ETV Bharat / bharat

ವಿಶೇಷ ಅಂಕಣ: ಕೊರೊನ ವೈರಸ್ ವಿರುದ್ಧ ಹೋರಾಡಲು ಸಿಂಥೆಟಿಕ್ ಪ್ರತಿಕಾಯಗಳ ಬಳಕೆ ..!

ಆಸ್ಟ್ರೇಲಿಯಾದ ಫ್ಲಿಂಡರ್ಸ್ ವಿಶ್ವವಿದ್ಯಾಲಯದಲ್ಲಿ ಜನರಲ್ ಮೆಡಿಸಿನ್‌ನಲ್ಲಿ ಎಂ ಡಿ ಅಧ್ಯಯನ ಮಾಡುತ್ತಿರುವ ಡಾ. ಕೆ. ಲಾಲಿತ್ಯ, ವೈರಸ್ ಹರಡುವಿಕೆಯ ವಿರುದ್ಧ ಹೋರಾಡಲು ಕೃತಕ / ಸಿಂಥೆಟಿಕ್ ಪ್ರತಿಕಾಯಗಳನ್ನು ರೂಪಿಸುವ ಕುರಿತು ಪರಿಕಲ್ಪನಾ ವರದಿ ಮಂಡಿಸಿದ್ದು ಅದು ಇಂಟರ್ ನ್ಯಾಷನಲ್ ಜರ್ನಲ್ ಆಫ್ ಮೆಡಿಸಿನ್ ನಲ್ಲಿ ಪ್ರಕಟಾಗಿದೆ.

Use of synthetic antibodies to fight coronavirus
ಕೊರೊನ ವೈರಸ್ ವಿರುದ್ಧ ಹೋರಾಡಲು ಸಿಂಥೆಟಿಕ್ ಪ್ರತಿಕಾಯಗಳ ಬಳಕೆ
author img

By

Published : Apr 24, 2020, 2:03 PM IST

ಪ್ಲಾಸ್ಮಾ ಚಿಕಿತ್ಸೆಗೆ ಪರ್ಯಾಯ ಮಾರ್ಗ, ವಿವಿಧ ಪ್ರಯೋಗಾಲಯಗಳಲ್ಲಿ ಲಕ್ಷಗಟ್ಟಲೆ ಪ್ರಮಾಣದಲ್ಲಿ ತಯಾರಿಸಲು ಸಾಧ್ಯ.

ಹೈದರಾಬಾದ್​​: ಕೊರೊನ ವೈರಸ್ ಹರಡುವುದನ್ನು ತಡೆಯಲು ವಿಶ್ವದ ಎಲ್ಲೆಡೆ ವೈದ್ಯಕೀಯ ತಜ್ಞರು ಮತ್ತು ಸಂಶೋಧಕರು, ವಿವಿಧ ಪ್ರಯೋಗಾಲಯಗಳಲ್ಲಿ ಎಡಬಿಡದೆ ದುಡಿಯುತ್ತಿದ್ದಾರೆ. ಸಾಂಕ್ರಾಮಿಕ ಪಿಡುಗಿಗೆ ತುತ್ತಾದವರನ್ನು ಉಳಿಸಿಕೊಳ್ಳಲು ವಿಭಿನ್ನ ಚಿಕಿತ್ಸಾ ವಿಧಾನಗಳನ್ನು ಅಳವಡಿಸಿಕೊಳ್ಳಲಾಗಿದೆ. ಸರಿಯಾದ ಔಷಧಿಗಳು ಮತ್ತು ಲಸಿಕೆಗಳ ಕೊರತೆಯಿಂದಾಗಿ ವೈರಸ್‌ನ ಪ್ಲಾಸ್ಮಾ ಆಧರಿಸಿ ಸಂಶೋಧನೆ ಕೈಗೊಳ್ಳಬೇಕಾದ ಅನಿವಾರ್ಯತೆ ವೈದ್ಯರಿಗೆ ಎದುರಾಗಿದೆ. ಚಿಕಿತ್ಸೆಯಲ್ಲಿ ಈ ತಂತ್ರ ಬಳಕೆ ಮಾಡಲಾಗುತ್ತಿದ್ದು ಇದು ರೋಗಿಗಳನ್ನು ಒಂದು ಹಂತದವರೆಗೆ ಗುಣಮುಖರನ್ನಾಗಿ ಮಾಡಲು ಸಹಾಯ ಮಾಡುತ್ತದೆ, ಆದರೆ ನಿರೀಕ್ಷೆಯಷ್ಟು ಅಲ್ಲ. ಪ್ಲಾಸ್ಮಾ ಚಿಕಿತ್ಸೆ ಒದಗಿಸಲು ಕೊರೊನ ವೈರಸ್‌ನಿಂದ ಗುಣಮುಖರಾದವರಿಂದ ರಕ್ತ ಸಂಗ್ರಹ ಮಾಡಬೇಕು. ಆದರೂ, ಹಾಗೆ ಬದುಕಿ ಉಳಿದವರಲ್ಲಿ ಎಷ್ಟು ಮಂದಿ ರಕ್ತದಾನ ಮಾಡಲು ಸಿದ್ಧ ಇದ್ದಾರೆ ಎಂದು ತಿಳಿದಿಲ್ಲ.

ಈ ಸಮಸ್ಯೆ ಹೋಗಲಾಡಿಸಲು, ಕೆಲವು ದಿನಗಳ ಹಿಂದೆ, ಆಸ್ಟ್ರೇಲಿಯಾದ ಫ್ಲಿಂಡರ್ಸ್ ವಿಶ್ವವಿದ್ಯಾಲಯದಲ್ಲಿ ಜನರಲ್ ಮೆಡಿಸಿನ್‌ನಲ್ಲಿ ಎಂ ಡಿ ಅಧ್ಯಯನ ಮಾಡುತ್ತಿರುವ ಡಾ. ಕೆ. ಲಾಲಿತ್ಯ, ವೈರಸ್ ಹರಡುವಿಕೆಯ ವಿರುದ್ಧ ಹೋರಾಡಲು ಕೃತಕ / ಸಿಂಥೆಟಿಕ್ ಪ್ರತಿಕಾಯಗಳನ್ನು ರೂಪಿಸುವ ಕುರಿತು ಪರಿಕಲ್ಪನಾ ವರದಿ ಮಂಡಿಸಿದ್ದು ಅದು ಇಂಟರ್ ನ್ಯಾಷನಲ್ ಜರ್ನಲ್ ಆಫ್ ಮೆಡಿಸಿನ್ ನಲ್ಲಿ ಪ್ರಕಟಾಗಿದೆ. ಪ್ರಸ್ತುತ ಚೆನ್ನೈನಲ್ಲಿ ನೆಲೆಸಿರುವ ಅವರು ಚಲನಚಿತ್ರ ಸಂಗೀತ ಲೋಕದ ದಂತಕಥೆ ಘಂಟಸಾಲ ವೆಂಕಟೇಶ್ವರ ರಾವ್ ಅವರ ಮೊಮ್ಮಗಳು. ಅವರು ಸಿಂಥೆಟಿಕ್ ಪ್ರತಿಕಾಯಗಳ ಬಗ್ಗೆ ವಿಶೇಷವಾಗಿ ಮಾಹಿತಿಯನ್ನು ಹಂಚಿಕೊಂಡಿದ್ದಾರೆ.

ಫೇಜ್ ಡಿಸ್ ಪ್ಲೇ ವಿಧಾನದಲ್ಲಿ ಡಿ ಎನ್ ಎ

2020 ರ ಜನವರಿ 20 ರಿಂದ 2020 ರ ಮಾರ್ಚ್ 25 ರವರೆಗಿನ ಅವಧಿಯಲ್ಲಿ, ಚೀನಾದ ಶೆನ್ ಝೆನ್ ಆಸ್ಪತ್ರೆಯ ವೈದ್ಯರು ಪ್ಲಾಸ್ಮಾಥೆರಪಿ ಮೂಲಕ ಕೋವಿಡ್ 19 ಸೋಂಕಿತ ಐವರು ರೋಗಿಗಳಿಗೆ ಪ್ರತಿಕಾಯಗಳನ್ನು ನೀಡಿದರು. ಚಿಕಿತ್ಸೆ ಪಡೆದ ಅವರಲ್ಲಿ ಮೂವರನ್ನು ಮನೆಗೆ ಕಳುಹಿಸಲಾಗಿದ್ದು ಬಳಿಕ ಚೇತರಿಸಿಕೊಳ್ಳುತ್ತಿರುವುದು ಕಂಡುಬಂದಿದೆ. ಹೀಗೆ ಸೋಂಕಿನಿಂದ ಚೇತರಿಸಿಕೊಂಡ ರೋಗಿಗಳಿಂದ ರಕ್ತವನ್ನು ಪಡೆಯುವುದು ಪ್ಲಾಸ್ಮಾ ಚಿಕಿತ್ಸೆಗೆ ಅಗತ್ಯ ಇದೆ. ಆದರೂ ಅಂತಹ ಕೆಲವು ಜನರು ಸ್ವಯಂಪ್ರೇರಣೆಯಿಂದ ರಕ್ತ ನೀಡಲು ಮುಂದೆ ಬರುವುದಿಲ್ಲ. ಈ ಪರಿಸ್ಥಿತಿಯನ್ನು ಎದುರಿಸಲು, ಬಿಳಿ ರಕ್ತ ಕಣಗಳನ್ನು ಐಡೆಂಟಿಕಲ್ ಪ್ರತಿಕಾಯ ಡಿ ಎನ್ ಎ ಕೋಶಗಳಾಗಿ ಪರಿವರ್ತನೆ ಮಾಡುವ ಅಗತ್ಯ ಇದೆ.

ಸಿಂಥೆಟಿಕ್ ಪ್ರತಿಕಾಯ ರೂಪಿಸಲು ಫೇಜ್ ಪ್ರದರ್ಶನ ವಿಧಾನವನ್ನು ಬಳಸಿಕೊಂಡು ಪ್ರತಿಕಾಯಗಳು ಮತ್ತು ಡಿ ಎನ್ ಎಗಳನ್ನು ಸೃಷ್ಟಿ ಮಾಡಬೇಕು. ಪ್ರಯೋಗಾಲಯಗಳಲ್ಲಿ ಜೀವಕೋಶಗಳ ಮೇಲೆ ‘ವೈರೋ-ಡಿ 6’ ಸುರಿಯುವಾಗ ಹಾಗೆ ಸೃಷ್ಟಿಸಲಾದ ಪ್ರತಿಕಾಯಗಳನ್ನು ಬಫರ್ ಫ್ಯೂಲ್ಡ್ ಎಲ್ಯುಸಾನ್ ಮೂಲಕ ಶುದ್ಧೀಕರಣ ಮಾಡಬೇಕು. ಈ ಹಂತದಲ್ಲಿ, ಪ್ರತಿಕಾಯವನ್ನು ರೂಪಿಸಲು ಅಗತ್ಯವಾದ ಅಂಗಾಂಶಗಳು ಒಂದೇ ಕೋಶಕ್ಕೆ ಅಂಟಿಕೊಳ್ಳುತ್ತವೆ ಮತ್ತು ಈ ಪ್ರಕ್ರಿಯೆಯು ಪೂರ್ಣಗೊಳ್ಳಲು ಕನಿಷ್ಠ ಒಂದು ತಿಂಗಳು ತೆಗೆದುಕೊಳ್ಳುತ್ತದೆ. ಸರ್ಕಾರ ನಡೆಸುವ ಪ್ರಯೋಗಾಲಯಗಳು, ಸಂಶೋಧನಾ ಕೇಂದ್ರಗಳು ಅಥವಾ ಖಾಸಗಿ ಪ್ರಯೋಗಾಲಯಗಳಲ್ಲಿ ಅಧಿಕೃತ ಅನುಮತಿ ಪಡೆದು ಪ್ರಯೋಗ ನಡೆಸಬಹುದು.

50 ದಿನಗಳಲ್ಲಿ ಫಲಿತಾಂಶ

ಒಂದು ಪ್ರತಿಕಾಯವನ್ನು ಸೃಷ್ಟಿಸಿದ ನಂತರ, ಅದನ್ನು ಲಕ್ಷಾಂತರ ಪ್ರತಿಕಾಯಗಳಾಗಿ ರೂಪಿಸಬಹುದು. ಆದರೂ ಮೊಲಗಳು ಮತ್ತು ಕೋತಿಗಳಂತಹ ಪ್ರಾಣಿಗಳ ಮೇಲೆ ಅವುಗಳನ್ನು ಮೊದಲು ಪರೀಕ್ಷೆ ಮಾಡಬೇಕು. ಕೊರೊನ ವೈರಸ್ ಇನ್ ಕ್ಯುಬೇಶನ್ ಅವಧಿ 14 ದಿನಗಳು. ಈ ಅವಧಿಯಲ್ಲಿ ಅವುಗಳ ಮೇಲೆ ಉಂಟಾಗುವ ಪರಿಣಾಮಗಳನ್ನು ಪರಿಗಣಿಸಿ, ಸಿಂಥೆಟಿಕ್ ಪ್ರತಿಕಾಯ ಸೃಷ್ಟಿಯಲ್ಲಿ ಅಗತ್ಯವಾದ ಬದಲಾವಣೆಗಳು ಮತ್ತು ಸೇರ್ಪಡೆಗಳನ್ನು ಮಾಡಲು ಸಾಧ್ಯ. ಪ್ರತಿಕಾಯಗಳನ್ನು ರೂಪಿಸಲು ಮೂವತ್ತು ದಿನ ಹಿಡಿಯಲಿದ್ದು ಇನ್ ಕ್ಯುಬೇಶನ್ ಮತ್ತು ಪರೀಕ್ಷೆಗಾಗಿ ಹದಿನಾಲ್ಕು ದಿನಗಳು ತೆಗೆದುಕೊಳ್ಳಲಿದೆ. ನಿಖರ ಫಲಿತಾಂಶ ಹೊರಹೊಮ್ಮಲು ಸುಮಾರು 44 ದಿನಗಳಿಂದ 50 ದಿನಗಳು ಬೇಕಾಗುತ್ತದೆ. ರೋಗಿಯ ರಕ್ತಕ್ಕೆ ಚುಚ್ಚಿದ ಈ ಪ್ರತಿಕಾಯದ ಸೃಷ್ಟಿಯನ್ನು ವೈದ್ಯಕೀಯ ಪರಿಭಾಷೆಯಲ್ಲಿ ‘ನಿಷ್ಕ್ರಿಯ ರೋಗನಿರೋಧಕ ಶಕ್ತಿ’ ಎಂದು ಕರೆಯಲಾಗುತ್ತದೆ.

ಗಂಭೀರ ಕಾಯಿಲೆಗಳು ಮತ್ತು ವೈರಲ್ ಸಮಸ್ಯೆಗಳಿಂದ ಬಳಲುತ್ತಿರುವ ಜನರಲ್ಲಿ ರೋಗನಿರೋಧಕ ಶಕ್ತಿ ಹೆಚ್ಚಿಸಲು ಈ ವಿಧಾನವನ್ನು ವಿಜ್ಞಾನಿಗಳು 1894 ರಷ್ಟು ಹಿಂದೆಯೇ ಪರಿಚಯಿಸಿದ್ದಾರೆ. ಅದರ ನಂತರ, ಕ್ಷಯ, ನೆಕ್ರೋಸಿಸ್ ಹಾಗೂ ಟೈಫಾಯ್ಡ್ ರೀತಿಯ ತೀವ್ರವಾದ ಕಾಯಿಲೆಗಳಿಂದ ಬಳಲುತ್ತಿರುವವರಿಗೆ ಯಶಸ್ವಿಯಾಗಿ ನಿಷ್ಕ್ರಿಯ ಪ್ರತಿರೋಧಕವನ್ನು ನೀಡಲಾಯಿತು. ಕ್ಯಾನ್ಸರ್ ಗುಣಪಡಿಸಲು ಇದನ್ನು ಕೆಲವು ದೇಶಗಳಲ್ಲಿ ಈಗಾಗಲೇ ಬಳಸಲಾಗುತ್ತಿದೆ. ಕೊರೊನ ವೈರಸ್‌ಗಾಗಿ ವಿನ್ಯಾಸಗೊಳಿಸಲಾದ ಇಂತಹ ಪ್ರತಿಕಾಯವನ್ನು ಕೊರೊನ ವೈರಸ್‌ ಗುಣಪಡಿಸುವ ಭವಿಷ್ಯದ ಲಸಿಕೆಯಾನ್ನಾಗಿ ಸಹ ಬಳಸಬಹುದು. ಕೋವಿಡ್ -19 ವೈರಸ್ ವಿರುದ್ಧ ಹೋರಾಡಲು ಪ್ರಸ್ತುತ ಹಲವಾರು ಪ್ರಯೋಗಗಳನ್ನು ನಡೆಸಲಾಗುತ್ತಿದೆ. ಅದಕ್ಕೆ ಹೋಲಿಸಿದರೆ, ಹೀಗೆ ಸಿಂಥೆಟಿಕ್ ಪ್ರತಿಕಾಯ ರೂಪಿಸುವುದು ವಿಶ್ವವ್ಯಾಪಿ ಆಗಿರುವ ಕೋವಿಡ್ - 19 ಸಾಂಕ್ರಾಮಿಕ ಪಿಡುಗನ್ನು ಹೊಡೆದೋಡಿಸಲು ಸುಲಭದ ಮಾರ್ಗ ಎನ್ನಿಸಲಿದೆ .

ಡಾ.ಕೆ.ಲಾಲಿತ್ಯ, ಈನಾಡು, ಹೈದರಾಬಾದ್ .

For All Latest Updates

ETV Bharat Logo

Copyright © 2024 Ushodaya Enterprises Pvt. Ltd., All Rights Reserved.