಲಗಳ ಪ್ರಕಾರ, ನಿನ್ನೆ ಬೆಳಗ್ಗೆ 7:30ರ ಸುಮಾರಿಗೆ ಸಿಆರ್‌ಪಿಎಫ್‌ನ 179 ಬೆಟಾಲಿಯನ್ ಗಸ್ತು ಕರ್ತವ್ಯಕ್ಕಾಗಿ ಮಾಡೆಲ್ ಟೌನ್ ಚೌಕ್ ಸೊಪೋರ್ ತಲುಪಿತ್ತು. ಆಗ ಹತ್ತಿರದ ಪ್ರಾರ್ಥನಾ ಸ್ಥಳದಲ್ಲಿ ಅಡಗಿ ಕುಳಿತಿದ್ದ ಭಯೋತ್ಪಾದಕರು ಸೈನಿಕರ ಮೇಲೆ ನಿರ್ದಾಕ್ಷಿಣ್ಯವಾಗಿ ಗುಂಡು ಹಾರಿಸಿದ್ದರು.

ದುರ್ಘಟನೆಯ್ಲಿ ಸಿಆರ್‌ಪಿಎಫ್ ಕಾನ್ಸ್​ಟೇಬಲ್​ ಭೋಯಾ ರಾಜೇಶ್, ಹೆಡ್ ಕಾನ್ಸ್​ಟೇಬಲ್ ದೀಪ್ ಚಂದ್ ವರ್ಮಾ, ನಿಲೇಶ್ ಚಾವ್ಡೆ ಮತ್ತು ಕಾನ್ಸ್​ಟೇಬಲ್ ದೀಪಕ್ ಪಾಟೀಲ್ ಗಾಯಗೊಂಡಿದ್ದರು. ಬಳಿಕ ದೀಪ್ ಚಂದ್ ವರ್ಮಾ ಹುತಾತ್ಮರಾಗಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.