ವಾಷಿಂಗ್ಟನ್: ಇರಾಕ್ನಲ್ಲಿರುವ ಅಮೆರಿಕ ಸೇನಾ ಕ್ಯಾಂಪ್ಗಳ ಮೇಲೆ ಇರಾನ್ ದಾಳಿ ನಡೆಸಿದ ಹಿನ್ನೆಲೆ ಪ್ರತಿದಾಳಿ ನಡೆಸಲು ಮುಂದಾದ ಅಮೆರಿಕಾದ ಅಧ್ಯಕ್ಷ ಡೊನಾಲ್ಟ್ ಟ್ರಂಪ್ಗೆ ಯುಎಸ್ ಹೌಸ್ ನಿರ್ಧಾರ ಕೈಗೊಳ್ಳಲು ಕೆಲವೊಂದು ನಿರ್ಬಂಧಗಳನ್ನ ಹೇರಿದೆ.
ನಿನ್ನೆ ಈ ಸಂಬಂಧ ಯುಎಸ್ ಹೌಸ್ನಲ್ಲಿ ನಡೆದ ವೋಟಿಂಗ್ನಲ್ಲಿ 224 ಕ್ಕೆ 194 ಮತದ ಬಲವನ್ನು ಡೊನಾಲ್ಟ್ ಟ್ರಂಪ್ ಪಡೆದುಕೊಂಡಿದ್ದಾರೆ. ಇರಾನ್ ವಿರುದ್ಧದ ಯುನೈಟೆಡ್ ಸ್ಟೇಟ್ಸ್ ಸಶಸ್ತ್ರ ಪಡೆಗಳ ಬಳಕೆಯನ್ನು ನಿಲ್ಲಿಸಲು ಅಧ್ಯಕ್ಷರಿಗೆ ನಿರ್ದೇಶನ ನೀಡಲಾಗಿದೆ.
ಸನ್ನಿಹಿತ ದಾಳಿ ಪ್ರಕರಣಗಳನ್ನು ಹೊರತುಪಡಿಸಿ, ಇರಾನ್‌ನೊಂದಿಗೆ ಯಾವುದೇ ಸಂಘರ್ಷಕ್ಕೆ ಮುಂದಾಗಬಾರದು ಎಂದಿರುವ ಅಮೆರಿಕ ಸಂಸತ್( ಕಾಂಗ್ರೆಸ್) ನ ಕೆಳಮನೆ ಹೌಸ್ ಆಫ್ ರೆಪ್ರೆಜೆಂಟೆಟಿವ್ಸ್ ಈ ಸಂಬಂಧ ನಿರ್ಣಯಕ್ಕೆ ಅನುಮೋದನೆ ನೀಡಿದೆ.
ಕಳೆದ ವಾರ ಯುಎಸ್, ಡ್ರೋನ್ ದಾಳಿಯಲ್ಲಿ ಇರಾನಿನ ಕಮಾಂಡ್ ವೋರ್ವನನ್ನು ಕೊಂದಿತ್ತು, ಇದಕ್ಕೆ ಪ್ರತೀಕಾರವಾಗಿ ಇರಾನ್ ಕೂಡ ಇರಾಕ್ ನೆಲೆಗಳಲ್ಲಿರುವ ಅಮೆರಿಕ ಸೇನಾ ಕ್ಯಾಂಪ್ಗಳ ಮೇಲೆ ಕ್ಷಿಪಣಿಗಳನ್ನು ಹಾರಿಸಿತ್ತು.