ಲಖನೌ: ಉತ್ತರ ಪ್ರದೇಶದ 11 ವಿಧಾನಸಭಾ ಕ್ಷೇತ್ರಗಳಿಗೆ ನಡೆದ ಉಪ ಚುನಾವಣೆಯಲ್ಲಿ ಬಿಜೆಪಿ 7 ಕ್ಷೇತ್ರಗಳಲ್ಲಿ ಪ್ರಾಬಲ್ಯ ಮೆರೆದಿದ್ದರೆ, ಎಸ್‌ಪಿ 3 ಹಾಗೂ ಬಿಜೆಪಿಯ ಮಿತ್ರ ಪಕ್ಷ ಅಪ್ನಾ ದಳ 1 ಕ್ಷೇತ್ರ ಗೆದ್ದುಕೊಂಡಿದೆ.
ನಾನಾ ಕಾರಣಗಳಿಂದ ತೆರವಾಗಿದ್ದ 11 ಕ್ಷೇತ್ರಗಳ ಉಪ ಚುನಾವಣೆಯ ಅಕ್ಟೋಬರ್ 21ರಂದು ಮತದಾನ ನಡೆದಿತ್ತು. 7 ಸ್ಥಾನಗಳನ್ನು ಬಿಜೆಪಿ ಮತ್ತು 1 ಅದರ ಮಿತ್ರ ಅಪ್ನಾ ದಳ ಹಾಗೂ ಮೂರು ಸ್ಥಾನಗಳು ಎಸ್‌ಪಿ ಪಾಲಾಗಿವೆ. 2017ರ ವಿಧಾನಸಭಾ ಚುನಾವಣೆಯಲ್ಲಿ ಮಯಾವತಿಯ ಬಿಎಸ್ಪಿ ಜಲಾಲ್‌ಪುರ ಕ್ಷೇತ್ರ ಗೆದ್ದುಕೊಂಡಿತ್ತು. ಆದರೆ, ಆ ಕ್ಷೇತ್ರವನ್ನು ಅದು ಕಳೆದುಕೊಂಡು ಮತಗಳಿಕೆ ಪ್ರಮಾಣ ಸಹ ಕ್ಷೀಣಿಸಿದೆ.
ಗಂಗೋಹ್, ಇಗ್ಲಾಸ್ (ಎಸ್‌ಸಿ), ಲಖನೌ ಕಂಟೋನ್ಮೆಂಟ್, ಗೋವಿಂದನಗರ, ಮಾಣಿಕ್ಪುರ, ಜೈದ್‌ಪುರ, ಬಲ್ಹಾ (ಎಸ್‌ಸಿ) ಮತ್ತು ಘೋಸಿ ಕ್ಷೇತ್ರಗಳಲ್ಲಿ ಬಿಜೆಪಿ ಗೆದ್ದಿದೆ. ಪ್ರತಾಪಗಢ ಕ್ಷೇತ್ರ ಅಪ್ನಾ ದಳ ಪಾಲಾಗಿದೆ. ಉಳಿದ ಕ್ಷೇತ್ರಗಳು ಎಸ್‌ಪಿ ಪಡೆದುಕೊಂಡಿದೆ.