ETV Bharat / bharat

ಚುನಾವಣಾ ದಿನದ ಉದ್ವಿಗ್ನತೆ, ಅನಿಶ್ಚಿತತೆಯೆಡೆಗೆ ಅಮೆರಿಕ: ಫಲಿತಾಂಶ ಗೊಂದಲದ ಗೂಡಾಗುವ ಸಾಧ್ಯತೆ

author img

By

Published : Nov 3, 2020, 1:31 PM IST

Updated : Nov 3, 2020, 1:58 PM IST

ಇಂದು ಯುನೈಟೆಡ್‌ ಸ್ಟೇಟ್ಸ್​ ಆಫ್​ ಅಮೆರಿಕ ಅಧ್ಯಕ್ಷೀಯ ಚುನಾವಣೆ ನಡೆಯುತ್ತಿದೆ. ಇದು ಅತ್ಯಂತ ತುರುಸಿನಿಂದ ನಡೆಯುತ್ತಿರುವ ಚುನಾವಣೆಯಾಗಿದ್ದು, ದೊಡ್ಡಮಟ್ಟದ ರಾಜಕೀಯ ಧ್ರುವೀಕರಣಕ್ಕೆ ಸಾಕ್ಷಿಯಾಗಿದೆ. ನಾನಾ ಅಂತಾರಾಷ್ಟ್ರೀಯ ಸಂಘಟನೆಗಳು ಸೇರಿದಂತೆ ಹಲವಾರು ಮಂದಿ ಈ ಚುನಾವಣೆ ಹಿಂಸಾಚಾರಕ್ಕೆ ಕಾರಣವಾಗಬಹುದು ಎಂಬ ಭೀತಿಯನ್ನು ತಜ್ಞರು ವ್ಯಕ್ತಪಡಿಸಿದ್ದಾರೆ.

US Braces For Election Day Tensions; Results Could Be Messy
ಚುನಾವಣಾ ದಿನದ ಉದ್ವಿಗ್ನತೆ, ಅನಿಶ್ಚಿತತೆಯೆಡೆಗೆ ಅಮೆರಿಕ: ಫಲಿತಾಂಶ ಗೊಂದಲದ ಗೂಡಾಗುವ ಸಾಧ್ಯತೆ

ಅಮೆರಿಕ ಸಂಯುಕ್ತ ಸಂಸ್ಥಾನದಲ್ಲೀಗ ಅಧ್ಯಕ್ಷೀಯ ಚುನಾವಣಾ ಜ್ವರ. ಈಗಾಗಲೇ 9 ಕೋಟಿಗಿಂತಲೂ ಅಧಿಕ ಅಮೆರಿಕನ್ನರು ವೈಯಕ್ತಿಕ ಹಾಗೂ ಅಂಚೆ ಮತಗಳನ್ನು ಚಲಾಯಿಸಿದ್ದಾರೆ. ಇಂದು (ನವೆಂಬರ್ 3) ದೇಶ ಅತಿ ಹೆಚ್ಚಿನ ಮತದಾರರನ್ನೊಳಗೊಂಡ ಅಧ್ಯಕ್ಷೀಯ ಚುನಾವಣೆಗೆ ಸಾಕ್ಷಿಯಾಗಲಿದೆ. ಆದರೆ, ಇದು ಅತ್ಯಂತ ತುರುಸಿನಿಂದ ನಡೆಯುತ್ತಿರುವ ಚುನಾವಣೆಯಾಗಿದ್ದು, ದೊಡ್ಡಮಟ್ಟದ ರಾಜಕೀಯ ಧ್ರುವೀಕರಣಕ್ಕೆ ಸಾಕ್ಷಿಯಾಗಿದೆ. ನಾನಾ ಅಂತಾರಾಷ್ಟ್ರೀಯ ಸಂಘಟನೆಗಳು ಸೇರಿದಂತೆ ಹಲವಾರು ಮಂದಿ ಈ ಚುನಾವಣೆ ಹಿಂಸಾಚಾರಕ್ಕೆ ಕಾರಣವಾಗಬಹುದು ಎಂಬ ಭೀತಿ ವ್ಯಕ್ತಪಡಿಸಿದ್ದಾರೆ.

ವಿಶೇಷವಾಗಿ ಡೆಮಾಕ್ರಟಿಕ್ ಪಕ್ಷದ ಅಧ್ಯಕ್ಷೀಯ ಅಭ್ಯರ್ಥಿ ಜೋ ಬೈಡನ್ ಬೆಂಬಲಿಸುತ್ತಿರುವ ಪಕ್ಷದ ಮತದಾರರು ಹಾಗೂ ಬಿಡೆನ್ ಬೆಂಬಲಿಸುತ್ತಿರುವ ಸ್ವತಂತ್ರ ಮತದಾರರಲ್ಲಿ ಮತ್ತು ಡೆಮಕ್ರಟಿಕ್ ಸ್ಪರ್ಧಿಗಳ ಪರವಾಗಿ ಹೊರಬಂದ ರಿಪಬ್ಲಿಕನ್ ಪಕ್ಷದ ಕೆಲವು ನಾಯಕರಲ್ಲಿ ಇಂತಹ ಉದ್ವೇಗ ಮತ್ತು ಆತಂಕವಿದೆ ಎಂದು ವಾಯ್ಸ್ ಆಫ್ ಅಮೆರಿಕ ಮಾಧ್ಯಮ ಸಂಸ್ಥೆಯ ಶ್ವೇತಭವನ ವರದಿಗಾರಿಕೆ ವಿಭಾಗದ ಮುಖ್ಯಸ್ಥ ಸ್ಟೀವನ್ ಹರ್ಮನ್ 'ಈಟಿವಿ ಭಾರತ'ಕ್ಕೆ ನೀಡಿದ ಎಕ್ಸ್​​ಕ್ಲೂಸಿವ್​ ಸಂದರ್ಶನದಲ್ಲಿ ಹೇಳಿದ್ದಾರೆ.

ಮಿಚಿಗನ್‌ನಂತಹ ರಾಜ್ಯಗಳಲ್ಲಿ ಜನರು ಬಂದೂಕುಗಳನ್ನು ಸಾರ್ವಜನಿಕವಾಗಿ ಪ್ರದರ್ಶಿಸಬಹುದೇ ಮತ್ತು ಅದು ಮತದಾರನ್ನು ಬೆದರಿಸುವ ಸಾಧ್ಯತೆಯ ಆತಂಕಗಳಿವೆ. ಆದರೆ, ವಾಸ್ತವದಲ್ಲಿ ಮತದಾರರು ಇದರಿಂದ ಹೆಚ್ಚಿನ ಮಟ್ಟದಲ್ಲಿ ವಿಚಲಿತರಾಗುವ ಸಾಧ್ಯತೆ ಇಲ್ಲ. ಮತ ಚಲಾಯಿಸುವ ಉತ್ಸಾಹ ಜನರಲ್ಲಿ ಕಡಿಮೆಯಾಗುವ ಯಾವುದೇ ಸೂಚನೆಗಳು ಇಲ್ಲ. ಆದರೆ, ಕೊರೊನಾ ವೈರಸ್ ಕಾರಣಕ್ಕೆ ಜನರು ಗುಂಪಾಗಿ ತೆರಳಿ ಮತ ಚಲಾಯಿಸಲು ಹಿಂದೇಟು ಹಾಕಿರಬಹುದು. ಈ ಕಾರಣದಿಂದಲೇ ಅವರು ನವೆಂಬರ್ 3ಕ್ಕೆ ಮುನ್ನವೇ ಮತಚಲಾಯಿಸಿರಬಹುದು ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಈ ನಡುವೆ ಅಧ್ಯಕ್ಷೀಯ ನಿವಾಸ ಶ್ವೇತಭವನದ ಸಮೀಪ ಯಾರೂ ತೆರಳದಂತೆ ಎಲ್ಲ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ದೇಶದ ಪ್ರಮುಖ ನಗರ ವಾಷಿಂಗ್ಟನ್ ಡಿಸಿಯಲ್ಲಿನ ವಾಣಿಜ್ಯ ಖಾಸಗಿ ಕಟ್ಟಡಗಳಿಗೆ ಯಾರೂ ಸಹ ಹಾನಿಯುಂಟು ಮಾಡುವುದನ್ನು ತಪ್ಪಿಸಲು ಎಲ್ಲ ಕ್ರಮಗಳನ್ನು ಕೈಗೊಳ್ಳಲಾಗಿದೆ.

ಹಿರಿಯ ಪತ್ರಕರ್ತೆ ಸ್ಮಿತಾ ಶರ್ಮಾ ಅವರೊಂದಿಗೆ ಮಾತನಾಡಿದ ಹರ್ಮನ್, ಚುನಾವಣಾ ಫಲಿತಾಂಶದ ಒಂದು ನಿಖರ ಸ್ವರೂಪ ತಿಳಿಯುತ್ತಿದ್ದಂತೆ ಕೆಲವು ಅಹಿತಕರ ಘಟನೆಗಳಿಗೆ ನಾವು ಸಾಕ್ಷಿಯಾಗಬಹುದು. ನಾವು ಈ ತೆರನಾದ ಕೆಲವು ಘಟನೆಗಳನ್ನು ಮಂಗಳವಾರ ರಾತ್ರಿ ಅಲ್ಲ, ಬದಲಿಗೆ ಬುಧವಾರ ರಾತ್ರಿ ನೋಡಬಹುದಾಗಿದೆ. ಇದು ನಮ್ಮ ಮುಂದಿರುವ ಆತಂಕ. ಜನರು ಬೀದಿಗಿಳಿಯಬಹುದು. ತೀವ್ರ ಎಡ ಮತ್ತು ತೀವ್ರ ಬಲ ಪಂಥೀಯರಿಂದ ಈ ತೊಂದರೆ ಉಂಟಾಗಬಹುದು. ಈ ವರ್ಷ ದೇಶದಲ್ಲಿ ಸಂಭವಿಸಿದ ಹಲವಾರು ಹಿಂಸಾಚಾರ ಪ್ರಕರಣಗಳಂತೆ ಕೆಲವು ಜನರು, ಇತರರನ್ನು ಪ್ರಚೋದಿಸಲು ಮುಂದಾಗಬಹುದು ಎಂಬ ಆತಂಕದ ಮಾತುಗಳನ್ನಾಡಿದ್ದಾರೆ.

ವಾಷಿಂಗ್ಟನ್ ಡಿಸಿಯಲ್ಲಿರುವ ಶ್ವೇತಭವನದ ಸುತ್ತಮುತ್ತಲಿನ ರಸ್ತೆಗಳಲ್ಲಿ ಈ ಬಾರಿ ಹಲವಾರು ಸರ್ಕಾರ ವಿರೋಧಿ ಪ್ರದರ್ಶನ ಸಂದರ್ಭದಲ್ಲಿ ಪ್ರತಿಭಟನಾಕಾರರು ಕಿಟಕಿಗಳನ್ನು ಒಡೆದು ಹಾಕುವುದು ಮತ್ತು ಬೆಂಕಿ ಹಾಕುವುದು ಹೀಗೆ ನಾನಾ ಕೃತ್ಯಗಳಲ್ಲಿ ತೊಡಗಿದ್ದರು. ಇದನ್ನು ತಡೆಯಲು ಸರ್ಕಾರ ನಾನಾ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಂಡಿತ್ತು. ಆದರೆ, ಮುಂದಿನ ದಿನಗಳಲ್ಲಿ ನಾವು ಒಂದು ರೀತಿಯ ಸಾಮೂಹಿಕ ನಾಗರೀಕ ದಂಗೆಯನ್ನು ನೋಡಲಿದ್ದೇವೆ ಎಂಬುದಕ್ಕೆ ಯಾವುದೇ ಸೂಚನೆಯಿಲ್ಲ. ಆದರೆ ಯಾವುದೇ ಭಾಗದಲ್ಲಿ ನಡೆಯುವ ಯಾವುದೇ ಘಟನೆಗೆ ಹೆಚ್ಚಿನ ಪ್ರಾಮುಖ್ಯತೆ ಸಿಗಲಿದೆ ಎಂದು ಹರ್ಮನ್ ಮತ್ತಷ್ಟು ಒತ್ತಿಹೇಳುತ್ತಾರೆ. ಎಲ್ಲವೂ ಚುನಾವಣಾ ಫಲಿತಾಂಶ ಮತ್ತು ಫಲಿತಾಂಶದ ಅಂತರದ ಮೇಲೆ ಅವಲಂಬಿತವಾಗಿದೆ ಎಂದಿದ್ದಾರೆ.

ಈ ಅಧ್ಯಕ್ಷೀಯ ಚುನಾವಣಾ ಫಲಿತಾಂಶ ಮತದಾನ ಎಷ್ಟು ನಿಖರವಾಗಿದೆ ಎಂಬುದರ ಮೇಲೆ ಅವಲಂಬಿತವಾಗಿರುತ್ತದೆ. ಜೋ ಬೈಡನ್ ಪೆನ್ಸಿಲ್ವೇನಿಯಾ ಇಲ್ಲದೆ, 270 ಎಲೆಕ್ಟೋರಲ್ ಕಾಲೇಜು ಮತಗಳನ್ನು ತೆಗೆದುಕೊಳ್ಳಲು ಸಾಧ್ಯವಾದರೆ ಈ ಫಲಿತಾಂಶದ ನಾಟಕದ ಬಹುಪಾಲು ಮುಗಿದಿದೆ ಎಂದೇ ಹೇಳಬಹುದು. ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಈ ಚುನಾವಣಾ ಫಲಿತಾಂಶಗಳು ತನಗೆ ನಕಾರಾತ್ಮಕವಾಗಿ ಬಂದರೆ ಅದನ್ನು ತಕ್ಷಣ ನ್ಯಾಯಾಲಯದಲ್ಲಿ ಪ್ರಶ್ನಿಸಲು ಹೋಗುವುದಾಗಿ ಹೇಳಿದ್ದಾರೆ. ಚುನಾವಣಾ ದಿನದ ಸಂಜೆ ನಾವು ಫಲಿತಾಂಶಗಳನ್ನು ಪಡೆಯಬೇಕು ಎಂಬುದು ಅವರ ಭಾವನೆ. ಆದಾಗ್ಯೂ ಇದು ಅಮೆರಿಕದ ಚುನಾವಣಾ ಇತಿಹಾಸದ ಬಹುಪಾಲು ಸಂದರ್ಭಗಳಿಗೆ ಒಂದು ಅಪವಾದವಾಗಿದೆ ಎಂದು ಹರ್ಮನ್ ಅಭಿಪ್ರಾಯ ಪಡುತ್ತಾರೆ.

ಅಮೆರಿಕದ ಚುನಾವಣೆಗಳು ಮತ್ತು ರಾಜಕೀಯವನ್ನು ಹಲವು ವರ್ಷಗಳಿಂದ ನಿಕಟವಾಗಿ ಗಮನಿಸುತ್ತಿರುವ ಹರ್ಮನ್ ಪ್ರಕಾರ, ಚುನಾವಣಾ ಫಲಿತಾಂಶ ಅಥವಾ ಸ್ಪಷ್ಟ ದಿಕ್ಕು, ಟ್ರೆಂಡ್ ಅಮೆರಿಕಾದ ಸ್ಥಳೀಯ ಸಮಯಕ್ಕೆ ಅನುಗುಣವಾಗಿ ನವೆಂಬರ್ 4ರ ಬೆಳಗ್ಗೆ ಸಿಗಬಹುದು. ಇಲ್ಲವಾದರೆ 2000ದಲ್ಲಿ ನಡೆದಂತೆ ರಿಪಬ್ಲಿಕನ್ ಅಭ್ಯರ್ಥಿ ಜಾರ್ಜ್ ಬುಷ್ ಹಾಗು ಡೆಮೊಕ್ರೆಟಿಕ್ ಪಕ್ಷದ ಅಭ್ಯರ್ಥಿ ಅಲ್ ಗೋರ್ ನಡುವೆ ಎದುರಾದ ಕಾನೂನು ಹೋರಾಟಕ್ಕೆ ತಿರುಗಬಹುದು. ಆದಾಗ್ಯೂ ಈ ಚುನಾವಣಾ ಫಲಿತಾಂಶ ಗಮನಿಸಲು ಅಸೋಸಿಯೇಟೆಡ್ ಪ್ರೆಸ್‌ನಂತಹ ಸಂಸ್ಥೆಗಳನ್ನು ಅವಲಂಬಿಸುವುದು ಮುಖ್ಯವಾಗಿದೆ. ಏಕೆಂದರೆ ಅಸೋಸಿಯೇಟೆಡ್ ಪ್ರೆಸ್ ಬಳಿಕವೇ ಇತರ ಸುದ್ದಿ ವಾಹಿನಿಗಳು ಫಲಿತಾಂಶ ನೀಡುತ್ತವೆ.

ಅಮೆರಿಕದ ನೂತನ ಅಧ್ಯಕ್ಷರ ಈವರೆಗಿನ ಚುನಾವಣಾ ಟ್ರೆಂಡ್ ಗಮನಿಸಿದರೆ ಡೆಮಾಕ್ರಟಿಕ್ ಅಭ್ಯರ್ಥಿ ಬೈಡನ್ ಈವರೆಗೆ ರಾಷ್ಟ್ರೀಯ ಚುನಾವಣಾ ಸಮೀಕ್ಷೆಗಳಲ್ಲಿ ಗಮನಾರ್ಹ ಸ್ಥಿರ ಮುನ್ನಡೆ ಸಾಧಿಸಿದ್ದಾರೆ. ಆದರೆ, ಚುನಾವಣಾ ಪ್ರಚಾರ ತಾರಕಕ್ಕೇರಿದಂತೆ ಬೈಡನ್- ಟ್ರಂಪ್ ನಡುವಣ ವ್ಯತ್ಯಾಸ ಒಂದಂಕೆಗೆ ಇಳಿದಿದೆ. ಆದರೆ ಮತದಾರರು ಮತ್ತು ಸಮೀಕ್ಷಾ ಪಂಡಿತರು 2016ರ ಸಮೀಕ್ಷೆಗಳ ಕಹಿ ನೆನಪಿನ ಬಗ್ಗೆ ಜಾಗರೂಕರಾಗಿರಬೇಕು. ಏಕೆಂದರೆ ಅಂದು ಇಂತಹ ಸಮೀಕ್ಷೆಗಳು ಹಿಲರಿ ಕ್ಲಿಂಟನ್ ಗೆಲುವಿನ ಮುನ್ಸೂಚನೆ ನೀಡಿದ್ದವು. ಅಚ್ಚರಿಯ ರೀತಿಯಲ್ಲಿ ಟ್ರಂಪ್, ಕ್ಲಿಂಟನ್‌ ವಿರುದ್ಧ ಗೆಲುವು ಸಾಧಿಸಿದರು. ಬ್ಯಾಟಲ್ ಗ್ರೌಂಡ್ ಸ್ಟೇಟ್ಸ್ ಎಂದು ಪ್ರಸಿದ್ಧಿ ಪಡೆದಿರುವ ಮಿಡ್‌ವೆಸ್ಟ್‌ನಂತಹ ಪ್ರಮುಖ ರಾಜ್ಯಗಳು ಈ ಬಾರಿಯೂ ನಿರ್ಣಾಯಕವಾಗುತ್ತವೆ. ಈ ಕಾರಣಕ್ಕಾಗಿಯೇ ಈ ಸ್ವಿಂಗ್ (ಅಚ್ಚರಿಯ ಫಲಿತಾಂಶ) ನೀಡುವ ರಾಜ್ಯಗಳತ್ತಲೇ ಉಭಯ ಅಭ್ಯರ್ಥಿಗಳು ಹೆಚ್ಚಿನ ಗಮನ ನೀಡುತ್ತಿದ್ದಾರೆ.

ರಾಷ್ಟ್ರೀಯ ಚುನಾವಣಾ ಸಮೀಕ್ಷೆಗಳಲ್ಲಿ ಬೈಡನ್ 7% ಅಥವಾ 4% ರಷ್ಟು ಮುಂದಿದ್ದಾರೆ. ಈ ಮುನ್ನಡೆ ಕೆಲವು ರಾಜ್ಯಗಳಲ್ಲಿ ಕ್ಷಣ ಮಾತ್ರದಲ್ಲಿ ಬದಲಾವಣೆಗೊಳ್ಳುತ್ತದೆ. ಈ ಕಾರಣಕ್ಕಾಗಿ ಇಂತಹ ರಾಜ್ಯಗಳತ್ತ ಉಭಯ ಅಭ್ಯರ್ಥಿಗಳು ತಮ್ಮ ಗಮನ ಹರಿಸುತ್ತಿದ್ದಾರೆ. ಉದಾಹರಣೆಗೆ ತನ್ನ ಅಧ್ಯಕ್ಷೀಯ ಪಟ್ಟ ಉಳಿಸಿಕೊಳ್ಳಬೇಕಾದರೆ, ಟ್ರಂಪ್ ಫ್ಲೋರಿಡಾವನ್ನು ಗೆಲ್ಲಲೇಬೇಕು. ಇದು ಸಾಧ್ಯವಾಗದಿದ್ದರೆ ಬೈಡನ್ ಗೆಲುವಿನ ಹಾದಿ ಸುಗಮಗೊಳ್ಳುತ್ತದೆ. ಇಬ್ಬರು ಅಭ್ಯರ್ಥಿಗಳು ಪೆನ್ಸಿಲ್ವೇನಿಯಾವನ್ನು ಪ್ರಮುಖವಾಗಿ ಪರಿಗಣಿಸಿದ್ದಾರೆ. ಸೋಮವಾರ ಟ್ರಂಪ್ ತನ್ನ ಐದು ಚುನಾವಣಾ ಸಮಾವೇಶಗಳ ಪೈಕಿ ಎರಡನ್ನು ಮಿಚಿಗನ್ ರಾಜ್ಯದಲ್ಲಿ ಆಯೋಜಿಸಿದ್ದರು. ಆದರೆ ಈ ಬ್ಯಾಟಲ್ ಗ್ರೌಂಡ್ ರಾಜ್ಯದಲ್ಲಿ ಸಮೀಕ್ಷೆಗಳ ಪ್ರಕಾರ, ಬೈಡನ್ ಸುಮಾರು 10 ಪ್ರತಿಶತದಷ್ಟು ಮುಂದಿದ್ದಾರೆ. ಹಾಗಾದರೆ ಅಧ್ಯಕ್ಷರು ಮಿಚಿಗನ್ ರಾಜ್ಯದತ್ತ ಏಕೆ ಗಮನ ಹರಿಸುತ್ತಿದ್ದಾರೆ? ಬಹುಶಃ ಅವರು ತಮ್ಮದೇ ಆದ ಮತದಾರರನ್ನು ಹೊಂದಿದ್ದು, ಆ ಮೂಲಕ ತಮ್ಮ ಹಿನ್ನಡೆಯನ್ನು ಕಡಿಮೆಗೊಳಿಸಲು ಪ್ರಯತ್ನಿಸುತ್ತಿದ್ದಾರೆ.

ನಾಲ್ಕು ವರ್ಷಗಳ ಹಿಂದೆ ಈ ರಾಜ್ಯ ಡೊನಾಲ್ಡ್ ಟ್ರಂಪ್ ಅವರ ಅಚ್ಚರಿಯ ಗೆಲುವಿಗೆ ಕಾರಣವಾಗಿತ್ತು. ವಿಶೇಷವೆಂದರೆ ಚುನಾವಣಾ ಪೂರ್ವ ಸಮೀಕ್ಷೆಗಳೆಲ್ಲವೂ ಈ ರಾಜ್ಯದಲ್ಲಿ 2016ರಲ್ಲೂ ಹಿಲರಿ ಕ್ಲಿಂಟನ್ ಮುನ್ನಡೆಯಲ್ಲಿದ್ದರೆ ಎಂದು ಹೇಳಿದ್ದವು ಎಂಬುದನ್ನು ಹರ್ಮನ್ ನೆನಪಿಸಿಕೊಳ್ಳುತ್ತಾರೆ.

ತಮ್ಮ ಪ್ರಬಲ ಸಮರ್ಥಕ, ಸಾಂಪ್ರದಾಯಿಕ ಮತದಾರರು ಮಂಗಳವಾರ ಮತದಾನ ಕೇಂದ್ರಗಳಿಗೆ ಭೇಟಿ ನೀಡಿ ಮತ ಚಲಾಯಿಸುತ್ತಾರೆ ಎಂಬುದನ್ನು ಖಚಿತಪಡಿಸಿಕೊಳ್ಳಲೆಂದೇ ಉಭಯ ಅಧ್ಯಕ್ಷೀಯ ಅಭ್ಯರ್ಥಿಗಳು ಕೊನೆಯ ಕ್ಷಣದಲ್ಲೂ ಸುಂಟರಗಾಳಿಯಂತೆ ಪ್ರಚಾರ ನಡೆಸುತ್ತಿದ್ದಾರೆ ಎನ್ನುತ್ತಾರೆ ಅಮೆರಿಕದ ಈ ಹಿರಿಯ ಪತ್ರಕರ್ತ.

ಈ ಚುನಾವಣೆಯಲ್ಲಿ ಯಾರೂ ದೇಶದ ಮುಂದಿನ ಅಧ್ಯಕ್ಷ ಎಂಬುದು ಇಲ್ಲಿವರೆಗೆ ನಿರ್ಧಾರವಾಗಿಲ್ಲ. ಉಭಯ ಅಭ್ಯರ್ಥಿಗಳು ತಮ್ಮದೇ ಆದ ಪ್ರಬಲ ಗೆಲುವಿನ ಲೆಕ್ಕಾಚಾರದಲ್ಲಿದ್ದಾರೆ. ಈ ಕಾರಣಕ್ಕಾಗಿ ಕೊನೆ ನಿಮಿಷದವರೆಗೂ ಟ್ರಂಪ್ ಹಾಗೂ ಬಿಡೆನ್ ಪ್ರಚಾರದಲ್ಲಿ ತೊಡಗಿದ್ದಾರೆ. ಅಧ್ಯಕ್ಷ ಟ್ರಂಪ್ ಅವರು ಮಂಗಳವಾರ ಮುಂಜಾನೆ ತನಕ ಶ್ವೇತಭವನಕ್ಕೆ ಹಿಂತಿರುಗುವುದಿಲ್ಲ. ಭಾನುವಾರ ಅವರು ಫ್ಲೋರಿಡಾದಲ್ಲಿ ಮಧ್ಯರಾತ್ರಿಯ ಬಳಿಕ ತಮ್ಮ ಬೆಂಬಲಿಗರ ಸಭೆಯಲ್ಲಿ ಭಾಗವಹಿಸಿದ್ದರು. ಇದರ ಉದ್ದೇಶ, ಚುನಾವಣೆಯಲ್ಲಿ ಇನ್ನು ಹೆಚ್ಚಿನ ಮತ ಗಳಿಸುವುದಲ್ಲ. ಬದಲಿಗೆ ಜನರಲ್ಲಿ ಮತದಾನದ ಬಗ್ಗೆ ಉತ್ಸಾಹ ಮೂಡಿಸುವುದು. ಹಾಗೂ ಎಲ್ಲರೂ ಕೂಡ ಮತದಾನದಲ್ಲಿ ಸಕ್ರಿಯವಾಗಿ ಮತ ಚಲಾಯಿಸಲಿ ಎಂಬುದು ಎನ್ನುತ್ತಾರೆ ಹರ್ಮನ್.

Last Updated : Nov 3, 2020, 1:58 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.