ಅಯೋಧ್ಯೆ(ಉತ್ತರಪ್ರದೇಶ): ಅಯೋಧ್ಯೆಯಲ್ಲಿ ನಿರ್ಮಾಣಗೊಳ್ಳುತ್ತಿರುವ ಶ್ರೀರಾಮ ಮಂದಿರ ಸ್ಥಳಕ್ಕಿಂದು ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಭೇಟಿ ನೀಡಿ, ಅದರ ಪರರಿಶಿಲನೆ ನಡೆಸಿದರು.
ಆಗಸ್ಟ್ 5ರಂದು ಭೂಮಿ ಪೂಜೆ ಶಿಲಾನ್ಯಾಸ ಕಾರ್ಯಕ್ರಮ ನಡೆಯಲಿದ್ದು, ಇದರಲ್ಲಿ ಪ್ರಧಾನಿ ನರೇಂದ್ರ ಮೋದಿ ಭಾಗಿಯಾಗಲಿದ್ದಾರೆ. ಹೀಗಾಗಿ ಭದ್ರತೆ ದೃಷ್ಠಿಯಿಂದ ಯೋಗಿ ಆದಿತ್ಯನಾಥ್ ಪರಿಶೀಲನೆ ನಡೆಸಿ, ಹಿರಿಯ ಅಧಿಕಾರಿಗಳಿಗೆ ಕೆಲವೊಂದು ಮಹತ್ವದ ಸೂಚನೆ ನೀಡಿದ್ದಾಗಿ ತಿಳಿದು ಬಂದಿದೆ.
ಸ್ಥಳ ಪರಿಶೀಲನೆ ನಡೆಸಿದ ಬಳಿಕ ಯೋಗಿ ಆದಿತ್ಯನಾಥ್ ಹನುಮನ್ಗಿರಿಯಲ್ಲಿ ಆಂಜನೇಯನ ವಿಶೇಷ ಪೂಜೆ ಸಲ್ಲಿಕೆ ಮಾಡಿದರು. ಈ ವೇಳೆ ಮಾತನಾಡಿದ ಮುಖ್ಯಮಂತ್ರಿ, ಭೂಮಿ ಪೂಜೆ ಕಾರ್ಯಕ್ರಮಕ್ಕೆ ಎಲ್ಲ ರೀತಿಯ ವ್ಯವಸ್ಥೆ ಮಾಡಲಾಗಿದ್ದು, ಕೋವಿಡ್ಗೆ ಹೆಚ್ಚಿನ ಒತ್ತು ನೀಡಲಾಗಿದೆ ಎಂದರು. ಯಾರಿಗೆ ಆಹ್ವಾನ ನೀಡಲಾಗಿದೆ ಅವರು ಮಾತ್ರ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದು, ಪ್ರಧಾನಿ ಮೋದಿ ಆಗಮಿಸಲಿದ್ದಾರೆ ಎಂದು ತಿಳಿಸಿದ್ದಾರೆ.
ಇದೇ ವೇಳೆ ಕಾಂಗ್ರೆಸ್ ವಿರುದ್ಧ ಹರಿಹಾಯ್ದಿರುವ ಯೋಗಿ ಆದಿತ್ಯನಾಥ್, ಈ ಪಕ್ಷ ತನ್ನ ಹಿಂದಿನ ಇತಿಹಾಸ ನೋಡಬೇಕು. ರಾಮ ಹುಟ್ಟಿದ ಸ್ಥಳದಲ್ಲಿ ಅಡಿಪಾಯ ಹಾಕಲು ಅವರಿಗೆ ಇಷ್ಟವಿಲ್ಲ. ಈ ವಿಷಯದಲ್ಲಿ ಅಂತಿಮ ಹಂತದ ನಿರ್ಧಾರ ಬರುವುದು ಕೂಡ ಅವರಿಗೆ ಇಷ್ಟಪಟ್ಟಿರಲಿಲ್ಲ. ಜಾತಿ, ಧರ್ಮ ಮತ್ತು ನಂಬಿಕೆ ಆಧಾರದ ಮೇಲೆ ಜನರನ್ನ ವಿಭಜಿಸಿದೆ ಎಂದು ಹೇಳಿದ್ದರು.
-
#WATCH: UP CM Yogi Adityanath says in Ayodhya, "...Congress should look in its past. They didn't want that a foundation stone be laid where Lord Ram was placed. They didn't want the conclusion of the issue...They divide people on the basis of caste, religion and beliefs." pic.twitter.com/VAMU4Nvm8W
— ANI UP (@ANINewsUP) August 3, 2020 " class="align-text-top noRightClick twitterSection" data="
">#WATCH: UP CM Yogi Adityanath says in Ayodhya, "...Congress should look in its past. They didn't want that a foundation stone be laid where Lord Ram was placed. They didn't want the conclusion of the issue...They divide people on the basis of caste, religion and beliefs." pic.twitter.com/VAMU4Nvm8W
— ANI UP (@ANINewsUP) August 3, 2020#WATCH: UP CM Yogi Adityanath says in Ayodhya, "...Congress should look in its past. They didn't want that a foundation stone be laid where Lord Ram was placed. They didn't want the conclusion of the issue...They divide people on the basis of caste, religion and beliefs." pic.twitter.com/VAMU4Nvm8W
— ANI UP (@ANINewsUP) August 3, 2020
ದೇಶದ ಇತಿಹಾಸದಲ್ಲಿ ಇದೊಂದು ಐತಿಹಾಸಿಕ ದಿನ. ಆಗಸ್ಟ್ 4 ಹಾಗೂ 5ರಂದು ಮನೆಯಿಂದಲೇ ದೀಪ ಬೆಳಗಿಸುವಂತೆ ಮನವಿ ಮಾಡಲಾಗಿದೆ ಎಂದು ಯೋಗಿ ಆದಿತ್ಯನಾಥ್ ತಿಳಿಸಿದ್ದರು. ಪ್ರಧಾನಿ ಮೋದಿ ಆಗಸ್ಟ್ 5ರಂದು ಹನುಮನ್ಗಿರಿಗೆ ಭೇಟಿ ನೀಡುತ್ತಿರುವ ಕಾರಣ ಸ್ಯಾನಿಟೈಸ್ ಮಾಡಲಾಗಿದ್ದು, ಭೂಮಿ ಪೂಜೆ ಕಾರ್ಯಕ್ರಮಕ್ಕೂ ಮೊದಲು ಅವರು ಈ ಸ್ಥಳಕ್ಕೆ ಭೇಟಿ ನೀಡಲಿದ್ದಾರೆ ಎಂದು ಅಲ್ಲಿನ ಆರ್ಚಕರು ತಿಳಿಸಿದ್ದಾರೆ.