ETV Bharat / bharat

'ಹೌಡಿ ಮೋದಿ' ಸಮಾವೇಶಕ್ಕೆ ಟ್ರಂಪ್ ಎಂಟ್ರಿ, ಚೀನಾ, ಪಾಕ್​ಗೆ ತಲೆನೋವೇಕೆ? - ಭಾರತ- ಅಮೆರಿಕ

ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ಕಳೆದ ಒಂದು ತಿಂಗಳಿನಿಂದ ಭಾರತದ ಮೇಲೆ ಪರಮಾಣು ದಾಳಿಯ ಬೆದರಿಕೆ ಹಾಕುತ್ತಿದ್ದಾರೆ. ಅಮೆರಿಕ ಆಡಳಿತವು ಪಾಕಿಸ್ತಾನ ಬೇಜವಾಬ್ದಾರಿ ದೇಶ ಎಂಬ ತೀರ್ಮಾನಕ್ಕೆ ಬಂದಿದೆ. ಅಫ್ಘಾನಿಸ್ತಾನದಿಂದಾಗಿ ಅಮೆರಿಕದ ಕಾರ್ಯತಂತ್ರದಲ್ಲಿ ಪಾಕಿಸ್ತಾನ ಒಂದು ಭಾಗವಷ್ಟೇ. ಈಗ ಅಫ್ಘಾನ್ ತಾಲಿಬಾನ್ ಜೊತೆಗಿನ ಮಾತುಕತೆ ಅಂತಿಮ ಹಂತಕ್ಕೆ ತಲುಪಿದ ನಂತರ, 'ಅಫ್ಘಾನ್​ನ ತಾಲಿಬಾನ್​ಗಳ ಮೇಲೆ ಮಿಲಿಟರಿ ಮತ್ತು ರಾಜತಾಂತ್ರಿಕ ಒತ್ತಡ ಹೆಚ್ಚಿಸಲು ಪಾಕಿಸ್ತಾನದ ಮೇಲೆ ಅಮೆರಿಕದ ಒತ್ತಡ ಅಧಿಕವಾಗಲಿದೆ. ಕಾಶ್ಮೀರದ ವಿಷಯದಲ್ಲಿ ಅಮೆರಿಕ ಹಸ್ತಕ್ಷೇಪ ಮಾಡಲು ಬಯಸುವುದಿಲ್ಲ ಎಂಬುದನ್ನು ಪಾಕ್​ ಕಳೆದ ಕೆಲವು ದಿನಗಳಿಂದ ನಡೆಯುತ್ತಿರುವ ಸರಣಿ ಸರಣಿ ಘಟನೆಗಳಿಂದ ಅರಿತುಕೊಂಡಿದೆ. ಟ್ರಂಪ್ ಮಧ್ಯಸ್ಥಿಕೆ ವಹಿಸುವ ಪ್ರಸ್ತಾಪ ಕೇವಲ ಕಣ್ಣೀರೊರೆಸುವ ತಂತ್ರವಾಗಿದೆ. ‘ಹೌಡಿ ಮೋದಿ’ ಸಮಾವೇಶದಲ್ಲಿ ಭಾಗವಹಿಸುವ ಟ್ರಂಪ್ ಅವರ ನಿರ್ಧಾರ, ಇಂಡೋ- ಅಮೆರಿಕ ಸಂಬಂಧಗಳು ಪಾಕಿಸ್ತಾನದ ಭೀತಿಯಿಂದ ಸಂಪೂರ್ಣವಾಗಿ ಮುಕ್ತಗೊಳಿಸಿದೆ ಎಂಬುದು ಸ್ಪಷ್ಟವಾಗಿದೆ.

ಸಾಂದರ್ಭಿಕ ಚಿತ್ರ
author img

By

Published : Sep 22, 2019, 5:01 AM IST

ಮೂರು ದಿನಗಳ ಹಿಂದೆಷ್ಟೇ ಹ್ಯೂಸ್ಟನ್‌ನಲ್ಲಿ ಸೆಪ್ಟೆಂಬರ್ 22ರಂದು ನಡೆಯಲಿರುವ ‘ಹೌಡಿ ಮೋದಿ’ ಸಮಾವೇಶದಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕೂಡ ಭಾಗವಹಿಸಲಿದ್ದಾರೆ ಎಂದು ಶ್ವೇತಭವನದ ವಕ್ತಾರರು ಘೋಷಿಸಿದರು. ಇದು ಪಾಕಿಸ್ತಾನ ಮತ್ತು ಚೀನಾದಲ್ಲಿನ ರಾಜತಾಂತ್ರಿಕ ಕಚೇರಿಗಳಲ್ಲಿ ಕೋಲಾಹಲ ಸೃಷ್ಟಿಗೆ ಕಾರಣವಾಯಿತು. ಪಾಕಿಸ್ತಾನದ ಟಿವಿ ಮಾಧ್ಯಮಗಳು ಇದು ಟ್ರಂಪ್‌ರ ಮತ್ತೊಂದು ಗಿಮಿಕ್; ಈ ನಿರ್ಧಾರದ ಮೂಲಕ ಭಾರತ-ಅಮೆರಿಕ ಸಂಬಂಧ ಇನ್ನಷ್ಟು ಗಟ್ಟಿಗೊಳ್ಳುವುದರ ಸಂಕೇತ; ಇದರ ಪ್ರಯತ್ನವಾಗಿ ಟ್ರಂಪ್​ ಭಾಗವಹಿಸಲಿದ್ದಾರೆ; ವಿದೇಶಾಂಗ ನೀತಿಗಳನ್ನು ಗಂಭೀರವಾಗಿ ತೆಗೆದುಕೊಳ್ಳಲು ಇಂತಹ ನಿರ್ಧಾರಕ್ಕೆ ಮುಂದಾಗಿದೆ ಎಂದು ವ್ಯಾಖ್ಯಾನಿಸಿದವು.

2020ರಲ್ಲಿ ನಡೆಯಲಿರುವ ಅಧ್ಯಕ್ಷೀಯ ಚುನಾವಣೆ ಗಮನದಲ್ಲಿಟ್ಟುಕೊಂಡು ಟ್ರಂಪ್ ಈ ನಿರ್ಧಾರ ತೆಗೆದುಕೊಂಡಿದ್ದಾರೆ ಎಂಬುದನ್ನು ಹೇಳಲು ಸಹ ಮರೆಯಲಿಲ್ಲ. ಆದರೆ, ಈ ನಿರ್ಧಾರದ ಹಿನ್ನೆಲೆಯನ್ನು ಅರ್ಥಮಾಡಿಕೊಳ್ಳುವುದು ಬಹಳ ಮುಖ್ಯವಾಗಿದೆ. ದಕ್ಷಿಣ ಚೀನಾ ಸಮುದ್ರ ವ್ಯಾಪ್ತಿಯಲ್ಲಿ ತನ್ನ ಕಾರ್ಯತಂತ್ರದ ಪ್ರಾಬಲ್ಯ ಹೆಚ್ಚಿಸುವ ಮೂಲಕ, ಚೀನಾ ಅಮೆರಿಕ ಸೇರಿದಂತೆ ಹಲವು ದೇಶಗಳ ನ್ಯಾಯಸಮ್ಮತ ಹಿತಾಸಕ್ತಿಗಳನ್ನು ಪ್ರಶ್ನಿಸುತ್ತಿದೆ. ಚೀನಾ, ದಕ್ಷಿಣ ಚೀನಾ ಸಮುದ್ರ ವ್ಯಾಪ್ತಿಯಲ್ಲಿ ಅತಿದೊಡ್ಡ ರಾಷ್ಟ್ರ. ಕಡಲ ಪ್ರದೇಶಗಳಲ್ಲಿನ ವಿಯೆಟ್ನಾಂ ಮತ್ತು ಫಿಲಿಪೈನ್ಸ್‌ನಂತಹ ಅನೇಕ ಸಣ್ಣ ದ್ವೀಪ ರಾಷ್ಟ್ರಗಳ ಮೇಲೆ ತನ್ನ ಹಕ್ಕನ್ನು ಪ್ರತಿಪಾದಿಸುತ್ತಿದೆ. ಇಲ್ಲಿನ ಬಹುಪಾಲು ಭಾಗದಲ್ಲಿ ಚೀನಾ ತನ್ನ ಹಕ್ಕನ್ನು ಕಾಯ್ದಿರಿಸಿಕೊಂಡಿದೆ. ಮತ್ತೊಂದೆಡೆ ಅಮೆರಿಕ ಮತ್ತು ಚೀನಾ ನಡುವಿನ ವ್ಯಾಪಾರದ ಯುದ್ಧ ಇನ್ನೊಂದು ಮಗ್ಗಲು ಚಾಚಿಕೊಂಡಿದೆ.

'ಅಮೆರಿಕದ ಕಂಪನಿಗಳ ಬೌದ್ಧಿಕ ಹಕ್ಕುಗಳನ್ನು ಕದಿಯುವ ಮೂಲಕ ಚೀನಾ ಶತಕೋಟಿ ಡಾಲರ್‌ಗಳಷ್ಟು ಸಂಪಾದಿಸುತ್ತಿದೆ' ಎಂದು ಅಮೆರಿಕ ಅಧ್ಯಕ್ಷ ಟ್ರಂಪ್ ಬಹಿರಂಗವಾಗಿ ಆರೋಪಿಸಿದ್ದಾರೆ. ಅಷ್ಟೇ ಅಲ್ಲ, ಚೀನಾದಲ್ಲಿ ಕಾರ್ಯನಿರ್ವಹಿಸುತ್ತಿರುವ ಅಮೆರಿಕದ ಕಂಪೆನಿಗಳು ತಮ್ಮ ವಹಿವಾಟುಗಳನ್ನು ಸ್ಥಗಿತಗೊಳಿಸಬೇಕು ಅಥವಾ ಬೇರೆ ರಾಷ್ಟ್ರಗಳಿಗೆ ಹೋಗಬೇಕೆಂದು ಟ್ರಂಪ್ ವಿನಂತಿಸಿದ್ದಾರೆ. ಇಂತಹ ಸನ್ನಿವೇಶದಲ್ಲಿ ಅಮೆರಿಕದ ರಕ್ಷಣಾ ಸಂಸ್ಥೆಯು ಏಷ್ಯಾ- ಪೆಸಿಫಿಕ್‌ಗಿಂತ ಇಂಡೋ-ಪೆಸಿಫಿಕ್ ಕಡಲ ಸುರಕ್ಷತೆಯ ಹೊಸ ಪರಿಕಲ್ಪನೆಯತ್ತ ಗಮನ ನೆಟ್ಟಿದೆ. ಚೀನಾದ ಮಿಲಿಟರಿ ಶಕ್ತಿಯನ್ನು ಎದುರಿಸಲು ಭಾರತೀಯ ನೌಕಾಪಡೆಯು ಕೂಡ ದೊಡ್ಡ ಪಾತ್ರ ವಹಿಸಲಿದೆ.

ಅಮೆರಿಕ, ಭಾರತ, ಜಪಾನ್ ಮತ್ತು ಆಸ್ಟ್ರೇಲಿಯಾ ನಡುವಿನ ವಾರ್ಷಿಕ ಜಂಟಿ ಮಿಲಿಟರಿ ಸಮರಾಭ್ಯಾಸ ಸಹ ಈ ಸಂದರ್ಭದಲ್ಲಿ ಪರಿಗಣಿಸಬೇಕು. ಅಮೆರಿಕದೊಂದಿಗಿನ ನಿಕಟ ಸಂಬಂಧವು ಚೀನಾ ಜತೆಗಿನ ಸಂಬಂಧದ ಮೇಲೆ ಪ್ರತಿಕೂಲ ಪರಿಣಾಮ ಬೀರಬಾರದು ಎಂಬುದು ಭಾರತದ ನೀತಿಯಾಗಿತ್ತು. ಆದರೆ, ಇತ್ತೀಚೆಗೆ ಜಮ್ಮು ಮತ್ತು ಕಾಶ್ಮೀರದ ವಿಷಯದಲ್ಲಿ ಚೀನಾ ಬಹಿರಂಗವಾಗಿ ಪಾಕಿಸ್ತಾನದತ್ತ ಒಲವು ತೋರಿದ್ದರಿಂದ ಭಾರತ ತನ್ನ ನೀತಿಯನ್ನು ಅನಿವಾರ್ಯವಾಗಿ ಬದಲಾಯಿಸಬೇಕಾಯಿತು. 'ವ್ಯಾಪಾರ ಯುದ್ಧವು ಯಾವಾಗಲೂ ತಪ್ಪಲ್ಲ' ಎಂಬ ವಿದೇಶಾಂಗ ಸಚಿವ ಎಸ್. ಜೈಶಂಕರ್ ಅವರ ಅಭಿಪ್ರಾಯ ಸೂಕ್ತವಾಗಿದೆ. ಅದು ವ್ಯಾಪಾರವನ್ನು ಸಮತೋಲನಗೊಳಿಸಿದರೆ ಅದನ್ನು ಸಕಾರಾತ್ಮಕವಾದ ದೃಷ್ಟಿಯಲ್ಲಿ ನೋಡಬೇಕು. ವ್ಯಾಪಾರ ಸೇರಿದಂತೆ ಇತರ ವಿಷಯಗಳಲ್ಲಿ ಪರಸ್ಪರ ನಡುವಿನ ಸಹಕಾರದ ವ್ಯಾಪ್ತಿ ಸಂಕುಚಿತಗೊಳ್ಳುತ್ತಿದೆ ಎಂಬುದು ಚೀನಾಕ್ಕೆ ನೇರವಾದ ಸಂದೇಶವಾಗಿದೆ.

ಭಾರತವು ಚೀನಾ ವಿರೋಧಿ ಮಿಲಿಟರಿ ಗುಂಪಿನ ಭಾಗವಾಗಲು ಬಯಸುತ್ತದೆ ಎಂಬುದು ಇದರ ಅರ್ಥವಲ್ಲ. ‘ಹೌಡಿ ಮೋದಿ’ ಸಮಾವೇಶದಲ್ಲಿ ಟ್ರಂಪ್ ಭಾಗವಹಿಸುತ್ತಿರುವುದು ಚೀನಾಕ್ಕೆ ಸ್ಪಷ್ಟ ಸಂದೇಶವಿದೆ. ಚೀನಾದ ಆರ್ಥಿಕ ಮತ್ತು ಮಿಲಿಟರಿ ಬಲವನ್ನು ದುರ್ಬಲಗೊಳಿಸಲು ಅಮೆರಿಕ ನಿರ್ಧರಿಸಿದೆ. ಈ ಅಭಿಯಾನದಲ್ಲಿ ಭಾರತವನ್ನು ಪ್ರಬಲ ಮಿತ್ರನನ್ನಾಗಿ ಅದು ನೋಡುತ್ತಿದೆ. ಜಾಗತಿಕ ರಾಜಕೀಯ ವೇದಿಕೆಯಲ್ಲಿ ಚೀನಾ- ಪಾಕಿಸ್ತಾನವನ್ನು ಅವಳಿ ಜವಳಿಯಂತೆ ನೋಡಲಾಗುತ್ತಿದೆ.

ಭದ್ರತಾ ಮಂಡಳಿಯಲ್ಲಿ ಜಮ್ಮು ಮತ್ತು ಕಾಶ್ಮೀರದ ಪ್ರಶ್ನೆ ಉದ್ಬವಿಸಿದ್ದಾಗ ಚೀನಾ ಪಾಕಿಸ್ತಾನವನ್ನು ಬೆಂಬಲಿಸಿದ ರೀತಿ ಭಾರತ- ಚೀನಾ ಸಂಬಂಧದ ಮೇಲೆ ನೇರ ನಕಾರಾತ್ಮಕ ಪರಿಣಾಮ ಬೀರಿವೆ. ಕಾಶ್ಮೀರಕ್ಕೆ ಸಂವಿಧಾನದ 370 ಮತ್ತು 35ಎ ಸೆಕ್ಷನ್‌ ವಾಪಸ್​ ಪಡೆದ ನಂತರ, ಈ ಬಗ್ಗೆ ಪಾಕಿಸ್ತಾನವು ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತದ ವಿರುದ್ಧ ತನಗೆ ಬೆಂಬಲ ನೀಡುವಂತೆ ಅಭಿಯಾನ ಆರಂಭಿಸಿತ್ತು. ಚೀನಾ ಮತ್ತು ಟರ್ಕಿ ಹೊರತುಪಡಿಸಿ ಬೇರೆ ಯಾವುದೇ ದೇಶಗಳು ಭಾರತದ ನಿರ್ಧಾರದ ವಿರುದ್ಧ ಒಂದು ಮಾತು ಹಾಡಲಿಲ್ಲ.
ಇದು ಭಾರತದ ಆಂತರಿಕ ವಿಷಯ ಎಂದು ಅಮೆರಿಕದ ಆಡಳಿತ ಸ್ಪಷ್ಟವಾಗಿ ಹೇಳಿತು. ಅಧ್ಯಕ್ಷ ಟ್ರಂಪ್, ಕಾಶ್ಮೀರ ವಿಷಯದಲ್ಲಿ ಮಧ್ಯಸ್ಥಿಕೆ ವಹಿಸುವ ಮೂಲಕ ಇಮ್ರಾನ್ ಖಾನ್ ಅವರನ್ನು ಸಮಾಧಾನಪಡಿಸಲು ಪ್ರಯತ್ನಿಸಿದ್ದರೂ ಭಾರತ ತಕ್ಷಣವೇ ಈ ಪ್ರಯತ್ನವನ್ನು ತಟಸ್ಥಗೊಳಿಸಿತು. ಈಗ ‘ಹೌಡಿ ಮೋದಿ’ ಸಮಾವೇಶದಲ್ಲಿ ಭಾಗವಹಿಸುವುದಾಗಿ ಘೋಷಿಸುವ ಮೂಲಕ ಅಧ್ಯಕ್ಷ ಟ್ರಂಪ್, ಕಾಶ್ಮೀರ ವಿಷಯದಲ್ಲಿ ಭಾರತ ವಿರುದ್ಧ ಬೆಂಬಲ ನಿರೀಕ್ಷಿಸದಂತೆ ಪಾಕ್​ಗೆ ಸ್ಪಷ್ಟ ಸಂದೇಶ ರವಾನಿಸಿದ್ದಾರೆ. ಅಮೆರಿಕ-ಭಾರತದ ನಡುವಿನ ಸಂಬಂಧದಲ್ಲಿ ಪಾಕಿಸ್ತಾನವು ಇನ್ನು ಮುಂದೆ ಅಲ್ಪನಾಗಲಿದೆ.

ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ಅವರು ಕಳೆದ ಒಂದು ತಿಂಗಳಿನಿಂದ ಭಾರತ ಮೇಲೆ ಪರಮಾಣು ದಾಳಿಯ ಬೆದರಿಕೆ ಹಾಕುತ್ತಿದ್ದಾರೆ. ಅಮೆರಿಕ ಆಡಳಿತವು ಪಾಕಿಸ್ತಾನ ಬೇಜವಾಬ್ದಾರಿ ದೇಶ ಎಂಬ ತೀರ್ಮಾನಕ್ಕೆ ಬಂದಿದೆ. ಅಫ್ಘಾನಿಸ್ತಾನದಿಂದಾಗಿ ಅಮೆರಿಕದ ಕಾರ್ಯತಂತ್ರದಲ್ಲಿ ಪಾಕಿಸ್ತಾನ ಒಂದು ಭಾಗವಷ್ಟೆ. ಈಗ ಅಫ್ಘಾನ್ ತಾಲಿಬಾನ್ ಜೊತೆಗಿನ ಮಾತುಕತೆ ಒಂದು ಅಂತಿಮ ಹಂತಕ್ಕೆ ತಲುಪಿದ ನಂತರ, 'ಅಫ್ಘಾನ್​ನ ತಾಲಿಬಾನ್​ಗಳ ಮೇಲೆ ಮಿಲಿಟರಿ ಮತ್ತು ರಾಜತಾಂತ್ರಿಕ ಒತ್ತಡವನ್ನು ಹೆಚ್ಚಿಸಲು ಪಾಕಿಸ್ತಾನದ ಮೇಲೆ ಅಮೆರಿಕದ ಒತ್ತಡ ಅಧಿಕವಾಗಲಿದೆ. ಕಾಶ್ಮೀರದ ವಿಷಯದಲ್ಲಿ ಅಮೆರಿಕ ಹಸ್ತಕ್ಷೇಪ ಮಾಡಲು ಬಯಸುವುದಿಲ್ಲ ಎಂಬುದನ್ನು ಪಾಕ್​ ಕಳೆದ ಕೆಲವು ದಿನಗಳಿಂದ ನಡೆಯುತ್ತಿರುವ ಸರಣಿ ಸರಣಿ ಘಟನೆಗಳಿಂದ ಅರಿತುಕೊಂಡಿದೆ. ಟ್ರಂಪ್ ಮಧ್ಯಸ್ಥಿಕೆ ವಹಿಸುವ ಪ್ರಸ್ತಾಪ ಕೇವಲ ಕಣ್ಣೀರೊರೆಸುವ ತಂತ್ರವಾಗಿದೆ. ‘ಹೌಡಿ ಮೋದಿ’ ಸಮಾವೇಶದಲ್ಲಿ ಭಾಗವಹಿಸುವ ಟ್ರಂಪ್ ಅವರ ನಿರ್ಧಾರ, ಇಂಡೋ- ಅಮೆರಿಕ ಸಂಬಂಧಗಳು ಪಾಕಿಸ್ತಾನದ ಭೀತಿಯಿಂದ ಸಂಪೂರ್ಣವಾಗಿ ಮುಕ್ತಗೊಳಿಸಿದೆ ಎಂಬುದು ಸ್ಪಷ್ಟವಾಗಿದೆ.

Intro:Body:Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.